Asianet Suvarna News Asianet Suvarna News

Love Affair: ನಿಮ್ಮ ಪ್ರೇಮಿಗೆ ಆಬ್ಸೆಸ್ಸಿವ್ ಲವ್ ಡಿಸಾರ್ಡರ್ ಇರಬಹುದಾ?

ಪ್ರೀತಿಪಾತ್ರರನ್ನು ನಿಯಂತ್ರಿಸಬೇಕೆನ್ನುವ ಬಯಕೆ, ಅವರನ್ನು ಇತರರಿಂದ ರಕ್ಷಿಸಬೇಕು ಎನ್ನುವ ಹಠ, ಅವರ ದೈನಂದಿನ ಚಟುವಟಿಕೆಗಳಲ್ಲಿ ಮೂಗು ತೂರಿಸುವುದು, ಸದಾ ಕಾಲ ತಮ್ಮೊಂದಿಗೆ ಮಾತ್ರ ಮಾತನಾಡುತ್ತಿರಬೇಕು ಎನ್ನುವ ಆಸೆಗಳೆಲ್ಲ ಆರಂಭದಲ್ಲಿ ಥ್ರಿಲ್ ನೀಡಬಹುದು. ಆದರೆ, ಇದು ಖಂಡಿತವಾಗಿ ಸಮಸ್ಯೆ.
 

how to know if you have obsessive love disorder
Author
Bangalore, First Published Jan 16, 2022, 5:56 PM IST

ಪ್ರೀತಿ(Love)ಯೊಂದು ಸುಂದರ ಅನುಭೂತಿ. ಅದು ಬದುಕಿನತ್ತ ಸ್ಫೂರ್ತಿ (Spirit) ನೀಡಬಲ್ಲ ಅದ್ಭುತ ಶಕ್ತಿ. ಪ್ರೀತಿಪಾತ್ರರೊಂದಿಗಿರುವುದು ಯಾರಿಗಾದರೂ ಖುಷಿ (Happy) ನೀಡುವ ಸಂಗತಿ. 
ಯಾರನ್ನಾದರೂ ಪ್ರೇಮಿಸಿದಾಗ ಇಬ್ಬರಲ್ಲೂ ಪ್ರೀತಿಯ ಭಾವ ಮೊಳಕೆಯೊಡೆದರೆ ಸರಿ. ಆದರೆ, ಒಬ್ಬರಲ್ಲೇ ಪ್ರೀತಿ ಮೂಡಿ, ಇನ್ನೊಬ್ಬರಲ್ಲಿ ಆ ಭಾವನೆ ಇರದೇ ಇದ್ದಾಗಲೇ ವ್ಯಕ್ತಿಯ ಚಿಂತನೆ ಬದಲಾಗುತ್ತದೆ. ಅವರನ್ನು ಕಳೆದುಕೊಳ್ಳುವ ಭೀತಿ ಆರಂಭವಾಗುತ್ತದೆ. ಹೋದಲ್ಲಿ, ಬಂದಲ್ಲಿ ಅವರದ್ದೇ ಧ್ಯಾನವಾಗಿ, ಅವರನ್ನು ನಿಯಂತ್ರಿಸುವ ಬಯಕೆಯಾಗುತ್ತದೆ. ಸಾಮಾನ್ಯವಾಗಿ ಇದು ಗಂಡುಮಕ್ಕಳಲ್ಲಿ ಹೆಚ್ಚು. ಒಂದೊಮ್ಮೆ ಹುಡುಗಿ ಕೂಡ ಈತನನ್ನು ಪ್ರೀತಿಸಿದ್ದರೂ ಈ ಭಾವನೆ ಮೂಡಬಹುದು. ಹುಡುಗಿಯೊಂದಿಗೆ ಬೇರ್ಯಾರೂ ಮಾತನಾಡಬಾರದು, ಅವರೊಂದಿಗೆ ಸ್ನೇಹ ಮಾಡಬಾರದು ಎನ್ನುವ ಸಣ್ಣತನ ದೊಡ್ಡದಾಗುತ್ತದೆ. ಅಂತಹ ಸಮಯದಲ್ಲೇ ಪ್ರೀತಿ ಎನ್ನುವುದು ಗೀಳಾ(Obsessive)ಗಿ ಪರಿವರ್ತನೆಯಾಗುತ್ತದೆ. 

ಇದನ್ನು ಆಬ್ಸೆಸ್ಸಿವ್ ಲವ್ ಡಿಸಾರ್ಡರ್ (ಒಎಲ್ ಡಿ) (Obsessive Love Disorder) ಎಂದು ಕರೆಯಲಾಗುತ್ತದೆ. ಗೀಳಿನಂತಹ ಪ್ರೀತಿ ಯಾರ ಹೃದಯವನ್ನೂ ಅರಳಿಸುವುದಿಲ್ಲ, ಬದಲಿಗೆ ಮುದುಡಿಸುತ್ತದೆ. 

ನಿಖರವಾಗಿ ಏನಿದು?
ವೈದ್ಯಕೀಯ ಪರಿಭಾಷೆಯಲ್ಲಿ ಪ್ರೀತಿಯ ಗೀಳನ್ನು ಡಿಸಾರ್ಡರ್ ಎಂದು ಪರಿಗಣಿಸಲಾಗುತ್ತದೆ. ಪ್ರೀತಿಸುವವರ ಕುರಿತಾಗಿ ಸದಾ ಯೋಚಿಸುತ್ತ, ಅವರನ್ನು ರಕ್ಷಿಸಬೇಕು ಎನ್ನುವ ಹತ್ತಿಕ್ಕಲಾರದ ಗೀಳಿನಿಂದ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವ ಮನಸ್ಥಿತಿ. ಇದನ್ನು ನೇರವಾಗಿ ಮಾನಸಿಕ ಸಮಸ್ಯೆ ಎಂದು ಪರಿಗಣಿಸಲಾಗಿಲ್ಲ. ಆದರೆ, ಇದು ಮಾನಸಿಕ (Mental) ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಲ್ಲದು. ಸರಿಯಾದ ಸಮಯಕ್ಕೆ ಗುರುತಿಸಲಾರದೆ ಹೋದರೆ ಈ ಭಾವನೆಗಳಿಂದ ಹೊರಬರಲಾಗದೆ ಹಿಂಸಾತ್ಮಕವಾಗಿ ವರ್ತಿಸಬಹುದು ಮತ್ತು ಹೀಯಾಳಿಸಲು ಸಹ ಶುರು ಮಾಡಬಹುದು. 

ಒಎಲ್ ಡಿ ಸಾಮಾನ್ಯ ಲಕ್ಷಣಗಳು
•   ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಹೇಳತೀರದ ಆಕರ್ಷಣೆ (Attraction)
•   ಆ ವ್ಯಕ್ತಿಯ ಕುರಿತಾಗಿ ಗೀಳಿನಂತಹ ಭಾವನೆ
•   ಆ ವ್ಯಕ್ತಿಯನ್ನು ಇತರರಿಂದ ರಕ್ಷಿಸುವ (Protect) ಆಳವಾದ ಆಸೆ
•   ತಮ್ಮ ಭಾವನೆಗಳನ್ನು ಯಾವುದಾದರೂ ಸಣ್ಣಪುಟ್ಟ ಕೃತ್ಯಗಳ ಮೂಲಕ ತೋರಿಸುವಂಥದ್ದು. ಶಬ್ದಗಳನ್ನು ಬಳಕೆ ಮಾಡಬಹುದು.
•   ಯಾರಾದರೂ ಅವರೊಂದಿಗೆ ಮಾತನಾಡಿದರೆ ಅತಿಯಾದ ಅಸೂಯೆ (Jealousy) ಹಾಗೂ ಮೈಪರಚಿಕೊಂಡಂತೆ ಆಡುವುದು.
•   ಆತ್ಮವಿಶ್ವಾಸ(Self Confidence)ದ ಕೊರತೆ
•   ಪದೇ ಪದೆ ತಮ್ಮನ್ನು ತಾವು ಹೊಗಳಿಕೊಳ್ಳುವುದು.
•   ಸಾಮಾಜಿಕವಾಗಿ ಬೇರೆಯವರೊಂದಿಗೆ ಬರೆಯಲು ಸಾಧ್ಯವಾಗದಿರುವುದು.
•   ಪದೇ ಪದೆ ಮಸೇಜ್ (Messege) ಮಾಡುವುದು, ಕಾಲ್ (Call) ಮಾಡುವುದು. ಒಟ್ಟಿನಲ್ಲಿ ಪರಮಾಪ್ತತೆ ತೋರಿಸುವುದು. ಅವರು ಕಾಲ್ ಮಾಡಬೇಡ ಎಂದಾಗ ಸಿಡಿದೇಳುವುದು. ಸಿಟ್ಟಿನಿಂದ ವರ್ತಿಸುವುದು.
•   ಅವರ ದೈನಂದಿನ ಚಟುವಟಿಕೆಯ ಮೇಲೆ ಗಮನ ಇಡುವುದು, ಅವರನ್ನು ನಿಯಂತ್ರಿಸಲು ಯತ್ನಿಸುವುದು.

Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!

ಇಂಥವರ ನಿಯಂತ್ರಣಕ್ಕೆ ಸಿಕ್ಕ ಹುಡುಗಿಯರ ಬದುಕು ಕಷ್ಟಕ್ಕೆ ಸಿಲುಕುತ್ತದೆ. ಅವರ ಹಿಂದೆ ಮುಂದೆ ಓಡಾಡುತ್ತ, ಅವರನ್ನು ಗೋಳು ಹೊಯ್ದುಕೊಂಡುಬಿಡುತ್ತಾರೆ. ಅವರು ಸಿಗುವುದಿಲ್ಲ ಎಂದಾದರೆ ಕ್ರೂರವಾಗಿಯೂ ವರ್ತಿಸಬಹುದು. ಮನೆಯಲ್ಲಿ, ಕಚೇರಿಯಲ್ಲಿ ಹೇಳುತ್ತೇನೆ ಎಂದು ಬ್ಲಾಕ್ ಮೇಲ್ ಮಾಡಬಹುದು. 
ಒಎಲ್ ಡಿ ಸಮಸ್ಯೆಗೆ ಇಂಥದ್ದೇ ಕಾರಣ ಎನ್ನುವುದಿಲ್ಲ. ಒಟ್ಟಾರೆ, ಮಾನಸಿಕ ಸ್ಥಿತಿಗತಿ ಹಾಗೂ ವ್ಯಕ್ತಿತ್ವಕ್ಕೆ ಸಂಬಂಧಿಸಿದ ವಿವಿಧ ಕೊರತೆಗಳಿಂದ ಈ ಸಮಸ್ಯೆ ಉಂಟಾಗಬಹುದು. 

Break up ಗೆ ಕಾರಣವಾಗೋ ತಪ್ಪುಗಳಿವು!

ಇಂಥದ್ದೊಂದು ಸಮಸ್ಯೆ ಗಮನಕ್ಕೆ ಬಂದರೆ, ಅಥವಾ ನಿಮಗೆ ಬೇಕಾದವರಲ್ಲೇ ಈ ಗುಣ ಇರುವುದು ಅನುಭವಕ್ಕೆ ಬಂದಿದ್ದರೆ ಖಂಡಿತವಾಗಿ ವೃತ್ತಿಪರರ ನೆರವು ಪಡೆದುಕೊಳ್ಳಬೇಕು. ಆಪ್ತಸಮಾಲೋಚಕ(Councellor)ರೊಂದಿಗೆ ಮಾತನಾಡಬೇಕು. ಅಗತ್ಯವಿದ್ದರೆ ಚಿಕಿತ್ಸೆ (Treatment) ಪಡೆಯಬೇಕು. ಇಲ್ಲವಾದಲ್ಲಿ, ಇನ್ನೊಬ್ಬರ ಬದುಕನ್ನು ಅವರು ಹೈರಾಣ ಮಾಡಿಬಿಡುತ್ತಾರೆ.    


 

Follow Us:
Download App:
  • android
  • ios