ಯಾವಾಗ್ ನೋಡಿದ್ರೂ ಬೆಸ್ಟೀ ಅಂತಾಳೆ, ಫ್ರೆಂಡ್ ಝೋನ್‌ನಿಂದ ಲವ್‌ಗೆ ಶಿಫ್ಟ್ ಆಗೋದ್ಹೇಗೆ ?
ನೀವು ಆಕೆಯನ್ನು ಅಥವಾ ಆತನನ್ನು ತುಂಬಾ ಪ್ರೀತಿಸುತ್ತಿದ್ದೀರಿ. ಆದ್ರೆ ಅವರು ಮಾತ್ರ ಯಾವಾಗ್ಲೂ ನಿಮ್ಮನ್ನು ನೋಡಿ ನನ್ ಬೆಸ್ಟ್ ಫ್ರೆಂಡ್ ಅಂತಾರೆ. ಆದರೆ ನಿಮ್ಮ ಮನಸ್ಸಿನಲ್ಲಿ ಪ್ರೀತಿಯ ಭಾವನೆಯಿದ್ದಾಗ ಈ ಫ್ರೆಂಡ್ ಝೋನ್ ನಿಮಗೆ ಉಸಿರುಗಟ್ಟಿಸಬಹುದು. ಹಾಗಿದ್ರೆ ಫ್ರೆಂಡ್ ಝೋನ್‌ನಿಂದ ಲವ್‌ಗೆ ಶಿಫ್ಟ್ ಆಗಲು ಏನು ಮಾಡ್ಬಹುದು ?
ಪ್ರೀತಿ ಅನ್ನೋದು ಒಂದು ಮ್ಯಾಜಿಕಲ್ ಫೀಲಿಂಗ್. ಆ ಭಾವನೆ ಯಾರ ಮೇಲಾದರೂ ಮೂಡಬಹುದು. ಆದರೆ ಕೆಲವೊಮ್ಮೆ ನೀವು ಪ್ರೀತಿಸುತ್ತಿರುವವರ ಪಾಲಿಗೆ ನೀವು ಜಸ್ಟ್ ಫ್ರೆಂಡ್ ಆಗಿರುತ್ತೀರಿ. ಮತ್ತೇನು ಅಲ್ಲ. ಅವರಿಗೆ ನಿಮ್ಮ ಮೇಲೆ ಸಿಕ್ಕಾಪಟ್ಟೆ ಪ್ರೀತಿಯಿರುತ್ತದೆ. ಆದ್ರೆ ಜಸ್ಟ್ ಫ್ರೆಂಡ್ ಆಗಿ ಅಷ್ಟೆ. ನಿಮಗೆ ಅವರ ಮೇಲೆ ಪ್ರೀತಿಯಿದ್ದರೂ, ಮನಸ್ಸಿನ ಮಾತನ್ನು ಹೇಳಿಬಿಟ್ರೆ ಎಲ್ಲಿ ಫ್ರೆಂಡ್ ಶಿಪ್ ಕೂಡಾ ಹಾಳಾಗುತ್ತೇನೋ ಅಂತ ಭಯಪಟ್ಟುಕೊಳ್ಳುತ್ತೀರಿ. ನೀವು ಆಕೆಯನ್ನು ಅಥವಾ ಆತನನ್ನು ತುಂಬಾ ಪ್ರೀತಿಸುತ್ತಿದ್ದೀರಿ. ಆದ್ರೆ ಅವರು ಮಾತ್ರ ಯಾವಾಗ್ಲೂ ನಿಮ್ಮನ್ನು ನೋಡಿ ನನ್ ಬೆಸ್ಟ್ ಫ್ರೆಂಡ್ ಅಂತಾರೆ. ಆದರೆ ನಿಮ್ಮ ಮನಸ್ಸಿನಲ್ಲಿ ಪ್ರೀತಿಯ ಭಾವನೆಯಿದ್ದಾಗ ಈ ಫ್ರೆಂಡ್ ಝೋನ್ ನಿಮಗೆ ಉಸಿರುಗಟ್ಟಿಸಬಹುದು. ಹಾಗಿದ್ರೆ ಫ್ರೆಂಡ್ ಝೋನ್‌ನಿಂದ ಲವ್‌ಗೆ ಶಿಫ್ಟ್ ಆಗಲು ಏನು ಮಾಡ್ಬೋದು ? ಕೆಲವೊಂದು ಸಲಹೆಗಳು ಇಲ್ಲಿವೆ.
ಥ್ಯಾಂಕ್ಸ್, ಸ್ಸಾರಿ ಪದಗಳನ್ನು ದೂರವಿಡಿ: ಸ್ನೇಹಿತರ (Friends) ಮಧ್ಯೆ ಥ್ಯಾಂಕ್ಸ್ ಹಾಗೂ ಸ್ಸಾರಿ ಪದಬಳಕೆಯ ಅಗತ್ಯವಿಲ್ಲ. ಯಾಕೆಂದರೆ ಸಂಬಂಧ ಅಷ್ಟು ಆಪ್ತತೆಯಿಂದ ಕೂಡಿರುತ್ತದೆ. ಸ್ನೇಹಿತರು ಸಾಮಾನ್ಯವಾಗಿ ಸ್ನೇಹಿತರನ್ನು ಹೊಗಳುವುದಿಲ್ಲ ಮತ್ತು ಅವರು ಮಾಡಿದರೂ ಸಹ, ಅದು ವ್ಯಂಗ್ಯದಿಂದ ತುಂಬಿರುತ್ತದೆ. ಮತ್ತು ನೀವು ನಿಜವಾಗಿಯೂ ಸ್ನೇಹಿತರಾಗುವುದನ್ನು ನಿಲ್ಲಿಸಲು ಬಯಸಿದರೆ ಥ್ಯಾಂಕ್ಸ್ ಹಾಗೂ ಸ್ಸಾರಿ ಪದಬಳಕೆಯನ್ನು ನಿಲ್ಲಿಸಿ. ಇದರಿಂದ ಸಂಬಂಧ (Relationship) ಆಪ್ತವಾಗಲು ಆರಂಭವಾಗುತ್ತದೆ. ಆ ನಂತರ ಸುಲಭವಾಗಿ ಅವರು ಹೇಗೆ ಕಾಣುತ್ತಾರೆ, ಎಷ್ಟು ಚೆಂದವಾಗಿ ಕಾಣುತ್ತಾರೆ ಎಂಬುದರ ಬಗ್ಗೆ ಸುಲಭವಾಗಿ ಕಾಮೆಂಟ್ ಮಾಡಬಹುದು.
ಡೈಲಿ ಸ್ಮೈಲ್ ಕೊಡ್ತಾನೆ, ಅವ್ನಿಗೆ ನನ್ ಮೇಲೆನಾದ್ರೂ ಲವ್ ಇದ್ಯಾ..ತಿಳ್ಕೊಳ್ಳೋದು ಹೇಗೆ ?
ಬಿಡುವು ಮಾಡಿಕೊಳ್ಳಿ: ಫ್ರೆಂಡ್ ಝೋನ್‌ನಿಂದ ಹೊರಬಂದು ಭಾಯ್‌ಫ್ರೆಂಡ್ ಆಗಲು ನೀವು ಬಯಸುವುದಾದರೆ ಸದಾ ಅವರ ಸುತ್ತ ಸುತ್ತುತ್ತಲೇ ಇರುವ ತಪ್ಪನ್ನು (Mistake) ಮಾಡಬೇಡಿ. ನೀವು ಸ್ನೇಹವನ್ನು ಮತ್ತೊಂದು ಹೊಸ ಮಟ್ಟಕ್ಕೆ ಕೊಂಡೊಯ್ಯಲು ಬಯಸಿದರೆ ನಿಮ್ಮ ಸ್ನೇಹಿತೆಗೆ ಜಲಸೀ ಫೀಲ್ ತರಿಸುವುದು ಮುಖ್ಯ. ಒಮ್ಮೆ ಅವರಿಗೆ ಆಪ್ತರಾದ ಬಳಿಕ, ಆಗಾಗ ಅಂತರ ಕಾಯ್ದುಕೊಂಡು ಅಸೂಯೆ (Jealous) ಪಡುವಂತೆ ಮಾಡಿ. ಇದು ನಿಮ್ಮ ಕುರಿತಾದ ಆಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಅತ್ಯುತ್ತಮ ವ್ಯಕ್ತಿಯಾಗಲು ಪ್ರಯತ್ನಿಸಿ: ಸ್ನೇಹಿತ, ಗೆಳೆಯ ಯಾವುದೇ ಸಂಬಂಧವಾಗಿರಲಿ ಉತ್ತಮ ವ್ಯಕ್ತಿತ್ವವನ್ನು ಪ್ರೀತಿಸಿದವರು ಯಾರೂ ಇಲ್ಲ. ಹೀಗಾಗಿ ಮೊದಲಿಗೆ ನಿಮ್ಮ ವ್ಯಕ್ತಿತ್ವ (Personality)ವನ್ನು ಉತ್ತಮ ಪಡಿಸಿಕೊಳ್ಳಿ. ನಿಮ್ಮ ನಡವಳಿಕೆಗಳು ಯಾವತ್ತೂ ಮತ್ತೊಬ್ಬರ ಮನಸ್ಸನ್ನು ಗೆಲ್ಲುವಂತಿರಲಿ. ಆತ್ಮವಿಶ್ವಾಸ, ಪ್ರೀತಿ, ಕರುಣೆ ಮೊದಲಾದ ಗುಣವುಳ್ಳವರು ಎಂಥವರಿಗೂ ಇಷ್ಟವಾಗಿಬಿಡುತ್ತಾರೆ. ಇದರಿಂದ ಸುಲಭವಾಗಿ ನೀವು ಫ್ರೆಂಡ್ ಝೋನ್‌ನಿಂದ ಬಾಯ್‌ಫ್ರೆಂಡ್ ಪೋಸ್ಟ್‌ಗೆ ಪ್ರಮೋಶನ್ ಪಡೆಯಬಹುದು.
Engagement - Marriage ಮಧ್ಯೆ ತುಂಬಾ ಗ್ಯಾಪ್ ಇದ್ರೆ ಈ ಗೋಲ್ಡನ್ ಅವಕಾಶ ಮಿಸ್ ಮಾಡ್ಬೇಡಿ
ನೀವೆಂದರೆ ಅನಿವಾರ್ಯತೆ ಎಂಬಂತೆ ಮಾಡಿ: ಫ್ರೆಂಡ್ ಜೋನ್‌ನಲ್ಲಿದ್ದುಕೊಂಡೇ ಅವರ ಎಲ್ಲಾ ಇಷ್ಟಕಷ್ಟಗಳನ್ನು ತಿಳಿದುಕೊಳ್ಳಿ. ಅವರಿಗೆ ಆಪ್ತವೆನಿಸುವ ಕೆಲಸವನ್ನು ಮಾಡಿ. ಅವರಿಂದ ಅಸಾಧ್ಯವೆನಿಸುವ ಕೆಲಸಗಳಿಗೆ ನೆರವಾಗಿ. ಇದರಿಂದ ಪ್ರತಿ ಬಾರಿ ಇಂಥಾ ಸಂದರ್ಭದಲ್ಲಿಯೂ ಅವರು ನಿಮ್ಮನ್ನೇ ನೆನಪಿಸಿಕೊಳ್ಳುತ್ತಾರೆ. ನೀವು ಜೀವನ (Life)ದಲ್ಲಿ ತುಂಬಾ ಮುಖ್ಯ ವ್ಯಕ್ತಿಯೆಂದು ಅವರು ಪರಿಗಣಿಸಲು ಆರಂಭಿಸುತ್ತಾರೆ. ಇದರಿಂದಲೇ ನಿಮ್ಮ ಬಗ್ಗೆ ಅವರ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಮೂಡಬಹುದು. ಸ್ನೇಹಿತರ ವಲಯದಿಂದ ಹೊರಬರಲು ಕಷ್ಟವಾಗಬಹುದು ಆದರೆ ಅದು ಅಸಾಧ್ಯವಲ್ಲ. ಭರವಸೆಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ. ತಾಳ್ಮೆಯಿಂದಿರಿ. ಅಲ್ಲದೆ, ನಿಮ್ಮ ಭಾವನೆಗಳನ್ನು ಯಾರ ಮೇಲೆಯೂ ಬಲವಂತವಾಗಿ ಹೇರಬೇಡಿ.