ವಧು ಬೇಡ ಬೇಡ ಅಂದ್ರೂ ಅರ್ಧ ಕಚ್ಚಿದ ಎಂಜಲು ಸ್ವೀಟನ್ನೇ ಬಲವಂತಾಗಿ ತಿನ್ನಿಸಿದ ವರ!
ವಧು, ಮದ್ವೆ ಅಂತ ತುಂಬಾ ಖುಷಿಯಲ್ಲಿದ್ಲು. ಕೆಂಪು ಡ್ರೆಸ್, ಬಳೆ ಅಲಂಕಾರದಲ್ಲಿ ಮಿಂಚ್ತಿದ್ಲು. ಮಂಟಪದಲ್ಲಿ ಮದ್ವೆ ಶಾಸ್ತ್ರಗಳು ನಡೀತಿದ್ವು. ಆದ್ರೆ ಅಷ್ಟರಲ್ಲೇ ವರ ಮಾಡಿದ ಕೆಲಸಕ್ಕೆ ಆಕೆಯ ಮುಖವೆಲ್ಲಾ ಪೆಚ್ಚಾಗಿದೆ. ವರ ಮಾಡಿದ ಕೆಲಸಕ್ಕೆ ನೆಟ್ಟಿಗರು ಸಹ ಥೂ ಅಂತ ಛೀಮಾರಿ ಹಾಕಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಮದುವೆಗಳು ಒಂದು ಮಂಗಳಕರ ಸಂದರ್ಭವಾಗಿದೆ. ಹೀಗಾಗಿ ಮದುವೆ ಕಾರ್ಯಕ್ರಮಗಳು, ಮದುವೆಗೆ ಸಂಬಂಧಿಸಿ ನಡೆಯುವ ಶಾಸ್ತ್ರಗಳು ಸಿಹಿತಿಂಡಿಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ವಧು-ವರರು ಒಬ್ಬರಿಗೊಬ್ಬರು ಸಿಹಿ ತಿನ್ನಿಸುವುದು ವಿವಾಹ ಸಮಾರಂಭಗಳಲ್ಲಿ ಒಂದು ಆಚರಣೆಯಾಗಿದೆ. ಇದು ನವವಿವಾಹಿತ ದಂಪತಿಗಳ ನಡುವೆ ಆಪ್ತತೆಯನ್ನು ತರುತ್ತೆ ಅನ್ನೋ ನಂಬಿಕೆ. ಹೀಗಾಗಿಯೇ ಮದುವೆ ಊಟ ಮಾಡುವಾಗ ಪರಸ್ಪರ ತುತ್ತನ್ನು ಕೊಟ್ಟುಕೊಳ್ಳುವುದು, ಅಥವಾ ಸ್ವೀಟ್ಸ್ ತಿನ್ನಿಸುವುದನ್ನು ಮಾಡುತ್ತಾರೆ. ಆದ್ರೆ ಇಲ್ಲೊಂದು ಮದುವೆಯಲ್ಲಿ ಈ ಶಾಸ್ತ್ರ ವರನ ಅನುಚಿತ ವರ್ತನೆಯಿಂದ ವಧುವಿಗೆ ಕಿರಿಕಿರಿಯನ್ನುಂಟು ಮಾಡಿತು.
ಎಲ್ಲಾ ಮದುವೆ (Marriage)ಗಳಲ್ಲೂ ಆ ಕ್ಷಣದ ಖುಷಿಯನ್ನು ಹಾಳು ಮಾಡುವ ಕೆಲವೊಬ್ಬರು ಇರುತ್ತಾರೆ. ಆದ್ರೆ ಈ ಮದುವೆಯಲ್ಲಿ ಅದು ವರನೇ ಆಗಿದ್ದ ಅನ್ನೋದು ಅಚ್ಚರಿಯ ವಿಚಾರ. ಹೌದು, ಮಂಟಪದಲ್ಲೇ ವರ (Groom), ವಧುವಿನ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವಧು (Bride) ಬೇಡ ಬೇಡ ಎಂದು ನಿರಾಕರಿಸಿದರೂ ವರ ತಾನು ಕಚ್ಚಿದ ಎಂಜಲು ಸ್ವೀಟನ್ನೇ ಬಲವಂತಾಗಿ ವಧುವಿಗೆ ತಿನ್ನಿಸುತ್ತಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವರನ ದುರ್ವತನೆಗೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಯಪ್ಪಾ..ಇಲ್ಲಿನ ಹುಡುಗ್ರು ಮದ್ವೆಯಾಗೋಕೆ ಸ್ಪೆಷಲ್ ಟೆಸ್ಟ್ ಪಾಸ್ ಮಾಡ್ಬೇಕು, ಸಿಕ್ಕಾಪಟ್ಟೆ ನೋವಾದ್ರೂ ಸಹಿಸ್ಕೋಬೇಕು!
ವರನಿಗೆ ಸಪೋರ್ಟ್ ಮಾಡಿ ಖುಷಿಯಿಂದ ಕಿರುಚಿದ ಜನರು
ವೀಡಿಯೊದ ಆರಂಭಲ್ಲಿ, ವಧು ವರನಿಗೆ ಸಿಹಿ ತಿನ್ನಿಸುತ್ತಿರುವುದನ್ನು ಕಾಣಬಹುದು. ನಂತರ ವರ, ವಧುವಿಗೆ ಸ್ವೀಟ್ ನೀಡುವ ಸರದಿ. ವರನು ವಧುವಿಗೆ ತನ್ನ ಬಾಯಲ್ಲಿ ಉಳಿದ, ಎಂಜಲಾದ ಸಿಹಿತಿಂಡಿಯನ್ನು ತಿನ್ನಿಸಲು ಪ್ರಯತ್ನಿಸುತ್ತಾನೆ. ಆದರೆ ಅವಳು ಅದನ್ನು ನಿರಾಕರಿಸುತ್ತಾಳೆ ಮತ್ತು ಥಾಲಿಯಿಂದ ತಾಜಾ ತುಂಡನ್ನು (Fresh sweet) ತೆಗೆದುಕೊಳ್ಳುವುದಾಗಿ ಹೇಳುತ್ತಾಳೆ. ಆದರೆ ವರ ಆಕೆ ಹೇಳಿದ್ದನ್ನು ಲೆಕ್ಕಿಸದೆ ಅವಳಿಗೆ ಬಲವಂತವಾಗಿ ಸಿಹಿ ತಿನ್ನಿಸುತ್ತಾನೆ. ಸುತ್ತಲಿದ್ದ ಜನರು ವರ ಮಾಡಿದ ಕೆಲಸವನ್ನು ಬೆಂಬಲಿಸಿ ಜೋರಾಗಿ ನಗುತ್ತಾರೆ. ವಧುವಿನ ಮುಖದಲ್ಲಿ ಕಿರಿಕಿರಿಯಾಗಿರುವ ಭಾವನೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆ ನಂತರ ವರನಿಗೆ ನೀರು ಕುಡಿಸಿದಾಗ, ಆತ ಅವಳ ಮುಖವನ್ನು ಒರೆಸಲು ಪ್ರಯತ್ನಿಸಿದರೂ ಆಕೆ ನಿರಾಕರಿಸುತ್ತಾಳೆ.
ವರನ ದುರ್ವತೆನಗೆ ಹಿಗ್ಗಾಮುಗ್ಗಾ ಬೈದ ನೆಟ್ಟಿಗರು
ಈ ವೀಡಿಯೊವನ್ನು Instagramನಲ್ಲಿ @shravankr7 ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವೀಡಿಯೋ ನೆಟಿಜನ್‌ಗಳನ್ನು ಬೆಚ್ಚಿಬೀಳಿಸಿದೆ ವೈರಲ್ ಆದ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ವಧುವಿನ ಕಡೆಗೆ ಪುರುಷನ ಹಿಂಸಾತ್ಮಕ ನಡವಳಿಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರ, 'ಯಾರೊಬ್ಬರ ಜೊತೆಯೂ ಹೀಗೆ ಮಾಡಬಾರದು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರ 'ಗಂಡಸರು ಹೆಣ್ಣನ್ನು ಬಲವಂತ ಮಾಡುವುದು ನನ್ನ ಹಕ್ಕು ಎಂದು ಅಂದುಕೊಳ್ಳುವುದು ಯಾಕೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ನಾನು ಈಗಾಗಲೇ ಈ ದಂಪತಿಗಳ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಹುಡುಗಿ ಆ ಕ್ಷಣದಲ್ಲೇ ಮದುವೆ ಕ್ಯಾನ್ಸಲ್ ಮಾಡಿಕೊಳ್ಳಬೇಕಿತ್ತು' ಎಂದು ಸಲಹೆ ನೀಡಿದ್ದಾರೆ.
5 ವರ್ಷದ ಪ್ರೀತಿ, ಸರ್ಪ್ರೈಸ್ ಮದುವೆ ಆಯೋಜಿಸಿದ ಬಾಯ್‌ಫ್ರೆಂಡ್‌ಗೆ ಕೈಕೊಟ್ಟ ಗೆಳತಿ!
ಅದೇನೆ ಇರ್ಲಿ, ಮದುವೆಯಾಗುತ್ತಿದ್ದೇನೆ ಅನ್ನೋ ಕಾರಣಕ್ಕೆ ವರ, ವಧುವಿನ ಮೇಲೆ ಅಧಿಕಾರ ಚಲಾಯಿಸಿರುವುದು ತಪ್ಪು. ಯಾವುದೇ ಸಂಬಂಧವಾದರೂ ಅವರವರ ಇಷ್ಟಕಷ್ಟಕ್ಕೆ ಬೆಲೆ ಕೊಡಲೇಬೇಕು. ಪ್ರತಿಯೊಬ್ಬರ ಭಾವನೆಗಳನ್ನು ಗೌರವಿಸಲೇಬೇಕು.