ನಿಮ್ಮ ಆ ಸ್ಪೆಶಲ್ ಸಮ್‌ವನ್‌ಗೆ ಪ್ರೀತಿ ಹೇಳಿಕೊಳ್ಳುವುದನ್ನು ನೆನೆಸಿಕೊಂಡರೇ ಒಂಥರಾ ಭಯ, ಎದೆಬಡಿತ ಹೆಚ್ಚಾಗುತ್ತದೆ ಅಲ್ವಾ? ನೇರವಾಗಿ ಹೋಗಿ ಮನಸ್ಸಿಲ್ಲಿದ್ದಿದ್ದೆಲ್ಲ ಹೇಳುವುದು ಸುಲಭದ ಕೆಲಸವಲ್ಲ. ಆದರೆ, ಹೇಳಿಕೊಂಡ ನಂತರವಷ್ಟೇ ಒಳಗಿನಿಂದ ಗೊಂದಲ ಕಳೆದು ಒಂದು ರೀತಿಯ ಶಾಂತಿ ಸಿಗುವುದು. ಕೊಂಚವೇ ತಯಾರಿ ಮಾಡಿಕೊಂಡೂ ನಿಮ್ಮ ಫೀಲಿಂಗ್ಸ್ ಹೇಳಿಕೊಳ್ಳಬಹುದು. ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಇಲ್ಲಿವೆ ಸಲಹೆಗಳು...

ಟೈಮಿಂಗ್
ಯಾವುದೇ ಕೆಲಸಕ್ಕಾದರೂ ಟೈಮಿಂಗ್ ಬಹಳ ಮುಖ್ಯ. ಹಾಗೆಯೇ ಪ್ರೀತಿ ಹೇಳಿಕೊಳ್ಳಲು ಕೂಡಾ. ನೀವು ಹೇಳುವುದನ್ನು ಕೇಳಲು ನಿಮ್ಮ ಕ್ರಶ್ ಒಳ್ಳೆ ಮೂಡ್‌ನಲ್ಲಿದ್ದಾರೆ ಎಂಬುದು ಖಾತ್ರಿಯಿದ್ದಾಗ ಮಾತ್ರ ಹೇಳಿ. ಮಾತುಗಳನ್ನು ನಿಧಾನವಾಗಿ ತೆಗೆದುಕೊಂಡು ಹೋಗಿ. 

ಅಜ್ಜ-ಅಜ್ಜಿ ಸಾಂಗತ್ಯದಲ್ಲಿ ಮೊಮ್ಮಕ್ಕಳ ಲಾಕ್‍ಡೌನ್; ಹಳ್ಳಿಯ ಹಿರಿಯ ಜೀ ...

ಆತ್ಮವಿಶ್ವಾಸ
ಆತ್ಮವಿಶ್ವಾಸದಿಂದ ಯಾರು ಏನು ಮಾತಾಡಿದರೂ ಕೇಳೋಣ ಎನಿಸುತ್ತದೆ. ಹಾಗಾಗಿ, ಪ್ರೀತಿಯ ಬಗ್ಗೆ ಮಾತನಾಡುವಾಗ ಅಡ್ಡ ದಾರಿಯಲ್ಲೆಲ್ಲ ಸುತ್ತತೊಡಗಬೇಡಿ. ಮಾತುಗಳು ಪಾರದರ್ಶಕವಾಗಿರಲಿ, ಮುಖದಲ್ಲಿ ಆತ್ಮವಿಶ್ವಾಸವಿರಲಿ. ಆ ವ್ಯಕ್ತಿಯು ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ವಿವರಿಸುತ್ತಲೇ ಆದಷ್ಟು ಪ್ರಾಮಾಣಿಕವಾಗಿ ಹಾಗೂ ನೇರವಾಗಿ ಪ್ರೀತಿ ಹೇಳಿ. ಡ್ರಾಮಾ ದಾರಿಗಳನ್ನು ಹಿಡಿದರೆ ನೀವು ಹೇಳಿಕೊಂಡಿದ್ದ ವಿಷಯಕ್ಕೆ ಗಂಭೀರತೆ ಕಡಿಮೆಯಾಗುತ್ತದೆ. ಹಾಗೂ ಅವರು ಅದನ್ನೊಂದು ತಮಾಷೆಯಾಗಿ ಪರಿಗಣಿಸುವ, ಇಲ್ಲವೇ ನಿಮ್ಮ ವ್ಯಕ್ತಿತ್ವವನ್ನು ಹಗುರವಾಗಿ ಪರಿಗಣಿಸುವ ಸಾಧ್ಯತೆ ಇರುತ್ತದೆ. 

ತಮಾಷೆ ಎಂಬ ಅಸ್ತ್ರ
ನಿಮಗೆ ಪ್ರೀತಿ ಹೇಳಿಕೊಂಡು ತಿರಸ್ಕೃತವಾಗುವ ಭಯವಿದ್ದರೆ ಯಾವುದಾದರೂ ಮಾತನಾಡುವಾಗ ಮಧ್ಯೆ ತಮಾಷೆಯಾಗಿ , ಫ್ಲರ್ಟಿಯಾಗಿ ಅವರೊಂದಿಗೆ ಜೀವನಪೂರ್ತಿ ಕಳೆವ ಬಗ್ಗೆ ಕಣ್ಣಲ್ಲೇ ನಗುತ್ತಾ ಹೇಳಿ. ಈ ತಮಾಷೆಯನ್ನು ಅವರು ಹೇಗೆ ತೆಗೆದುಕೊಳ್ಳುತ್ತಾರೆ ನೋಡಿ ಮುಂದಿನ ನಿರ್ಧಾರ ಮಾಡಬಹುದು. 

ಡೆಡ್‌ಲೈನ್ ಕೊಟ್ಟುಕೊಳ್ಳಿ
ನಿಮಗೆ ನೀವೇ ಡೆಡ್‌ಲೈನ್ ಹಾಕಿಕೊಳ್ಳಿ. ಪ್ರೀತಿ ಹೇಳಿಕೊಳ್ಳಬೇಕು ಎಂದುಕೊಂಡ ಮೇಲೆ ಹೆಚ್ಚು ಕಾಲ ಎಳೆಯಬೇಡಿ. ಹೆಚ್ಚು ಸಮಯ ನಿಮಗೆ ನೀವು ಕೊಟ್ಟಷ್ಟೂ ನೀವು ಅದರ ಬಗ್ಗೆ ಅತಿಯಾಗಿ ಯೋಚಿಸಿ, ನಿಮ್ಮ ಪ್ರೇಮಿಯ ಪ್ರತಿಕ್ರಿಯೆಗಳನ್ನೂ ನೀವೇ ಯೋಚಿಸಿ ಮತ್ತಷ್ಟು ಮುಂದೆ ಹಾಕುವ ಸಾಧ್ಯತೆಗಳು ಜಾಸ್ತಿ. 

ಪತ್ರ ಬರೆಯಿರಿ
ಪ್ರೀತಿಯ ವಿಷಯದಲ್ಲಿ ಪತ್ರ ಮಾಡುವ ಮ್ಯಾಜಿಕ್ ಬೇರಾವುದೇ ಟೆಕ್ನಿಕ್‌ಗೆ ಸಾಧ್ಯವಾಗದು. ಪ್ರೇಮಪತ್ರಗಳು ನಿಮ್ಮ ಫೀಲಿಂಗ್ಸನ್ನು ಸರಿಯಾಗಿ ತುಂಬಿಕೊಡಬಲ್ಲವು. ನೀವು ಅದನ್ನು ಡಬಲ್ ಚೆಕ್ ಮಾಡಿ ಕೂಡಾ ಕೊಡುವ ಅವಕಾಶವಿರುತ್ತದೆ. ಪ್ರೇಮಪತ್ರ ಓದಿದವರು ಕಳೆದು ಹೋಗುವ ಜೊತೆಗೆ ಆ ಪತ್ರವನ್ನೂ ಜೀವನಪರ್ಯಂತ ಜೋಪಾನ ಮಾಡುತ್ತಾರೆ. ಮಾತಲ್ಲಾದರೆ ಒಂದು ಬಾರಿ ಕೇಳಬಹುದು. ಆದರೆ ಪತ್ರವನ್ನು ಅವರು ಪದೇ ಪದೆ ಓದುವಾಗ ನಿಮ್ಮ ಭಾವನೆಗಳು ಸರಿಯಾಗಿ ಅವರನ್ನು ತಲುಪುತ್ತವೆ. 

ತೂಕ ಇಳಿಸಲು ಸಹಕಾರಿ ಈ ಟೀ ವೆರೈಟಿ

ಟೆಕ್ಸ್ಟಿಂಗ್
ಎದುರಿನಿಂದ ಹೇಳಿಕೊಳ್ಳುವುದು ನಿಮ್ಮ ಕಷ್ಟ ಮಾತ್ರವಲ್ಲ, ಅಸಾಧ್ಯ ಎನಿಸಿದರೆ, ಟೆಕ್ಸ್ಟಿಂಗ್ ಹೆಚ್ಚು ಕಂಫರ್ಟ್ ಎನಿಸಿದರೆ ಅದರಲ್ಲೇ ಫೀಲಿಂಗ್ಸ್ ಶೇರ್ ಮಾಡಿ. ಆಗ ಅವರಿಗೂ ಪ್ರತಿಕ್ರಿಯಿಸಲು ಸಮಯ ಸಿಗುತ್ತದೆ. ನಿಮಗೂ ಹೇಳುವ ಸಂದರ್ಭದಲ್ಲಿ ಮುಖ ಫೇಸ್ ಮಾಡುವ ಮುಜುಗರ ತಪ್ಪುತ್ತದೆ. 

ತಾಳ್ಮೆಯಿಂದಿರಿ
ನೀವು ಪ್ರೀತಿ ಹೇಳಿಕೊಳ್ಳುತ್ತಿದ್ದಂತೆಯೇ ಆ ಕಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದುಬಿಡುತ್ತದೆ ಎಂಬ ಅತಿಯಾದ ನಿರೀಕ್ಷೆಗಳು ಬೇಡ. ಅವರಿಗೆ ನಿಮ್ಮ ಬಗ್ಗೆ ತಿಳಿಯಲು ಅಥವಾ ಸಂದರ್ಭವನ್ನು ಗ್ರಹಿಸಲು ಸಮಯ ಬೇಕಾಗಿರಬಹುದು. ಬೇಕಾದ ಸಮಯವನ್ನು ಅವರಿಗೆ ನೀಡಿ ನಿಧಾನವಾಗಿ ನಿರ್ಧಾರ ತಿಳಿಸಲು ಹೇಳಿ.