Personality Tips: ವ್ಯಕ್ತಿತ್ವಕ್ಕೆ ತಕ್ಕಂತೆ ವೃತ್ತಿ ಆಯ್ಕೆ ಮಾಡಿಕೊಳ್ಳೋದು ಹೇಗೆ?

ಆಸಕ್ತಿಗೆ, ವ್ಯಕ್ತಿತ್ವಕ್ಕೆ ತಕ್ಕಂತಹ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ವ್ಯಕ್ತಿಗತ ಬೆಳವಣಿಗೆಗೆ ಹೆಚ್ಚು ಅನುಕೂಲ. ಎಷ್ಟೋ ಬಾರಿ ಜೀವನದಲ್ಲಿ ಹಣಕ್ಕಿಂತ ಖುಷಿ, ನೆಮ್ಮದಿಯೇ ಮುಖ್ಯವಾಗುತ್ತದೆ. ಹೀಗಾಗಿ, ನಿಮ್ಮ ಇಷ್ಟಾನಿಷ್ಟ, ಗುಣಾವಗುಣಗಳನ್ನು ಸರಿಯಾಗಿ ಅರಿತುಕೊಂಡು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ.

How to select profession according to your personality

ಎಲ್ಲರಿಗೂ ಇಂಜನಿಯರಿಂಗ್‌ ಮಾಡಲಾಗುವುದಿಲ್ಲ, ಎಲ್ಲರೂ ವೈದ್ಯರೋ, ಲಾಯರೋ, ಸಾಫ್ಟ್‌ ವೇರ್‌ ವೃತ್ತಿಪರರೋ ಆಗಲು ಸಾಧ್ಯವಿಲ್ಲ. ಅಷ್ಟೇ ಏಕೆ? ಎಲ್ಲರಿಗೂ ಕನಿಷ್ಠ ಪಕ್ಷದ ಬಿಕಾಂ ನಂತಹ ವಾಣಿಜ್ಯ ಪದವಿಯನ್ನು ಪೂರೈಸಲು ಸಹ ಸಾಧ್ಯವಾಗಲಿಕ್ಕಿಲ್ಲ. ಆದರೆ ಏನು ಓದಲಿ, ಬಿಡಲಿ. ಎಲ್ಲರೂ ಜೀವನಕ್ಕಾಗಿ ಉದ್ಯೋಗವನ್ನಂತೂ ಮಾಡಲೇಬೇಕು. ಅದಕ್ಕಾಗಿಯಾದರೂ ಬಹಳಷ್ಟು ಜನ ಕೆಲವು ಉತ್ತಮ ಕೋರ್ಸುಗಳನ್ನು ಮಾಡಲು ಇಷ್ಟಪಡುತ್ತಾರೆ. ಶಿಕ್ಷಣದ ಬಳಿಕ ಮುಂದೆ ಉದ್ಯೋಗ ಸುಲಭವಾಗಿ ದೊರೆಯುತ್ತದೆ ಎನ್ನುವ ನಿಟ್ಟಿನಲ್ಲಿ ಕೆಲವು ಕೋರ್ಸುಗಳಿಗೆ ಉತ್ತಮ ಬೇಡಿಕೆಯೂ ಇದೆ. ಸುಲಭವಾಗಿ ಉದ್ಯೋಗ ದೊರಕಿಸುವಂತಹ ಶಿಕ್ಷಣ ಕೋರ್ಸ್‌ ಗಳು ಹಲವಾರು ಇವೆ. ಆದರೆ, ಉದ್ಯೋಗ ಹೊಟ್ಟೆಪಾಡಿಗಾಗಿ ಮಾತ್ರವಲ್ಲ, ಅದು ವ್ಯಕ್ತಿತ್ವವನ್ನೂ ಅರಳಿಸಬೇಕು. ಮಾಡುವ ಕಾರ್ಯದಲ್ಲಿ ನೆಮ್ಮದಿ ದೊರೆಯಬೇಕು. ಹಾಗಾಗಬೇಕು ಎಂದಾದರೆ ನಮ್ಮ ವ್ಯಕ್ತಿತ್ವ, ಗುಣಧರ್ಮ, ಮನೋಧರ್ಮ, ಆಸಕ್ತಿಗೆ ಅನುಗುಣವಾದ ಉದ್ಯೋಗ ಮಾಡಬೇಕು. ಇತ್ತೀಚೆಗೆ ಈ ಕಾನ್ಸೆಪ್ಟ್‌ ಹೆಚ್ಚು ಜನಪ್ರಿಯವಾಗಿದೆಯಾದರೂ ಉದ್ಯೋಗದ ಆಸೆಯಿಂದ ಏನೋ ಮಾಡಿ, ಯಾವುದೋ ಕೆಲಸಕ್ಕೆ ಜೋತುಬೀಳುವವರು ಹೆಚ್ಚು. ಅದರಿಂದ ನೆಮ್ಮದಿ ಕಳೆದುಕೊಳ್ಳುವ ಬದಲು, ವ್ಯಕ್ತಿತ್ವಕ್ಕೆ ಹೊಂದುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಯಾವುದೇ ವೃತ್ತಿಯನ್ನು (Profession) ಆಯ್ಕೆ ಮಾಡಿಕೊಂಡರೂ ವ್ಯಕ್ತಿತ್ವ (Personality) ಚೆನ್ನಾಗಿರಬೇಕು. ಆಗಲೇ ಯಶಸ್ಸು (Success) ಸಾಧ್ಯವಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಎಲ್ಲೆಲ್ಲೂ ಸ್ಪರ್ಧೆಯಿದೆ. ಹೀಗಾಗಿ, ವೃತ್ತಿಯ ಆಯ್ಕೆ ವಿಚಾರ ಬಹಳಷ್ಟು ಯುವಜನರಿಗೆ ಕಗ್ಗಂಟಾಗಿದೆ. ಆದರೂ, ಯಾವುದೋ ಒಂದು ಕೆಲಸ (Work) ದೊರೆತರೆ ಸಾಕು ಎಂದು ವಿಚಾರ ಮಾಡುವುದಕ್ಕಿಂತ ಆಸಕ್ತಿ, ವ್ಯಕ್ತಿತ್ವಕ್ಕೆ ಅನುಗುಣವಾಗಿ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ಸೂಕ್ತ. ಇದಕ್ಕಾಗಿ ಮೊದಲು ಮಾಡಬೇಕಾದುದು ಏನೆಂದರೆ, ನಿಮ್ಮ ಆಸಕ್ತಿಗಳ ಬಗ್ಗೆ ಸ್ಪಷ್ಟತೆ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಸಾಮರ್ಥ್ಯಗಳನ್ನು (Ability) ಅರಿಯಿರಿ. ನಿಮ್ಮ ಮೌಲ್ಯ, ವ್ಯಕ್ತಿತ್ವಕ್ಕೆ ಸರಿಹೊಂದುವ ಉದ್ಯೋಗ ಆಯ್ಕೆ (Select) ಮಾಡಿಕೊಂಡರೆ ಯಶಸ್ಸು ಗಳಿಸುವುದು ಸುಲಭವಾಗುತ್ತದೆ.

Personality Tips: ಜೀವನವನ್ನೇ ನಾಶ ಮಾಡುವ ಕೆಲ ಅಭ್ಯಾಸಗಳು ಯಾವುವು ಗೊತ್ತಾ? ಇವುಗಳನ್ನು ಎಂದಿಗೂ ಫಾಲೋ ಮಾಡಬೇಡಿ

ಯಾವುದು ಇಷ್ಟವಿಲ್ಲ?
ಆಸಕ್ತಿಯನ್ನು ಗುರುತಿಸಿಕೊಳ್ಳುವುದು ಎಷ್ಟು ಮುಖ್ಯವೋ ಯಾವುದು ಇಷ್ಟವಾಗುವುದಿಲ್ಲ ಎನ್ನುವುದನ್ನೂ ಸಹ ಗುರುತಿಸುವುದು ಅಷ್ಟೇ ಮುಖ್ಯ. ನಾಲ್ಕು ಜನರೊಂದಿಗೆ ಒಡನಾಡಲು ಬೇಸರ ಮಾಡಿಕೊಳ್ಳುವವರು ಮಾರ್ಕೆಟಿಂಗ್‌ ಉದ್ಯೋಗದಲ್ಲಿರಲು ಫಿಟ್‌ (Fit) ಆಗುವುದಿಲ್ಲ. ಸಾಮಾನ್ಯ ಶಿಕ್ಷಣ (Education) ಪಡೆದವರಿಗೆ ಇಂದು ಹಲವು ರೀತಿಯ ಉದ್ಯೋಗಗಳ ಅವಕಾಶಗಳಿವೆ. ಅವುಗಳಲ್ಲಿ ಯಾವುದನ್ನು ಆನಂದಿಸುತ್ತ ಮಾಡಬಹುದು ಎಂದು ಯೋಚಿಸಿ. ಯಾವುದು ಕಷ್ಟವಾಗುತ್ತದೆ ಎಂದು ಅರಿತುಕೊಳ್ಳಿ.

ದೌರ್ಬಲ್ಯಗಳೇನು?
ವ್ಯಕ್ತಿ (Person) ಎಷ್ಟು ಅರಿವು ಬೆಳೆಸಿಕೊಂಡರೂ ಕೆಲವು ಹುಟ್ಟುಗುಣಗಳು ಹೋಗುವುದಿಲ್ಲ. ಉದಾಹರಣೆಗೆ, ನಿಮಗೆ ತಕ್ಷಣ ಸಿಡಿಮಿಡಿ ಉಂಟಾಗುತ್ತದೆ, ಕಿರಿಕಿರಿ (Irritation) ಮಾಡಿಕೊಳ್ಳುತ್ತೀರಿ ಎಂದಾದರೆ ಒಬ್ಬರೇ ನಿಭಾಯಿಸುವಂತಹ ಕೆಲಸ ಸೂಕ್ತವಾಗುತ್ತದೆ. ಗುಂಪಿನಲ್ಲಿ (Group) ಮಾಡುವ ಕೆಲಸದಿಂದ ದೂರ ಇರುವುದು ಉತ್ತಮವೆನಿಸುತ್ತದೆ. ಯಾವ ಸ್ವಭಾವವನ್ನು ನಿಮ್ಮಿಂದ ಬದಲಿಸಲು ಸಾಧ್ಯವೇ ಆಗುವುದಿಲ್ಲವೋ ಅದನ್ನು ನಿಮ್ಮ ದೌರ್ಬಲ್ಯ (Weakness) ಎನ್ನಬಹುದು. ಅಂಥವುಗಳನ್ನು ಗುರುತಿಸಿಕೊಳ್ಳಿ. ಅವುಗಳನ್ನು ವೃತ್ತಿ ಸ್ಥಳದಲ್ಲಿ ಹೇಗೆ ಎದುರಿಸಬಹುದು ಎನ್ನುವುದರ ಲೆಕ್ಕಾಚಾರ ಇರಲಿ. ಹೀಗೆ ಮಾಡುವುದರಿಂದ ಗುರಿ (Target)  ತಲುಪುವುದು ಸುಲಭವಾಗುತ್ತದೆ.

Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

ಎಲ್ಲಿ ಫಿಟ್?‌
ಯಾವುದಾದರೂ ಕಂಪನಿಗೆ ಸೇರಿಕೊಂಡಿದ್ದೀರಿ ಎಂದಾದರೆ ಕೇವಲ ಸಂಬಳದ ಆಧಾರದ ಮೇಲೆ ನಿಮಗೊಪ್ಪದ ಕೆಲಸ ಮಾಡಬೇಕೆಂದಿಲ್ಲ. ಕಡಿಮೆ ಸಂಬಳವಾದರೂ ಮತ್ತೊಂದು ಕೆಲಸದಲ್ಲಿ ಆಸಕ್ತಿ (Interest) ಇದ್ದರೆ, ಖುಷಿ (Happy) ಕಂಡರೆ ಅಲ್ಲಿಗೆ ಶಿಫ್ಟ್‌ ಮಾಡಿಕೊಳ್ಳಲು ಯತ್ನಿಸಬಹುದು. ಆದರೆ, ಪದೇ ಪದೆ ಆಸಕ್ತಿಯನ್ನು ಬದಲಿಸುತ್ತ, ಸುಮ್ಮನೆ “ಇದಲ್ಲ ಅದು, ಅದಲ್ಲ ಇದುʼ ಎನ್ನುವಂತೆ ಮಾಡಬಾರದು. ಯಾವುದಾದರೂ ನಿರ್ದಿಷ್ಟ ವೃತ್ತಿಯಲ್ಲಿ ನೆಲೆ ಕಾಣಬೇಕು. 

Latest Videos
Follow Us:
Download App:
  • android
  • ios