Asianet Suvarna News Asianet Suvarna News

Parenting Tips : ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಲು ಹೀಗ್ಮಾಡಿ..

ಮಕ್ಕಳ ಬೆಳವಣಿಗೆಯಲ್ಲಿ ಪಾಲಕರು ಬಹುಮುಖ್ಯ ಪಾತ್ರವಹಿಸ್ತಾರೆ. ಪಾಲಕರು ಮಾಡಿದ್ದನ್ನೇ ಮಕ್ಕಳು ಪಾಲನೆ ಮಾಡೋದು ಹೆಚ್ಚು. ಹಾಗಾಗಿ ಪಾಲಕರು ಮಕ್ಕಳಿಗೆ ಒಳ್ಳೊಳ್ಳೆ ಹವ್ಯಾಸ ಕಲಿಸಬೇಕು. ಅದ್ರಲ್ಲಿ ಪುಸ್ತಕ ಓದುವ ಅಭ್ಯಾಸವೂ ಒಂದು.
 

How To inculcate  Reading habit for kids by parents tips here
Author
Bangalore, First Published Aug 22, 2022, 12:27 PM IST

ಓದು, ಜ್ಞಾನವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವ ವಿಕಸನದ ಅವಿಭಾಜ್ಯ ಅಂಗವೂ ಆಗಿದೆ. ಆದರೆ  ಈಗ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಪುಸ್ತಕ ಹಿಡಿಯುವುದು ಅಪರೂಪ ಎನ್ನುವಂತಾಗಿದೆ. ಈಗಿನ ಜನರಿಗೆ ಯಾವುದಕ್ಕೂ ಬಿಡುವಿಲ್ಲ. ಹಿರಿಯರಿಗೆ ಕೆಲಸದ ಒತ್ತಡವಾದ್ರೆ ಮಕ್ಕಳಿಗೆ ಶಾಲೆ, ಟ್ಯೂಷನ್ ಮತ್ತು ಹವ್ಯಾಸ ತರಗತಿಗಳಿಂದ ದಿನ ಮುಗಿಯುತ್ತದೆ. ಬಿಡುವು ಸಿಕ್ಕರೂ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪುಸ್ತಕ ಹಿಡಿಯುವ ಬದಲು ಮೊಬೈಲ್ ಅಥವಾ ಟಿವಿ ವೀಕ್ಷಣೆ ಮಾಡ್ತಾರೆ. ಪುಸ್ತಕ ಓದುವುದ್ರಿಂದ ಅನೇಕ ಪ್ರಯೋಜನವಿರುವ ಕಾರಣ ಪಾಲಕರಾದವರು ಮಕ್ಕಳಿಗೆ ಓದಿನ ಹವ್ಯಾಸ ಬೆಳೆಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು ಒಬ್ಬ ತಂದೆಯ ಜವಾಬ್ದಾರಿಯಾಗಿದೆ. ಪುಸ್ತಕಗಳನ್ನು ಓದುವುದು ಒಳ್ಳೆಯದು ಎಂದು ತಂದೆಯಾದವರು ಮಕ್ಕಳಿಗೆ ತಿಳಿಸಬೇಕು. ಬರೀ ಶಾಲೆ ಪುಸ್ತಕವಲ್ಲ, ಮಕ್ಕಳು ಓದಬೇಕಾದ ಅನೇಕ ಪುಸ್ತಕಗಳಿವೆ. ಅವುಗಳನ್ನು ಓದಿದ್ರೆ ಮಕ್ಕಳ ಬುದ್ದಿ ಚುರುಕಾಗುತ್ತದೆ.  ಪುಸ್ತಕ ಓದಲು ಮಕ್ಕಳನ್ನು ಹೇಗೆ ಪ್ರೋತ್ಸಾಹಿಸಬೇಕು ಎಂಬುದನ್ನು ನಾವು ಹೇಳ್ತೇವೆ.

ಮಕ್ಕಳು (Children) ಏಕೆ ಪುಸ್ತಕ (Book) ಓದ್ಬೇಕು ? : ಪುಸ್ತಕಗಳು ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಸಹಾಯಕಾರಿಯಾಗಿವೆ. ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಇದ್ರಿಂದ ಶಿಸ್ತನ್ನು ಮಕ್ಕಳು ಕಲಿಯುತ್ತಾರೆ. ಮಕ್ಕಳು ಇತರ ಪುಸ್ತಕಗಳನ್ನು ಓದುವುದ್ರಿಂದ ಬರುವ ಲಾಭ (Profit) ಶಾಲೆ ಅಭ್ಯಾಸ (Practice)ಕ್ಕೆ ನೆರವಾಗುತ್ತದೆ. ಮಕ್ಕಳು ಹೊಸ ಹವ್ಯಾಸ ಬೆಳೆಸಿಕೊಳ್ಳಲು ಇದು ಸಹಾಯಕವಾಗುತ್ತದೆ. 

ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವ ಮುನ್ನ!

ಮನೆಯಲ್ಲಿರಲಿ ಪುಸ್ತಕ : ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಮನೆಯಲ್ಲಿ ಪುಸ್ತಕಗಳ ದಾಸ್ತಾನು ಇರಬೇಕು. ಹೆಚ್ಚು ಪುಸ್ತಕಗಳಿಲ್ಲದಿದ್ದರೂ  ಮಗುವಿಗೆ ಬೇಕಾಗುವ ಪುಸ್ತಕವನ್ನು ಇಟ್ಟಿರಿ. ನಿಮ್ಮ ಮಗು ಪುಸ್ತಕಗಳನ್ನು ಓದುವಲ್ಲಿ ಆಸಕ್ತಿ ತೋರುತ್ತಿದೆ ಎಂದಾಗ ಮತ್ತಷ್ಟು ಪುಸ್ತಕವನ್ನು ಮನೆಗೆ ತನ್ನಿ. ಅವರ ವಯಸ್ಸಿನಲ್ಲಿ ಅವರು ಅರ್ಥಮಾಡಿಕೊಳ್ಳುವ ಪುಸ್ತಕಗಳನ್ನು ಇವು ಒಳಗೊಂಡಿರಬೇಕು.  

ಡಿಜಿಟಲ್ ಲೈಬ್ರರಿ : ಮಕ್ಕಳು ಪುಸ್ತಕ ಓದಲು ಆಸಕ್ತಿ ಹೊಂದಿದ ನಂತ್ರ ಡಿಜಿಟಲ್ ಲೈಬ್ರರಿ ಉತ್ತಮವಾಗಿರುತ್ತದೆ. ಆದರೆ ಇನ್ನೂ ಅಭ್ಯಾಸ ಮಾಡ್ತಿದ್ದಾರೆ ಎಂದಾಗ ಡಿಜಿಟಲ್ ಲೈಬ್ರರಿ ಸುದ್ದಿಗೆ ಹೋಗ್ಬೇಡಿ. ಇದು ಮಕ್ಕಳ ಮನಸ್ಸಿನಲ್ಲಿ ಓದುವ ರುಚಿ ಕಡಿಮೆ ಮಾಡಬಹುದು. ಆರಂಭದಲ್ಲಿ ಮಕ್ಕಳಿಗೆ ಮೂಲ ಪುಸ್ತಕಗಳನ್ನು ಮಾತ್ರ ನೀಡಿ. ಪುಸ್ತಕ ಓದುವ ಹವ್ಯಾಸ ಶುರುವಾದ್ರೆ ಮಕ್ಕಳೇ ಆನ್ಲೈನ್ ನಲ್ಲಿ ಪುಸ್ತಕದ ಹುಡುಕಾಟ ನಡೆಸುತ್ತಾರೆ. 

ಪಾಲಕರ ಹವ್ಯಾಸ ಪಾಲಿಸ್ತಾರೆ ಮಕ್ಕಳು : ಪಾಲಕರು ಬಾಲ್ಯದಲ್ಲಿ  ಪುಸ್ತಕಗಳನ್ನು ಓದದೇ ಇರಬಹುದು. ಇದು ನಿಮ್ಮ ತಪ್ಪು. ಆದರೆ ಈಗ ಓದಿ. ನೀವು ಪುಸ್ತಕ ಓದುತ್ತಿದ್ದರೆ ಮಕ್ಕಳಲ್ಲಿಯೂ ಆಸಕ್ತಿ ಮೂಡುತ್ತದೆ. ವಾಸ್ತವವಾಗಿ ಮಕ್ಕಳು, ಪೋಷಕರನ್ನು ತಮ್ಮ ನಾಯಕ ಎಂದು ಪರಿಗಣಿಸುತ್ತಾರೆ. ಪಾಲಕರಿಂದಲೇ ಅವರು ಕಲಿಕೆ ಶುರು ಮಾಡ್ತಾರೆ. ಆದ್ದರಿಂದ, ನೀವು ಮಕ್ಕಳಿಗೆ ಏನನ್ನಾದರೂ ಕಲಿಸಲು ಬಯಸಿದರೆ, ಮೊದಲನೆಯದಾಗಿ ನೀವು ಶುರು ಮಾಡ್ಬೇಕು. 

ಕೈಗೆ ಸಿಕ್ಕಿದ್ದೆಲ್ಲ ಎಸೆಯುವ ಮಕ್ಕಳನ್ನು ಸಂಭಾಳಿಸುವುದು ಹೇಗೆ?

ವೇಗವಾಗಿ ಮಾತನಾಡಿ ಮತ್ತು ಓದಿ : ನಿಮ್ಮ ಬಾಲ್ಯದಲ್ಲಿ ಹಿರಿಯರು ಗಟ್ಟಿಯಾಗಿ ಓದಲು ಹೇಳುತ್ತಿದ್ದರು. ಇದರಿಂದ ನೀವು ಚೆನ್ನಾಗಿ ನೆನಪಿಸಿಕೊಳ್ಳಬಹುದು. ನೀವು ಮಕ್ಕಳೊಂದಿಗೆ ಅದೇ ಕೆಲಸವನ್ನು ಮಾಡಬೇಕು. ಮಕ್ಕಳ ಜೊತೆ ಟಿವಿ ನೋಡುವ ಬದಲು ಪುಸ್ತಕಗಳನ್ನು ಓದಿ. ಮಗು ಸ್ವತಃ ಓದದೇ ಇರಬಹುದು ಆದರೆ ನೀವು ದೊಡ್ಡದಾಗಿ ಓದುವುದನ್ನು ಮಗು ಕೇಳುತ್ತದೆ. ನಂತ್ರ ಅದಕ್ಕೂ ಆಸಕ್ತಿ ಹೆಚ್ಚಾಗುತ್ತದೆ. 

ಮಕ್ಕಳು ಏನು ಇಷ್ಟಪಡುತ್ತಾರೆ ? : ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಕಲಿಸಲು ಬಯಸಿದ್ರೆ ಮೊದಲು ಅವರ ಆಸಕ್ತಿಯನ್ನು ಅರ್ಥಮಾಡಿಕೊಳ್ಳಿ. ಅವರ ಆಸಕ್ತಿಯನ್ನು ಅರ್ಥಮಾಡಿಕೊಳ್ಳಲು ನೀವು ಆಯ್ಕೆಗಳನ್ನು ನೀಡಬೇಕು. ಬೇರೆ ಬೇರೆ ಪುಸ್ತಕಗಳನ್ನು ಮಕ್ಕಳಿಗೆ ನೀಡಿ. ಅವರಿಗೆ ಇಷ್ಟವಾಗುವ ಪುಸ್ತಕ ಯಾವುದು ಎಂಬುದು ಆಗ ನಿಮ್ಮ ಅರಿವಿಗೆ ಬರುತ್ತದೆ. 

ಮಕ್ಕಳ ಮೇಲೆ ಕಣ್ಣಿರಲಿ : ಮಗುವು ಪುಸ್ತಕಗಳನ್ನು ಓದಲು ಪ್ರಾರಂಭಿಸಿದರೆ ಮತ್ತು ವಿವಿಧ ರೀತಿಯ ವಿಷಯವನ್ನು ಓದಲು ಪ್ರಾರಂಭಿಸಿದರೆ  ನೀವು ಆ ವಿಷಯದ ಮೇಲೆ ನಿಗಾ ಇಡುವುದು ಸಹ ಮುಖ್ಯವಾಗಿದೆ. ಮಗು  ಏನು ಕಲಿಯುತ್ತಿದೆ ಎಂಬುದರ ಜ್ಞಾನ ನಿಮಗಿರಬೇಕು. 

ಪುಸ್ತಕ ಓದಿದ ನಂತ್ರ ಮಗುವಿನ ಜೊತೆ ಚರ್ಚೆ :  ಮಗು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಹೊಂದಿದ್ದರೆ  ಪುಸ್ತಕಗಳನ್ನು ಓದಿದ ನಂತರ, ಮಕ್ಕಳು ಏನು ಯೋಚಿಸುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅವರ ಜೊತೆ ಅದ್ರ ಬಗ್ಗೆ ಚರ್ಚೆ ಮಾಡಬೇಕು. ಆಗ ಮಗುವಿಗೆ ಆಸಕ್ತಿ ಹೆಚ್ಚಾಗುತ್ತದೆ. 
 

Follow Us:
Download App:
  • android
  • ios