ಒಂದು ರೂಪಾಯಿಗೆ ಇಡ್ಲಿ ವಿತರಿಸುತ್ತಿದ್ದ ಇಡ್ಲಿ ಅಮ್ಮನಿಗೆ ಹೊಸ ಮನೆ ಹಸ್ತಾಂತರಿಸಿದ ಆನಂದ್ ಮಹೀಂದ್ರಾ
ತಮಿಳುನಾಡಿನ ಪ್ರಸಿದ್ಧ ಎಂ. ಕಮಲಾತಲ್ ಅಕಾ ಇಡ್ಲಿ ಅಮ್ಮ (Idli Amma), ವಲಸೆ ಕಾರ್ಮಿಕರು ಮತ್ತು ಕಾರ್ಮಿಕರಿಗೆ ಕೇವಲ 1 ರೂ.ಗೆ ಇಡ್ಲಿಗಳನ್ನು ಬೇಯಿಸಿ ಬಡಿಸುತ್ತಾರೆ. ಇಡ್ಲಿ ಅಮ್ಮನ ಹೃದಯವನ್ನು ಬೆಚ್ಚಗಾಗಿಸುವ ಕಥೆಯು 2021ರಲ್ಲಿ ವೈರಲ್ (Viral) ಆಗಿತ್ತು, ಆಗ ಸಹಾಯ ಮಾಡುವ ಭರವಸೆ ನೀಡಿದ್ದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಈ ಮದರ್ಸ್ ಡೇಗೆ (Mothers day) ಆ ಭರವಸೆಯನ್ನು ಈಡೇರಿಸಿದ್ದಾರೆ.
ಹಸಿವು ಮತ್ತು ಆಹಾರದ ಅಭದ್ರತೆಯು ಪ್ರಪಂಚವು ಒಟ್ಟಾಗಿ ಹೋರಾಡುತ್ತಿರುವ ಅತಿದೊಡ್ಡ ಸಮಸ್ಯೆಗಳಾಗಿವೆ. ಪ್ರತಿದಿನ ಲಕ್ಷಾಂತರ ಜನರು ಒಂದು ಹೊತ್ತಿನ ಊಟವನ್ನೂ ಮಾಡದೆ ಹಸಿವಿನಿಂದ ಬಳಲುತ್ತಿದ್ದಾರೆ. ಕೆಲವು ನಾಗರಿಕರು ಅಗತ್ಯವಿರುವವರಿಗೆ ತಮ್ಮ ಕೈಲಾದದ್ದನ್ನು ಮಾಡಲು ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಲು ಸ್ವಯಂಪ್ರೇರಿತರಾಗಿ ಮುಂದಾಗುತ್ತಾರೆ. ಇದಕ್ಕೆ ಒಂದು ಉದಾಹರಣೆಯೆಂದರೆ ತಮಿಳುನಾಡಿನ ಪ್ರಸಿದ್ಧ ಎಂ. ಕಮಲಾತಲ್ ಅಕಾ ಇಡ್ಲಿ ಅಮ್ಮ. ಇವರು ವಲಸೆ ಕಾರ್ಮಿಕರು ಮತ್ತು ಕಾರ್ಮಿಕರಿಗೆ ಇಡ್ಲಿಗಳನ್ನು ಬೇಯಿಸಿ ಬಡಿಸುತ್ತಾರೆ. ಜನರಿಗೆ ಆಹಾರ ಲಭ್ಯವಾಗುವಂತೆ ಮತ್ತು ಕೈಗೆಟಕುವಂತೆ ಮಾಡಲು ಇಡ್ಲಿಗೆ ಕೇವಲ 1 ರೂ. ನಿಗದಿಪಡಿಸಿದ್ದಾರೆ. ಇಡ್ಲಿ ಅಮ್ಮನ ನಿಸ್ವಾರ್ಥತೆಯ ಕಥೆಯು2021ರಲ್ಲಿ ವೈರಲ್ ಆಗಿತ್ತು. ಹಲವಾರು ಪ್ರಸಿದ್ಧ ವ್ಯಕ್ತಿಗಳು ಅವರ ನಿಸ್ವಾರ್ಥ ಸಾಹಸಕ್ಕಾಗಿ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡಿದ್ದರು.
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಸಹ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಮನೆಯನ್ನು (Idli Amma) ಉಡುಗೊರೆಯಾಗಿ ನೀಡುವ ಭರವಸೆಯನ್ನು ನೀಡಿದ್ದರು. 2021ರ ಏಪ್ರಿಲ್‌ನಲ್ಲಿ ಟ್ವೀಟ್ (Tweet) ವೊಂದನ್ನು ಹಂಚಿಕೊಂಡಿದ್ದ ಮಹೀಂದ್ರಾ, ಜನರಿಗೆ ಅವರ ಪ್ರಸಿದ್ಧ ಮನೆ-ಬೇಯಿಸಿದ ಆಹಾರವನ್ನು ಬಡಿಸಲು ಇಡ್ಲಿ ಅಮ್ಮಾ ಶೀಘ್ರದಲ್ಲೇ ತಮ್ಮ ಸ್ವಂತ ಮನೆ (Own House) ಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಈಗ ಆ ಭರವಸೆಯನ್ನು ಮಹೀಂದ್ರ ಈಡೇರಿಸಿದ್ದಾರೆ. ಈ ಮೂಲಕ ಮತ್ತೆ ಜನರ ಮೆಚ್ಚುಗೆಗೆ ಮಹೀಂದ್ರಾ ಪಾತ್ರರಾಗಿದ್ದಾರೆ.
ನಿಮ್ಮ ಮನಸ್ಸು ಸದಾ ಶಾಂತವಾಗಿರೋಕೆ ಈ ಆಹಾರಗಳನ್ನು ಸೇವಿಸಿ!
ತಾಯಂದಿರ ದಿನದಂದು, ಇಡ್ಲಿ ಅಮ್ಮ ತನ್ನ ಹೊಸ ಮನೆಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಉಡುಗೊರೆಯಾಗಿ ನೀಡಲು ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಅಪಾರ ಕೃತಜ್ಞತೆಗಳು. ಅವಳು ತಾಯಿಯ ಸದ್ಗುಣಗಳ ಸಾಕಾರ: ಪೋಷಣೆ, ಕಾಳಜಿ ಮತ್ತು ನಿಸ್ವಾರ್ಥಳು. ಅವಳನ್ನು ಮತ್ತು ಅವಳ ಕೆಲಸವನ್ನು ಬೆಂಬಲಿಸಲು ಸಂತೋಷವೆನಿಸುತ್ತಿದೆ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಕಮಲಾತಾಲ್ ಎಂದು ಕರೆಯಲ್ಪಡುವ ಇಡ್ಲಿ ಅಮ್ಮ ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಸುಮಾರು 37 ವರ್ಷಗಳಿಂದ ಕೇವಲ 1 ರೂಪಾಯಿಗೆ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಕೆಯ ಕಥೆಯು 2019 ರಲ್ಲಿ ವೈರಲ್ ಆಗಿತ್ತು. ಈ ವೇಳೆ ಆನಂದ್ ಮಹೀಂದ್ರಾ ತಮ್ಮ ಬೆಂಬಲ ಸೂಚಿಸಿ ಮತ್ತು ವ್ಯವಹಾರದಲ್ಲಿ ಹೂಡಿಕೆ ಮಾಡಲು ಸಂತೋಷಪಡುತ್ತೇನೆ ಎಂದು ಹೇಳಿದ್ದರು.
Travel Tips : ಪ್ರವಾಸ ಥ್ರಿಲ್ ಆಗಿರ್ಬೇಕೆಂದ್ರೆ ಈ ಆಹಾರದಿಂದ ದೂರವಿರಿ
2021ರ ಏಪ್ರಿಲ್‌ನಲ್ಲಿ ಟ್ವೀಟ್‌ವೊಂದನ್ನು ಹಂಚಿಕೊಂಡಿದ್ದ ಮಹೀಂದ್ರಾ, ಜನರಿಗೆ ಅವರ ಪ್ರಸಿದ್ಧ ಮನೆ-ಬೇಯಿಸಿದ ಆಹಾರವನ್ನು ಬಡಿಸಲು ಇಡ್ಲಿ ಅಮ್ಮಾ ಶೀಘ್ರದಲ್ಲೇ ತಮ್ಮ ಸ್ವಂತ ಮನೆಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದರು. ಈಗ ಆ ಭರವಸೆಯನ್ನು ಮಹೀಂದ್ರ ಈಡೇರಿಸಿದ್ದಾರೆ.
ಟ್ವಿಟ್ಟರ್ ಬಳಕೆದಾರರು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ವಿಶೇಷ ಅಡುಗೆಮನೆಯನ್ನು ನಿರ್ಮಿಸುವ ಮೂಲಕ ಇಡ್ಲಿ ಅಮ್ಮನಿಗೆ ಸಹಾಯ ಮಾಡಿದ ಬಗ್ಗೆ ಅಪಾರ ಪ್ರಶಂಸೆ ಮತ್ತು ಗೌರವವನ್ನು ವ್ಯಕ್ತಪಡಿಸಿದರು. ಇದು ಅದ್ಭುತವಾದ ದಯೆ ಮತ್ತು ದಾನದ ಕಾರ್ಯ. ಭಾರತದಲ್ಲಿ ನಿಮ್ಮಂತಹ ಹೆಚ್ಚಿನ ಜನರು ಮಾದರಿಯಾಗಬಲ್ಲರು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಫೆಂಟಾಸ್ಟಿಕ್ ಸರ್. ಹ್ಯಾಟ್ಸ್ ಆಫ್ ಟು ಯು ಎಂದು ಮತ್ತೊಬ್ಬರು ಹೇಳಿದ್ದಾರೆ.