ದಾಂಪತ್ಯದಲ್ಲಿ ಬಿರುಕು ಮೂಡಿಸುತ್ತೆ ಅನಗತ್ಯ ಗರ್ಭಧಾರಣೆ, ಡೀಲ್ ಮಾಡೋದು ಹೇಗೆ?

ಮಕ್ಕಳನ್ನು ಬಯಸದ ಮಹಿಳೆಯರು ತಿಂಗಳು ಪಿರಿಯಡ್ಸ್ ಆಗಿಲ್ಲವೆಂದ್ರೆ ಟೆನ್ಷನ್ ಗೆ ಒಳಗಾಗ್ತಾರೆ. ಆ ಸಮಯದಲ್ಲಿ ಅವರಿಗೆ ಗರ್ಭಪಾತ ಅನಿವಾರ್ಯವಾಗುತ್ತೆ. ಇದರಿಂದ ದೈಹಿಕ, ಮಾನಸಿಕ ಸಮಸ್ಯೆ ಜೊತೆ ಸಂಬಂಧ ಹಾಳಾಗುತ್ತೆ. 

How To Deal With An Unplanned Pregnancy that could affect relationship with spouse roo

ಫ್ಯಾಮಿಲಿ ಪ್ಲಾನಿಂಗ್ ಕುರಿತು ಯೋಚಿಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಬದಲಾಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಮಹಿಳೆಯರಿಗೆ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದೆ. ವೈದ್ಯಕೀಯ ಜಗತ್ತು ಇಷ್ಟೊಂದು ಮುಂದುವರೆದರೂ ಕೆಲವೊಮ್ಮೆ ಮಹಿಳೆಯರು ಅನಗತ್ಯ ಗರ್ಭಧಾರಣೆಯ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಅರಿವಿಲ್ಲದೇ ಸಂಭವಿಸುವ ಘಟನೆಗಳು ಕೊನೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನವುದರ ಕುರಿತಾದ ಮಾಹಿತಿ ಇಲ್ಲಿದೆ.

ಯೋಜಿತವಲ್ಲದ ಗರ್ಭಧಾರಣೆ (Pregnancy) ಮಹಿಳೆಯರಿಗೆ ದೊಡ್ಡ ಸವಾಲು : ಸರಿಯಾದ ನಿರ್ಧಾರ ಮತ್ತು ಭರವಸೆಗಳಿಲ್ಲದ ಮಹಿಳೆಯರಿಗೆ ಯೋಜಿತವಲ್ಲದ ಗರ್ಭಧಾರಣೆ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಗರ್ಭನಿರೋಧಕ (Contraceptive) ಗಳನ್ನು ಸರಿಯಾಗಿ ಬಳಸದ ಕಾರಣ ಇಂತಹ ಸಮಸ್ಯೆಗಳು ಎದುರಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಅನಗತ್ಯ ಗರ್ಭಧಾರಣೆ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

15ನೇ ವಯಸ್ಸಿಗೇ ಗರ್ಭಿಣಿಯಾಗಿದ್ದ 'ಸಿಂಹಾದ್ರಿಯ ಸಿಂಹ' ಮೀನಾ! ಇಂಟರೆಸ್ಟಿಂಗ್​ ವಿಷ್ಯ ಇದೀಗ ಬಯಲಿಗೆ...

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ಪ್ರಕಾರ, 2008 ರಲ್ಲಿ ಪ್ರತಿಶತ 50 ರಷ್ಟು ಪ್ರಕರಣಗಳು ವರದಿಯಾಗಿವೆ. 2011 ರ ಹೊತ್ತಿಗೆ ಇದು ಪ್ರತಿಶತ 45ಕ್ಕೆ ಇಳಿದಿದೆ. ಆದರೆ ಹದಿಹರೆಯದ ಗರ್ಭಧಾರಣೆಯ ದರವು ಪ್ರತಿಶತ 75ರಷ್ಟಿದೆ. ವರದಿಗಳ ಪ್ರಕಾರ, ಯೋಜಿತ ಗರ್ಭಧಾರಣೆಗೆ ಹೋಲಿಸಿದರೆ ಅನಗತ್ಯ ಗರ್ಭಧಾರಣೆಯ ಜನರಲ್ಲಿ ಪ್ರಸವಾನಂತರದ ಖಿನ್ನತೆ ದ್ವಿಗುಣವಾಗಿರುತ್ತದೆ. ಇದು ಆರೋಗ್ಯ ಹಾಳು ಮಾಡುವುದು ಮಾತ್ರವಲ್ಲದೆ ದಾಂಪತ್ಯದಲ್ಲಿ ಸಮಸ್ಯೆಯುಂಟು ಮಾಡುತ್ತದೆ. ಪತಿ – ಪತ್ನಿ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ. 

ಅನಗತ್ಯ ಗರ್ಭಧಾರಣೆಯ ಸಮಯದಲ್ಲಿ ಏನು ಮಾಡಬೇಕು? : ಲೈಂಗಿಕ ಸಂಭೋಗದ ಸಮಯದಲ್ಲಿನ ಕೆಲವು ಅಕ್ರಮಗಳು ಅನಗತ್ಯ ಗರ್ಭಧಾರಣೆಗೆ ಕಾರಣವಾಗುತ್ತವೆ. ಇದರಿಂದ ಮಹಿಳೆಯರಲ್ಲಿ ಅನೇಕ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹೆಚ್ಚಿನ ಜನರು ಮದುವೆಯಾದ ಕೆಲವು ತಿಂಗಳು ಅಥವಾ ಎರಡು ಮಕ್ಕಳ ನಡುವೆ ಸುರಕ್ಷಿತ ಅಂತರವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಇಂತಹ ಸಮಯದಲ್ಲಿ ಅನಗತ್ಯ ಗರ್ಭಧಾರಣೆಯು ಅವರಿಗೆ ದೊಡ್ಡ ಸವಾಲಾಗುತ್ತದೆ. ಅಂತಹ ಸಮಸ್ಯೆಗಳಿಂದ ಹೊರಬರಲು ಕೆಲವು ಟಿಪ್ಸಗಳು ಇಲ್ಲಿವೆ.

ಗರ್ಭಪಾತಕ್ಕೆ ಮುನ್ನ ಇದು ನೆನಪಿರಲಿ : 
• ಗರ್ಭಪಾತಕ್ಕೆ ಯೋಚಿಸುವ ಮುನ್ನ ಸರಿಯಾದ ತಪಾಸಣೆ ಮಾಡಿಸಿಕೊಳ್ಳಿ.
• ಯಾವುದೇ ತೀರ್ಮಾನಕ್ಕೆ ಬರುವ ಮೊದಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಪರಸ್ಪರ ಒಪ್ಪಿಗೆಯಿಂದ ನಿರ್ಧಾರ ತೆಗೆದುಕೊಳ್ಳಿ ಇದರಿಂದ ನಿಮ್ಮ ನಡುವಿನ ಸಂಬಂಧ ಚೆನ್ನಾಗಿರುತ್ತದೆ. 
• ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಗರ್ಭಪಾತದ ವಿಧಾನಗಳನ್ನು ಅನುಸರಿಸಿ ಸಾಮಾನ್ಯವಾಗಿ ಗರ್ಭಪಾತದ ಪ್ರಕ್ರಿಯೆ ಗರ್ಭಧಾರಣೆಯ 12 ವಾರಗಳಲ್ಲಿ ನಡೆಸಲಾಗುತ್ತದೆ.
• ಗರ್ಭಧಾರಣೆ ಅಥವಾ ಗರ್ಭಪಾತದ ಬಗ್ಗೆ ಹಠಾತ್ ಆಗಿ ತಿಳಿದಾಗ ನಿಮ್ಮ ಮಾನಸಿಕ ಆರೋಗ್ಯ ಹದಗೆಡಬಹುದು. ಹಾಗಾಗಿ ಮೊದಲೇ ನೀವು ನಿಮ್ಮನ್ನು ಭಾವನಾತ್ಮಕವಾಗಿ ಗಟ್ಟಿಗೊಳಿಸಬೇಕು. ಖಿನ್ನತೆ, ಆತಂಕ ಮತ್ತು ಆತ್ಮಹತ್ಯೆಯಿಂದ ದೂರವಿರಬೇಕು.
• ಪರಸ್ಪರ ಒಪ್ಪಿಗೆಯಿಂದಲೇ ಲೈಂಗಿಕ ಸಂಭೋಗ ನಡೆದು ಗರ್ಭಧಾರಣೆ ಸಂಭವಿಸಿದಾಗ ಒಬ್ಬರನ್ನೊಬ್ಬರು ದೂಷಿಸುವುದು ತಪ್ಪು. ಇದರಿಂದ ಸಂಗಾತಿಗಳ ನಡುವಿನ ಸಂಬಂಧಕ್ಕೆ ಅಡ್ಡಿಯಾಗುತ್ತದೆ. ಪರಸ್ಪರ ಆರೋಪ ಮಾಡುವುದರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ.

ಯೋನಿಯಲ್ಲಿ ಊತ, ಇರಬಹುದು ಕಾರಣಗಳು ನೂರು, ನಿರ್ಲಕ್ಷ್ಯ ಮಾತ್ರ ಬೇಡ!

ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಹೀಗೆ ಮಾಡಿ : 
• ಕಾಂಡೋಮ್ ಬಳಸಿ
• ನೈಸರ್ಗಿಕ ರೀತಿಯಲ್ಲಿ ಗರ್ಭಧಾರಣೆಯ ಸಮಸ್ಯೆಯನ್ನು ತಪ್ಪಿಸಲು ಅಂಡೋತ್ಪತ್ತಿಯ ಅವಧಿಯಲ್ಲಿ ಲೈಂಗಿಕತೆಯನ್ನು ತಪ್ಪಿಸಿ. ಇದಕ್ಕಾಗಿ ನೀವು ಟ್ರ್ಯಾಕರ್ ಅಪ್ಲಿಕೇಶನ್ ಸಹಾಯ ಪಡೆಯಬಹುದು.
• ಗರ್ಭನಿರೋಧಕ ಚುಚ್ಚುಮದ್ದು ಅನಪೇಕ್ಷಿತ ಗರ್ಭಧಾರಣೆಯನ್ನು ತಪ್ಪಿಸುತ್ತದೆ. 
• ಅನಗತ್ಯ ಗರ್ಭಧಾರಣೆಯನ್ನು ತಪ್ಪಿಸಲು ಐಯುಡಿ ಬಳಸಬಹುದು. ಇದು ಟಿ ಆಕಾರದ ಸಾಧನವಾಗಿದ್ದು, ಮುಟ್ಟಿನ ಚಕ್ರದ ಏಳನೇ ದಿನದಂದು ಇದನ್ನು ಯೋನಿಯೊಳಗೆ ಸೇರಿಸಲಾಗುತ್ತದೆ.

Latest Videos
Follow Us:
Download App:
  • android
  • ios