ಇದೊಂದು ವಿಚಿತ್ರ ಕೇಸು. ಆಕೆ ತಾನು ಒಬ್ಬ ಪುರುಷನನ್ನು ಮದುವೆಯಾಗಿದ್ದೇನೆ ಅಂದುಕೊಂಡಿದ್ದಳು. 7 ತಿಂಗಳು ಸಂಸಾರವನ್ನೂ ಮಾಡಿದ್ದಳು. 7 ತಿಂಗಳ ನಂತರ ಗೊತ್ತಾದದ್ದು ಏನು ಅಂದರೆ, ಆತ ಪುರುಷನೇ ಅಲ್ಲ, ಮಹಿಳೆ ಎಂಬುದು!

ಹೌದು. ಇದೊಂದು ವಿಚಿತ್ರ ಕೇಸೇ ಸರಿ. ಈ ಪ್ರಕರಣ ನಡೆದಿರುವುದು ರಾಜಸ್ಥಾನದ ಜೈಪುರದ ಕೋಟಾ ಎಂಬಲ್ಲಿ. ಆಕೆ ಮೂವತ್ತು ವರ್ಷದ ಮಹಿಳೆ. ಪೊಲೀಸ್ ಠಾಣೆಗೆ ಬಂದು ತನ್ನ ಗಂಡ ಅಲಿಯಾಸ್ ಮರೆಮೋಸದ ಮಹಿಳೆಯ ವಿರುದ್ಧ ದೂರು ಕೊಟ್ಟಳು. ತನ್ನ ಎರಡನೇ ಗಂಡ ಅಲಿಯಾಸ್ ಮಹಿಳೆ, ತನ್ನನ್ನು ವಂಚಿಸಿ ಹಣ- ಆಭರಣ ದೋಚಿಕೊಂಡು ಪರಾರಿಯಾಗಿದ್ದಾಳೆ ಅಂತ.

ಪಿರಿಯಡ್ಸ್ ವೇಳೆ ಸೆಕ್ಸ್: ತಪ್ಪು ಕಲ್ಪನೆಗಳೇನು? ಇಲ್ಲಿದೆ ಉತ್ತರ ...
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಬಂಧಿತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆ ಅವನಲ್ಲ, ಅವಳು ಎಂಬುದು ರುಜುವಾತಾಯಿತು. ೩೨ ವರ್ಷದ ವಿಜೇತ ಎಂಬಾಕೆ, ವಿಕಾಸ್ ಎಂಬ ಹೆಸರನಲ್ಲಿ ವೇಷ ಮರೆಸಿ ವಂಚಿಸಿತಾನು ಗಂಡು ಎಂದು ಹೇಳಿಕೊಂಡು ಸಂತ್ರಸ್ತೆ ಮಹಿಳೆಯನ್ನು ವಿವಾಹವಾಗಿದ್ದಳು. ಅದೊಂದು ವಂಚನೆಯ ಇಂಟರೆಸ್ಟಿಂಗ್ ಕತೆ.

ಸಂತ್ರಸ್ತ ಮಹಿಳೆಯ ಗಂಡ ನಾಲ್ಕು ವರ್ಷದ ಹಿಂದೆ ತೀರಿಕೊಂಡಿದ್ದ. ಒಂದು ವರ್ಷದ ಹಿಂದೆ ಕೋಟದ ನಂತ ಪ್ರದೇಶದ ನಾರಿಶಾಲಾ ಎಂಬ ಮಹಿಳಾ ಆಶ್ರಮಕ್ಕೆ ಬಂದಿದ್ದ ಆಕೆ, ತನ್ನ ಇಬ್ಬರು ಮಕ್ಕಳೊಂದಿಗೆ ಆಶ್ರಯ ಪಡೆದಿದ್ದಳು. ಅಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಅಲ್ಲಿಗೆ ವಿಕಾಸ್‌ (ವಿಜೇತ) ಬಂದಿದ್ದಳು. ಒಬ್ಬಾಕೆ ಹುಡುಗಿಯೊಂದಿಗೆ ಆಕೆ ಬಂದಿದ್ದು, ಆಕೆ ತನ್ನ ಮಗಳೆಂದೂ ತಾನು ಆಕೆಯ ತಂದೆಯೆಂದೂ ಹೇಳಿಕೊಂಡಿದ್ದಳು. ತನ್ನನ್ನು ಪೊಲೀಸರು ಮಹಿಳೆ ಎಂದು ತಪ್ಪಾಗಿ ಇಲ್ಲಿಗೆ ಕಳಿಸಿದ್ದಾರೆ, ನಾನು ಪುರುಷ ಎಂದು ಸಂತ್ರಸ್ತೆಗೆ ತನ್ನನ್ನು ಪರಿಚಯಿಸಿಕೊಂಡಿದ್ದಳು. ನಂತರ ಸಂತ್ರಸ್ತೆಯನ್ನು ಮನವೊಲಿಸಿ ಮದುವೆಯಾಗಿದ್ದಳು. ಗಿಡ್ಡ ಕೂದಲು, ಗಡಸು ಧ್ವನಿಯಿಂದಾಗಿ ಸಂತ್ರಸ್ತೆಗೆ ಈಕೆಯ ಅಸಲಿಯತ್ತು ಗೊತ್ತಾಗಿರಲೇ ಇಲ್ಲ. 

ಸ್ತನದ ಮೇಲಿನ ಡಿಂಪಲ್ಸ್ ಸ್ತನ ಕ್ಯಾನ್ಸರಿನ ಸಂಕೇತವಾಗಿರಬಹುದು ! ...

ನಂತರ ಏಳು ತಿಂಗಳು ಪತ್ನಿಯ ಜೊತೆಗಿದ್ದಳು. ಏಳು ತಿಂಗಳು ಅಕ್ಕಪಕ್ಕದಲ್ಲೇ ಮಲಗಿದರೂ ಆಕೆ ಮಹಿಳೆ ಎಂಬುದು ಈಕೆಗೆ ಯಾಕೆ ಗೊತ್ತಾಗಲಿಲ್ಲ? ಯಾಕೆಂದರೆ ಇಬ್ಬರಿಗೂ ಲೈಂಗಿಕ ಸಂಪರ್ಕ ನಡೆದಿರಲಿಲ್ಲ. ತನ್ನನ್ನು ಬೆತ್ತಲೆಯಾಗಿ ನೋಡಿದವರು ಸತ್ತು ಹೋಗುತ್ತಾರೆ ಎಂದು ಮಂತ್ರವಾದಿಯೊಬ್ಬರು ಹೇಳಿದ್ದಾರೆ ಎಂದು ವಿಜೇತ ಹೆದರಿಸಿದ್ದಳು. ಹೀಗಾಗಿ ಸಂತ್ರಸ್ತೆಯೂ ಈಕೆಯ ಬಟ್ಟೆ ಬಿಚ್ಚಿ ಪರೀಕ್ಷಿಸಲು ಹೋಗಿಲ್ಲ!

ಕೊನೆಗೆ ಈ ವಿಜೇತ, ಸಂತ್ರಸ್ತಯೆ ಬಳಿ ಇದ್ದ ಸುಮಾರು 1.5 ಲಕ್ಷ ರೂ ನಗದು ಹಾಗೂ ಸುಮಾರು 3 ಲಕ್ಷ ರೂಪಾಯಿಯ ಚಿನ್ನದ ಒಡವೆ ದೋಚಿ ಪರಾರಿಯಾಗಿದ್ದಾಳೆ! ಮೊದಲು ಈಕೆ ಕೊಟ್ಟ ದೂರಿನಲ್ಲಿ ಗಂಡ- ಪುರುಷ ಎಂದೇ ನಮೂದಾಗಿತ್ತು. ಬಂಧಿತ ವಿಜೇತ ಪುರುಷನಲ್ಲ ಮಹಿಳೆ ಎಂಬುದು ಆಕೆಗೆ ಗೊತ್ತಾದದ್ದೂ ಆಕೆ ಬಂಧನಕ್ಕೊಳಗಾದ ನಂತರವೇ. ಆಗಲೇ ಆಕೆಗೆ ಗೊತ್ತಾದದ್ದು- ಏಳು ತಿಂಗಳು ತಾನು ಗಂಡ ಅಂದುಕೊಂಡಿದ್ದದು ಮಹಿಳೆ ಅಂತ!

ಸೆಕ್ಸ್ ವೇಳೆ ಆಕೆ ಹಂದಿ ಥರಾ ಕಿರುಚೋದೇಕೆ? ಇದು ಸಮಸ್ಯೆನಾ? ...

ಇದೊಂದು ವಿಚಿತ್ರ ಕೇಸೇ ಆದರೂ ಇದೇ ಇಂಥ ಮೊದಲನೇ ಕೇಸೇನೂ ಅಲ್ಲ. ಇಂಥ ಹಲವಾರು ಕೇಸುಗಳಾಗಿವೆ. ಉತ್ತರಪ್ರದೇಶದಲ್ಲಿ ಇನ್ನೊಬ್ಬಾಕೆ ಹೀಗೇ ವಂಚಿಸಿದ್ದಳು. ಅದೂ ಒಬ್ಬಳನ್ನಲ್ಲ, ಇಬ್ಬರನ್ನು! 31 ವರ್ಷದ ಕೃಷ್ಣಾ ಸೇನ್ ಎಂಬಾಕೆ, ಮೂರು ವರ್ಷಗಳ ಅವಧಿಯಲ್ಲಿ ತಾನು ಗಂಡು ಎಂದು ವೇಷ ಮರೆಸಿ ಎರಡು ಮದುವೆ ಆಗಿದ್ದಳು. ಇಬ್ಬರಿಂದಲೂ ವರದಕ್ಷಿಣ ಎಂದು ಹೇಳಿ ಸಾಕಷ್ಟು ಗಿಂಜಿದ್ದಳು. ಮೊದಲನೇ ಪತ್ನಿ ಗಂಡನ ಮೇಲೆ ವರದಕ್ಷಿಣಿ ಹಿಂಸೆಯ ಕೇಸು ಹಾಕಿ ಪೊಲೀಸರಲ್ಲಿಗೆ ಹೋದಾಗ ಸತ್ಯ ಬಯಲಾಯಿತು. ಈಕೆ ಮೋಸ ಮಾಡಿದ ರೀತಿ ವಿಚಿತ್ರ. ಈಕೆ ಮೊದಲು ಗಂಡಿನ ವೇಷದಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯ ಬೆಳೆಸುತ್ತಿದ್ದಳು. ನಂತರ ಮದುವೆಯಾಗುತ್ತಿದ್ದಳು. ಇನ್ನೂ ವಿಚಿತ್ರ ಅಂದರೆ, ಈಕೆ ದಟ್ಟ ಕತ್ತಲಲ್ಲಿ ತನ್ನ ಪತ್ನಿಯರಿಗೆ ದೈಹಿಕ ಸುಖವನ್ನೂ ಕೊಡುತ್ತಿದ್ದಳಂತೆ! ಅದು ಹೇಗೆ ಅಂತೀರಾ? ಅದಕ್ಕೆ ಆಕೆ ಬಳಸುತ್ತಿದ್ದದು ಸೆಕ್ಸ್ ಟಾಯ್ಸ್, ಅರ್ಥಾತ್‌ ಆಟಿಕೆಯ ಶಿಶ್ನವನ್ನು! ತಾನು ಶ್ರೀಮಂತ ಮನೆತನದ ಏಕೈಕ ಗಂಡು ಸಂತಾನ ಎಂದು ಬಿಂಬಿಸಿಕೊಂಡಿದ್ದಳು ಬೇರೆ.