ಬಣ್ಣ ಕಳೆದು ಕೊಂಡ ದಾಂಪತ್ಯಕ್ಕೆ ರೀ ಪೇಂಟಿಂಗ್ ಮಾಡೋದು ಹೇಗೆ? ಅಂಥವರಿಗೆ ಟಿಪ್ಸ್ ಇಲ್ಲಿವೆ

ಮದುವೆಯಾದ ಮೊದಲ ವರ್ಷವಿದ್ದ ಭಾವನೆ ವರ್ಷ ಕಳೆದಂತೆ ಕಡಿಮೆಯಾಗಲು ಶುರುವಾಗುತ್ತದೆ. ಕೆಲ ವರ್ಷದ ನಂತ್ರ ಪ್ರೀತಿ ಮಾಸಿ ಬರಿ ಜಡ ದಾಂಪತ್ಯ ಮುಂದುವರೆದಿರುತ್ತದೆ. ಬಣ್ಣ ಕಳೆದುಕೊಂಡ ದಾಂಪತ್ಯಕ್ಕೆ ಮರು ಪೇಟಿಂಗ್ ಅತ್ಯಗತ್ಯ. 
 

Here Are A Few Ways Re Romanticising  Relationship roo

ಮದುವೆಯಾದ ಯಾರನ್ನೇ ಕೇಳಿ, ಅವಿವಾಹಿತರು ಸುಖಿಗಳು ಎನ್ನುತ್ತಾರೆ. ಮದುವೆ ಒಂದು ಬಂಧನವಾಗಿದೆ ಎಂದು ದೂರುತ್ತಾರೆ. ಮದುವೆಯಾಗಿ ನೋಡಿ, ಜೀವನ ಸುಖಮಯ ಎನ್ನುವವರ ಸಂಖ್ಯೆ ಬಹಳ ವಿರಳ. ಮದುವೆಯಾದ ಬಹುತೇಕ ಜನರು ತಮ್ಮ ದಾಂಪತ್ಯದಲ್ಲಿ ಅತೃಪ್ತಿ ಹೊಂದಿರುತ್ತಾರೆ. ಒಂದಲ್ಲ ಒಂದು ಸಮಸ್ಯೆ ಅವರನ್ನು ಆವರಿಸಿರುತ್ತದೆ. ಸಂಗಾತಿಯನ್ನು ಅರ್ಥ ಮಾಡಿಕೊಂಡು ಅವರ ಜೊತೆ ಸಂಪರ್ಕ ಸಾಧಿಸಲು ನಾವು ವಿಫಲವಾಗುವುದೇ ಇದಕ್ಕೆ ಕಾರಣವಾಗುತ್ತದೆ. ನಾವು ಬೆಳೆದ ಪರಿಸರ, ನಮ್ಮ ಸಂಸ್ಕೃತಿ, ನಮ್ಮ ಮನೆಯ ವಾತಾವರಣದಂತೆ ನಾವು ದಾಂಪತ್ಯವನ್ನು ಮುನ್ನಡೆಸಲು ಪ್ರಯತ್ನಿಸುತ್ತೇವೆ. ಆದ್ರೆ ಇದ್ರಲ್ಲಿ ವಿಫಲವಾಗ್ತೇವೆ. ಅನ್ಯೂನ್ಯತೆ ಬಗ್ಗೆ ನಮ್ಮಲ್ಲಿರುವ ಅಜ್ಞಾನ ಅತೃಪ್ತಿಕರ ದಾಂಪತ್ಯಕ್ಕೆ ಮೂಲ ಕಾರಣ. ಮದುವೆ ನಂತ್ರ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ಇಬ್ಬರು ಸೇರಿ ನಿರ್ಧರಿಸಬೇಕಾಗುತ್ತದೆ. ಸಂಗಾತಿ ಜೊತೆ ನೀವು ಹೇಗಿರಬೇಕು ಎಂಬುದನ್ನು ತಿಳಿದು ಅದರಂತೆ ನಡೆದುಕೊಂಡಲ್ಲಿ ನಿಮ್ಮಬ್ಬರ ಮಧ್ಯೆ ಇದ್ದ ಅಂತರ, ಅಸಂತೋಷ ಮಾಯವಾಗುತ್ತದೆ. ದಾಂಪತ್ಯ ಜೀವನದಲ್ಲಿ ಹಸಿರು ಸದಾ ನೆಲೆಗೊಂಡಿರುತ್ತದೆ.

ದಾಂಪತ್ಯ (Marriage) ದ ಅತೃಪ್ತಿಗೆ ಇವು ಕಾರಣ : 

ದಾಂಪತ್ಯಕ್ಕೆ ಅಡ್ಡಿಯಾಗುತ್ತೆ ಬಾಲ್ಯ (Childhood ) ದ ನೆನಪು : ಬಾಲ್ಯದ ನೆನಪುಗಳು ದೊಡ್ಡವರಾಗ್ತಿದ್ದಂತೆ ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೇ ಬಾಲ್ಯದ ಒಳ್ಳೆಯ ಹಾಗೂ ಕೆಟ್ಟ ಘಟನೆಗಳು ದಾಂಪತ್ಯದ ಮೇಲಾಗುತ್ತದೆ. ಬಾಲ್ಯದಲ್ಲಿ ಸುರಕ್ಷಿತ ಹಾಗೂ ಶುದ್ಧ ಪ್ರೀತಿ (love) ಸಿಗದೇ ಹೋದಲ್ಲಿ ಸಂಗಾತಿ ನಿಮ್ಮನ್ನು ನಂಬದೆ ಹೋಗ್ಬಹುದು. ಸಂಗಾತಿ ಮೇಲೆ ಭರವಸೆಯಿಡಲು ಹೆದರಬಹುದು. ಯಾವುದೋ ಕೆಟ್ಟ ಘಟನೆ ನಡೆದಿದ್ದಲ್ಲಿ ಅಥವಾ ದುರ್ಘಟನೆಯನ್ನು ಅವರು ನೋಡಿದ್ದಲ್ಲಿ ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಲು ಹೆದರುತ್ತಾರೆ. ಬೇಗ ಇಂಟಿಮೆಟ್ ಆಗೋದಿಲ್ಲ. ಪ್ರತಿಯೊಬ್ಬರಿಗೂ ಅವರ ಸಂಗಾತಿಯ ಬಾಲ್ಯದ ಬಗ್ಗೆ ತಿಳಿದಿರಬೇಕು. ಅವರ ಗಾಯಕ್ಕೆ ಔಷಧಿ ನೀಡುವವರು ನೀವಾಗಬೇಕು. ಬಾಲ್ಯದಲ್ಲಿ ಸಮಸ್ಯೆ ಏನಿತ್ತು ಎಂಬುದನ್ನು ನೀವು ತಿಳಿದಿದ್ರೆ ಆಗ ಅದನ್ನು ಗುಣಪಡಿಸುವುದು ಸುಲಭ.

Relationship Tips: ದಾಂಪತ್ಯ ಗಟ್ಟಿಯಾಗ್ಬೇಕೆಂದ್ರೆ ಬೆಳಗ್ಗೆ ಹೀಗ್ ಮಾಡೋದ ರೂಢಿಸಿಕೊಳ್ಳಿ!

ಸಂಬಂಧದಲ್ಲಿ ಸ್ಪಾರ್ಕ್ : ದಾಂಪತ್ಯದಲ್ಲಿ ಅಸಂತೋಷ ಕಾಣಿಸಿಕೊಳ್ತಿದೆ ಅಂದ್ರೆ ಈಗ ಹೊಸ ಬೆಳಕು ಮೂಡಿಸುವ ಸಮಯ ಎಂದು ಅರ್ಥ ಮಾಡಿಕೊಳ್ಳಿ. ಅತೃಪ್ತಿಯನ್ನು ಮುಂದುವರೆಸಿಕೊಂಡು ಹೋಗುವ ಬದಲು ಪರಿಸ್ಥಿತಿ ಬದಲಿಸಲು ಪ್ರಯತ್ನಿಸಿ. ಕಾಳಜಿಯುಳ್ಳ ನಡವಳಿಕೆಯನ್ನು ಅವಳವಡಿಸಿಕೊಳ್ಳಿ. ಸಂಗಾತಿ ಮೆಚ್ಚುಗೆ ಪಡೆಯಲು ಕೈಲಾದ ಪ್ರಯತ್ನ ಮಾಡಿ. ಪರಸ್ಪರ ಪ್ರೀತಿ ಹಂಚಿಕೊಳ್ಳುವ ಮೂಲಕ ಹೊಸ ಪ್ರಣಯಕ್ಕೆ ನಾಂದಿ ಹಾಕಿ. 

ದೂರುಗಳನ್ನು ಮನವಿಯಾಗಿ ಬದಲಿಸಿ : ದಾಂಪತ್ಯದ ಅಸಂತೋಷಕ್ಕೆ ಈ ದೂರುಗಳು ಕೂಡ ಕಾರಣವಾಗಿರುತ್ತದೆ. ಪರಸ್ಪರರ ಮೇಲೆ ಸಾಕಷ್ಟು ದೂರುಗಳಿರುತ್ತವೆ. ಇದು ಇಬ್ಬರನ್ನು ಹತ್ತಿರ ತರುವ ಬದಲು ದೂರವಿಡುತ್ತದೆ. ನೀವು ದಾಂಪತ್ಯದಲ್ಲಿ ಸುಖ, ನೆಮ್ಮದಿ ಬಯುತ್ತೀರಿ, ಆರಂಭದಲ್ಲಿದ್ದ ಉತ್ಸಾಹವೇ ಜೀವನ ಪರ್ಯಂತ ಮುಂದುವರೆಯಬೇಕೆಂದು ಬಯಸ್ತೀರಿ ಎಂದಾದ್ರೆ ದೂರುಗಳನ್ನು ದೂರಾಗಿ ನೋಡ್ಬೇಡಿ. ಅವುಗಳನ್ನು ವಿನಂತಿ ಎನ್ನುವಂತೆ ಸ್ವೀಕರಿಸಿ. 

Parenting Tips : ಎಷ್ಟೇ ಕಿರುಚಿದ್ರೂ ಮಕ್ಕಳು ಮಾತು ಕೇಳ್ತಿಲ್ವಾ? ಅದಕ್ಕಿಲ್ಲಿದೆ ಸೂಪರ್, ಸಿಂಪಲ್ ಟಿಪ್ಸ್

ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ : ಬೇರೆಯವರ ಮೇಲೆ ದೂರು ಹೇಳುವ ಮೊದಲು ನಿಮ್ಮನ್ನು ನೀವು ಬದಲಿಸಿಕೊಳ್ಳಿ. ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ತನ್ನಿ. ನಿಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಕೋಪವನ್ನು ನಿಯಂತ್ರಣಕ್ಕೆ ತನ್ನಿ. ದಾಂಪತ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ, ಪ್ರೀತಿ ಮರಳಿಪಡೆಯುವ ವಿಧಾನಗಳು ಯಾವುವು ಎನ್ನುವುದರ ಬಗ್ಗೆ ಸಂಶೋಧನೆ ನಡೆಸಿ, ಅದನ್ನು ಅಳವಡಿಸಿಕೊಳ್ಳಿ. ಆರೋಗ್ಯಕರ ದಾಂಪತ್ಯ ಮರಳಿ ಪಡೆಯಬೇಕು ಎಂದಾದ್ರೆ ನೀವು ಬದಲಾಗಬೇಕು. ಇದು ಸಂಬಂಧದಲ್ಲಿ ಸಂತೋಷ, ಭದ್ರತೆ ಮತ್ತು ತೃಪ್ತಿಯನ್ನು ಹಿಂತಿರುಗಿಸುತ್ತದೆ. 
 

Latest Videos
Follow Us:
Download App:
  • android
  • ios