Homesick After Marriage: ಯಾವಾಗ್ಲೂ ತವರು ಮನೆ ನೆನಪಾಗುತ್ತೆ, ಏನ್ಮಾಡ್ಲಿ ?

ಮದುವೆ (Marriage)ಯೆಂದರೆ ಹೆಣ್ಣು ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಗೆ ಹೋಗಬೇಕಾಗುತ್ತದೆ. ಆಕೆಯ ಪಾಲಿಗೆ ಇದು ತುಂಬಾ ಕಷ್ಟಕರವಾದ ವಿಷಯ. ಹುಟ್ಟಿ, ಆಡಿ ಬೆಳೆದ ಮನೆಯನ್ನು ತೊರೆದು ಹೋಗಬೇಕು. ಆದ್ರೆ ಮದುವೆಯಾಗಿ ಹೋದರೂ ಹೆಣ್ಣಿಗೆ ಆಗಾಗ ತವರು ಮನೆಯ ನೆನಪು ಕಾಡುತ್ತಿರುತ್ತದೆ. ಇಂಥಾ ಹೋಮ್‌ ಸಿಕ್‌ನೆಸ್‌ (Homesickness) ಹೋಗಲಾಡಿಸಲು ಏನ್ಮಾಡ್ಬೇಕು ?

How To Deal With Being Homesick After An Arranged Marriage

ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಕುಟುಂಬಗಳನ್ನು ಒಗ್ಗೂಡಿಸುವ ಮದುವೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮದುವೆಯೆಂಬ ಬಂಧ ಕೇವಲ ಗಂಡು-ಹೆಂಡಿನ ನಡುವಿನ ಸಂಬಂಧ (Relationship) ಮಾತ್ರವಲ್ಲ. ಎರಡು ಕುಟುಂಬವನ್ನು ಸಹ ಒಗ್ಗೂಡಿಸುತ್ತದೆ. ಹೆಣ್ಣು, ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ ಹೀಗೆ ಎಲ್ಲಾ ಸಂಬಂಧವನ್ನು ಬಿಟ್ಟು ಗಂಡನ ಜತೆಗೆ ಬೇರೊಂದು ಮನೆಗೆ ಬರುತ್ತಾಳೆ. ಅದೆಷ್ಟೋ ವರ್ಷಗಳಿಂದ ಹುಟ್ಟಿ ಬೆಳೆದ ಮನೆಗೆ ಕಣ್ಣೀರಿನ ವಿದಾಯ ಹೇಳುತ್ತಾಳೆ.

ಹುಟ್ಟಿ, ಆಡಿ-ಬೆಳೆದ ಮನೆಯಿಂದ ಹೊರಬರುವುದು ಆಕೆಗೆ ಅದೆಷ್ಟು ಕಷ್ಟವಾಗುತ್ತದೆ ಎಂಬುದು ತಿಳಿದವರಿಗಷ್ಟೇ ಗೊತ್ತು. ಎಲ್ಲಾ ಬಂಧಗಳನ್ನು ಬಿಟ್ಟು ಈಗಷ್ಟೇ ಪರಿಚಯವಾದವರ ಜತೆ ಬಾಳುವುದು ಅಷ್ಟು ಸುಲಭವೇನಲ್ಲ. ಆಕೆಗೆ ತವರು ಮನೆಯ ನೆನಪು ಕಾಡುತ್ತಲೇ ಇರುತ್ತದೆ. ಆಗಾಗ ದುಃಖ ಉಮ್ಮಳಿಸಿ ಬರುತ್ತಿರುತ್ತದೆ. ಕೆಲವೊಬ್ಬರು ಮದುವೆಯಾಗಿ ಒಂದೆರಡು ತಿಂಗಳಿನಿಂದ ಈ ದುಃಖದಿಂದ ಹೊರಬರುತ್ತಾರೆ. ಆದ್ರೆ ಇನ್ನು ಕೆಲವೊಬ್ಬರಿಗೆ ಈ ಹೋಮ್‌ ಸಿಕ್‌ನೆಸ್ (Homesick) ಬೇಗನೇ ಬಿಟ್ಟು ಹೋಗುವುದಿಲ್ಲ.

Relationship Tips : ಮದುವೆಗೂ ಮುನ್ನ ಈ ವಿಷ್ಯ ತಿಳಿದಿದ್ದರೆ ಸಮಸ್ಯೆ ಬರ್ತಿರಲಿಲ್ಲ…! 

ಅನೇಕ ಮಹಿಳೆಯರಿಗೆ, ಮದುವೆಯ ನಂತರದ ಜೀವನವು ತಮ್ಮ ಬಾಲ್ಯದ ಮನೆಯಿಂದ ದೂರವಿರುವುದು ಮತ್ತು ಗಂಡನ ಮನೆಯಲ್ಲಿ ಜೀವನ ಕಳೆಯುವುದು ಕಷ್ಟವಾಗುತ್ತದೆ. ಆಗಾಗ ತವರು ಮನೆಯ ನೆನಪು, ಅಲ್ಲಿನ ಪರಿಸರ, ಒಡನಾಟ, ಅಮ್ಮ ತಯಾರಿಸಿದ ಆಹಾರ ಎಲ್ಲವೂ ನೆನಪಾಗುತ್ತಿರುತ್ತದೆ. ನಿಮಗೂ ಹೀಗೆ ಆಗುತ್ತದಾ. ಆಗಾಗ ಅಪ್ಪ-ಅಮ್ಮನ ನೆನಪು ಕಾಡುತ್ತದಾ ? ಇದ್ರಿಂದಾಗಿ ಗಂಡನ ಮನೆಯಲ್ಲೂ ಖುಷಿಯಿಂದಿರಲು ಸಾಧ್ಯವಾಗುತ್ತಿಲ್ಲ ಅನ್ನೋ ಸಮಸ್ಯೆನಾ ? ಹಾಗಿದ್ರೆ ಹೋಮ್‌ ಸಿಕ್‌ನೆಸ್‌ ಹೋಗಲಾಡಿಸಲು ಹೀಗೆ ಮಾಡಿ.

ಮನೆಯ ಆಹಾರವನ್ನು ತರಿಸಿಕೊಳ್ಳಿ
ಮದುವೆಯಾದ ನಂತರ ಹೆಚ್ಚಾಗಿ ಹೆಣ್ಣು ಮಕ್ಕಳು ಮಿಸ್ ಮಾಡಿಕೊಳ್ಳುವುದು ತಾಯಿಯ ಮನೆಯ ಆಹಾರ (Food). ಅಮ್ಮನ ಕೈರುಚಿಯನ್ನು ಸವಿಯಲು ಇಷ್ಟಪಡುತ್ತಿರುತ್ತಾರೆ. ಅದು ಸಿಗದಿದ್ದಾಗ ಗಂಡನ ಮನೆಯಲ್ಲಿ ಬೇಸರವಾಗಲು ಶುರುವಾಗುತ್ತದೆ, ತವರು ಮನೆಯ ನೆನಪಾಗುತ್ತದೆ. ಹೀಗಾಗಿ ಆಗಾಗ ಅಮ್ಮನ ಮನೆಯಿಂದ ಆಗಾರ ವಿಶೇಷ ಆಹಾರಗಳನ್ನು ತರಿಸಿಕೊಳ್ಳಿ. ತಾಯಿ ತಯಾರಿಸುವ ಲಡ್ಡು ಆಗಿರಲಿ ಅಥವಾ ನಿಮ್ಮ ತಂದೆ ಪ್ರತಿ ವರ್ಷ ನಿಮ್ಮ ತಂದೆ ನಿಮಗಾಗಿ ಮೀಸಲಿಡುವ ಉಪ್ಪಿನಕಾಯಿಯಾಗಿರಲಿ, ಅವರ ಪ್ರೀತಿಯಿಂದ ಈ ಸತ್ಕಾರಗಳನ್ನು ನಿಮಗೆ ಕಳುಹಿಸಲು ಅವರನ್ನು ಕೇಳಿಕೊಳ್ಳಿ.

Relationship Tips: ಪಾರ್ಟ್‌ನರ್ ಪೋಷಕರನ್ನು ಭೇಟಿಯಾಗ್ತಿದ್ದೀರಾ ? ಸ್ಪಲ್ಪ ತಯಾರಿ ಮಾಡ್ಕೊಳ್ಳಿ

ಆಗಾಗ ಭೇಟಿಯಾಗಿ ಜತೆಯಾಗಿ ಸಮಯ ಕಳೆಯಿರಿ
ಪ್ರತಿಯೊಬ್ಬರೂ ತಮ್ಮ ವಯಸ್ಸಾದ ಪೋಷಕರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಬಯಸುತ್ತಾರೆ. ಆದರೆ ನೀವು ಅವರ ನಗರಕ್ಕಿಂತ ಬೇರೆ ನಗರದಲ್ಲಿದ್ದರೆ, ಇದು ಕಷ್ಟವಾಗಬಹುದು. ಹೀಗಾಗಿ ನಿಮ್ಮ ತಾಯಿಯನ್ನು ಆಗಾಗ ಭೇಟಿಯಾಗಲು ಸಾಧ್ಯವಾಗುವಂತ ವರ್ಚುವಲ್‌ ಕ್ಲಾಸ್‌ಗಳಲ್ಲಿ ಭಾಗವಹಿಸಿ. ಆನ್‌ಲೈನ್ ಯೋಗ, ವರ್ಚುವಲ್ ಆರ್ಟ್ಸ್ ಕ್ಲಾಸ್ ಅಥವಾ ಡ್ಯಾನ್ಸ್ ಕ್ಲಾಸ್‌ನಲ್ಲಿ ತಾಯಿಯನ್ನು ನೋಡುವುದು, ಮಾತನಾಡುವುದು ಮಾಡಬಹುದು.

ಇದರಿಂದ ತವರು ಮನೆಗೆ ಆಪ್ತತೆ ಎನಿಸುತ್ತದೆ. ಮನೆಯಿಂದ ದೂರವಿದ್ದ ಅನುಭವವಾಗುವುದಿಲ್ಲ. ತಾಯಿ-ಮಗಳು ಇಬ್ಬರೂ ಒಬ್ಬರನ್ನೊಬ್ಬರು ನೋಡಲು ಬಹಳಷ್ಟು ಸಮಯ ಸಿಗುವುದರಿಂದ ಹೋಮ್‌ ಸಿಕ್‌ನೆಸ್ ಸ್ಪಲ್ಪ ಕಡಿಮೆಯಾಗುತ್ತದೆ.

ವಾರಾಂತ್ಯದಲ್ಲಿ ತವರು ಮನೆ ಹೋಗಿ
ಮದುವೆಯಾದ ತಕ್ಷಣ ತವರು ಮನೆಯ ಸಂಬಂಧ ಬಿಟ್ಟು ಹೋಗುವುದಿಲ್ಲ. ವೈವಾಹಿಕ ಜೀವನದ ಆರಂಭವೆಂದರೆ ಪೋಷಕರೊಂದಿಗಿನ ಸಂಬಂಧ ಮುಗಿಯಿತು ಎಂದು ಅರ್ಥವಲ್ಲ. ವಾಸ್ತವವಾಗಿ, ಇದು ನಿಮ್ಮ ತಾಯಿ ಮತ್ತು ತಂದೆಯೊಂದಿಗೆ ನಿಮ್ಮ ದೂರದ ಸಂಬಂಧದ ಆರಂಭವಾಗಿದೆ. ಆದ್ದರಿಂದ, ನೀವು ಮಾಡಬೇಕಾಗಿರುವುದು ಅವರಿಗೆ ಹತ್ತಿರವಾಗಲು ಸ್ವಲ್ಪ ಪ್ರಯತ್ನವನ್ನು ಮಾಡುವುದು. ವಾರಾಂತ್ಯದಲ್ಲಿ ತವರು ಮನೆ ಹೋಗಿ. ಅಥವಾ ಅವರನ್ನೇ ಮನೆಗೆ ಕರೆಸಿಕೊಳ್ಳಿ. ಜತೆಯಲ್ಲಿ ಉತ್ತಮವಾಗಿ ಸಮಯ ಕಳೆಯಿರಿ.

Latest Videos
Follow Us:
Download App:
  • android
  • ios