ವಿವಾಹ ಮಹೋತ್ಸವನ್ನು ಸ್ಮರಣೀಯಾಗಿಸಲು ವಿಶೇಷ ರೀತಿಯಲ್ಲಿ ಮದುವೆಯಾಗುತ್ತಾರೆ. ಆದರ ಇಲ್ಲೊಬ್ಬ ವರ ಆಫೀಸ್ ಹ್ಯಾಂಗ್ ಓವರ್‌ನಿಂದ ಹೊರಬಂದಿಲ್ಲ. ಹೀಗಾಗಿ ವಿವಾಹ ವೇದಿಕೆಯಲ್ಲೇ ತನ್ನ ಮದುವೆ ಕುರಿತು ಪಿಪಿಟಿ ಪ್ರೆಸೆಂಟ್ ಮಾಡಿ ಎಲ್ಲರ ಗಮನಸೆಳೆದಿದ್ದಾನೆ.

ಎಲ್ಲರ ಬಾಳಲ್ಲಿ ಮದುವೆ ವಿಶೇಷ ಹಾಗೂ ಪ್ರಮುಖ ಘಟ್ಟ. ಹೀಗಾಗಿ ಮದುವೆಯನ್ನು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ. ಅದ್ಧೂರಿ ಮದುವೆ, ಸರಳ ಮದುವೆ, ಭಿನ್ನ ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ವಿವಾಹ ಮಹತೋತ್ಸವ ಆಯೋಜಿಸುತ್ತಾರೆ. ಇನ್ನು ಮದುವೆಯಲ್ಲಿ ವರ ವಧುವಿನ ಡ್ಯಾನ್ಸ್, ಪೋಷಕರು, ಅತ್ತೆ ಮಾವ ಡ್ಯಾನ್ಸ್ ಸೇರಿದಂತೆ ಹಲವು ಅಚ್ಚರಿಗಳು ಸಾಮಾನ್ಯ. ಮದುವೆ ವೇದಿಕೆಯಲ್ಲಿ ವರ ಅಥವಾ ವಧುವಿನ ರೊಮ್ಯಾಂಟಿಕ್ ಮಾತುಗಳು ಈಗಾಗಲೇ ಸದ್ದು ಮಾಡಿದೆ. ಆದರೆ ಇಲ್ಲೊಬ್ಬ ಮದುವೆಯನ್ನು ಈ ರೀತಿಯೂ ಮಾಡಬಹುದು ಅನ್ನೋದು ತೋರಿಸಿಕೊಟ್ಟಿದ್ದಾರೆ. ಬಹುಷ ಈತ ಆಫೀಸ್ ಹ್ಯಾಂಗ್ ಓವರ್‌ನಿಂದ ಇನ್ನು ಹೊರಬಂದಿಲ್ಲ. ಕಾರಣ ಮದುವೆಯ ವೇದಿಕೆಯಲ್ಲೇ ವರ ತನ್ನ ವಿವಾಹ, ಭಾವಿ ಪತ್ನಿ ಕುರಿತು ಪಿಪಿಟಿ ಪ್ರಸೆಂಟ್ ಮಾಡಿದ್ದಾನೆ. ರೊಮ್ಯಾಂಟಿಕ್ ಮಾತುಗಳ ನಿರೀಕ್ಷೆಯಲ್ಲಿದ್ದ ಭಾವಿ ಪತ್ನಿಗೆ ಅಚ್ಚರಿ ಮಾತ್ರವಲ್ಲ, ಈತ ಫುಲ್ ಟೈಂ ಆಫೀಸಲ್ಲೇ ಕಳದಿದ್ದಾನೆ ಅನ್ನೋ ಅನುಮಾನಗಳು ಹುಟ್ಟಿದೆ.

ಸಂಪ್ರದಾಯ, ಸಾಮಾನ್ಯ ಪದ್ಧತಿಗಳಲ್ಲಿ ಮದುವೆಯಾಗುವುದಕ್ಕಿಂತ ಮದುವೆಗೆ ಮತ್ತಷ್ಟು ಪ್ರೊಫೆಶನಲ್ ಟಚ್ ನೀಡಲು ಮುಂದಾಗಿದ್ದಾನೆ. ಇದಕ್ಕಾಗಿ ಮದುವೆ ವೇದಿಕೆಯಲ್ಲಿ ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡಿದ್ದಾನೆ.ರಾಹುಲ್ ಭಗ್ತಾನಿ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾನೆ. 

ಪ್ರೀತಿಯಲ್ಲಿ ಬೀಳಲು ಹುಡುಗರಿಗೆ 4 ವಾರ, ಹುಡುಗಿಯರಿಗೆ ಎಷ್ಟು ದಿನ? ಅಧ್ಯಯನ ವರದಿ

ಮಾಡರ್ನ್ ಮದುವೆಯಲ್ಲಿ ವರ ಅಥವಾ ವಧು ರೊಮ್ಯಾಂಟಿಕ್ ಮಾತುಗಳನ್ನಾಡುತ್ತಾ, ಪ್ರತಿಜ್ಞೆ ಮಾಡುವುದು, ರೊಮ್ಯಾಂಟಿಕ್ ಸೀನ್ ಕ್ರಿಯೇಟ್ ಮಾಡಿದ ಉದಾಹರಣೆಗಳಿವೆ. ಆದರೆ ಇಲ್ಲಿ ವರ ತನ್ನ ಕುರಿತು, ಭಾವಿ ಪತ್ನಿ ಕರಿತು, ಮುಂದಿನ ದಿನಗಳ ಕುರಿತು ಸೇರಿದಂತೆ ಹಲವು ವಿಚಾರಗಳ ಪವರ್ ಪಾಯಿಂಟ್ ಪ್ರಸೆಂಟೇಶನ್ ತಯಾರಿಸಿದ್ದಾನೆ. ಪ್ರತಿ ದಿನ ಕಚೇರಿಯಲ್ಲಿ ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡುವ ಈತ ಮದುವೆಗೂ ಇದೇ ರೀತಿಯ ಟಚ್ ನೀಡಿದ್ದಾನೆ.

ಮದುವೆ ವೇದಿಕೆಯಲ್ಲಿ ದೊಡ್ಡ ಪರದೆಯಲ್ಲಿ ತನ್ನ ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡಿದ್ದಾನೆ. ಮದವೆಗೂ ಮುನ್ನ ಈ ಪ್ರಸೆಂಟೇಶನ್ ಎಲ್ಲರಿಗೂ ಅಚ್ಚರಿ ನೀಡಿತ್ತು. ಇಷ್ಟೇ ಅಲ್ಲ ಈತನ ಮಾತುಗಳು ಟ್ವಿಟ್ ಮೇಲೆ ಟ್ವಿಸ್ಟ್ ಕೊಟ್ಟಿತ್ತು. ಪವರ್ ಪಾಯಿಂಟ್ ಪ್ರಸೆಂಟೇಶನ್ ಆರಂಭದಲ್ಲಿ ರಾಹುಲ್ ಅದ್ಭುತ ಮಾತನ್ನಾಡಿದ್ದಾನೆ. ಮುಂದಿನ 40 ವರ್ಷ ನಾನು ಕೇಳುತ್ತಲೇ ಇರಬೇಕಾದ ಕಾರಣ ಇದೀಗ ಒಂದೆರೆಡು ಮಾತುಗಳನ್ನಾಡಲು ಬಯಸುತ್ತೇನೆ ಎಂದಿದ್ದಾನೆ. ಈ ಮಾತುಗಳನ್ನು ಕೇಳಿಸಿಕೊಂಡು ಆಪ್ತರು,ಹಿರಿಯರು,ಸಂಬಧಿಕರು ನಕ್ಕು ಸುಸ್ತಾಗಿದ್ದಾರೆ.

View post on Instagram

ಪಿಪಿಟಿಯ ಮೊದಲ ಸ್ಲೈಡ್‌ನಲ್ಲಿ ಸಣ್ಣ ಕ್ರೀಮ್ ಬಾಕ್ಸ್ ಫೋಟೋ ಹಾಕಿದ್ದಾನೆ. ಬಳಿಕ ಇದೇನು ಎಂದು ನೆರೆದಿದ್ದವರಲ್ಲಿ ಕೇಳಿದ್ದಾನೆ. ಬಳಿಕ ಉತ್ತರಿಸಿದ ರಾಹುಲ್, ಇದು ಪೂಜಾಳನ್ನು ಭೇಟಿಯಾಗುವು ಮೊದಲು ನಾನು ನನ್ನ ತ್ವಚೆ ಸಂರಕ್ಷಣೆಗೆ ಬಳಸಿದ ಕ್ರೀಮ್. ಮುಂದಿನ ಸ್ಲೈಡ್‌ನಲ್ಲಿ 10ಕ್ಕೂ ಹೆಚ್ಚು ಕ್ರೀಮ್, ಬಾಡಿಲೋಶನ್ ಕ್ರೀಮ್‌ಗಳಿರುವ ಫೋಟೋ ಹಾಕಿದ್ದಾನೆ. ಈ ಕುರಿತು ವಿವರಣೆ ನೀಡಿದ ರಾಹುಲ್, ಇದು ಪೂಜಾ ಒಬ್ಬ ಡರ್ಮಟೋಲೊಜಿಸ್ಟ್ ಆಗಿರುವ ಕಾರಣ ಆಕೆಯನ್ನು ಭೇಟಿಯಾದ ಬಳಿಕ ನನ್ನ ತ್ವಚೆಯ ಆರೋಗ್ಯದ ವಿಧಾನ ಇದು ಎಂದಿದ್ದಾನೆ. 

ಮೊದಲು ಒಂದೇ ಕ್ರೀಮ್‌ನಲ್ಲಿದ್ದ ನಾನು ಚರ್ಮದ ವೈದ್ಯೆಯಾಗಿರುವ ಪೂಜಾ ಭೇಟಿಯಾದ ಬಳಿಕ ಲಿಸ್ಟ್ ದೊಡ್ಡಗಾಗಿದೆ. ನನ್ನ ಕೋಮಲ ತ್ವಚೆಯ ಹಿಂದಿನ ಈ ಕ್ರೀಮ್‌ಗಳು ಇದೀಗ ಪ್ರತಿ ದಿನ ಬಳಸುವಂತಾಗಿದೆ ಎಂದಿದ್ದಾನೆ. ಈ ರೀತಿ ಪೂಜ ಭೇಟಿಯಾಗುವ ಮೊದಲು ಹಾಗೂ ಬಳಿಕ ಆಗಿರುವ ಬದಲಾವಣೆ, ಮುಂದಿನ ಸುದೀರ್ಘ ದಿನಗಳಲ್ಲಿನ ಜೀವನ ಕುರಿತು ಪಿಪಿಟಿ ಮೂಲಕ ರಾಹುಲ್ ವಿವರಿಸಿದ್ದಾನೆ. ಇದೀಗ ಈತನ ಪಿಪಿಟಿ ಭಾರಿ ಸದ್ದು ಮಾಡುತ್ತಿದೆ. ಹಲವರು ಪರ ವಿರೋಧ ಕಮೆಂಟ್ ಮಾಡಿದ್ದಾರೆ. ಈ ರೀತಿ ನನ್ನ ಗಂಡ ಪಿಪಿಟಿ ಮಾಡಿದ್ದರೆ,ಮದುವೇನೆ ಆಗುತ್ತಿರಲಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಮಾಜಿ ಗರ್ಲ್‌ಫ್ರೆಂಡ್ ಮದುವೆಗೆ ಹಾಜರಾದ ಗೆಳೆಯನ ಭಾವುಕ ಮಾತಿಗೆ ಕಣ್ಣೀರಾದ ಜನ