ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೇಮ್ ಮಕ್ಕಳ ಜೀವ ತೆಗೆಯುತ್ತಿದೆ. ಒಂದಿಷ್ಟು ಮಂದಿ ಆತ್ಮ*ಹತ್ಯೆ ಮಾಡ್ಕೊಂಡ್ರೆ ಮತ್ತೊಂದಿಷ್ಟು ಮಕ್ಕಳು ಚಟಕ್ಕೆ ಬಿದ್ದು ಭವಿಷ್ಯ ಹಾಳ್ಮಾಡ್ಕೊಳ್ತಿದ್ದಾರೆ. ದಿನ ದಿನಕ್ಕೂ ಪಾಲಕರಲ್ಲಿ ಆತಂಕ ಹೆಚ್ಚಾಗ್ತಿದೆ. 

ಕೊರಿಯನ್ ಗೇಮ್ ( Korean Game) ಚಟಕ್ಕೆ ಬಿದ್ದು ಬಹುಮಹಡಿ ಕಟ್ಟಡದಿಂದ ಬಿದ್ದು ಆತ್ಮ*ಹತ್ಯೆ ಮಾಡ್ಕೊಂಡ ಮೂವರು ಹೆಣ್ಮಕ್ಕಳ ಕೇಸ್ ಗೆ ಹೊಸ ಹೊಸ ಟ್ವಿಸ್ಟ್ ಸಿಗ್ತಾನೇ ಇದೆ. ಹುಡುಗಿಯರ ಅಪ್ಪ, ಅಮ್ಮನ ಹಿನ್ನೆಲೆಯನ್ನು ಪೊಲೀಸರು ಪತ್ತೆ ಮಾಡ್ತಿದ್ದಾರೆ. ಈ ಮಧ್ಯೆ ಅವರ ತಂದೆ ಚೇತನ್ ಕುಮಾರ್ ದುರಂತ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮಕ್ಕಳ ಫೋನ್ ಕಸಿದಿಟ್ಟುಕೊಳ್ಳುವ ಹಕ್ಕು ಪಾಲಕರಿಗೆ ಇಲ್ವಾ ಎನ್ನುವ ಪ್ರಶ್ನೆಯನ್ನು ಈ ಪ್ರಕರಣ ಹುಟ್ಟುಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಕ್ಕಳ ಫೋನ್ ಕಿತ್ತ್ಕೊಳ್ಳೋದು ಪಾಪವೇ?

ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಕೋಣೆಯ ಬಾಗಿಲು ಲಾಕ್ ಮಾಡ್ಕೊಂಡಿದ್ದರು. ನಂತ್ರ ಒಬ್ಬೊಬ್ಬರಾಗಿ ಕಿಟಕಿಯಿಂದ ಕೆಳಗೆ ಹಾರಿದ್ದಾರೆ. ಚೇತನ್ ಕುಮಾರ್ ಪ್ರಕಾರ, ಚೇತನ್ ಮಕ್ಕಳನ್ನು ತುಂಬಾ ಪ್ರೀತಿ ಮಾಡ್ತಿದ್ದರು. ಆದ್ರೆ ಈ ಮೂವರು ಮಕ್ಕಳು ಕೊರಿಯನ್ ಡ್ರಾಮಾ, ಕೊರಿಯನ್ ಗೇಮ್ಸ್, ಕೊರಿಯನ್ ರೀಲ್ಸ್ ಚಟಕ್ಕೆ ಬಲಿಯಾಗಿದ್ದರು. ಇಡೀ ದಿನ ಕೊರಿಯನ್ ವಿಡಿಯೋಗಳನ್ನು ನೋಡ್ತಿದ್ದ ಅವರು ಕಣ್ಣುಗಳು ಊದಿಕೊಂಡಿದ್ದವು. ಇದನ್ನು ಗಮನಿಸಿದ್ದ ಅವರ ತಂದೆ, ಮಕ್ಕಳ ಹಿತಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದರು. ಅವರ ಬಳಿ ಇದ್ದ ಮೊಬೈಲ್ ಕಸಿದಿಟ್ಟಿದ್ದರು. ಆದ್ರೆ ಅದೇ ಈಗ ದೊಡ್ಡ ತಪ್ಪಾಗಿದೆ. ಚೇತನ್ ಕುಮಾರ್, ತಮ್ಮ ಮೂರು ಮಕ್ಕಳನ್ನು ಕಳೆದುಕೊಂಡಿದ್ದಾರೆ.

ಹಾಲಾಹಲವಾದ ಹಾಲು, ಯೂರಿಯಾ – ಡಿಟರ್ಜೆಂಟ್ ಬಳಸಿ ಸಿದ್ಧವಾಗ್ತಿದೆ ಮಿಲ್ಕ್

ಡಿಪ್ರೆಷನ್ ಗೆ ಜಾರಿದ್ದ ಮಕ್ಕಳು

ತಂದೆ ಫೋನ್ ಕಸಿದಿಟ್ಟುಕೊಳ್ತಿದ್ದಂತೆ ಮಕ್ಕಳ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಘಟನೆ ಹಿಂದಿನ ದಿನ ಅಮ್ಮನ ಮೊಬೈಲ್ ನಲ್ಲಿ ಕೊರಿಯನ್ ವಿಡಿಯೋ ನೋಡಲು ಮುಂದಾಗಿದ್ದರು. ಆದ್ರೆ ಆಪ್ ವರ್ಕ್ ಆಗಿರಲಿಲ್ಲ. ಕೊರಿಯನ್ ಅಪ್ಲಿಕೇಶನ್ನಿಂದ ಡೇಟಾವನ್ನು ಹೊರತೆಗೆಯಲು ಸೈಬರ್ ಅಪರಾಧ ತಂಡಗಳು IMEI ಸಂಖ್ಯೆಗಳನ್ನು ಬಳಸಿಕೊಂಡು ಮೊಬೈಲ್ ಫೋನ್ಗಳ ಖರೀದಿದಾರರನ್ನು ಪತ್ತೆಹಚ್ಚುತ್ತಿವೆ. ಪೊಲೀಸರು ಪ್ರಕರಣವನ್ನು ಬಹು ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಫಾರೆನ್ಸಿಕ್ ರಿಪೋರ್ಟ್ಗೆ ಕಾಯುತ್ತಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗದಿಂದ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಸಾಕಷ್ಟು ಸಾಲಗಳು ಮೈಮೇಲಿದ್ದವು. ಆತ್ಮ*ಹತ್ಯೆ ಮಾಡಿಕೊಂಡ ಹುಡುಗಿಯರು ಅಮ್ಮನಿಗಿಂತ ಅಪ್ಪನ ಜೊತೆ ಹೆಚ್ಚು ಭಾವನಾತ್ಮಕ ಸಂಬಂಧ ಹೊಂದಿದ್ದರು. ಸೂ*ಸೈಡ್ ಲೆಟರನ್ನು ಅವರು ತಂದೆಗೆ ಬರೆದಿದ್ದಾರೆ. ಒಂಬತ್ತು ಪುಟಗಳ ಸಣ್ಣ ಡೈರಿಯಲ್ಲಿ ಅವರು ಕೊರಿಯನ್ ಸಂಸ್ಕೃತಿ, ಒಂಟಿತನ ಮತ್ತು ಕುಟುಂಬದ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದರು ಎಂಬುದನ್ನು ಸೂಚಿಸುತ್ತದೆ.

ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಕೋರಿಯಲ್ ಅಪ್ಲಿಕೇಷನ್, ಗೇಮ್ ನಿಷೇಧಿಸುವಂತೆ ಒತ್ತಾಯ ಕೇಳಿ ಬಂದಿದೆ. ದೆಹಲಿಯಲ್ಲಿ ಈ ಬಗ್ಗೆ ಪ್ರತಿಭಟನೆ ಕೂಡ ನಡೆದಿದೆ. ಆನ್ಲೈನ್ ಗೇಮ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಡ ಕೇಳಿ ಬರ್ತಿದೆ.

ಗಂಡ-ಹೆಂಡತಿ ಜಗಳಕ್ಕೆ ಬ್ರೇಕ್ ಹಾಕೋ ಚಾಣಕ್ಯ ನೀತಿ: ಈ ಒಂದು ಮಾತು ಸುಚಿತ್ರಾಳ ಜೀವನವೇ ಬದಲಿಸುತಿತ್ತು!

ಗೇಮ್ ಗಳಿಂದ ಮಕ್ಕಳ ರಕ್ಷಣೆ ಹೇಗೆ?

ಹದಿಹರೆಯದ ಮಕ್ಕಳ ಮೆದುಳು ಸಂಪೂರ್ಣ ಬೆಳವಣಿಗೆ ಹೊಂದಿರೋದಿಲ್ಲ. ಗೇಮ್ ಚಟಕ್ಕೆ ಬಿದ್ದಾಗ ಅದನ್ನೇ ರಿಯಲ್ ಲೈಫ್ ಅಂದ್ಕೊಳ್ತಾರೆ. ವರ್ಜುವಲ್ ರೋಲ್ ಮಾಡೆಲ್ ಜೊತೆ ತಮ್ಮ ಲೈಫ್ ಹೋಲಿಕೆ ಮಾಡ್ತಾರೆ. ಮೊಬೈಲ್ ಕಸಿದುಕೊಂಡಾ, ಗೇಮ್ ಆಡೋದನ್ನು ತಡೆದಾಗ ಅವರಿಗೆ ಒಂಟಿತನ ಕಾಡುತ್ತದೆ. ಗುರುತು ಕಳೆದುಕೊಳ್ಳುವ ಭಯಕ್ಕೊಳಗಾಗ್ತಾರೆ.

ಮಕ್ಕಳು ಗೇಮಿಂಗ್ ಚಟಕ್ಕೆ ಬಲಿಯಾಗಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬಂದ ತಕ್ಷಣ ಮೊಬೈಲ್ ಕಸಿದುಕೊಂಡು, ಹೊಡೆದು, ಬೈದು ಮಾಡ್ಬೇಡಿ. ನಿಧಾನವಾಗಿ ಮಕ್ಕಳ ದಿನಚರಿ ಬದಲಿಸಿ. ಅವರಿಗೆ ಬುದ್ಧಿವಾದ ಹೇಳಿ, ಮನಸ್ಥಿತಿ ಬದಲಿಸಿ. ಅವರ ಮನಸ್ಸು ಮೊಬೈಲ್ ಆಟದಿಂದ ಹೊರಾಂಗಣ ಆಟಕ್ಕೆ ಬರುವಂತೆ ಪ್ರಯತ್ನ ನಡೆಸಿ. ಮಕ್ಕಳು ಅತಿಯಾಗಿ ವರ್ತಿಸುತ್ತಿದ್ದರೆ ತಜ್ಞರ ಸಲಹೆ ಪಡೆಯಿರಿ.