Asianet Suvarna News Asianet Suvarna News

Personality Tips: ಜೀವನವನ್ನೇ ನಾಶ ಮಾಡುವ ಕೆಲ ಅಭ್ಯಾಸಗಳು ಯಾವುವು ಗೊತ್ತಾ? ಇವುಗಳನ್ನು ಎಂದಿಗೂ ಫಾಲೋ ಮಾಡಬೇಡಿ

ಚಿಂತನೆಗಳು, ಧೋರಣೆಗಳು ಮನುಷ್ಯನನ್ನು ರೂಪಿಸುತ್ತವೆ. ಹೀಗಾಗಿ, ಕೆಲವು ನಕಾರಾತ್ಮಕ ಚಿಂತನೆಗಳು ಮತ್ತು ಧೋರಣೆಗಳನ್ನು ಎಂದಿಗೂ ರೂಢಿಸಿಕೊಳ್ಳಬಾರದು. ಕೆಲವು ಪದ್ಧತಿಗಳು ನಿಮ್ಮಲ್ಲಿದ್ದರೆ ಅವು ಜೀವನವನ್ನು ಖಂಡಿತವಾಗಿ ನಾಶ ಮಾಡುತ್ತವೆ. ಆ ಗುಣಗಳನ್ನು ನಿಮ್ಮಲ್ಲಿರಲು ಬಿಡಬೇಡಿ.
 

These habits sabotage your life
Author
First Published Aug 19, 2023, 4:32 PM IST

ನಕಾರಾತ್ಮಕ ಚಿಂತನೆಯಿಂದ ತಾವು ನರಳುವುದಲ್ಲದೆ, ಮತ್ತೊಬ್ಬರನ್ನೂ ನರಳಿಸುವವರಿದ್ದಾರೆ. ನಕಾರಾತ್ಮಕ ಚಿಂತನೆಯ ಸಂಗಾತಿ ದೊರೆತರಂತೂ ಜೀವನ ಹೈರಾಣವಾಗುತ್ತದೆ. ಆದರೂ ಕೆಲವರು ತಮ್ಮಲ್ಲಿರುವ ನಕಾರಾತ್ಮಕ ಚಿಂತನೆಯನ್ನು ಸಾಕಷ್ಟು ಕಾಳಜಿ ವಹಿಸಿ, ಪರಿಶ್ರಮದಿಂದ ದೂರ ಮಾಡಿಕೊಳ್ಳುತ್ತಾರೆ. ಪೂರ್ತಿ ದೂರಮಾಡಲು ಸಾಧ್ಯವಾಗದಿದ್ದರೂ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಸಾಮಾನ್ಯವಾಗಿ ನಕಾರಾತ್ಮಕ ಯೋಚನೆ ಮಾಡುವ ಮಂದಿ ಕೆಲವು ವಿಚಾರಗಳಲ್ಲಿ ಒಂದೇ ರೀತಿಯಲ್ಲಿ ವರ್ತಿಸುತ್ತಾರೆ. ತಮ್ಮ ಚಿಂತನೆಗಳ ಮೂಲಕವೇ ಅವರು ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಮೊದಲೇ ಹೇಳಿದಂತೆ ತಮ್ಮ ಸಮೀಪದವರು ಸುಖವಾಗಿರಲೂ ಅವರು ಬಿಡುವುದಿಲ್ಲ. ನೀವೂ ಸಹ ಕೆಲವು ನಕಾರಾತ್ಮಕ ಚಿಂತನೆ ಹೊಂದಿದ್ದರೆ ಅವುಗಳನ್ನು ಬಿಟ್ಟುಬಿಡಿ. ಜೀವನದಲ್ಲಿ ಕೆಲವು ಪದ್ಧತಿ, ವರ್ತನೆ, ಧೋರಣೆಗಳನ್ನು ಎಂದಿಗೂ ರೂಢಿಸಿಕೊಳ್ಳಬಾರದು. ಅವುಗಳಿಂದ ಜೀವನ ಸರ್ವನಾಶವಾಗುವುದು ನಿಶ್ಚಿತ. ಹೀಗಾಗಿ, ಅಂತಹ ಗುಣಗಳು ನಿಮ್ಮಲ್ಲೂ ಇದ್ದರೆ ಅವುಗಳನ್ನು ದೂರಮಾಡಿಕೊಳ್ಳಿ. 

•    ಆರೋಗ್ಯವನ್ನು ನಿರ್ಲಕ್ಷಿಸುವ (Avoid Health) ಪರಿಪಾಠ
ನಿಮ್ಮ ಆರೋಗ್ಯವನ್ನು ನೀವೇ ನಿರ್ಲಕ್ಷಿಸಿದರೆ ಬೇರೆ ಯಾರು ಗಮನ ನೀಡಲು ಸಾಧ್ಯ? ಆರೋಗ್ಯ ಅತ್ಯಂತ ಮೌಲ್ಯಯುತವಾದ (Valuable) ಆಸ್ತಿ (Asset). ಅದನ್ನು ಅಲಕ್ಷ್ಯ ಮಾಡಿದರೆ ಜೀವನ (Life) ಸುಖಮಯವಾಗಿರುವುದಿಲ್ಲ. ನಿಮ್ಮ ಬಗ್ಗೆ ಮೊದಲು ನೀವು ಕಾಳಜಿ (Care) ವಹಿಸಿ. 

ಮಲಕ್ಕೊಂಡು ಎಷ್ಟ್‌ ಹೊತ್ತಾದ್ರೂ ನಿದ್ದೆ ಬರಲ್ವಾ, ಈ ಟ್ರಿಕ್ ಯೂಸ್ ಮಾಡಿ

•    ಕೆಟ್ಟ ಜನರ ಸಹವಾಸವಿದೆಯೇ?
ಎಂದಿಗೂ ಕೆಟ್ಟ ಜನರ (Bad People) ಸಹವಾಸದಲ್ಲಿರಬೇಡಿ. ವಿಷಕಾರಿ ಜನರು ನಿಮ್ಮನ್ನು ನೋವಿಗೆ ದೂಡುತ್ತಾರೆ. ಭಾವನಾತ್ಮಕವಾಗಿ, ಮಾನಸಿಕವಾಗಿ, ಹಣಕಾಸಿನ ದೃಷ್ಟಿಯಿಂದ ನಿಮ್ಮನ್ನು ಸಮಸ್ಯೆಗೆ (Problems) ದೂಡುತ್ತಲೇ ಇರುತ್ತಾರೆ. ಅಂಥವರ ಸಹವಾಸದಿಂದ ದೂರವಿರುವುದು ಶ್ರೇಯಸ್ಕರ. ಯಾರು ನಿಮ್ಮಲ್ಲಿ ಸ್ಫೂರ್ತಿ (Inspire) ತುಂಬುತ್ತಾರೋ, ಯಾರು ಧನಾತ್ಮಕ ಚಿಂತನೆಗಳಿಂದ ನಿಮ್ಮನ್ನು ಮೇಲಕ್ಕೆ ಎತ್ತುತ್ತಾರೋ, ನಿಮಗಾಗಿ ಯಾರು ನಿಜವಾದ ಕಾಳಜಿ, ಪ್ರೀತಿ (Love) ಹೊಂದಿರುತ್ತಾರೋ ಅವರ ಸಹವಾಸ ಮಾಡಿ.

•    ಕಾಲಹರಣ (Procrastination) ಮಾಡುತ್ತೀರಾ?
ಸುಮ್ಮನೆ ಕಾಲಹರಣ ಮಾಡುವುದೂ ಒಂದು ವಿಷಕಾರಿ ವರ್ತನೆ. ಕೆಲಸವನ್ನು ಮುಂದೂಡುವ ಪ್ರವೃತ್ತಿ ಪಲಾಯನವಾದವನ್ನು ಸೂಚಿಸುತ್ತದೆ. ಇದು ನಿಮ್ಮನ್ನು ಕ್ರಿಯಾಶೀಲತೆಯಿಂದ (Creativity) ದೂರವಿರಿಸುತ್ತದೆ. ಖುಷಿಯನ್ನು (Happiness) ಕಿತ್ತುಕೊಳ್ಳುತ್ತದೆ. ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಈ ವರ್ತನೆ ನಿಮ್ಮ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬೇಡಿ. ಧೈರ್ಯವಾಗಿ, ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ. 

•    ಪೀಪಲ್‌ ಪ್ಲೀಸರ್‌ (People Pleasar) ಆಗಿದ್ದೀರಾ?
ಜನರನ್ನು ಖುಷಿಯಾಗಿರಿಸುವ ಏಕೈಕ ಉದ್ದೇಶ ನಿಮಗಿದ್ದರೆ ಅದನ್ನು ಈಗಲೇ ದೂರಮಾಡಿ. ಈ ಗುಣ ನಿಮ್ಮನ್ನು ಖಂಡಿತವಾಗಿ ನಾಶಗೊಳಿಸುತ್ತದೆ. ಜೀವನದಲ್ಲಿ ಏಕಕಾಲದಲ್ಲಿ ಎಲ್ಲರನ್ನೂ ಸಂತುಷ್ಟಗೊಳಿಸಲು ಸಾಧ್ಯವಿಲ್ಲ. ಈ ಗುಣ ನಿಮ್ಮತನವನ್ನು ಮರೆಸಿಬಿಡುತ್ತದೆ. ನಿಮ್ಮತನವನ್ನು (Yourself) ಅಳವಡಿಸಿಕೊಂಡು ಮುನ್ನಡೆಯಿರಿ. 

Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

•    ನಿಮ್ಮ ಬಗ್ಗೆಯೇ ಕಠೋರತೆ (Hard on Yourself)
ಜೀವನದಲ್ಲಿ ಏರಿಳಿತಗಳು (Up and Downs) ಸಹಜ. ಸಂಘರ್ಷಗಳು, ಹೋರಾಟಗಳು ಎಲ್ಲ ಕಾಲಕ್ಕೂ ಇರುವಂಥವು. ಅಲ್ಲಿ ನಿಮ್ಮ ತಪ್ಪುಗಳೂ ಇರಬಹುದು. ಆದರೆ, ಅವುಗಳನ್ನೇ ನೆನಪಿಸಿಕೊಂಡು ತಪ್ಪನ್ನು ಹಳಿಯುತ್ತ ಕೂರುವುದು, ನಿಮ್ಮ ಬಗ್ಗೆಯೇ ಕಠೋರತೆ ತಾಳುವುದು ಒಳ್ಳೆಯದಲ್ಲ. ತಪ್ಪನ್ನು (Mistakes) ಸರಿಪಡಿಸಿಕೊಂಡು ನಿಮ್ಮನ್ನೂ ಕ್ಷಮಿಸಿಕೊಂಡು ಮುಂದೆ ಸಾಗಬೇಕು.

•    ಅತಿಯಾದ ಯೋಚನೆ (Over Think)
ಅತಿಯಾದ ಯೋಚನೆಯಿಂದ ಬದುಕು ನಾಶವಾಗುತ್ತದೆ. ಆರೋಗ್ಯವನ್ನು ಹಾಳುಮಾಡುತ್ತದೆ. ಮಾನಸಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಅತಿಯಾದ ಯೋಚನೆಯೇ ಆತಂಕ, ಒತ್ತಡ ಮತ್ತು ಖಿನ್ನತೆಯ ಮೂಲವಾಗಿದೆ. ಆರಂಭದಲ್ಲೇ ಇದನ್ನು ಗುರುತಿಸಿಕೊಳ್ಳಬೇಕು. ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಬೇಕು, ಸಾಧ್ಯವಿಲ್ಲದಿರುವುದನ್ನು ಬಿಟ್ಟುಬಿಡಬೇಕು.

•    ಸೋಲಿನ ಭಯ (Fear)
ಸದಾಕಾಲ ಸೋಲಿನ ಭಯದಲ್ಲಿ ಬದುಕುವುದು ಬದುಕಲ್ಲ. ಅಲ್ಲಿ ಕ್ರಿಯೆಗೆ ಅವಕಾಶವೇ ಇರುವುದಿಲ್ಲ. ಇದೊಂದು ವಿಷಕಾರಿ ವೃತ್ತ. ಸೋಲುವುದು ಜೀವನದ ಅಂತ್ಯವಲ್ಲ. ಜೀವನದ ಭಾಗವಷ್ಟೆ.

•    ಪರಿಪೂರ್ಣತೆಯ (Perfectionist) ಛಲ
ಅತಿಯಾದ ಪರಿಪೂರ್ಣತೆ ಮನುಷ್ಯನ ಶತ್ರು (Enemy). ನಾವು ಮನುಷ್ಯರು ತಪ್ಪುಗಳನ್ನು ಮಾಡುತ್ತೇವೆ, ಅವುಗಳನ್ನು ಒಪ್ಪಿಕೊಳ್ಳಬೇಕು. ಯಾರೂ ಪರಿಪೂರ್ಣತೆ ಹೊಂದಿಲ್ಲ, ನಾವೂ ಸಹ ಎಂದು ತಿಳಿದುಕೊಳ್ಳಬೇಕು.
 

Follow Us:
Download App:
  • android
  • ios