Relationship Tips: ತಾಯಿ ಖುಷಿಯಾಗಿದ್ರೆ ನಿಮ್ಮ ಲೈಫ್ ಸೂಪರ್

ಮನೆಯಲ್ಲಿ ಹೆಣ್ಮಕ್ಕಳು ಲವಲವಿಕೆಯಿಂದ ಇದ್ರೆ ಮನೆ ಸಂತೋಷ ದುಪ್ಪಟ್ಟಾಗುತ್ತೆ ಎನ್ನುವ ಮಾತಿದೆ. ಹಾಗೆ ಮನೆಯ ಮಹಾಲಕ್ಷ್ಮಿ ಎನ್ನಿಸಿಕೊಳ್ಳುವ ಅಮ್ಮ ಸದಾ ಸಂತೋಷವಾಗಿದ್ರೆ ಮಕ್ಕಳ ಬಾಳು ಹಸನಾಗುತ್ತೆ. ನಿಮ್ಮ ಅರಿವಿಗೆ ಬಾರದೆ ನೆಮ್ಮದಿ ಜೀವನ ನಿಮ್ಮದಾಗುತ್ತೆ.
 

How You Can Make Your Mother Happy

 ನಾವು ಹೇಗೆ ಯೋಚಿಸುತ್ತೇವೆ, ನಾವು ಏನು ಮಾಡುತ್ತೇವೆ, ನಾವು ಏನು ಹೇಳುತ್ತೇವೆ ಮತ್ತು ಇತರರ ಜೊತೆ ಹೇಗೆ ನಡೆಸಿಕೊಳ್ಳುತ್ತೇವೆ ಇವೆಲ್ಲವೂ ನಮ್ಮ ಕುಟುಂಬದ ಜೊತೆ ಸಂಬಂಧ ಹೊಂದಿದೆ. ನಮ್ಮ ಕುಟುಂಬಸ್ಥರು ನಡೆದುಕೊಳ್ಳುವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ವಿಶೇಷವಾಗಿ ತಾಯಿಯ ಪ್ರಭಾವ ನಮ್ಮ ಮೇಲೆ ಹೆಚ್ಚಿರುತ್ತದೆ. ತಾಯಿ ನಮ್ಮ ಜೀವನದ ಅವಿಭಾಜ್ಯ ಅಂಗ. ಆಕೆಯಿಲ್ಲದ ಜೀವನ ಮುಂದುವರೆಯುವುದು ಕಷ್ಟ. ತಾಯಿಯೇ ಮೊದಲ ಗುರು. ಹಾಗೆಯೇ ತಾಯಿಯ ಜೀವನದ ನ್ಯೂತ್ಯತೆ, ಕಷ್ಟ ಅಥವಾ ಆಕೆಯ ಆಲೋಚನೆ, ಅವಳ ಜೀವನದಲ್ಲಿ ನಡೆದ ಕಹಿ ಘಟನೆ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ತಾಯಿಗೆ ಏನಾದರೂ ತೊಂದರೆಯಾದರೆ ಅದರ ಪರಿಣಾಮ ಮಕ್ಕಳ ಮೇಲೆ ನೇರವಾಗಿ ಆಗುತ್ತದೆ. ಅದರಲ್ಲೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಮೇಲೆ ಪರಿಣಾಮ ಹೆಚ್ಚಾಗಿ ಕಾಣಿಸುತ್ತದೆ.  ನಮ್ಮ ಆತ್ಮವಿಶ್ವಾಸ ಹಾಗೂ ನಮ್ಮನ್ನು ನಾವು ಗುರುತಿಸಿಕೊಳ್ಳವುದಕ್ಕೆ ಅಮ್ಮನ ಪ್ರಭಾವ ಮಹತ್ವದ್ದಾಗಿರುತ್ತದೆ. ತಾಯಿಯ ವರ್ತನೆ ಕೇವಲ ನಮ್ಮ ಮೇಲೆ ಮಾತ್ರ ಪ್ರಭಾವ ಬೀರುವುದಿಲ್ಲ. ತಾಯಿ ಮಕ್ಕಳ ಜೊತೆ ಹೇಗೆ ವರ್ತಿಸುತ್ತಾಳೋ ಅದನ್ನೇ ಆ ಮಗು ತಾಯಿಯಾದ್ಮೇಲೆ ವರ್ತಿಸ್ತಾಳೆ. ತಾಯಿ ಜೀವನದಲ್ಲಿ ಏನೇ ಕಲಿತಿರಲಿ,ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮೇಲೆ ಹಾಗೂ ನಿಮ್ಮ ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಬಾರದು ಅಂದ್ರೆ ನೀವು ನಿಮ್ಮ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಬೇಕು. ಆಕೆ ಸಂತೋಷವಾಗಿದ್ರೆ ನಮ್ಮ ಕುಟುಂಬ  ಸಂತೋಷವಾಗಿರುತ್ತದೆ ಎಂಬುದು ಅರಿವಿರಬೇಕು. ತಾಯಿಯ ಜೀವನವನ್ನು ಸುಂದರಗೊಳಿಸಲು ನೀವು ಏನಾದರೂ ಮಾಡಿದರೆ ಅದರ ಸಕಾರಾತ್ಮಕ ಪರಿಣಾಮವು ನಿಮ್ಮ ಜೀವನದ ಮೇಲೂ ಕಂಡುಬರುತ್ತದೆ. ಇಂದು ನಾವು ತಾಯಿಯನ್ನು ಖುಷಿಯಾಗಿಡೋದು ಹೇಗೆ ಎಂಬುದನ್ನು ಹೇಳ್ತೇವೆ.

ತಾಯಿ (Mother) ಮೇಲೆ ಆರೋಪ ಹಾಕ್ಬೇಡಿ : ಜೀವನ (Life) ದಲ್ಲಿ ಯಾವುದೇ ಕಹಿ ಘಟನೆ ನಡೆದ್ರೂ ತಾಯಿಯನ್ನು ದೂರುವ ಮಕ್ಕಳಿದ್ದಾರೆ. ನಿನ್ನಿಂದ ನಮ್ಮ ಬಾಳಲ್ಲಿ ಹೀಗಾಯ್ತು ಎಂದು ಆಕೆಯನ್ನು ತೆಗಳುವ ಮಕ್ಕಳಿದ್ದಾರೆ. ತಾಯಿ ಮೇಲೆ ಆರೋಪ ಮಾಡುವುದು ಸುಲಭ. ತಾಯಿಯಿಂದ ಕೆಟ್ಟ ವಿಷಯ, ಕೆಟ್ಟ ಅಭ್ಯಾಸ, ಕೆಟ್ಟ ಸಂಬಂಧ ನಿಮಗೆ ಸಿಕ್ಕಿದ್ದರೆ ನಿಮ್ಮ ತಾಯಿಯನ್ನು ಖುಷಿಗೊಳಿಸಲು ಪ್ರಯತ್ನಿಸಿ. ಆಕೆ ಖುಷಿಯಾಗಿದ್ದರೆ ನಿಮ್ಮ ಅರಿವಿಗೆ ಬರದಂತೆ ನೀವು ಖುಷಿಯಾಗಿರ್ತೀರಿ. ಈ ನಕಾರಾತ್ಮಕ (Negative) ಪ್ರಭಾವ ನಿಮ್ಮ ಮಕ್ಕಳನ್ನು ತಲುಪುವುದು ತಪ್ಪುತ್ತದೆ.

ತಾಯಿಯನ್ನು ಹೀಗೆ ಸಂತೋಷಪಡಿಸಿ : ತಾಯಿಯ ಇಡೀ ಜಗತ್ತು ತನ್ನ ಮಕ್ಕಳ ಸುತ್ತ ಸುತ್ತುತ್ತದೆ. ಆದರೆ ಮಕ್ಕಳು ಅವಳ ಮಾತನ್ನು ನಿರ್ಲಕ್ಷಿಸಿದಾಗ ತಾಯಿಯ ಹೃದಯಕ್ಕೆ ನೋವುಂಟಾಗುತ್ತದೆ.  ಜೀವನದಲ್ಲಿ ನಿಮ್ಮ ತಾಯಿಗೆ ಪ್ರಾಮುಖ್ಯತೆ ನೀಡಿ ಮತ್ತು ನಿಮ್ಮ ನಿರ್ಧಾರಗಳಿಗೆ ಅವರ ಒಪ್ಪಿಗೆಯನ್ನು ಖಂಡಿತವಾಗಿ ತೆಗೆದುಕೊಳ್ಳಿ. ಇದರಿಂದ ತಾಯಿಯ ದುಃಖ ಮತ್ತು ಮನಸ್ಸಿನ ಭಾರ  ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

ಇದನ್ನೂ ಓದಿ: ಮದುವೆಗೆ ಮುನ್ನ ಸಂಭೋಗ ಬೆಳೆಸಲ್ವಂತೆ ಈ ಹುಡುಗಿ!

ನಿಮ್ಮಮ್ಮ ಸೂಪರ್ ಮಮ್ಮಿ ಅಲ್ಲ : ಸಾಮಾನ್ಯವಾಗಿ ಮಕ್ಕಳು ತಮ್ಮ ತಾಯಿಯನ್ನು ಸೂಪರ್ ಮಮ್ಮಿ ರೂಪದಲ್ಲಿ ನೋಡಲು ಬಯಸ್ತಾರೆ. ಆದ್ರೆ ಈ ನಿರೀಕ್ಷೆ ಈಡೇಡರೆ ಇದ್ದಾಗ ಸಂಬಂಧದಲ್ಲಿ ಕಹಿ ಕಾಣಿಸಿಕೊಳ್ಳುತ್ತದೆ. ತಾಯಿಯನ್ನು ಕೇವಲ ಮನುಷ್ಯರಂತೆ ನೋಡಿ. ಸೂಪರ್ ಮಮ್ಮಿ ರೂಪದಲ್ಲಿ ನೋಡಲು ಹೋಗ್ಬೇಡಿ.

ಇದನ್ನೂ ಓದಿ: ಪ್ರೀತಿ ಇರ್ಬೇಕು, ಕಾಳಜಿ ಇರ್ಬೇಕು ನಿಜ. ಆದ್ರೆ ಅತಿಯಾದ್ರೆ ಏನ್ ಚಂದ ನೀವೇ ಹೇಳಿ?

ಅಮ್ಮನ ಅವಶ್ಯಕತೆಗೆ ಗಮನ ನೀಡಿ : ತಾಯಿ ತನ್ನ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಹೆಚ್ಚು ಗಮನ  ನೀಡ್ತಾಳೆ. ತನ್ನ ಬಗ್ಗೆ, ತನ್ನ ಆಸೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಹೆಚ್ಚು ಸಮಯ ನೀಡುವುದಿಲ್ಲ. ಹೀಗಿರುವಾಗ ಆಕೆಯ ಅವಶ್ಯಕತೆಯನ್ನು ಮಕ್ಕಳು ಪೂರೈಸಬೇಕು. ಆಕೆಯ ಆರೈಕೆಗೆ, ಆರೋಗ್ಯಕ್ಕೆ ಮಕ್ಕಳು ಆದ್ಯತೆ ನೀಡ್ಬೇಕು.

Latest Videos
Follow Us:
Download App:
  • android
  • ios