20 ವರ್ಷದ ಯುವತಿಯೊಬ್ಬಳು ತನ್ನ ವಿವಾಹಿತ ಸಹೋದ್ಯೋಗಿಯ ಮಾತಿನಿಂದ ಆಘಾತಕ್ಕೊಳಗಾಗಿ ಮದುವೆಯಾಗುವ ನಿರ್ಧಾರವನ್ನು ಮರುಪರಿಶೀಲಿಸುತ್ತಿದ್ದಾಳೆ. ಗಂಡನಿಗೆ ಇಷ್ಟವಿಲ್ಲವೆಂದು ಮೇಕಪ್ ಮತ್ತು ಲಿಪ್‌ಸ್ಟಿಕ್ ಹಚ್ಚಲು ಹೆದರುವ ಮಹಿಳೆಯ ಕಥೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ.

20ರ ಹರೆಯದ ಯುವತಿಯೊಬ್ಬಳ್ಳು ಮುಂದಿನ ವರ್ಷವೇ ಮದುವೆಯಾಗಬೇಕು ಪ್ಲಾನ್ ಮಾಡಿಕೊಂಡಿದ್ದಳು. ಆದರೆ ಬಾತ್‌ ರೂಂನಲ್ಲಿ ತನ್ನ ವಿವಾಹಿತ ಸಹೋದ್ಯೋಗಿ ಹೇಳಿದ ಆ ಮಾತಿನಿಂದ ಯುವತಿಗೆ ಶಾಕ್ ಆಗಿದ್ದು, ಮದುವೆ ಆಗಬೇಕೇ? ಬೇಡವೇ ಎಂದು ಚಿಂತಿಸುವಂತೆ ಮಾಡಿದೆ. ಅಷ್ಟಕ್ಕೂ ಬಾತ್‌ ರೂಂನಲ್ಲಿ ನಡೆದ ಸಂಭಾಷಣೆ ಏನು? ಸಹೋದ್ಯೋಗಿ ಹೇಳಿದ್ದೇನು? ಯುವತಿ ರೆಡ್ಡಿಟ್ ನಲ್ಲಿ ತನಗಾದ ಈ ಅನುಭವ ಹಂಚಿಕೊಂಡಿದ್ದಾಳೆ. ಇದು ಎಲ್ಲ ವಿವಾಹಿತ ಮಹಿಳೆಯರ ಸಮಸ್ಯೆಯಾಗಿರಬಹುದೇ? ದಾಂಪತ್ಯದಲ್ಲಿ ಕೆಲವರು ವೈಯಕ್ತಿಕ ಆಯ್ಕೆಗಳು ಹೇಗಿರುತ್ತವೆ ಎಂಬುದನ್ನು ಮಹಿಳೆಯರನ್ನು ಚಿಂತಿಸುವಂತೆ ಮಾಡಿದೆ.

ಪತ್ನಿ ಮೇಕಪ್ ಮಾಡಿಕೊಳ್ಳುವುದು ಗಂಡನಿಗೆ ಇಷ್ಟವಿಲ್ಲ!

ಆಕೆ 30 ವರ್ಷ ವಿವಾಹಿತೆ. ಯುವತಿಯ ಸಹೋದ್ಯೋಗಿ. ಎಲ್ಲರಂತೆ ಆಕೆಗೂ ಮೇಕಪ್ ಮಾಡಿಕೊಳ್ಳುವ ಬಯಕೆ. ಮಹಿಳೆಯರು ಆಕರ್ಷಕವಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಮೇಕಪ್ ಮಾಡಿಕೊಳ್ಳುವುದು, ಲಿಪ್‌ಸ್ಟಿಕ್ ಹಚ್ಚುವುದು ಪತಿಗೆ ಇಷ್ಟವಿಲ್ಲದೆ ಇರವುದರಿಂದ ಆಕೆಗೆ ಮೇಕಪ್ ಮಾಡಿಕೊಳ್ಳುವ ಆಸೆಯಿದ್ದರೂ ಪತಿಯ ವೈಯಕ್ತಿಕ ಆಯ್ಕೆಯಿಂದಾಗಿ ಮೇಕಪ್ ಮಾಡಿಕೊಳ್ಳಲಾಗದೆ ತನ್ನ ಸಹೋದ್ಯೋಗಿನಿ ಬಳಿ ಈ ವಿಚಾರ ಹೇಳಿಕೊಂಡಿದ್ದಾಳೆ. ಲಿಪ್ಟ್‌ಸ್ಟಿಕ್ ಕೊಟ್ಟ ಯುವತಿಗೆ ಕೇಳ್ತಾಳೆ, ಇದನ್ನ ಹಚ್ಚಿಕೊಂಡ ಬಳಿಕ ತೊಳೆಯಬಹುದೇ? ತುಟಿಯ ಮೇಲಿನ ಲಿಪ್ಸ್ಟಿಕ್ ಸಂಪೂರ್ಣ ಅಳಿಸಿ ಹೋಗುತ್ತದೆಯೇ ಎಂದು ಕೇಳ್ತಾಳೆ. ಅದಕ್ಕೆ ಯುವತಿ ಏಕೆ ಅಳಿಸುವೆ ಅಂತಾ ಕೇಳಿದಾಗ, ತನ್ನ ಗಂಡನಿಗೆ ಮೇಕಪ್ ಇಷ್ಟವಿಲ್ಲ, ನಾನು ಲಿಪ್‌ಸ್ಟಿಕ್ ಹಚ್ಚುವುದು ಇಷ್ಟವಾಗಲ್ಲ ಎಂದು ಹೇಳ್ತಾಳೆ. ಆಫೀಸ್ ವಾಶ್ ರೂಂನಲ್ಲಿ ನಡೆದ ಅವರಿಬ್ಬರ ಸಂಭಾಷಣೆ ಈಗ ರೆಡ್ಡಿಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆಯರು ಮದುವೆ ಬಗ್ಗೆ ಯೋಚಿಸುವಂತೆ ಮಾಡಿದೆ

ಯುವತಿ, ವಿವಾಹಿತ ಸಹೋದ್ಯೋಗಿನಿ ಹೇಳಿದ ಆ ಮಾತುಗಳನ್ನು r/AskIndianWomen ಎಂಬ ಸಬ್‌ರೆಡಿಟ್‌ನಲ್ಲಿ (subreddit) ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, 'ಪತಿಯರಿಗೆ ಮೇಕಪ್ ಇಷ್ಟವಿರುವುದಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ. ಆಫೀಸ್‌ ವಾಶ್‌ ರೂಂನಲ್ಲಿ ನಡೆದ ಈ ಘಟನೆ ತನ್ನ ಮನಸನ್ನು ಕದಡಿದೆ. ಇದು ಕೆಲವು ದಿನಗಳ ಹಿಂದೆ ನಡೆದ ಘಟನೆಯಾದರೂ ಇದನ್ನ ಮರೆಯಲಾಗುತ್ತಿಲ್ಲ. ನನಗೆ ಈಗ 20ರ ಹರೆಯದ ವಯಸ್ಸು. ಮುಂದಿನ ಕೆಲವು ವರ್ಷಗಳಲ್ಲಿ ಮದುವೆಯಾಗಲು ಪ್ಲಾನ್ ಮಾಡಿದ್ದೇನೆ. ಆದರೆ ಈ ಘಟನೆಯಿಂದಾಗಿ ನಾನು ಮದುವೆ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಶೌಚಾಲಯದ ನಡೆದ ಮಾತಿನ ಸಂಭಾಷಣೆ ಬಗ್ಗೆ ಯುವತಿ ಹೇಳಿದ್ದೇನು?

ಆಫೀಸ್ ಶೌಚಾಲಯದಲ್ಲಿ ನಾನು ಲಿಪ್‌ಸ್ಟಿಕ್ ಅನ್ನು ಮತ್ತೆ ಹಚ್ಚಿಕೊಳ್ಳುತ್ತಿದ್ದಾಗ ಸಹೋದ್ಯೋಗಿಯೊಬ್ಬರು ಒಳಗೆ ಬಂದರು. ನನಗೆ ಲಿಪ್ಸ್ಟಿಕ್ ಹಚ್ಚಿಕೊಳ್ಳೋಕೆ ಇಷ್ಟ ಎಂದರು. ಆಗ ನಾನು ಲಿಪ್‌ಸ್ಟಿಕ್ ಹಚ್ಚಿಕೊಳ್ಳಲು ಆಕೆಗೆ ಕೊಟ್ಟೆ. ಆದರೆ ಆಕೆ ಸ್ವಲ್ಪ ಹಿಂಜರಿಯುತ್ತಲೇ ಲಿಪ್‌ಸ್ಟಿಕ್ ತೆಗೆದುಕೊಂಡಳು. ಹೀಗೆಕೆ ಹೆದರಿದಳು ಅಂತಾ ನನಗೊಮ್ಮೆ ವಿಚಿತ್ರ ಅನಿಸಿತು. ಬಳಿಕ ಅಕೆ ಕೇಳಿದರು 'ಲಿಪ್ಸ್ಟಿಕ್ ಹಚ್ಕೊಳ್ಳೋದ್ರಿಂದ ತುಟಿಯ ಮೇಲೆ ಕಲೆ ಹಾಗೆ ಉಳಿದುಕೊಳ್ಳುತ್ತದೆಯೆ? ಅದಕ್ಕೆ 'ಇಲ್ಲ' ಎಂದೆ. ಆದ್ರೂ ಮತ್ತೆ ಕೇಳಿದಳು, 'ಮನೆಗೆ ಹೋಗುವ ಮೊದಲು ನಾನು ಇದನ್ನು ಸಂಪೂರ್ಣ ತೊಳೆದು ಒರೆಸಿಕೊಳ್ಳಬಹುದೇ?' ಕೇಳಿದಳು. ನನಗೆ ಆಕೆಯ ಪ್ರಶ್ನೆ ಕೇಳಿ ಇನ್ನು ಅಶ್ಚರ್ಯವಾಯ್ತು.

ಲಿಪ್ಸ್ಟಿಕ್ ತೆಗೆಯಬೇಕು ಹಾಗೆ ಇರಲಿಬಿಡು ಎಂದಾಗ, ಸಹೋದ್ಯೋಗಿ 'ನಾನು ಮೇಕಪ್ ಮಾಡಿಕೊಳ್ಳುವುದು ಗಂಡನಿಗೆ ಇಷ್ಟವಾಗಲ್ಲ, ನಾನು ಲಿಪ್ಸ್‌ಟಿಕ್ ಹಚ್ಚಿಕೊಳ್ಳುವಂತಿಲ್ಲ' ಎಂದಾಗ ಯುವತಿಗೆ ಶಾಕ್ ಆಗಿದೆ. ಮೇಕಪ್ ಮಾಡಿಕೊಳ್ಳುವ ವಿಷಯದಲ್ಲಿ ಪತಿ ನಿಯಂತ್ರಣ ಹೇರಿದ್ದಾರೆ ಎಂಬ ಈ ಘಟನೆ ರೆಡ್ಡಿಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನನ್ನ ಸಹೋದ್ಯೋಗಿಗೆ ಮದುವೆಯಾಗಿ ಈಗಾಗಲೇ ಐದು ವರ್ಷ ಕಳೆದಿವೆ. ಸ್ವಂತ ಉದ್ಯೋಗದಲ್ಲಿದ್ದಾಳೆ. ಆದರೆ ತಮ್ಮ ಪತಿಗೆ ಇಷ್ಟವಾಗಲ್ಲ ಎಂಬ ಕಾರಣಕ್ಕೆ ಮೇಕಪ್ ಮಾಡಿಕೊಳ್ಳುತ್ತಿಲ್ಲ, ಲಿಪ್‌ಸ್ಟಿಕ್ ಹಚ್ಚಿಕೊಳ್ಳುತ್ತಿಲ್ಲ ಎಂಬುದು ತಿಳಿದು ನನಗೆ ತುಂಬಾ ಆಶ್ಚರ್ಯವಾಗಿದೆ ಎಂದು ಯುವತಿ ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಹಲವು ಯೂಸರ್ಸ್ ಪ್ರತಿಕ್ರಿಯಿಸಿದ್ದು, ಅವರಲ್ಲೊಬ್ಬ, 'ಈ ಘಟನೆ ಕೇಳಿ ತುಂಬಾ ಆಘಾತವಾಯ್ತು, ಇದನ್ನ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ' ಮೂವತ್ತರ ವಿವಾಹಿತ ಮಹಿಳೆ, ಉದ್ಯೋಗದಲ್ಲಿದ್ದರೂ ಮೇಕಪ್ ಮಾಡಿಕೊಳ್ಳುವ ಅನುಮತಿ ಇಲ್ಲವೇ? ಎಂದು ಅಚ್ಚರಿ, ಆಘಾತ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಅಚ್ಚರಿ ಎಂದರೆ ಆ ಸಹೋದ್ಯೋಗಿ ತನ್ನ ಪತಿಯ ಬಗ್ಗೆ ಮತ್ತು ಆತನಿಗೆ ಮೇಕಪ್ (ಅಲಂಕಾರ) ಇಷ್ಟವಿಲ್ಲದಿರುವ ಬಗ್ಗೆ ಮಾತನಾಡಿದ ರೀತಿ. 'ಅತ್ಯಂತ ಕೆಟ್ಟ ವಿಷಯವೇನೆಂದರೆ ಆಕೆ ಈ ಎಲ್ಲವನ್ನೂ ವಿವರಿಸಿದ ರೀತಿ ಹೇಗಿತ್ತೆಂದರೆ, ಆಕೆಯ ಪತಿ ಆಕೆಯ ಲುಕ್ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳುವ, ಆಕೆಯ ಬಗ್ಗೆ ತುಂಬಾ ಕಾಳಜಿ ವಹಿಸುವ ವ್ಯಕ್ತಿ ಎಂಬಂತೆ ಹೇಳಿಕೊಂಡಿದ್ದು.

ಈ ಘಟನೆಯಿಂದಾಗಿ ನನಗೆ ನನ್ನದೆ ಮದುವೆ ಬಗ್ಗೆ ಯೋಚಿಸುವಂತೆ ಮಾಡಿದೆ. ಇಂಥ ರಿಯಲ್ ಲೈಫ್ ಸ್ಟೋರಿ ಕೇಳಿದಾಗ ಮದುವೆಯಾಗದೆ ಒಂಟಿಯಾಗಿರೋದೇ ವಾಸಿ ಎನಿಸುತ್ತದೆ ಎಂದು ಯುವತಿ ಬರೆದಿದ್ದಾರೆ. ಅದಕ್ಕೆ ರೆಡ್ಡಿಟ್ ಬಳಕೆದಾರರು 'ಪತಿಯ ನಡೆವಳಿಕೆ ಬಗ್ಗೆ ಎಚ್ಚರಿಕೆಯ ಸಂಕೇತ' ಎಂದು ಕಾಮೆಂಟ್ ಮಾಡಿದ್ದರೆ

ಮಹಿಳೆಯರು ಇಂತಹ ದೌರ್ಜನ್ಯ ನಡೆಯುವ ಸಂಬಂಧಗಳಲ್ಲಿ ಇದ್ದುಕೊಂಡೂ, ಅದನ್ನು ಗುರುತಿಸದಿರುವುದು ಆಶ್ಚರ್ಯಕರ ಸಂಗತಿ' ಎಂದು ಬರೆದಿದ್ದಾರೆ. ಇನ್ನೊಬ್ಬರು, 'ಎಷ್ಟು ಅಸುರಕ್ಷಿತ ಭಾವನೆ ಹೊಂದಿರುವ ಪತಿ ಇವನು! ಇದೊಂದು ದೊಡ್ಡ ಎಚ್ಚರಿಕೆಯ ಸಂಕೇತ' ಎಂದು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವುದಕ್ಕೂ ಮತ್ತು ಅದನ್ನು ಸಂಗಾತಿಯ ಮೇಲೆ ಹೇರುವುದಕ್ಕೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾ ಹೀಗೆ ಬರೆದಿದ್ದಾರೆ. ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಬೇರೆ; ಅದನ್ನು ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರುವುದು ಬೇರೆ. ಎಂದಿದ್ದರೆ, ಮಗದೊಬ್ಬ ಮದುವೆಯಾದ ಬಳಿಕ ಲಿಪ್‌ಸ್ಟಿಕ್ ಅವಶ್ಯವೇನು, ಪರರ ಆಕರ್ಷಣೆಗೆ ಮೇಕಪ್ ಲಿಪ್‌ಸ್ಟಿಕ್ ಅಗತ್ಯವೇನು ಎಂದೂ ಪ್ರಶ್ನಿಸಿದ್ದಾರೆ. ಒಟ್ಟಾರೆ ಬಹುತೇಕ ಗಂಡನ ನಡೆ ಬಗ್ಗೆ ಟೀಕಿಸಿದ್ದಾರೆ.

ಆದರೆ ಗಂಡ ಲಿಪ್ಟ್‌ಸ್ಟಿಕ್, ಮೇಕಪ್ ಮಾಡಬೇಡ ಎನ್ನುವುದು ದೌರ್ಜನ್ಯವೋ ಅಥವಾ ಪತ್ನಿಯ ಮೇಲಿನ ಕಾಳಜಿಯೋ?

ಸಮಾಜದಲ್ಲಿ ಸರಳತೆ ಬದುಕುವು ಕುಟುಂಬಗಳು ತುಂಬಾ ಇವೆ. ಜೀವನ ಕೂಡ ಯಾವುದೇ ಆಡಂಬರ ಇಲ್ಲದೆ ಸರಳವಾಗಿರಬೇಕು ಎಂದು ಬಯಸುತ್ತಾರೆ. ಪತ್ನಿ ಮೇಕಪ್ ಮಾಡಿಕೊಂದು ಹೊರಗಡೆ ಹೋಗುವುದು ಜನರ ಕೆಟ್ಟ ದೃಷ್ಟಿಬಿಳುವುದು ದಾಂಪತ್ಯ ಮಾಡಿಕೊಳ್ಳುವುದು ಇವೆಲ್ಲ ಸಮಸ್ಯೆಗಳನ್ನು ಇಂದು ದಿನನಿತ್ಯ ನೋಡುತ್ತಲೇ ಇದ್ದೇವೆ. ಇಂಥ ಯಾವುದೇ ತೊಂದರೆ ದಾಂಪತ್ಯಕ್ಕೆ ಬಾರದೆ ಇರಲಿ ಎಂಬ ದೃಷ್ಟಿಕೋನವೂ ಇರಬಹುದಲ್ಲವೇ, ಆದ್ದರಿಂದ ಪತ್ನಿಯನ್ನ ಅಪಾರವಾಗಿ ಪ್ರೀತಿಸುವ ಪತಿ ಇದ್ದಾಗ ಆಕೆಗೆ ಬಾಹ್ಯ ಸೌಂದರ್ಯವಾದರೂ ಏಕೆ ಬೇಕು? ಯಾರನ್ನ ಮೆಚ್ಚಿಸಲು ಬೇಕು? ಎಂಬ ಪ್ರಶ್ನೆಯೂ ಯೂಸರ್ಸ್ ಕೇಳಿದ್ದಾರೆ.