Asianet Suvarna News Asianet Suvarna News

'ಸಾವಿನ ಅಂಚಿನಲ್ಲಿರುವ ಪತಿಯ ವೀರ್ಯ ಸಂರಕ್ಷಣೆ ಮಾಡಿ' ಮನವಿಗೆ ಕೋರ್ಟ್ ಸಮ್ಮತಿ

* ಸಾವಿನ ಅಂಚಿನಲ್ಲಿರುವ ಪತಿಯ ವೀರ್ಯ ಸಂರಕ್ಷಣೆಗೆ ಕೋರ್ಟ್ ಆದೇಶ
* ಗಂಡನಿಂದಲೆ ಮಗು ಪಡೆದುಕೊಳ್ಳಬೇಕು ಎಂದು ನ್ಯಾಯಾಲಯದ ಮೊರೆ ಹೋದ ಮಹಿಳೆ
* ಕೆನಾಡದಲ್ಲಿ ವಾಸವಿದ್ದ ದಂಪತಿ ಈ ವರ್ಷ ಭಾರತಕ್ಕೆ ಬಂದಿದ್ದರು

Gujarat HC grants wife s plea to collect sperm of COVID-19 critical husband mah
Author
Bengaluru, First Published Jul 22, 2021, 10:20 PM IST

 ಅಹಮದಾಬಾದ್‌ (ಜು. 22)  ಸಾವಿನ ಅಂಚಿನಲ್ಲಿರುವ ಗಂಡನ ವೀರ್ಯ ಬೇಕೆಂದು ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದರು  ಲೈಫ್‌ ಸಪೋರ್ಟ್‌ ವ್ಯವಸ್ಥೆಯಲ್ಲಿರುವ ಪತಿಯ ವೀರ್ಯ ಸಂರಕ್ಷಣೆ ಮಾಡಲು ಈಗ ನ್ಯಾಯಾಲಯ ಸೂಚನೆ ನೀಡಿದೆ.

29 ವರ್ಷದ ಮಹಿಳೆ ತನ್ನ ಗಂಡನ ಪೋಷಕರೊಂದಿಗೆ, ತುರ್ತು ಮನವಿಯೊಂದಿಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಒಂದು ದಿನಕ್ಕಿಂತ ಹೆಚ್ಚು ಕಾಲ ವ್ಯಕ್ತಿ ಬದುಕಲ್ಲ ಎಂದು ವೈದ್ಯರು ಹೇಳಿದ್ದರು. ಸಂತಾನೋತ್ಪತ್ತಿ ಮುಖ್ಯವಾಗಿದ್ದು ಗಂಡನ ವೀರ್ಯವೇ ಬೇಕು ಎಂದು ಪತ್ನಿ ಕೇಳಿಕೊಂಡಿದ್ದಾರೆ. ಇದಕ್ಕೆ  ಪತಿಯ ಪೋಷಕರು ಸಹ  ಬೆಂಬಲ ನೀಡಿದ್ದಾರೆ.

ಬಾಯ್ ಫ್ರೆಂಡ್ ಶವದ ವೀರ್ಯದಿಂದ ಗೆಳತಿ ಗರ್ಭಿಣಿ

ಮಹಿಳೆಯ ಮನವಿ ಆಲಿಸಿದ ಗುಜರಾತ್ ಹೈಕೋರ್ಟ್ ಈ ತೀರ್ಮಾನ ನೀಡಿದೆ. ಮೊದಲಿಗೆ ಮಹಿಳೆಯ ಅರ್ಜಿಗೆ ಪುರಸ್ಕಾರ ಸಿಕ್ಕಿರಲಿಲ್ಲ. ದೇಹದ ಬಹು ಅಂಗಾಂಗಗಳು ವೈಫಲ್ಯವಾದ ಕಾರಣ ಪತಿ ಪ್ರಜ್ಞಾಹೀನನಾಗಿರುತ್ತಾರೆ.  ವ್ಯಕ್ತಿಯ ಒಪ್ಪಿಗೆ ಇಲ್ಲದೆ ವೀರ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಲೈಂಗಿಕ ಕ್ರಿಯೆ ಬಳಿಕ ಯೋನಿಯಲ್ಲಿ ವೀರ್ಯ ಎಷ್ಟು ಕಾಲ ಇರುತ್ತದೆ?

Assisted Reproductive Technology (ART)ಮೂಲಕ ಮಗು ಪಡೆದುಕೊಳ್ಳಬೇಕು ಎನ್ನುವುದು ಮಹಿಳೆಯ ಆಸೆ.  ಕೊರೋನಾ ಸೋಂಕಿನಿಂದ ಬಳಲುತ್ತಿರುವ ಪತಿ ಮೇ 10 ರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  

ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿದ ಗುಜರಾತ್ ಹೈಕೋರ್ಟ್ ವೀರ್ಯ ಸಂರಕ್ಷಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಕೆನಡಾದಲ್ಲಿ ವಾಸವಿರುವ ದಂಪತಿ 2020 ರ ಅಕ್ಟೋಬರ್ ನಲ್ಲಿ ಮದುವೆಯಾಗಿದ್ದರು.  ಪತಿಯ ತಂದೆ ಆರೋಗ್ಯ ಕ್ಷೀನಿಸಿದ್ದ ಕಾರಣ ಈ ವರ್ಷ ಭಾರತಕ್ಕೆ ಆಗಮಿಸಿದ್ದರು. 

ವಿಚಾರಣೆಯ ನಂತರ, ರೋಗಿಯ ವೀರ್ಯವನ್ನು ಸಂಗ್ರಹಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಅದನ್ನು ಸಂರಕ್ಷಿಸಲು ಆಸ್ಪತ್ರೆಗೆ ಆದೇಶ ನೀಡಿದೆ.  ಮುಂದಿನ ಆದೇಶದವರೆಗೆ ಕೃತಕ ಗರ್ಭಧಾರಣೆ ಮಾಡಿಕೊಳ್ಳಬೇಕೆ? ಬಿಡಬೇಕೆ? ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. 

 

Follow Us:
Download App:
  • android
  • ios