Asianet Suvarna News Asianet Suvarna News

ಚುಂಬನಕ್ಕಿಂತಲೂ ಆಲಿಂಗನ ತುಂಬಾ ಮುಖ್ಯ, ಯಾಕೆ ಗೊತ್ತೆ?

ನಿಮ್ಮ ದೇಹದಲ್ಲಿ ಪ್ರೇಮದ ಹಾರ್ಮೋನ್ ಆಕ್ಸಿಟೋಸಿನ್ ಸ್ರವಿಸುವಂತೆ ಮಾಡುವ, ಬೆಚ್ಚಗಿನ ಭಾವನೆಯಲ್ಲಿ ನಿಮ್ಮನ್ನು ಕಾಪಾಡುವ ಆಲಿಂಗನ ನಿಮ್ಮ ಪ್ರೇಮ ಸಂಬಂಧಕ್ಕೆ ತುಂಬಾ ಮಹತ್ವದ್ದು.
 

Hugging is more important than kissing here is reason
Author
Bengaluru, First Published Aug 2, 2021, 4:18 PM IST
  • Facebook
  • Twitter
  • Whatsapp

ನಿಮ್ಮ ಪ್ರೇಮ ಸಂಬಂಧದಲ್ಲಿ ಚುಂಬನಕ್ಕಿಂತಲೂ ಆಲಿಂಗನ ತುಂಬಾ ಮಹತ್ವಪೂರ್ಣವಾದುದು. ಆಲಿಂಗನದ ಮಹತ್ವ ಕೆಲವರಿಗೆ ತಿಳಿದಿರಲಾರದು. ಸಂಬಂಧಗಳನ್ನು ಬೆಸೆದು ಬಾಂಧವ್ಯವನ್ನು ಗಟ್ಟಿಗೊಳಿಸುವ ಆಲಿಂಗನ ಎನ್ನುವುದು ಹೃದಯಗಳನ್ನು ಇನ್ನಷ್ಟು ಹತ್ತಿರಕ್ಕೆ ತರುವಂಥದ್ದು. ದೀರ್ಘ ಕಾಲ ಸಾಂಗತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರಲ್ಲಿ ಈ ಪ್ರಶ್ನೆಯನ್ನು ನೀವು ಕೇಳಿದರೆ ಆಲಿಂಗನದ ಮಹತ್ವವನ್ನು ಅರಿಯುವಿರಿ. 
ಒಂದು ಸಣ್ಣ ಜಗಳವನ್ನು, ಸಿಟ್ಟನ್ನು, ದುಃಖವನ್ನು ಸಣ್ಣ ಬೆಚ್ಚಗಿನ ಆಲಿಂಗನ ಸವಿಯಾಗಿಸುತ್ತದೆ. ನಿಮ್ಮ ಪ್ರೀತಿ ಪಾತ್ರರ ನಡುವಿನ ಸಾಮರಸ್ಯವನ್ನು ಅನನ್ಯಗೊಳಿಸುವ ಆಲಿಂಗನ ನಿಮ್ಮ ದೇಹದಲ್ಲಿ ಆಕ್ಸಿಟೋಕಿನ್ ಎಂಬ ಹಾರ್ಮೋನ್‌ನ ಬಿಡುಗಡೆ ಆಗುವಂತೆ ಮಾಡುತ್ತದೆ. ಇದು ಒತ್ತಡದ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಸಾಮಾಜಿಕ ಬಾಂಧವ್ಯವನ್ನು ಬೆಳೆಸಲು ಸಹಕಾರಿಯಾಗುತ್ತದೆ. ಇದರಿಂದ ಉತ್ತಮ ಸಂಬಂಧ ಹಳಸದೇ ಚೆನ್ನಾಗಿರುತ್ತದೆ.

ಸಂಗಾತಿಗಳ ನಡುವಿನ ದೈಹಿಕ ಆಕರ್ಷಣೆಯನ್ನು ವ್ಯಕ್ತಪಡಿಸಲು ಆಲಿಂಗನ ಅತೀ ಮುಖ್ಯ. ಬರೀ ಚುಂಬನದಿಂದ ಯಾವುದೇ ಜಾದೂ ಮಾಡಲಾಗುವುದಿಲ್ಲ. ಅದರೊಂದಿಗೆ ಆಲಿಂಗನದ ಸುಖ ಇದ್ದರೆ ಮಾತ್ರ ಸಂಬಂಧ ಗಟ್ಟಿಯಾಗಿರುತ್ತದೆ ಮತ್ತು ಅದ್ಭುತಗಳು ನಡೆಯುತ್ತವೆ. ಆಲಿಂಗನ ನಿಮ್ಮ ಸಂಗಾತಿಯನ್ನು ಓಲೈಸುವಲ್ಲಿ ಹೇಗೆ ಪರಿಣಾಮಕಾರಿ ಎಂಬುದನ್ನು ತಿಳಿದುಕೊಳ್ಳೋಣ.

ದೈಹಿಕ ಆಕರ್ಷಣೆ
ನಿಮ್ಮ ಹಾಗೂ ಸಂಗಾತಿಯ ನಡುವಿನ ದೈಹಿಕ ಸಂಬಂಧ ಆಲಿಂಗನದ ಮೂಲಕವೇ ಆರಂಭವಾಗುತ್ತದೆ. ಅದನ್ನು ಪ್ರಾರಂಭಿಸಿ. ನಿಮ್ಮಲ್ಲಿ ದೈಹಿಕ ಆಕರ್ಷಣೆ ಉಂಟಾಗಲು ಆಲಿಂಗನ ಸಹಕಾರಿ. ನಿಮ್ಮ ಸಂಗಾತಿ ಇಂದು ಅಂದವಾಗಿ ಕಾಣುತ್ತಿದ್ದರೆ ಅವರತ್ತ ಸುಳಿದು ಪ್ರೀತಿಯಿಂದ ಆಲಂಗಿಸಿ, ನೀನು ಇಂದು ತುಂಬಾ ಚೆಂದ ಕಾಣಿಸುತ್ತಿದ್ದೀಯಾ ಎಂದು ಹೇಳಿ. ಇದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಂತರ ನೋಡಿ.

ಜಗಳವನ್ನು ಮರೆಸುತ್ತದೆ
ನಿಮ್ಮ ಸಂಗಾತಿ ನಿಮ್ಮ ಯಾವ ಮಾತನ್ನೂ ಕೇಳದೆ ಹಠ ಮಾಡುತ್ತಿದ್ದರೆ, ಜಗಳ ಮಾಡುತ್ತಿದ್ದರೆ, ಒಂದು ಅಪ್ಪುಗೆಯ ಮೂಲಕ ಅದನ್ನು ನೀವು ಪರಿಹರಿಸಿಕೊಳ್ಳಬಹುದು. ಇದರಿಂದ ಜಗಳ ಮರೆತು ಅಲ್ಲಿ ಪ್ರೀತಿ ನೆಲೆಗೊಳ್ಳುತ್ತದೆ. ನಿಮ್ಮ ಪ್ರೀತಿಯ ಆಳವನ್ನು ಇನ್ನಷ್ಟು ಗಾಢಗೊಳಿಸಲು ಆಲಿಂಗನ ಸಹಕಾರಿಯಾಗಿದೆ.

ಭದ್ರತೆಯ ಅನುಭವ
ಭದ್ರತೆಯ ಅನುಭವ ಆಲಿಂಗನದಿಂದ ಚೆನ್ನಾಗಿ ವ್ಯಕ್ತವಾಗುತ್ತದೆ. ಆಲಿಂಗನವನ್ನು ನೀವು ಹಂಚಿಕೊಂಡಾಗ, ಮಹಿಳೆಯು ತನ್ನ ಹೆಚ್ಚು ಸುರಕ್ಷಿತಳಾಗಿದ್ದೇನೆ ಎಂಬ ಭಾವನೆಯನ್ನು ಅನುಭವಿಸುತ್ತಾಳೆ. ಗಂಡಸಿಗೂ ಅಷ್ಟೆ. ಈ ಭದ್ರತೆ ಸುರಕ್ಷತೆಯನ್ನು ಪದಗಳಲ್ಲಿ ವರ್ಣಿಸಲಾಗದು.
 

ಒತ್ತಡ ನಿವಾರಕ
ಜೋಡಿಗಳ ನಡುವೆ ಧನಾತ್ಮಕ ಶಕ್ತಿಯನ್ನು ಉದ್ದೀಪನಗೊಳಿಸಲು ಆಲಿಂಗನ ಸಹಕಾರಿ. ಎಲ್ಲಾ ಒತ್ತಡ ಮತ್ತು ಆತಂಕ ದೇಹದಿಂದ ನಿವಾರಣೆಯಾಗಲು ಆಲಿಂಗನ ಸಹಕಾರಿಯಾಗಿದೆ. ಎರಡು ನಿಮಿಷಗಳ ಒಂದು ಆಲಿಂಗನ, ಒಂದು ದಿನದ ಒತ್ತಡವನ್ನು ಮರೆಸಲು ಶಕ್ತವಾಗಿದೆ. 

ಕಾಲು ಮುರಿದರೂ, ಹೃದಯಾಘಾತ ಆದರೂ ಈ ಜೋಡಿ ಜಗತ್ತು ಸುತ್ತೋದು ಬಿಡಲಿಲ್ಲ!

ಕಾಳಜಿಯನ್ನು ವ್ಯಕ್ತಪಡಿಸಲು
ನಿಮ್ಮ ಪ್ರೀತಿ ಪಾತ್ರರ ಮೇಲೆ ನಿಮಗೆಷ್ಟು ಕಾಳಜಿ ಇದೆ ಎಂಬುದನ್ನು ವ್ಯಕ್ತಪಡಿಸಲು ಆಲಿಂಗನ ಮುಖ್ಯವಾಗಿದೆ. ಈ ಅವಕಾಶವನ್ನು ಮಾತ್ರ ಎಂದಿಗೂ ಕಳೆದುಕೊಳ್ಳಬೇಡಿ. ಇದು ಸಂಗಾತಿಗಳ ಜೊತೆಗೆ ಹೇಗೋ ಹಾಗೇ ತಂದೆ- ತಾಯಿ- ಮಕ್ಕಳ ನಡುವೆ ಕೂಡ ತುಂಬಾ ಇಂಟಪಾರ್ಟೆಂಟು.

ನಗುವಿನ ಶಕ್ತಿ
ನಿಮ್ಮ ತೋಳನ್ನು ಬಳಸಿ ಆಕೆಯನ್ನು ಆಲಂಗಿಸುವಾಗ ಆಕೆಯ ಮುಖದಲ್ಲಿ ಉಂಟಾಗುವ ನಗುವನ್ನು ನೋಡಿ. ಆಲಿಂಗನವು ಸಂಗಾತಿಗಳ ನಡುವೆ ಹೂನಗುವನ್ನು ಉಂಟುಮಾಡಿ ಸಂತೋಷದಿಂದಿರಲು ಕಾರಣವಾಗಿದೆ.
 

Hugging is more important than kissing here is reason

ಪ್ರೀತಿಯ ಪರಿಮಳ
ನಿಮ್ಮ ಸಂಗಾತಿಯನ್ನು ನೀವು ಆಲಂಗಿಸಿಕೊಂಡಾಗ ಅವರ ಪ್ರೀತಿಯ ಆಘ್ರಾಣಿಸುವಿಕೆ ನಿಮ್ಮಲ್ಲಿ ಚೈತನ್ಯವನ್ನುಂಟು ಮಾಡುತ್ತದೆ. ಈ ಪ್ರೀತಿಯ ಪರಿಮಳ ನಿಮ್ಮ ನಡುವಿನ ಸಂಬಂಧವನ್ನು ಗಾಢವಾಗಿಸುತ್ತದೆ. 

ಪುರುಷರ ಈ 7 ಅಭ್ಯಾಸಗಳು ಲೈಂಗಿಕ ಜೀವನದಲ್ಲಿ ಅದ್ಭುತ ಸೃಷ್ಟಿಸುತ್ತೆ

ಬಿಸಿಯ ಅನುಭವ
ನಿಮ್ಮ ಪ್ರೀತಿಪಾತ್ರರ ಬೆಚ್ಚಗಿನ ಹಿಡಿತದಲ್ಲಿ ನೀವಿದ್ದಾಗ ಬಿಸುಪನ್ನು ನೀವು ಅನುಭವಿಸಿದ್ದೀರಾ? ಹಾಗಿದ್ದರೆ ಅದು ನಿಮ್ಮ ಸಂಬಂಧದ ದೃಢತೆಯ ಉತ್ತಮ ಲಕ್ಷಣವಾಗಿದೆ. ಸಂಬಂಧದಲ್ಲಿ ಗಟ್ಟಿಯಿಂದಿರಲು ಆಲಿಂಗನ ಹಿತಕಾರಿಯಾಗಿದೆ.

ಧೈರ್ಯವನ್ನು ನೀಡುತ್ತದೆ
ನೀವು ತುಂಬಾ ಇಳಿದಾಗ ಕಂಗೆಟ್ಟಾಗ ನಿಮ್ಮ ಪ್ರೀತಿಯ ಹುಡುಗನ ಅಥವಾ ಹುಡುಗಿಯ ಆಲಿಂಗನದ ದೃಢತೆಯನ್ನು ನೀವು ಬಯಸುತ್ತೀರಿ ಅಲ್ಲವೇ? ಆದ್ದರಿಂದಲೇ ಆಲಿಂಗನ ಎನ್ನುವುದು ಅಷ್ಟೊಂದು ಹಿತಕಾರಿಯಾಗಿರುವುದು ಮತ್ತು ಮಹತ್ವಪೂರ್ಣವಾದುದು.

ಹೆಣ್ಣು ಮಕ್ಕಳಿಗೆ ಎಂಥ ಅಪ್ಪ ಸಿಗಬೇಕು ಗೊತ್ತೇ?

Follow Us:
Download App:
  • android
  • ios