Relationship Tips: ಪಾರ್ಟ್‌ನರ್ ಪೋಷಕರನ್ನು ಭೇಟಿಯಾಗ್ತಿದ್ದೀರಾ ? ಸ್ಪಲ್ಪ ತಯಾರಿ ಮಾಡ್ಕೊಳ್ಳಿ
ಮನೆಯಲ್ಲಿ ಮದುವೆ (Marriage) ಮಾತುಕತೆ ಮಾಡ್ತಿದ್ದಾರೆ. ಆದ್ರೆ ನೀವೋ ಅದೆಷ್ಟೋ ವರ್ಷದಿಂದ ಅವನನ್ನು ಲವ್ (Love) ಮಾಡ್ತಿದ್ದೀರಿ. ಆದ್ರೆ ಪೇರೆಂಟ್ಸ್ (Parents)ಗೆ ವಿಚಾರ ಹೇಳೋಕೆ ಭಯ. ಆಗಿದ್ದಾಗ್ಲಿ ಅಂತ ಪಾರ್ಟ್‌ನರ್ (Partner) ಪೋಷಕರನ್ನು ಭೇಟಿಯಾಗೋಕೆ ನಿರ್ಧಾರ ಮಾಡಿದ್ರಾ ? ಹಾಗಿದ್ರೆ ಸ್ಪಲ್ಪ ತಯಾರಿ ಮಾಡ್ಕೊಳ್ಳಿ.
ಈಗಿನ ಕಾಲದಲ್ಲಿ ಎಲ್ರಿಗೂ ಬಾಯ್‌ಫ್ರೆಂಡ್ (Boyfriend), ಗರ್ಲ್‌ಫ್ರೆಂಡ್ (Girlfriend) ಅಂತೂ ಇದ್ದೇ ಇರ್ತಾರೆ. ಕೆಲವೊಂದು ಜಸ್ಟ್ ಟೈಂ ಪಾಸ್ ರಿಲೇಶನ್ ಶಿಪ್ (Relationship) ಆಗಿದ್ರೆ, ಇನ್ನು ಕೆಲವು ಮದುವೆಯಲ್ಲೇ ಒಂದಾಗುವ ಸುಂದರ ಅನುಬಂಧ. ಆದ್ರೆ ಮದುವೆಯಾಗೋದೇನೋ ಸರಿ. ಆದ್ರೆ ತಾನೇ ಆಯ್ಕೆ ಮಾಡಿದ ಬಾಳಸಂಗಾತಿಯನ್ನು ಮನೆಗೆ ಕರೆದುಕೊಂಡು ಹೋಗುವುದು, ಮನೆಯವರಿಗೆ ಪರಿಚಯಿಸುವುದು ಹೇಗೆ ಅನ್ನೋದು ಹಲವರ ಚಿಂತೆ. ಹುಡುಗ ಅಥವಾ ಹುಡುಗಿ ಎಷ್ಟೇ ಸುಂದರವಾಗಿದ್ದರೂ, ಉತ್ತಮ ಉದ್ಯೋಗದಲ್ಲಿದ್ದರೂ ಪ್ರತಿಯೊಬ್ಬರೂ ಮನೆಯಲ್ಲಿ ಪ್ರೀತಿಯ ವಿಷಯವನ್ನು ಹೇಳಲು ಭಯಪಡುತ್ತಾರೆ. ಆದರೆ ರಿಲೇಶನ್ ಶಿಪ್‌ನ್ನು ಮದುವೆಯೆಂಬ ಸ್ಟೇಜ್‌ಗೆ ಕೊಂಡೊಯ್ಯಲು ನಿರ್ಧರಿಸಿದಾಗ ಎಲ್ಲರೂ ಪರಸ್ಪರ ತಿಳಿದುಕೊಳ್ಳುವುದು ಮುಖ್ಯ.
ಕುಟುಂಬಕ್ಕೆ ನಿಮ್ಮ ಸಂಗಾತಿಯನ್ನು ಪರಿಚಯಿಸುವುದು ದೊಡ್ಡ ನಿರ್ಧಾರ. ನಿಮ್ಮಂತೆಯೇ ನಿಮ್ಮ ಕುಟುಂಬವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಆದರೆ ಈ ರೀತಿ ಸಂಗಾತಿಯನ್ನು ಪರಿಚಯಿಸುವಾಗ ಪೇರೆಂಟ್ಸ್ (Parents) ವಿರೋಧ ವ್ಯಕ್ತಪಡಿಸುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಹುಡುಗ ಅಥವಾ ಹುಡುಗಿ ಯಾರ ಮನೆಗೆ ಹೋಗುವುದಾದರೂ ಸರಿ. ಹೇಗೆ ರೆಡಿಯಾಗಬೇಕು, ಏನೆಲ್ಲಾ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.
Abusive Relationship ನಿಂದ ಹೊರ ಬಂದು ಆತ್ಮಗೌರವ ಹೆಚ್ಚಿಸಿಕೊಳ್ಳಿ..
ಸಾಂಪ್ರದಾಯಿಕ ಬಟ್ಟೆ ಧರಿಸಿ
ಮೊದಲ ಭೇಟಿಯಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯೂ ಮುಖ್ಯವಾಗುತ್ತದೆ. ಹೀಗಾಗಿ ಧರಿಸುವ ಬಟ್ಟೆಯ ಬಗ್ಗೆಯೂ ಗಮನವಿರಲಿ. ಮಾಡರ್ನ್ ಬಟ್ಟೆ ಮೊದಲ ಭೇಟಿಯಲ್ಲೇ ಅಗತ್ಯವಿಲ್ಲ. ಸಾಂಪ್ರದಾಯಿಕತೆಗೆ ಹೆಚ್ಚು ಒತ್ತುವ ನೀಡು ಕುಟುಂಬವಾಗಿದ್ದರೆ ಉತ್ತಮ. ಹುಡುಗಿಯರಾಗಿದ್ದರೆ ಸೀರೆ (Saree), ಹುಡುಗರಾದರೆ ಕುರ್ತಾ ಧರಿಸಿ. ಸಂಪ್ರದಾಯಕ್ಕೆ ಒತ್ತು ನೀಡುವ ಮಕ್ಕಳು ಪ್ರತಿ ಅಪ್ಪ-ಅಮ್ಮನಿಗೂ ಇಷ್ಟವಾಗುತ್ತಾಳೆ. ಇವನು, ಇವಳು ನಮ್ಮ ಕುಟುಂಬವನ್ನು ಜೋಡಿಸಿ ಇಡಬಲ್ಲರು ಎಂದು ಅವರು ನಂಬುತ್ತಾರೆ.
ಮಾತು ಹಿತಮಿತವಾಗಿರಲಿ
ಮೊದಲ ಭೇಟಿಯಲ್ಲಿ ಮಾತು (Talk) ಹಿತಮಿತವಾಗಿರಲಿ. ಆಪ್ತರೆನಿಸಿಕೊಳ್ಳುವ ಭರದಲ್ಲಿ ಬೇಕಾಬಿಟ್ಟಿ ಮಾತನಾಡಿ ವಾಚಾಳಿ ಅನಿಸಿಕೊಳ್ಳದಿರಿ. ಹೆಚ್ಚು ಮಾತನಾಡುವುದು ಕೆಲವೊಬ್ಬರನ್ನು ಇರಿಟೇಟ್ ಮಾಡುತ್ತದೆ. ಹೀಗಾಗಿ ಎಷ್ಟು ಬೇಕೋ ಅಷ್ಟೇ ಮಾತನಾಡಿ. ಕೇಳುವ ಪ್ರಶ್ನೆಗಳನ್ನು ಚುಟುಕಾಗಿ ಉತ್ತರಿಸಿ ನಯ-ವಿನಯತೆ ಇದೆ ಎಂಬುದನ್ನು ತೋರಿಸಿಕೊಳ್ಳಿ.
Relationship Tips: ಮುರಿದು ಬಿದ್ದ ಸ್ನೇಹ, ನೋವು ಸಹಿಸಲಿ ಹೇಗೆ?
ಸುಳ್ಳು ಹೇಳದಿರಿ
ಅವನ, ಅವಳ ಪೋಷಕರನ್ನು ಮೆಚ್ಚಿಸುವ ಭರದಲ್ಲಿ ಸುಳ್ಳು ಹೇಳಲು ಹೋಗಬೇಡಿ. ಫಸ್ಟ್ ಇಂಪ್ರೆಶನ್ ಈಸ್ ಆಲ್ವೇಸ್ ಬೆಸ್ಟ್ ಇಂಪ್ರೆಶನ್. ಮನೆ ಮಂದಿ, ಎಜುಕೇಷನ್, ಉದ್ಯೋಗ ಎಲ್ಲರದ ಬಗ್ಗೆಯೂ ನಿಜವನ್ನೇ ಹೇಳಿ. ಸಂಬಳದ ವಿಷಯ ಬಂದಾಗಲೂ ಮುಜುಗರ ಪಡಬೇಡಿ. ಜೀವನವನ್ನು ಸುಂದರವಾಗಿಸಲು ನೀವು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೀರಿ ಎಂಬುದು ತಿಳಿಸಿ. ಊರಲ್ಲಿರುವ ಜಮೀನು, ಮನೆ ಮೊದಲಾದ ಬಗ್ಗೆ ಅವರಿಗೆ ಸುಳ್ಳು ಹೇಳಿದರೂ ಗೊತ್ತಾಗುವುದಿಲ್ಲ ಎಂಬ ಭ್ರಮೆ ಬೇಡ. ಸತ್ಯ ಒಂದಲ್ಲಾ ಒಂದು ದಿನ ಹೊರಗೆ ಬರುತ್ತದೆ. ಆಗ ಇದು ನಿಮ್ಮ ಸಂಬಂಧಕ್ಕೇ ದೊಡ್ಡ ಪೆಟ್ಟಾಗಬಹುದು.
ಮನೆ, ಮನೆಮಂದಿಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ
ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಅಂತಲ್ಲ. ಇದು ಹಲವರ ಕೆಟ್ಟ ಅಭ್ಯಾಸ. ಮತ್ತೊಬ್ಬರ ಮನೆಗೆ ಹೋದರೆ ವಿನಾಕಾರಣ ಕಾಮೆಂಟ್ (Comment) ಮಾಡಬಹುದು. ಮನೆ ಇನ್ನು ಸ್ಪಲ್ಪ ದೊಡ್ಡದಾಗಿ ಕಟ್ಟಿಸಬಹುದಿತ್ತು. ಕಿಚನ್ ಈ ಸೈಡ್‌ನಲ್ಲಿದ್ದರೆ ಚೆನ್ನಾಗಿರ್ತಿತ್ತು. ದೇವರ ಮನೆ ಸಣ್ಣದಾಯ್ತಲ್ಲ ಹೀಗೆ ಅಗತ್ಯವಿಲ್ಲದೆ ಮಾತುಗಳು. ಇನ್ನು ಕೆಲವರು ವ್ಯಕ್ತಿಯ ಬಗ್ಗೆ ಮಾತನಾಡೋಕೆ ಹಿಂಜರಿಯುವುದಿಲ್ಲ. ಅಂಕಲ್ ತುಂಬಾ ಮುಂಗೋಪಿ ಅಲ್ವಾ, ಆಂಟಿ ಸಿಕ್ಕಾಪಟ್ಟೆ ಮಾತನಾಡ್ತಾರೆ ಅಲ್ವಾ ಹೀಗೆ. ಇಂಥದನ್ನು ಮೊದಲ ಭೇಟಿಯಲ್ಲೇ ಮಾಡಲು ಹೋಗಬೇಡಿ. ಅಧಿಕಪ್ರಸಂಗತನ ಅನಿಸಿಬಿಡುತ್ತದೆ. ಮನೆ, ಮನೆಮಂದಿಯ ಬಗ್ಗೆ ಕೆಟ್ಟದಾಗಿ ಏನೂ ಕಮೆಂಟ್ ಮಾಡಲು ಹೋಗಬೇಡಿ.