OMG..! ತಾಯಿ ಜೊತೆ ಅಕ್ರಮ ಸಂಬಂಧ ಬೆಳೆಸಿದ ಗಂಡ, ಮರ್ಮಾಂಗ ಕತ್ತರಿಸಿದ ಮಗಳು

Extramarital Affair News: ಗಂಟೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾಯಿ ಜೊತೆ ಸಂಬಂಧ ಬೆಳೆಸಿದ್ದಾನೆಂಬ ಕಾರಣಕ್ಕೆ ಮಗಳು ಕಠಿಣ ಹೆಜ್ಜೆಯಿಟ್ಟಿದ್ದಾಳೆ. ಈಗ ವ್ಯಕ್ತಿ ಆಸ್ಪತ್ರೆಯಲ್ಲಿ ಒದ್ದಾಡ್ತಿದ್ದರೆ, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
 

Guntur Girl Chops Off Mans Genitals For Having illecit Affair With Her Mother

ವಿವಾಹೇತರ ಸಂಬಂಧ (Extramarital Affair) ಗಳು ಯಾವಾಗಲೂ ಆರೋಗ್ಯಕರ ಸಂಬಂಧ (Relationship) ವಲ್ಲ. ಅಕ್ರಮ ಸಂಬಂಧ ದೀರ್ಘಕಾಲ ಸುಖ (Happy) , ಶಾಂತಿ ನೀಡಲು ಸಾಧ್ಯವಿಲ್ಲ. ಹಾಗೆ ವಿವಾಹೇತರ ಸಂಬಂಧಗಳ ಅಂತ್ಯ (End) ಬಹುತೇಕ ಬಾರಿ ದುರಂತ (Tragedy) ದಿಂದ ಕೂಡಿರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ವಿವಾಹೇತರ ಸಂಬಂಧ ಬೆಳೆಸಿ ಬಾಳು ಹಾಳು ಮಾಡಿಕೊಂಡ ಅನೇಕರು ನಮ್ಮಲ್ಲಿದ್ದಾರೆ. ಮತ್ತೆ ಕೆಲವರು ಜೈಲಿನಲ್ಲಿದ್ರೆ ಇನ್ನು ಕೆಲವರು ಇಹಲೋಕ ತ್ಯಜಿಸಿದ್ದಾರೆ. ಈ ಸಂಬಂಧ ಇಬ್ಬರ ಮಧ್ಯೆ ಮಾತ್ರ ಬದಲಾವಣೆ ತರುವುದಿಲ್ಲ, ಇಡೀ ಸಂಸಾರದ ಮೇಲೆ ಪ್ರಭಾವ ಬೀರುತ್ತದೆ. ಬಹುತೇಕ ಬಾರಿ ತಂದೆ – ತಾಯಿಯ ವಿವಾಹೇತರ ಸಂಬಂಧವನ್ನು ಮಕ್ಕಳು (Children ) ಒಪ್ಪಿಕೊಳ್ಳುವುದಿಲ್ಲ. ಅದು ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಪಾಲಕರ ಮೇಲೆ ದ್ವೇಷ ಹುಟ್ಟಿಸಬಹುದು. ಮಕ್ಕಳು, ಪಾಲಕರನ್ನು ವಾಪಸ್ ಪಡೆಯಲು ಯಾವುದೇ ಕೆಲಸಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇದಕ್ಕೆ ಗುಂಟೂರಿನಲ್ಲಿ ನಡೆದ ಘಟನೆ ನಿದರ್ಶನ. ತಾಯಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡ ಮಗಳು, ಕ್ರೂರ ಕೃತ್ಯಕ್ಕೆ ಇಳಿದಿದ್ದಾಳೆ. ಆಕೆ ಮಾಡಿದ್ದೇನು ಎಂಬುದನ್ನು ನಾವಿಂದು ಹೇಳ್ತೇವೆ.

ಮರ್ಮಾಂಗ ಕಟ್ : ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯ ಮರ್ಮಾಂಗವನ್ನು ಮಗಳು ಕತ್ತರಿಸಿದ್ದಾಳೆ. ರಾಮಚಂದ್ರ ಎಂಬಾತನನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಡ, ಹೆಂಡ್ತಿಗೆ ಇಂಥಾ ವಿಷಯಗಳನ್ನು ತಪ್ಪಿಯೂ ಹೇಳಬಾರದು

ಯಾರ ಜೊತೆ ತಾಯಿಯ ಅಕ್ರಮ ಸಂಬಂಧ : ಈ ಘಟನೆ ನಡೆದಿರೋದು ಗುಂಟೂರಿ (Guntur) ನ ತೆನಾಲಿ(Thenali) ಯಲ್ಲಿ. ಎಸ್ ರಾಮಚಂದ್ರ ರೆಡ್ಡಿ ಮೂಲತಃ ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ಮಂಡಲದ ತುಮ್ಮಲಪಾಲೆಮ್ ಗ್ರಾಮದ ನಿವಾಸಿ. ಎರಡು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ತೆನಾಲಿಗೆ ಬಂದಿದ್ದ. ತೆನಾಲಿಯಲ್ಲಿ ಎಸ್.ರಾಮಚಂದ್ರ ಕಾರ್ಮಿಕನಾಗಿ ಕೆಲಸ ಮಾಡಲು ಶುರು ಮಾಡಿದ್ದ. ತೆನಾಲಿ,ರೈಲ್ವೆ ನಿಲ್ದಾಣದ ಬಳಿಯಲ್ಲಿರುವ ಲಾಡ್ಜ್ ನಲ್ಲಿ ವಾಸವಾಗಿದ್ದ.  
ಈ ಮಧ್ಯೆ ರಾಮಚಂದ್ರನಿಗೆ ಇತಾನಗರದಲ್ಲಿ ವಾಸಿಸುತ್ತಿದ್ದ ಮಹಿಳೆಯ ಪರಿಚಯವಾಗಿದೆ. ಇಬ್ಬರ ಮಧ್ಯೆ ಶುರುವಾದ ಸ್ನೇಹ ಪ್ರೀತಿಗೆ ಚಿಗುರಿದೆ. ಇಬ್ಬರು ಕದ್ದು –ಮುಚ್ಚಿ ಒಂದಾಗಲು ಶುರು ಮಾಡಿದ್ದಾರೆ. ಇಬ್ಬರ ಮಧ್ಯೆ ವಿವಾಹೇತರ ಸಂಬಂಧ ಶುರುವಾಗಿದೆ. 

ರಾಮಚಂದ್ರನ ಮೇಲೆ ಮಗಳ ಕೋಪ : ತಾಯಿ, ರಾಮಚಂದ್ರ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಮಗಳಿಗೆ ಗೊತ್ತಾಗಿದೆ. ಮಗಳಿಗೆ ಇದನ್ನು ಸಹಿಸಲು ಸಾಧ್ಯವಾಗ್ತಿರಲಿಲ್ಲ. ರಾಮಚಂದ್ರನ ಮೇಲೆ ಸೇಡು ತೀರಿಸಿಕೊಳ್ಳಲು ಮಗಳು ನಿರ್ಧರಿಸಿದ್ದಳು ಎನ್ನಲಾಗಿದೆ.

Relationship Tips : ಬೇಗ ಬೇಗ ಸಂಭೋಗ ನಡೆಸಿ ಸಂತೋಷ ದುಪ್ಪಟ್ಟಗೊಳಿಸಿ

ಆ ರಾತ್ರಿ ನಡೆದಿದ್ದೇನು ? : ರಾಮಚಂದ್ರ, ಮಹಿಳೆ ಮನೆಗೆ ಬಂದಿದ್ದಾನೆ. ಆಕೆ ಜೊತೆ ಕುಳಿತು ಮದ್ಯ ಸೇವನೆ ಮಾಡಿದ್ದಾನೆ. ನಂತ್ರ ಟೆರೇಸ್ ಮೇಲೆ ಹೋಗಿ ಮಲಗಿದ್ದಾನೆ. ಈ ವಿಷ್ಯ ಮಹಿಳೆ ಮಗಳಿಗೆ ತಿಳಿದಿದೆ. ಇದ್ರಿಂದ ಕೋಪಗೊಂಡ ಮಗಳು ಜಗಳ ಶುರು ಮಾಡಿದ್ದಾಳೆ. ಮಗಳ ಜೊತೆ ಆಕೆ ಬಾಯ್ ಫ್ರೆಂಡ್ ಕೂಡ ಜೊತೆಗಿದ್ದ ಎನ್ನಲಾಗಿದೆ. ಇಬ್ಬರೂ ಮಧ್ಯ ರಾತ್ರಿ ರಾಮಚಂದ್ರನ ವಿರುದ್ಧ ಕೂಗಾಟ ಶುರು ಮಾಡಿದ್ದಾರೆ. ಜಗಳ ತಾರಕಕ್ಕೇರಿದೆ. ಕೋಪದಲ್ಲಿದ್ದ ಮಹಿಳೆ ಮಗಳು, ಬಾಯ್ ಫ್ರೆಂಡ್ ಸಹಾಯದಿಂದ ರಾಮಚಂದ್ರನ ಮಾರ್ಮಾಂಗವನ್ನು ಚಾಕುವಿನಿಂದ ಇರಿದಿದ್ದಾಳೆ. ರಾಮಚಂದ್ರನ ಕಿರುಚಾಟವನ್ನು ಕೇಳಿದ ಸ್ಥಳೀಯ ನಿವಾಸಿಗಳು ಎಚ್ಚರಗೊಂಡು ಅಲ್ಲಿಗೆ ಬಂದಿದ್ದಾರೆ. ನೋವಿನಿಂದ ನರಳುತ್ತಿದ್ದ ರಾಮಚಂದ್ರನನ್ನು ತೆನಾಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪ್ರಥಮ ಚಿಕಿತ್ಸೆ ನಂತ್ರ ರಾಮಚಂದ್ರನನ್ನು ಗುಂಟೂರಿನ ಜಿಜಿಎಚ್ ಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ರಾಮಚಂದ್ರನ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗ್ತಿದೆ. 

Latest Videos
Follow Us:
Download App:
  • android
  • ios