ಸಿಂಗಲ್ ಅನ್ನೋ ಚಿಂತೆ ಬಿಡಿ..ಚಿಲ್ ಮಾಡಿ, ಬಾಡಿಗೆಗೂ ಸಿಗ್ತಾಳೆ ಗರ್ಲ್‌ಫ್ರೆಂಡ್!
ದುಡ್ಡಿದ್ರೆ ದುನಿಯಾ..ಈ ಪ್ರಪಂಚದಲ್ಲಿ ದುಡ್ಡಿದ್ರೆ ಏನ್ ಬೇಕಾದ್ರೂ ಕೊಳ್ಬೋದು ಅಂತಾರೆ ಹಲವರು. ಆದ್ರೆ ಎಷ್ಟೇ ದುಡ್ಡಿದ್ರೂ ಪ್ರೀತಿನಾ ಮಾತ್ರ ಯಾರಿಂದನೂ ಕೊಂಡ್ಕೊಳ್ಳೋಕಾಗಲ್ಲ ಅಂತಾರೆ ಇನ್ನು ಕೆಲವ್ರು. ಆದ್ರೆ ಜಪಾನಿನಲ್ಲಿ ಈಗ ದುಡ್ಡಿದ್ರೆ ಪ್ರೀತಿಯನ್ನು ಸಹ ಪರ್ಚೇಸ್ ಮಾಡ್ಬೋದು ಅದ್ಹೇಗೆ?
ಮದ್ವೆಯಾಗೋಕೆ ಇಂಟ್ರೆಸ್ಟ್ ಇಲ್ಲ. ಯಾರೂ ಬೀಳ್ತಿಲ್ಲ ಹೀಗೆ ಸಿಂಗಲ್ ಆಗಿದ್ದಾನೆ ಗೋಳು ಹೇಳ್ಕೊಳ್ಳೋ ಯುವಜನತೆಯ ಸಂಖ್ಯೆ ಹೆಚ್ಚಾಗಿದೆ. ಸುತ್ತಮತ್ತಲು ಅದೆಷ್ಟೇ ಜನರಿದ್ರೂ ಒಂಟಿತನ ಕಾಡೋ ಸಮಸ್ಯೆ. ಆದ್ರೆ ಇನ್ಮುಂದೆ ಅಂಥಾ ಸಮಸ್ಯೆಯೆಲ್ಲಾ ಇರಲ್ಲ ಬಿಡಿ. ಯಾಕಂದ್ರೆ ಜಪಾನಿನಲ್ಲಿ ನೀವು ಇನ್ಮುಂದೆ ಹಣ ಪಾವತಿಸಿ ಬಾಡಿಗೆ ಗೆಳತಿಯನ್ನು ಪಡೆಯಬಹುದಾಗಿದೆ. ಜಪಾನಿನಲ್ಲಿ ಹೆಚ್ಚುತ್ತಿರುವ ಅವಿವಾಹಿತರ ಸಂಖ್ಯೆಯಿಂದಾಗಿ ಈ ಪರಿಕಲ್ಪನೆ ಕಾನೂನುಬದ್ಧವಾಗಿ ಜಾರಿಗೆ ಬಂದಿದೆ. ನಿರ್ಧಿಷ್ಟ ಹಣವನ್ನು ಪಾವತಿಸಿ ಗರ್ಲ್‌ಫ್ರೆಂಡ್‌ನ್ನು ರೆಂಟ್ ಪಡೆದು ಎಲ್ಲಿ ಬೇಕಂದ್ರಲ್ಲಿ ಸುತ್ತಾಡ್ಬೋದು.
ಹೌದು, ನಂಬೋಕೆ ಕಷ್ಟವಾದರೂ ಇದು ನಿಜ. ಈ ದೇಶದಲ್ಲಿ ನೀವು ಕಾನೂನುಬದ್ಧವಾಗಿ (Legally) ಬಾಡಿಗೆ ಗೆಳತಿಯನ್ನು (Girlfriend) ಪಡೆಯಬಹುದು. ಯಾರೂ ಇದನ್ನು ನೋಡುವುದಿಲ್ಲ. ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ಪಾಲುದಾರರನ್ನು ಬಾಡಿಗೆಗೆ ಪಡೆಯಬಹುದಾದ ಹಲವು ವೆಬ್‌ಸೈಟ್‌ಗಳು ಜಪಾನಿನ ಸರ್ಕಾರದಿಂದ (Japan government) ಅಂಗೀಕರಿಸಲ್ಪಟ್ಟಿವೆ. ಈ ವೆಬ್ಸೈಟ್ಗಳ ಮೂಲಕ ಕುಟುಂಬ ಸದಸ್ಯರನ್ನೂ ನೀವು ಬಾಡಿಗೆಗೆ ನೇಮಿಸಿಕೊಳ್ಳಬಹುದಾಗಿದೆ. ಅವಿವಾಹಿತರಾಗಿರುವ ಅನೇಕ ಜಪಾನಿಯರು ಒಂಟಿತನವನ್ನು (Loneliness) ಅನುಭವಿಸುತ್ತಿರುವ ಕಾರಣ ಈ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ.
ಸರ್‌ಪ್ರೈಸ್ ಕೊಡಲು ಬಂದ ಯುವಕ, ರೂಮಲ್ಲಿ ಇನ್ನೊಬ್ಬನ ಜೊತೆ ಚಕ್ಕಂದವಾಡ್ತಿದ್ಲು ಲವರ್!
ಬಾಡಿಗೆ ಹಣ ಪಾವತಿಸಿ, ಗರ್ಲ್‌ಫ್ರೆಂಡ್ ಜೊತೆ ಸುತ್ತಾಡಿ
ಆದರೆ ಬಾಡಿಗೆ ಗೆಳತಿಯ ಸೇವೆಯು ನೀವು ಯೋಚಿಸುವಷ್ಟು ಅಗ್ಗವಾಗಿಲ್ಲ. ಬದಲಿಗೆ ಸ್ಪಲ್ಪ ದುಬಾರಿ (Costly)ಯಾಗಿದೆ. ಜಪಾನ್ ಟುಡೆಯಲ್ಲಿನ ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಗರ್ಲ್‌ಫ್ರೆಂಡ್‌ನ್ನು ಎರಡು ಗಂಟೆಗಳಿಗಾಗಿ ಬಾಡಿಗೆ (Rental) ಪಡೆಯಲು ಮೊದಲ ಸಲ ಕನಿಷ್ಟ ರೂ. 3,000ಯನ್ನು ಪಾವತಿಸಬೇಕು. ನಂತರ ಭೇಟಿಗಾಗಿ ಹೆಚ್ಚುವರಿಯಾಗಿ ರೂ. 1,200 ಪಾವತಿಸಬೇಕಾಗುತ್ತದೆ
ಆದರೆ ಬಾಡಿಗೆ ಸೇವೆಯನ್ನು ಪಡೆಯುವವರು ಕಂಪೆನಿಯು ನಿಗದಿ ಪಡಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಗ್ರಾಹಕರು ನೇರವಾಗಿ ಬಾಡಿಗೆ ಗೆಳತಿಯನ್ನು ಸಂಪರ್ಕಿಸುವ ಹಾಗಿಲ್ಲ. ಹಾಗೆಯೇ ಆಕೆಗೆ ಉಡುಗೊರೆಗಳನ್ನು ನೀಡುವ ಹಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಮತ್ತು ಆಕೆಯ ವೃತ್ತಿಪರತೆಯನ್ನು ಗೌರವಿಸಬೇಕು ಎಂದು ಸೂಚಿಸಲಾಗಿದೆ.
5 ವರ್ಷದ ಪ್ರೀತಿ, ಸರ್ಪ್ರೈಸ್ ಮದುವೆ ಆಯೋಜಿಸಿದ ಬಾಯ್‌ಫ್ರೆಂಡ್‌ಗೆ ಕೈಕೊಟ್ಟ ಗೆಳತಿ!
ಏಷಿಯನ್ ಬಾಸ್ (Asian Boss) ಎಂಬ ಯೂಟ್ಯೂಬ್ ಚಾನೆಲ್, ಶಿಹೋಮಿ ಎಂಬ ಬಾಡಿಗೆ ಗೆಳತಿಯನ್ನು ಸಂದರ್ಶಿಸಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನೀಡಿದೆ. ‘ಈತನಕ ತಮ್ಮ ಬದುಕಿನಲ್ಲಿ ಗೆಳತಿಯರನ್ನೇ ಪಡೆಯದ, ಹುಡುಗಿಯರಿಂದ ದೂರವಿರುವ ಮತ್ತು ನಿಜವಾದ ಸಂಗಾತಿಯನ್ನು ಹೊಂದುವಲ್ಲಿ ವಿಫಲರಾದವರು ಬಾಡಿಗೆ ಗೆಳತಿಯನ್ನು ನಿರೀಕ್ಷಿಸುತ್ತಾರೆ. ಆದರೆ ಕೆಲವೊಮ್ಮೆ ಈ ಮೂಲಕ ಮೋಸ ಮಾಡುವವರೂ ಇರುತ್ತಾರೆ’ ಎಂದಿದ್ದಾಳೆ ಆಕೆ.
ಏಷ್ಯನ್ ಸಂಸ್ಕೃತಿಯ ವಿವಿಧ ಅಂಶಗಳನ್ನು ಅನ್ವೇಷಿಸಲು ಹೆಸರುವಾಸಿಯಾದ ಯೂಟ್ಯೂಬ್ ಚಾನೆಲ್, ಬಾಡಿಗೆ ಗೆಳತಿಯ ವಿದ್ಯಮಾನವನ್ನು ಪರಿಶೀಲಿಸುವ ವೀಡಿಯೊವನ್ನು ರಚಿಸಿದೆ. ಟೋಕಿಯೊದಲ್ಲಿ ಸುತ್ತಾಡುವಾಗ ಇಲ್ಲಿನ ಸುಂದರ ಪ್ರದೇಶ, ಊಟದ ಜೊತೆಗೆ ಬಾಡಿಗೆ ಗರ್ಲ್‌ಫ್ರೆಂಡ್ ಜೊತೆ ಸುತ್ತಾಡಿ ಎಂದು ಹೇಳಿದೆ. ಇತ್ತೀಚೆಗೆ, ಭಾರತೀಯ ಯೂಟ್ಯೂಬರ್, ವಿಷ್ಣು ಅವರು ದೇಶದಲ್ಲಿದ್ದಾಗ ಈ ಸೇವೆಯನ್ನು ಪ್ರಯತ್ನಿಸಿದರು.
ಕಾಲ ಬದಲಾದಂತೆ ಸಂಬಂಧಗಳನ್ನು ನೋಡುವ ರೀತಿಯೂ ಬದಲಾಗುತ್ತಿದೆ. ಮದುವೆ ಎಂಬ ಸುಂದರ ಸಂಬಂಧದಿಂದ ಹೊರಟು ಲಿವ್ ಇನ್ ರಿಲೇಶನ್‌ಶಿಪ್, ಸೇಮ್ ಸೆಕ್ಸ್ ಮ್ಯಾರೇಜ್ ಎಲ್ಲವನ್ನೂ ದಾಟಿ ಪರಿಸ್ಥಿತಿ ಈಗ ಬಾಡಿಗೆಗೆ ಗರ್ಲ್‌ಫ್ರೆಂಡ್ ಸಿಗುವಷ್ಟರ ಮಟ್ಟಿಗೆ ತಲುಪಿದೆ.