ಗಂಡ ಶಾರ್ಟ್‌ ಸ್ಕರ್ಟ್‌, ರೆಡ್‌ ಲಿಪ್‌ಸ್ಟಿಕ್ ಹಾಕ್ಲೇಬಾರ್ದು ಅಂತಾನೆ! ಏನ್ಮಾಡ್ಲಿ ?

ಮದುವೆಯೆಂದರೆ ಅಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ, ಭರವಸೆ ಎಲ್ಲವೂ ಇರಬೇಕು. ಯಾವುದಾದರೂ ಒಂದು ಕಡಿಮೆಯಾದರೂ ಸಮಸ್ಯೆಗಳು ತಲೆದೋರುತ್ತವೆ. ಇಲ್ಲೊಬ್ಬಾಕೆಗೆ ಗಂಡ ಶಾರ್ಟ್ ಡ್ರೆಸ್, ರೆಡ್ ಲಿಪ್‌ಸ್ಟಿಕ್‌ ಹಾಕ್ಕೋಳ್ಳೋಕೆ ಬಿಡಲ್ಲ ಅನ್ನೋದೆ ದೊಡ್ಡ ಸಮಸ್ಯೆಯಾಗಿದೆ.

Husband Doesnt Allow Wearing Short Clothes, Hates wearing Red Lipstick Vin

ಮದುವೆ ಹಿಂದಿನ ಉದ್ದೇಶಗಳು ಬೇರೆ ಬೇರೆ ಇರುತ್ತವೆ. ಪ್ರೀತಿಗಾಗಿ ಕೆಲವರು ಮದುವೆಯಾದ್ರೆ ಮತ್ತೆ ಕೆಲವರು ಹಣಕ್ಕಾಗಿ ಮದುವೆಯಾಗ್ತಾರೆ. ಇನ್ನು ಕೆಲವರು ಸುರಕ್ಷತೆಗಾಗಿ ಮದುವೆಯಾಗ್ತಾರೆ. ಕಾರಣ ಯಾವುದೇ ಇರಲಿ, ಕೊನೆಯಲ್ಲಿ ಸಂತೋಷ ಸಿಗೋದು ಬಹಳ ಮುಖ್ಯ. ಆದ್ರೆ ಇಲ್ಲೊಬ್ಬಾಕೆ ಮದುವೆಯಾದ್ರೂ ಖುಷಿನೇ ಇಲ್ವಂತೆ. ಗಂಡ ಶಾರ್ಟ್‌ ಸ್ಕರ್ಟ್‌, ರೆಡ್ ಲಿಪ್‌ ಸ್ಟಿಕ್ ಹಾಕ್ಕೊಳ್ಳೋಕೆ ಬಿಡೋದಿಲ್ವಂತೆ.

ಪ್ರಶ್ನೆ: ನಾನು ವಿವಾಹಿತ ಮಹಿಳೆ. ಮದುವೆಯಾಗುವ ಮೊದಲು ನನ್ನ ಜೀವನದ  ಬಗ್ಗೆ ಬಹಳಷ್ಟು ಕನಸುಗಳನ್ನು ಹೊಂದಿದ್ದೆ. ಆದರೆ ನಾನು ಮದುವೆಯಾದ ಬಳಿಕ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಕನಸು ಸತ್ತು ಹೋಗಿದೆ. ಏಕೆಂದರೆ ನಾನು ಯಾವಾಗಲೂ ಚೆನ್ನಾಗಿ ತಯಾರಾಗಿರಲು ಇಷ್ಟಪಡುತ್ತೇನೆ ಆದರೆ ನನ್ನ ಪತಿಗೆ ನಾನು ಚೆನ್ನಾಗಿ ರೆಡಿಯಾಗುವುದನ್ನು ಇಷ್ಟಪಡುವುದಿಲ್ಲ. ಬದಲಿಗೆ ಯಾವಾಗಲೂ ನಾನು ಯಾವ ಡ್ರೆಸ್ ಧರಿಸುತ್ತೇನೆ, ಯಾವ ರೀತಿಯ ಡ್ರೆಸ್ ಧರಿಸುತ್ತೇನೆ ಎಂಬ ಬಗ್ಗೆ ಮೇಲ್ವಿಚಾರಣೆ ಮಾಡುತ್ತಾ ಇರುತ್ತಾರೆ. ಇದು ನನಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

ಸೆಕ್ಸ್‌ಗಾಗಿ ದಿನವಿಡೀ ಗಂಡನ ಕಾಟ, ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಹಾಯ ಕೋರಿದ ವೃದ್ಧೆ

ತಜ್ಞರ ಉತ್ತರ: ಎಐಆರ್ ಇನ್‌ಸ್ಟಿಟ್ಯೂಟ್ ಆಫ್ ರಿಯಲೈಸೇಶನ್ ಮತ್ತು ಎಐಆರ್ ಸೆಂಟರ್ ಆಫ್ ಎನ್‌ಲೈಟೆನ್‌ಮೆಂಟ್‌ನ ಸಂಸ್ಥಾಪಕ ರವಿ ಮಾತನಾಡಿ, ದಾಂಪತ್ಯ ಅತ್ಯಂತ ಸೂಕ್ಷ್ಮವಾದ ಸಂಬಂಧವಾಗಿದ್ದು, ಇಲ್ಲಿ ಪತಿ-ಪತ್ನಿ (Husband-wife) ಯಾವಾಗಲೂ ಅರಿತುಕೊಂಡು ನಡೆಯಬೇಕು. ಈ ಬಂಧದಲ್ಲಿ ಹಲವು ಹೊಂದಾಣಿಕೆಗಳು ಒಳಗೊಳ್ಳುವುದು ಮಾತ್ರವಲ್ಲದೆ ಕೆಲವೊಮ್ಮೆ ನಾವು ಪರಸ್ಪರರ ಇಷ್ಟ-ಅನಿಷ್ಟಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಮದುವೆ (Marriage)ಗಳಲ್ಲಿ ಪ್ರೀತಿಗಿಂತ ಹೊಂದಾಣಿಕೆಗಳು ಹೆಚ್ಚು ಜಾಗವನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ಹೀಗಾದಾಗ ಪಾಲುದಾರರಿಬ್ಬರಿಗೂ ಆ ಸಂಬಂಧ (Relationship) ಕಷ್ಟವಾಗಲು ತೊಡಗುತ್ತದೆ. ನಿಮ್ಮ ಮದುವೆಯಲ್ಲಿ ನಾನು ಇದೇ ರೀತಿಯಾಗಿದ್ದನ್ನು ನೋಡುತ್ತೇನೆ. ನಿಮ್ಮ ದಾಂಪತ್ಯದಲ್ಲಿ ಪ್ರೀತಿಯೇ ಇಲ್ಲ ಎಂಬುದು ನಿಮ್ಮ ಮಾತಿನಿಂದಲೇ ತಿಳಿಯುತ್ತದೆ.

ಗಂಡನ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ: ಪರಸ್ಪರ ಪ್ರೀತಿ (Love), ತಿಳುವಳಿಕೆ ಮತ್ತು ಗೌರವವು ಯಶಸ್ವಿ ದಾಂಪತ್ಯಕ್ಕೆ ಮುಖ್ಯವಾಗಿ ಬೇಕಾಗುತ್ತದೆ. ಮದುವೆಯನ್ನು ಎಂದಿಗೂ ಮೋಜಿನಂತೆ ಪರಿಗಣಿಸಲಾಗುವುದಿಲ್ಲ. ಇದು ಗಂಭೀರವಾದ ಬದ್ಧತೆಯಾಗಿದೆ, ಜೀವನಪರ್ಯಂತ ಖುಷಿಯಾಗಿ, ಜೊತೆಯಾಗಿರಲು ಗಂಡ ಮತ್ತು ಹೆಂಡತಿ ಇಬ್ಬರೂ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ನೀವು ಚೆನ್ನಾಗಿ ಡ್ರೆಸ್ ಮಾಡುವುದನ್ನು ಇಷ್ಟಪಡುತ್ತೀರಿ ಎಂದು ನಾನು ಒಪ್ಪುತ್ತೇನೆ. ಆದರೆ ಕೆಂಪು ಲಿಪ್‌ಸ್ಟಿಕ್ ಮತ್ತು ಅಲಂಕಾರಿಕ ಬಟ್ಟೆಗಳು ಜೀವನದಲ್ಲಿ ಎಲ್ಲವೂ ಅಲ್ಲ. ಅದನ್ನು ಬಿಟ್ಟು ದಾಂಪತ್ಯ (Married life)ದಲ್ಲಿ ಸರಿಪಡಿಸಬೇಕಾದ ಹಲವು ವಿಚಾರಗಳಿವೆ. ಹಾಗಂತ ನಾನು ನಿನ್ನ ಗಂಡನನ್ನು ಬೆಂಬಲಿಸುತ್ತಿಲ್ಲ. 

ಕುಟುಂಬಕ್ಕೆ ತಕ್ಕಂತೆ ಬಟ್ಟೆ ಧರಿಸಿ: ನೀವು ಬಂದ ಕುಟುಂಬದಲ್ಲಿ ಸಣ್ಣ ಬಟ್ಟೆಗಳನ್ನು ಧರಿಸುವುದು ಸಾಮಾನ್ಯವಾಗಿರಬಹುದು. ಆದರೆ ಇದು ಕುಟುಂಬದಿಂದ ಕುಟುಂಬಕ್ಕೆ ಬದಲಾಗುತ್ತಾ ಹೋಗುತ್ತದೆ. ನಿಮ್ಮ ಗಂಡನ ಮನೆಯಲ್ಲಿ ಮಾಡರ್ನ್‌ ಬಟ್ಟೆಗಳನ್ನು ಧರಿಸುವ ವಾತಾವರಣ ಇಲ್ಲದೇ ಇರಬಹುದು. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಪತಿಯೊಂದಿಗೆ ಏಕಾಂತದಲ್ಲಿರುವಾಗ ಮಾತ್ರ ಇಂಥಾ ಡ್ರೆಸ್ ಧರಿಸಲು ಅಭ್ಯಾಸ ಮಾಡಿಕೊಳ್ಳಿ.

ಸೆಕ್ಸ್ ಮಾಡಿ ತೂಕ ಇಳಿಸಿಕೊಳ್ಬೋದಾ ? ತಜ್ಞರು ಏನಂತಾರೆ

ನಿಮ್ಮತನವನ್ನು ಯಾರಿಗಾಗಿಯೂ ಬಿಟ್ಟುಕೊಡಬೇಡಿ: ನಮ್ಮತನವೆಂಬುದು ಯಾವಾಗಲೂ ಮುಖ್ಯವಾಗಿರಬೇಕು. ಅದನ್ನು ಯಾರಿಗಾಗಿಯೂ ಬದಲಾಯಿಸಿಕೊಳ್ಳಬಾರದು. ಅದು ಯಾವುದೇ ವಿಚಾರವಾಗಿರಲಿ. ಆದರೆ ಅದಕ್ಕಿಂತಲೂ ಮೊದಲು ನಿಮ್ಮ ನಿಲುವು ಸರಿಯಾಗಿದೆಯಾ ಎಂಬುದನ್ನು ನೀವು ಮೊದಲು ನಿರ್ಧಿರಿಸಬೇಕು. ನಿಮ್ಮ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನಿಮಗಾಗಿ ಒಂದು ನಿಲುವನ್ನು ತೆಗೆದುಕೊಳ್ಳಲು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, ಆದರೆ ಈ ಒಂದು ಕಾರಣವು ನಿಮ್ಮ ಸಂಬಂಧವನ್ನು ಯಾವುದೇ ರೀತಿಯಲ್ಲಿ ಪರಿಣಾಮ ಬೀರಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಕೆಲವೊಮ್ಮೆ ಸಣ್ಣ ವಿಷಯಗಳು ದೊಡ್ಡ ಸಮಸ್ಯೆಗಳಾಗುತ್ತವೆ.

ನಿಮ್ಮ ಪತಿಗೆ ನಿಮ್ಮ ಚಿಕ್ಕ ಬಟ್ಟೆಗಳನ್ನು ಧರಿಸುವುದು ಇಷ್ಟವಿಲ್ಲದಿದ್ದರೆ, ನೀವು ಅವರೊಂದಿಗೆ ಎಲ್ಲೋ ಹೋದಾಗ ನಿಮ್ಮ ಆಯ್ಕೆಯ ಬಟ್ಟೆಗಳನ್ನು ಧರಿಸಲು ನೀವು ಅವನನ್ನು ಒಪ್ಪಿಸಬಹುದು. ಅಷ್ಟೇ ಅಲ್ಲ, ನಿಮ್ಮ ಆಯ್ಕೆಯನ್ನು ನಮ್ರತೆ ಮತ್ತು ದೃಢತೆಯಿಂದ ಅವರಿಗೆ ತಿಳಿಸಬಹುದು. ಆದರೆ ಕ್ರಮೇಣ ಅವರು ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳಬಹುದು.

Latest Videos
Follow Us:
Download App:
  • android
  • ios