Best colleague: ಎಲ್ಲರೂ ಬಯಸುವ ಅದ್ಭುತ ಸಹೋದ್ಯೋಗಿಯಾಗೋದು ಹೇಗೆ?
ಕೆಲವರು ಸದಾ ಕಾಲ ತಮ್ಮ ಉದ್ಯೋಗಿಗಳಲ್ಲಿ ಅಚ್ಚುಮೆಚ್ಚಿನ ವ್ಯಕ್ತಿಗಳಾಗಿರುತ್ತಾರೆ. ಅದು ಹೇಗೆ ಸಾಧ್ಯ ಎಂದು ನೀವು ಅಚ್ಚರಿಪಟ್ಟಿರಬಹುದು. ಅದೇನೂ ಬ್ರಹ್ಮವಿದ್ಯೆಯಲ್ಲಿ. ಇಲ್ಲಿವೆ ನೋಡಿ ಟಿಪ್ಸ್.
ಕೆಲವರನ್ನು ನೀವು ಗಮನಿಸಿರಬಹುದು, ಯಾವಾಗಲೂ ತಮ್ಮ ಕಚೇರಿಯ ಸಹೋದ್ಯೋಗಿಗಳ (Colleague) ಪ್ರೀತಿ, ಸಾಂಗತ್ಯ ಗಳಿಸಿರುತ್ತಾರೆ. ಅವರನ್ನು ಎಲ್ಲರೂ ಇಷ್ಟಪಡುತ್ತಿರುತ್ತಾರೆ. ತುಂಬ ಕಷ್ಟಕರವಾದ ಸನ್ನಿವೇಶದಲ್ಲೂ ಕಚೇರಿಯ ಎಲ್ಲರನ್ನೂ ಜೊತೆಗೆ ಕರೆದೊಯ್ದು ಕೆಲಸ ಮಾಡಿಸುತ್ತಾ, ಆನಂದವಾಗಿ ಇಟ್ಟಿರುತ್ತಾರೆ. ಇವರ ಜನಮೆಚ್ಚುಗೆಯ ಹಿಂದಿನ ಶಕ್ತಿ ಏನು ಎಂದು ನೀವು ಕುತೂಹಲಪಡುತ್ತಿರಬಹುದು.
ಎಲ್ಲರೂ ಇಷ್ಟಪಡುವ ಸಹೋದ್ಯೋಗಿಯಾಗಲು ಇಲ್ಲಿವೆ ಕೆಲವು ಮಾರ್ಗಗಳು.
1. ಹರ್ಷ ತುಂಬಿದ ಗ್ರೀಟಿಂಗ್ಸ್
ಇದು ಲಘುವಾಗಿ ತೆಗೆದುಕೊಳ್ಳಬೇಕಾದ ವಿಷಯವಲ್ಲ. ನೀವು ಯಾರನ್ನಾದರೂ ಭೇಟಿಯಾದಾಗ ಅವರ ನಿಷ್ಕಲ್ಮಷವಾದ ನಗು ನಿಮ್ಮ ಹೃದಯದ ದುಃಖವನ್ನು ಶಮನಗೊಳಿಸುತ್ತದೆ. ಯಾವಾಗಲೂ ಬೆಳಿಗ್ಗೆ ಕಚೇರಿಗೆ ಬರುವಾಗ ಖುಷಿಯಿಂದ ಹಾಯ್ ಹೇಳುವುದು ಮತ್ತು ಕಚೇರಿಯಿಂದ ಮನೆಗೆ ಹೊರಡುವಾಗಲೂ ಜೋಶ್‌ನಲ್ಲೇ ಬಾಯ್ ಮಾಡುವುದು ತುಂಬಾ ವ್ಯತ್ಯಾಸವನ್ನು ಉಂಟುಮಾಡುತ್ತದೆ. ನೀವು ಹಾಗೆ ಮಾಡಿದರೆ ಜನ ನಿಮ್ಮನ್ನು ಗಮನಿಸುತ್ತಾರೆ ಮತ್ತು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ.
2. ಸಾಮಾನ್ಯ ಆಸಕ್ತಿಯನ್ನು ಹುಡುಕಿ
ಕಾಫಿ ಮಶೀನ್‌ನಿಂದ ಕಾಫಿ ತೆಗೆದುಕೊಳ್ಳುವಾಗಲೋ, ಕಚೇರಿ ಕಟ್ಟಡದ ಹೊರಗೆ ಲಘು ಉಪಹಾರಕ್ಕೆ ಹೋಗುವಾಗಲೋ ಅಥವಾ ಮೀಟಿಂಗ್ ನಡುವಿನಲ್ಲೋ, ನಿಮ್ಮ ಮತ್ತು ಸಹೋದ್ಯೋಗಿಗಳ ನಡುವೆ ಸಂವಾದ ನಡೆಸಬೇಕು ಮತ್ತು ನಿಮ್ಮ ನಡುವೆ ಸಾಮಾನ್ಯ ಆಸಕ್ತಿಯನ್ನು ಕಂಡುಕೊಳ್ಳಬೇಕು. ಯಾವಾಗಲೂ ಸಣ್ಣ ಪ್ರಶ್ನೆಯೊಂದಿಗೆ ಆರಂಭಿಸಬಹುದು. ಉದಾಹರಣೆಗೆ, "ನೀವು ಜಿಮ್ ಮಾಡಲು ಯಾವಾಗ ಪ್ರಾರಂಭಿಸಿದಿರಿ?''
3. ವಿವಾದಾತ್ಮಕ ಚರ್ಚೆಗಳಲ್ಲಿ ಸಿಲುಕಬೇಡಿ
ರಾಜಕೀಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು, ವಿವಾದಾತ್ಮಕವಾದ ಮತ್ತು ಬಿಸಿಬಿಸಿಯಾದ ವಾದಗಳಿಗೆ ತಿರುಗಬಹುದಾದ ವಿಷಯಗಳನ್ನು ಬಿಟ್ಟುಬಿಡುವುದು ಉತ್ತಮ. ನಿಮ್ಮ ಸಹೋದ್ಯೋಗಿಗಳ ಬಗ್ಗೆಯೇ ಚರ್ಚಿಸುವ, ಗಾಸಿಪ್ ಮಾಡುವ, ಕಿರಿಕಿರಿ ಸೃಷ್ಟಿಸುವ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಬೇಡಿ.
ಯಶಸ್ವಿಯಾಗಲು ಈ 6 ಸೂತ್ರ ಅನುಸರಿಸಿ ಅಂತಾರೆ Elon Musk
4. ಐ ಕಾಂಟ್ಯಾಕ್ಟ್ ಕಾಪಾಡಿಕೊಳ್ಳಿ
ನೀವು ಯಾವುದೇ ವಿಷಯ ಮಾತನಾಡುವಾಗ, ನಿಮ್ಮ ಸಹೋದ್ಯೋಗಿಗಳೊಂದಿಗೆ ಕಣ್ಣಿನ ಸಂಪರ್ಕವನ್ನು (ಐ ಕಾಂಟ್ಯಾಕ್ಟ್) ಕಾಪಾಡಿಕೊಳ್ಳಿ. ನೀವು ಅವರೊಂದಿಗೆ ಮಾತನಾಡಲು ಆಸಕ್ತಿ ಹೊಂದಿದ್ದೀರಿ ಎಂದು ಇದು ತೋರಿಸುತ್ತದೆ. ಅನೇಕ ಜನರಿಗೆ ಇದು ಸ್ವಾಭಾವಿಕವಾಗಿ ಬರುತ್ತದೆ. ಆದರೆ ಅಂತರ್ಮುಖಿ ವ್ಯಕ್ತಿತ್ವ ಹೊಂದಿರುವವರು ಸಾಮಾನ್ಯವಾಗಿ ಈ ವಿಚಾರದಲ್ಲಿ ಕಷ್ಟವನ್ನು ಎದುರಿಸುತ್ತಾರೆ. ಅದಕ್ಕಾಗಿಯೇ ಈ ಅಭ್ಯಾಸವನ್ನು ಮಾಡುವುದು ಮುಖ್ಯವಾಗಿದೆ.
5. ಕೋಪ ಬಂದಾಗ ತಡೆಯಿರಿ
ನಿಮ್ಮ ಸಹೋದ್ಯೋಗಿಗಳನ್ನು ಟೀಕಿಸಲು, ಅವರ ಮೇಲೆ ಕೋಪಿಸಿಕೊಳ್ಳಲು ನೀವು ಬಯಸಿದರೆ ಹಲವಾರು ಅವಕಾಶಗಳು ಬರುತ್ತವೆ. ಆದರೆ ಇದು ನಿಮ್ಮ ಸಹೋದ್ಯೋಗಿಗಳಲ್ಲಿ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಉಂಟುಮಾಡುತ್ತದೆ. ಆದ್ದರಿಂದ ಆ ಕೋಪವನ್ನು ನಿಯಂತ್ರಿಸುವುದು ಉತ್ತಮ. ಕೋಪ ಬಂದಾಗ ವಾಕಿಂಗ್ ಹೋಗಿ, ನಿಮ್ಮ ಸುತ್ತ ಇರಬಹುದಾದ ಪಕ್ಷಿಗಳನ್ನು ಎಣಿಸಿ, ಅಥವಾ 100ರವರೆಗೆ ಎಣಿಸಿ. ಅದು ನೀವು ತಣ್ಣಗಾಗುವಂತೆ ಮಾಡುತ್ತದೆ. ಕೋಪದಿಂದ ಎಂದಿಗೂ ಪ್ರತಿಕ್ರಿಯಿಸಬೇಡಿ. ಸ್ವಲ್ಪ ಸಮಯ ತೆಗೆದುಕೊಳ್ಳಿ.
Parenting Tips : ಮಕ್ಕಳು ಮೊಂಡ ಹಠ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಕ್ಷಣದಲ್ಲಿ ಕೋಪ ಮಾಯ
6. ಇನ್ನಷ್ಟು ನಗು
ಸಾರ್ವಕಾಲಿಕ ಗಂಟಿಕ್ಕಿದ, ಮುಂಗೋಪದ ಅಥವಾ ಸಿಡುಕಿನ ಮುಖದ ಬದಲಿಗೆ, ನಿಮ್ಮ ಮುಖದಲ್ಲಿ ಕಾಯಂ ಆದ ಒಂದು ನಗುವನ್ನು ಏಕೆ ಅಂಟಿಸಿಕೊಳ್ಳಬಾರದು? ನಿಮ್ಮ ಮುಖದ ಮೇಲಿನ ನಗು ನಿಮ್ಮಲ್ಲೂ ನಿಮ್ಮನ್ನು ನೋಡುವ ವ್ಯಕ್ತಿಯಲ್ಲೂ ಅದ್ಭುತಗಳನ್ನು ಸೃಷ್ಟಿ ಮಾಡುತ್ತದೆ. ಸ್ಮೈಲ್ ಎಂಬುದು ಉಚಿತ ಚಿಕಿತ್ಸೆ !
7. ನೆರವಿಗೆ ಧಾವಿಸಿ
ನಿಮ್ಮ ಸಹೋದ್ಯೋಗಿಯೊಬ್ಬರು ಯಾವುದಾದರೂ ಜಟಿಲ ಸಮಸ್ಯೆಯಲ್ಲಿ ಸಿಲುಕಿದ್ದಾರೆ ಎಂದಾದಾಗ, ಅವರ ನೆರವಿಗೆ ಧಾವಿಸಿ. ಉದಾಹರಣೆಗೆ ಅವರ ವಾಹನದ ಟಯರ್ ಪಂಕ್ಚರ್ ಆಗಿರಬಹುದು, ಯಾರಿಗಓ ಸಣ್ಣ ಆಕ್ಸಿಡೆಂಟ್ ಆಗಿರಬಹುದು. ನಿಮ್ಮಿಂದ ಸಾಧ್ಯವಾದ ನೆರವು ನೀಡಿ. ಅದು ಅವರಲ್ಲಿ ನಿಮ್ಮ ಬಗ್ಗೆ ಕಾಯಂ ಆದ ಸೌಹಾರ್ದ ಭಾವವನ್ನ ಉಳಿಸುತ್ತದೆ.
Kolar: ಯುವಕನ ಬದುಕನ್ನೇ ಬದಲಾಯಿಸಿದ ಕೊರೋನಾ: ಛಲವೊಂದಿದ್ರೆ ಯಾವುದು ಅಸಾಧ್ಯವಲ್ಲ..!