‘ಹೊಟ್ಟೆಯೊಳಗೊಂದು ಜೀವ ಸೇರಿಕೊಂಡ ಮೇಲೆ ಹೀಗೆಲ್ಲ ಆಗುತ್ತೆ ಅಂತ ನಂಗ್ಯಾರೂ ಯಾಕೆ ಹೇಳಿಲ್ಲ..’ ಹೀಗಂತ ಸೋಷಲ್‌ ಮೀಡಿಯಾದಲ್ಲಿ ಆಪ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ದೇವ್‌ ಡಿ ಆ್ಯಕ್ಟರ್‌. ‘ಇದೊಳ್ಳೆ ರೋಲರ್‌ ಕಾಸ್ಟರ್‌ ಇದ್ದಂಗಿದೆಯಲ್ಲಪ್ಪಾ, ಆ ಎಕ್ಸ್‌ಪೀರಿಯನ್ಸ್‌ಗಳ ಶಾಕ್‌ಗೆ ಏನು ಮಾಡ್ಲಿ ಅನ್ನೋದೇ ಗೊತ್ತಾಗದೇ ಕಕ್ಕಾಬಿಕ್ಕಿಯಾಗಿ ತಲೆ ಮೇಲೆ ಕೈ ಹೊತ್ತು ನಿಂತಿದ್ದೆ..’ ಅನ್ನೋ ಅವರ ಮಾತುಗಳು ಗರ್ಭ ಧರಿಸಿದಾಗ ಅವರಿಗಾದ ಅನುಭವ ಹೇಗಿತ್ತು ಅನ್ನೋದನ್ನ ತೋರಿಸುತ್ತೆ.

ಫ್ರೆಂಚ್‌ ರಾಷ್ಟ್ರೀಯತೆ ಈಕೆಯದು

ಕಲ್ಕಿ ಹುಟ್ಟಿದ್ದು ಪಾಂಡಿಚೇರಿಯಲ್ಲಿ. ಈಕೆಯ ಅಪ್ಪ ಅಮ್ಮ ಇಬ್ಬರೂ ಪ್ರೆಂಚರೇ. ಅವರಿಬ್ಬರೂ ಭಾರತದ ಮಹಾನ್‌ ತತ್ವಜ್ಞಾನಿ ಅರಬಿಂದೋ ನ ಶಿಷ್ಯರು. ಆ ಕಾರಣಕ್ಕೇ ಭಾರತದಕ್ಕೆ ಬಂದು ಇಲ್ಲಿಯವರೇ ಆಗಿ ಹೋದರು. ಸ್ವಲ್ಪ ವರ್ಷಕ್ಕೆ ಅವರು ಡಿವೋರ್ಸ್‌ ಮಾಡಿಕೊಂಡರು. ಕಲ್ಕಿ ಹುಟ್ಟಿದ್ದು ಇಂಡಿಯದಲ್ಲಾದರೂ ಈಕೆಯ ನ್ಯಾಶನಾಲಿಟಿ ಪ್ರೆಂಚ್‌. ಆದರೆ ಹುಟ್ಟಿದ್ದು ಬದುಕುತ್ತಿರೋದು, ಕೆಲಸ ಮಾಡ್ತಿರೋದೆಲ್ಲ ಇಂಡಿಯಾದಲ್ಲೇ. ಚಿಕ್ಕಂದಿನಲ್ಲಿ ಬಹಳ ನಾಚಿಕೆ ಸ್ವಭಾವದಳಾಗಿದ್ದ ಕಲ್ಕಿ ಓದಿದ್ದು ಕ್ರಿಮಿನಲ್‌ ಸೈಕಾಲಜಿ. ಸದ್ಯಕ್ಕೀಗ ಪ್ರೆಗ್ನಿನ್ಸಿ ಎಂಜಾಯ್‌ ಮಾಡ್ತಿರೋದೂ ಇಲ್ಲೇ.

ಮ್ಯಾಗಜಿನ್‌ಗೆ ಕಲ್ಕಿ ಪ್ರಗ್ನೆಂಟ್ ಫೋಟೋಶೂಟ್ ; ಹೀಗೂ ಪೋಸ್ ಕೊಡ್ಬೋದು ನೋಡ್ರಪ್ಪಾ!

ಕಲ್ಕಿ ಬಾಯ್‌ ಪ್ರೆಂಡ್‌ ಯಾರು ಗೊತ್ತಾ?

ಗಟ್‌ ಹರ್ಷ್‌ ಕಲ್ಕಿ ಬಾಯ್‌ಪ್ರೆಂಡ್‌ ಹೆಸರು. ಈತ ಇಸ್ರೇಲಿ ಮೂಲದವನು. ಪೈಂಟಿಂಗ್‌ ಮೂಲಕ ಗುರುತಿಸಿಕೊಂಡಿರುವ ಕಲಾವಿದ. ಕೆಲವು ತಿಂಗಳ ಹಿಂದೆ ತಾನು ಗಟ್‌ ಜೊತೆಗೆ ಸಂಬಂಧ ಹೊಂದಿರುವುದಾಗಿ ರಿವೀಲ್‌ ಮಾಡಿದ್ಲು ಕಲ್ಕಿ. ಇದಾಗಿ ಸ್ವಲ್ಪ ದಿನಕ್ಕೇ ಈಕೆ ತನ್ನ ಮೊದಲ ಮಗುವಿಗೆ ಗರ್ಭಿಣಿಯಾಗಿರೋದೂ ಗೊತ್ತಾಯ್ತು.
ಪ್ರೆಗ್ನಿನ್ಸಿ ಇಷ್ಟು ಕಷ್ಟ ಅಂದುಕೊಂಡಿರಲಿಲ್ಲ..

ಕಡಿಮೆಯಾಗೋ ವೀರ್ಯದ ಗುಣಮಟ್ಟ, ಇಲ್ಲಿದೆ 35ರ ನಂತರ ತಾಯಿಯಾಗೋರಿಗೆ ಟಿಪ್ಸ್

‘ಯಾರಾದ್ರೂ ಪ್ರೆಗ್ನಿನ್ಸಿ ಅಂದರೆ ಹೀಗಿರುತ್ತೆ ಅಂತ ಹೇಳ್ಬಹುದಿತ್ತಲ್ಲಾ, ನಂಗ್ಯಾರೂ ಹೀಗೆಲ್ಲ ಆಗುತ್ತೆ ಅಂತ ಹೇಳಲೇ ಇಲ್ಲಾ...’ ಅನ್ನೋದು ಕಲ್ಕಿ ತಕರಾರು. ಅಲ್ಲಮ್ಮಾ, ನೀನು ಪ್ರೆಗ್ನೆಂಟ್‌ ಅನ್ನೋದನ್ನ ನಮಗೆ ಹೇಳದೇ ಇದ್ರೆ ನಾವು ಸುಮ್‌ ಸುಮ್ನೆ ಯಾಕೆ ಅದನ್ನು ಹೇಳ್ಬೇಕು ಅಂತ ಬಾಲಿವುಡ್‌ ಸ್ನೇಹಿತೆಯರು ಕಾಲೆಳೆಯುತ್ತಾರೆ. ತಾನು ಗರ್ಭಿಣಿ ಅನ್ನೋ ವಿಷಯವನ್ನು ಐದು ತಿಂಗಳಾಗುವವರೆಗೂ ಯಾಕೆ ಮುಚ್ಚಿಟ್ಟೆ ಅನ್ನೋ ಬಗ್ಗೆ ಈಕೆಗೂ ಖಚಿತತೆ ಇಲ್ಲ. ತಾನು ಸೆಲೆಬ್ರಿಟಿ, ಈ ವಿಷ್ಯ ಗೊತ್ತಾದ್ರೆ ಕೆಲಸದ ಜಾಗದಲ್ಲಿ, ಸಾರ್ವಜನಿಕವಾಗಿ ರೆಸ್ಪಾನ್ಸ್‌  ಹೇಗಿರಬಹುದು ಅನ್ನೋ ವಿಚಾರಕ್ಕೇ ಈ ವಿಷಯ ಬಹಿರಂಗಪಡಿಸಲು ಹಿಂದೇಟು ಹಾಕಿದ್ದೆ ಅನಿಸುತ್ತೆ ಅಂತಾರೆ ಕಲ್ಕಿ.

ಎನ್‌ಜಾಯ್‌ ಮಾಡುತ್ತಿದ್ದೇನೆ..

‘ಮೊದಲ ಮೂರು ತಿಂಗಳು ಬಹಳ ಕಷ್ಟ ಆಯ್ತು. ಆದರೆ ಆಮೇಲಿನ ಪ್ರತೀ ಹಂತವನ್ನೂ ನಾವಿಬ್ಬರೂ ಎನ್‌ಜಾಯ್‌ ಮಾಡುತ್ತಿದ್ದೇವೆ. ಇದೊಂಥರಾ ಅಸಂಗತ ಅನುಭವ, ನಂಬಿಕೆ ಬರೋದಕ್ಕೆ ಸ್ವಲ್ಪ ಸಮಯ ಹಿಡೀತು. ಆದರೂ ಹೆಣ್ಣಿನ ಲೈಫ್‌ನಲ್ಲಿ ಮರೆಯಲಾರದ ಅನುಭವ.’ ಹೀಗನ್ನೋ ಕಲ್ಕಿ ತಮ್ಮ ಅಷ್ಟೂ ಅನುಭವಗಳನ್ನೂ ಚಾರ್ಟ್‌ ಮೂಲಕ ವಿವರಿಸಿದ್ದಾರೆ. ಇದರಲ್ಲಿ ಚಿತ್ರಗಳು, ಆ ಸಮಯದಲ್ಲಿ ತನ್ನ ಅನುಭವ ಹೇಗಿತ್ತು ಅನ್ನೋ ವಿವರಗಳೂ ಇವೆ.

ಮಗು ಹುಟ್ಟಿದ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು?

ಆರಂಭಿಕ ದಿನಗಳ ವಾಂತಿ, ಸುಸ್ತು, ಆ ಟೈಮ್‌ನಲ್ಲಿ ತನ್ನ ಒಡಲೊಳಗಿರುವ ಮಗು ಹೀಗಿದ್ದಿರಬಹುದು ಅನ್ನುವ ಕಾಲ್ಪನಿಕ ಚಿತ್ರ. ಹೊಟ್ಟೆಯಲ್ಲಿ, ಸೊಂಟದಲ್ಲಿ ಸ್ಟ್ರೆಚ್‌ ಮಾರ್ಕ್‌, ಹೆಚ್ಚಾದ ಬ್ರಾ ಸೈಜ್‌, ಗ್ಯಾಸ್ಟ್ರಿಕ್‌, ಬರ್ನಿಂಗ್‌ ಸೆನ್ಸೇಶನ್‌, ಉಸಿರಾಟದ ಸಮಸ್ಯೆಗಳು ಬೆನ್ನು ನೋವು, ಕಾಂಸ್ಟಿಪೇಶನ್‌ ಹೀಗೆ ಎಲ್ಲ ವಿವರಗಳೂ ಸಚಿತ್ರವಾಗಿ ಮೂಡಿಬಂದಿವೆ.

‘ಅವನಿನ್ನೂ ನನ್ನ ತೊಡೆ ಮೇಲೆ ಕೂರಿಸ್ಕೊಳ್ತಾನೆ..’ ಅಂತ ಇನ್ನೊಂದು ರೊಮ್ಯಾಂಟಿಕ್‌ ಫೋಟೋ ಶೇರ್‌ ಮಾಡಿದ್ದಾರೆ ಕಲ್ಕಿ. ಅವರಿಬ್ಬರ ಸಂಬಂಧದ ಗಾಢತೆಗೆ ಕನ್ನಡಿ ಹಿಡಿದ ಹಾಗಿದೆ ಈ ಫೋಟೋ.