ಸೆಮೆನ್‌ ಲೀಕೇಜ್‌ ಅನ್ನೋ ಇಂಗ್ಲೀಷ್‌ ಪದಕ್ಕೆ ಕನ್ನಡದಲ್ಲಿ ತತ್ಸಮಾನ ಪದ ಸಿಗೋದು ಕಷ್ಟ. ಸಿಂಪಲ್ಲಾಗಿ ಮೀರ್ಯ ರಸ ಸೋರಿಕೆ ಅನ್ನಬಹುದೇನೋ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ ಇಲ್ವಾ ಅನ್ನೋದು ಎರಡನೇ ಪ್ರಶ್ನೆ. ಆದರೆ ಸಾರ್ವಜನಿಕವಾಗಿ ಕಿರಿಕಿರಿ, ಮುಜುಗರ ಆಗೋದಂತೂ ಸತ್ಯ.

ಹಸ್ತಮೈಥುನ ಮಾಡಿದ್ರೆ ಏನ್‌ ಪ್ರಾಬ್ಲಂ?

ವೀರ್ಯ ರಸ ಸೋರಿಕೆ ಯಾಕಾಗುತ್ತೆ?

ಸೆಮೆನ್‌ ಲೀಕೇಜ್‌ ಬಗ್ಗೆ ತಿಳಿಯೋದಕ್ಕೂ ಮುಂಚೆ ಸೆಮೆನ್‌ ಅಂದರೇನು ಅಂತ ಅರಿತುಕೊಳ್ಳುವುದು ಬಹಳ ಮುಖ್ಯ. ಆರೋಗ್ಯವಂತ ವ್ಯಕ್ತಿಯೊಬ್ಬ ಉದ್ರೇಕಕ್ಕೆ ಒಳಗಾದಾಗ ಬಿಳಿ ಬಣ್ಣದ ದ್ರವವೊಂದು ಶಿಶ್ನದಿಂದ ಹೊರಬರುತ್ತೆ. ಇದಕ್ಕೆ ಸೆಮೆನ್‌ ಅಂತ ಹೆಸರು. ಕನ್ನಡದಲ್ಲಿ ಇದಕ್ಕೆ ವೀರ್ಯ- ರಸ  ಎನ್ನುತ್ತಾರೆ. ಇನ್ನು ಮುಖ್ಯವಾಗಿ ಉತ್ಪಾದನೆ ಮಾಡುವುದು ವೃಷಣಗಳು. ಜೊತೆಗೆ ವೀರ‍್ಯಗ್ರಂಥಿಗಳೂ ಈ ವೀರ‍್ಯ ಉತ್ಪಾದನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ವೀರ‍್ಯಗ್ರಂಥಿಗಳು ವೃಷಣದ ಹಿಂಭಾಗದಲ್ಲಿರುತ್ತವೆ. ಸೆಕ್ಸ್‌ ಮಾಡಿದಾಗ ಬಿಡುಗಡೆಯಾಗುವ ವೀರ‍್ಯದಲ್ಲಿ ವೀರ‍್ಯ ರಸವೂ ಬೆರೆತಿರುತ್ತದೆ.

ಸಾಮಾನ್ಯವಾಗಿ ಈ ರಸ ಬಿಡುಗಡೆಯಾಗೋದು ಲೈಂಗಿಕ ಕ್ರಿಯೆ ನಡೆಸುವ ಸಂದರ್ಭದಲ್ಲಿ. ಲೈಂಗಿಕ ಕ್ರಿಯೆ ನಡೆಸುವಾಗ ಮುನ್ನಲಿವಿನ ಹೊತ್ತಲ್ಲಿ ಇದು ಬಿಡುಗಡೆಯಾಗುತ್ತದೆ. ಕೊನೆಗೆ ವೀರ್ಯದ ಜೊತೆಗೂ ಬೆರೆತಿರುತ್ತದೆ. ಹೀಗಿದ್ದರೆ ಇದು ಸಾಮಾನ್ಯ. ಇನ್ನೂ ಕೆಲವೊಮ್ಮೆ ವ್ಯಕ್ತಿ ಮನಸ್ಸಲ್ಲೇ ಲೈಂಗಿಕ ಭಾವನೆ ಅನುಭವಿಸುತ್ತಿದ್ದರೆ ಹೀಗಾಗಬಹುದು. ಇದು ತರುಣ ವಯಸ್ಸಲ್ಲಿ ಸಾಮಾನ್ಯ. ಆದರೆ ಇದು ಸಮಸ್ಯೆಯಾಗೋದು ಯಾವ ವ್ಯಕ್ತಿ ಯಾವ ಉದ್ರೇಕಕ್ಕೂ ಒಳಗಾಗದೇ ಸ್ರವಿಸಿದಾಗ . ಇಂಥ ಬೆಳವಣಿಗೆ ವ್ಯಕ್ತಿಗೆ ಗಾಭರಿ ತರಿಸುತ್ತದೆ. ಸಾರ್ವಜನಿಕವಾಗಿ ಹೀಗಾದಾಗ ಮುಜುಗರದ ಜೊತೆಗೆ ತನಗೇನೋ ಆಗಿದೆ ಅನ್ನುವ ಫೀಲ್‌ ತರಬಹುದು. ಹೀಗಾದಾಗ ಹೆಚ್ಚಿನವರು ಇದನ್ನು ಮುಚ್ಚಿಡುತ್ತಾರೆ.

ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡಬೇಕು?

ಸಮಸ್ಯೆಗೆ ಏನು ಕಾರಣ?

1. ಕೆಲವೊಮ್ಮೆ ವೃಷಣದಲ್ಲಿ ಸಮಸ್ಯೆಯಾಗಿದ್ದಾಗ ಹೀಗಾಗಬಹುದು. ವೃಷಣದಲ್ಲಿ ಅಥವಾ ಇದರ ಹಿಂಭಾಗ ಇರುವ ವೀರ‍್ಯಗ್ರಂಥಿಗಳಲ್ಲಿ ಏನಾದರೂ ಸಮಸ್ಯೆಯಾದರೆ ಉದ್ರೇಕಕ್ಕೆ ಒಳಗಾಗದಿರುವಾಗಲೂ ವೀರ‍್ಯ ರಸ ಸ್ರವಿಸಬಹುದು.

2. ನರಗಳಿಗೆ ಏಟಾದಾಗ ಹೀಗಾಗಬಹುದು. .

3. ಸ್ವಪ್ನ ಸ್ಖಲನದ ವೇಳೆ ಈ ಸ್ರಾವ ಉಂಟಾಗಬಹುದು. ಇನ್ನೂ ಕೆಲವು ಕಾರಣಗಳಿರಬಹುದು.

ಇದು ಗಂಭೀರ ಸಮಸ್ಯೆಯಾ?

ಈ ಸಮಸ್ಯೆಯಿಂದ ಒದ್ದಾಡುವ ಗಂಡಸರು ಅನೇಕ ಭಯಗಳಿಗೆ ಒಳಗಾಗುತ್ತಾರೆ. ಹೀಗಾಗುವುದರಿಂದ ನನ್ನ ವೈವಾಹಿಕ ಜೀವನಕ್ಕೆ ಏನಾದರೂ ಅಡ್ಡಿಯಾಗಬಹುದಾ, ಇದು ಪ್ರಾಸ್ಪ್ರೇಟ್‌ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದಾ, ಇಂಥ ಸಮಸ್ಯೆ ಇರುವವರಿಗೆ ಮಕ್ಕಳಾಗುತ್ತಾ? ಇತ್ಯಾದಿ ಸಂದೇಹಗಳಿರುತ್ತವೆ.

ಶವದ ಜೊತೆ ಸೆಕ್ಸ್‌ಗಿಳಿಯುವಷ್ಟು ಸ್ಯಾಡಿಸ್ಟ್ ಆಗೋದಾದ್ರೂ ಯಾಕೆ?

ಆದರೆ ತಜ್ಞ  ವೈದ್ಯರ ಪ್ರಕಾರ ಇದು ಗಂಭೀರ ಸ್ವರೂಪದ ಸಮಸ್ಯೆ ಏನಲ್ಲ. ಈ ಸಮಸ್ಯೆಗೆ ಕಾರಣ ಏನು ಅನ್ನೋದನ್ನು ಮೊದಲು ಅರಿತರೆ ಟ್ರೀಟ್‌ಮೆಂಟ್‌ ಸುಲಭವಾಗಿ ಮಾಡಬಹುದು. ಲೈಂಗಿಕ ಕ್ರಿಯೆ ನಡೆಸುವ ಒಂದು ಅಥವಾ ಎರಡು ಗಂಟೆಗೆ ಮೊದಲೇ ಹಸ್ತಮೈಥುನ ಮಾಡಿಕೊಳ್ಳೋದಕ್ಕೆ ಕೆಲವು ವೈದ್ಯರು ಹೇಳುತ್ತಾರೆ. ಎಷ್ಟೋ ಕೇಸ್‌ಗಳಲ್ಲಿ ವೀರ‍್ಯ ರಸ ಸ್ರವಿಸಿದರೆ ಎಲ್ಲಿ ಲೈಂಗಿಕ ಕ್ರಿಯೆಗೆ ಅಡ್ಡಿಯಾಗುತ್ತೋ ಅನ್ನುವ ಆತಂಕದಲ್ಲಿ ಇದರ ಬಿಡುಗಡೆಗೆ ವ್ಯಕ್ತಿ ತಡೆಯೊಡ್ಡುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಸೆಕ್ಸ್‌ಗೂ ಒಂದು ಗಂಟೆಯ ಮೊದಲೇ ಹಸ್ತಮೈಥುನ ಮಾಡೋದರಿಂದ ಇದು ಸರಾಗವಾಗಿ ಆಚೆ ಬರುತ್ತದೆ.

ಪೆಲ್ವಿಕ್‌ ಸ್ನಾಯುಗಳ ಬಲವರ್ಧನೆಗೆ ಥೆರಪಿ ನೀಡಬಹುದು. ಇದರ ಜೊತೆಗೆ ಈ ಸಮಸ್ಯೆ ಬರದಂತೆ ತಡೆಯುವ ಕೆಲವು ಎಕ್ಸರ್‌ಸೈಸ್‌ಗಳನ್ನು ಮಾಡಿಸಬಹುದು. ಇದ್ಯಾವುದೂ ಆಗದಿದ್ದರೆ ಮೆಡಿಸಿನ್‌ಗಳ ಮೂಲಕ ಈ ಸಮಸ್ಯೆ ನಿವಾರಿಸಬಹುದು.

ಹಾಗಾಗಿ ಇಂಥ ಗುಪ್ತ ಸಮಸ್ಯೆಗಳಿಂದ ನರಳುವ ಬದಲು ವೈದ್ಯರ ಸಲಹೆಯ ಮೇರೆಗೆ ಸಮಸ್ಯೆ ನಿವಾರಿಸಿಕೊಂಡು ಹ್ಯಾಪಿಯಾಗಿರಬಹುದು.