ಮದುವೆಯಲ್ಲಿ ಸಿಂಧೂರ ತೊಡಿಸುತ್ತಿದ್ದಂತೆ ಕುಸಿದು ಬಿದ್ದ ವಧು, ಬಳಿಕ ನಡೆದಿದ್ದೇ ಅಚ್ಚರಿ!
ಮದುವೆ ಮಂಟಪದಲ್ಲಿ ವಧುವಿಗೆ ವರ ಸಿಂಧೂರ ತೊಡಿಸಿದ್ದಾನೆ. ಇಷ್ಟೇ ನೋಡಿ, ವಧು ಕುಸಿದು ಬಿದ್ದಿದ್ದಾಳೆ. ಇದನ್ನು ನೋಡಿದ ವರನಿಗೆ ಪಿತ್ತ ನೆತ್ತಿಗೇರಿದೆ. ಮುಂದೆ ವರ ನಡೆ ಮಾತ್ರ ಎಲ್ಲರಿಗೂ ಅಚ್ಚರಿ ತಂದಿದೆ.
ಮದುವೆ ಮಂಟಪ, ಮೆರವಣಿ, ಸಮಾರಂಭದಲ್ಲಿ ಕೆಲ ಅಚ್ಚರಿ, ಆಘಾತಕಾರಿ ಘಟನೆಗಳು ನಡೆದಿದೆ. ಈ ಕುರಿತು ವಿಡಿಯೋಗಳು ವೈರಲ್ ಆಗಿದೆ. ಇದೀಗ ಮದುವೆ ಮಂಟಪದಲ್ಲಿ ನಡೆದ ಘಟನೆ ವೈರಲ್ ಮಾತ್ರವಲ್ಲ, ಒಂದೇ ಕ್ಷಣದಲ್ಲಿ ಭವಿಷ್ಯವನ್ನೇ ಅರಿತ ವರನ ಸಾಮರ್ಥ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಂಟಪದಲ್ಲಿ ವಧುವಿನ ಹಣೆಗೆ ಸಿಂಧೂರ ತೊಡಿಸುವ ಸಂಪ್ರದಾಯ. ಕುಟುಂಬಸ್ಥರು, ವರ ಸೇರಿ ಸಿಂಧೂರ ತೊಡಿಸಿದ್ದಾರೆ. ಆದರೆ ಅಷ್ಟರಲ್ಲೇ ವಧು ಮಂಟಪದಲ್ಲಿ ಕುಸಿದು ಬಿದ್ದಿದ್ದಾಳೆ. ಇದನ್ನು ನೋಡಿ ರೊಚ್ಚಿ ಗೆದ್ದ ವರ ಮಂಟಪದಲ್ಲಿ ಓಡಿ ಹೋಗಿದ್ದಾನೆ. ಆದರೆ ಓಡಿ ಹೋದ ವರನ ಹಿಡಿದ ಕುಟುಂಬಸ್ಥರು, ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ವರನ ನೀಡಿದ ಉತ್ತರಕ್ಕೆ ಒಂದು ಕ್ಷಣ ಕುಟುಂಬಸ್ಥರು ಮೌನವಾಗಿದ್ದಾರೆ.
ಮದುವೆ ದಿನ ವಧು ಹಾಗೂ ವರ, ಕುಟುಂಬಸ್ಥರು, ಆಪ್ತರು ಮಂಟಪಕ್ಕೆ ಆಗಮಿಸಿದ್ದಾರೆ. ಸಂಪ್ರದಾಯದಂತೆ ಕಾರ್ಯಕ್ರಮಗಳು ಆರಂಭಗೊಂಡಿದೆ. ಒಂದೊಂದು ಸಮುದಾಯದಲ್ಲಿ ಪದ್ಧತಿಗಳು, ಸಂಪ್ರದಾಯಗಳು ಬದಲಾಗುತ್ತದೆ. ಸಂಪ್ರದಾಯಕ ಪ್ರಕಾರ ಮದುವೆ ನಡೆದಿದೆ. ಈ ವೇಳೆ ವರ ಹಾಗೂ ಆತನ ಕುಟಂಬಸ್ಥರು ವಧುವಿಗೆ ಸಿಂಧೂರ ತೊಡಿಸುವ ಪದ್ಧತಿ. ಈ ವೇಳೆ ವರ ಹಾಗೂ ಆತನ ಕುಟುಂಬಸ್ಥರು ಸಿಂಧೂರ ತೊಡಿಸಲು ಮುಂದಾಗಿದ್ದಾರೆ.
ವಧು ಕೆಳಕ್ಕೆ ಬಿದ್ದರೂ ಕ್ರೂರವಾಗಿ ಎಳೆದಾಡಿದ ವರನಿಗೆ ವೇದಿಕೆಯಲ್ಲೇ ಥಳಿಸಿದ ಅಣ್ಣ, ದೃಶ್ಯ ಸೆರೆ!
ವಧು ವೇದಿಕೆಯಲ್ಲಿ ಕುಳಿತಿದ್ದರೆ, ವರ ಹಾಗೂ ಆತನ ಕುಟುಂಬಸ್ಥರು ನಿಂತುಕೊಂಡು ವಧುವಿಗೆ ಸಿಂಧೂರ ತೊಡಿಸಿದ್ದಾರೆ. ಆದರೆ ವರ ಸಿಂಧೂರವನ್ನು ಹಣೆಗೆ ತೊಡಿಸುತ್ತಿದ್ದಂತೆ ವಧು ದಿಢೀರ್ ಕುಸಿದಿದ್ದಾಳೆ. ಇದನ್ನು ನೋಡಿದ ವರ ಪಿತ್ತ ನೆತ್ತಿಗೇರಿದೆ. ಪೇಟ, ಶಾಲು ಕಿತ್ತೆಸೆದು ಒಂದೇ ಸಮನೆ ಮದುವೆ ಮಂಟಪದಿಂದ ಓಡಿದ್ದಾನೆ.
ವರನ ಹಿಡಿದಿಡಲು ಕುಟುಂಬಸ್ಥರು ನಡೆಸಿದ ಪ್ರಯತ್ನ ವಿಫಲವಾಗಿದೆ. ಮಂಟಪದಿಂದ ಇಳಿದು ಓಡಿದ್ದಾನೆ. ಅಷ್ಟರಲ್ಲೇ ವೇದಿಕೆ ಕೆಲಭಾಗದಲ್ಲಿ ಕುಳಿತಿದ್ದ ಕುಟುಂಬಸ್ಥರು ವರನ ಹಿಡಿದು ಮತ್ತೆ ಕರೆತಂದಿದ್ದಾರೆ. ವಧು ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಎತ್ತಿ ಆರೈಕೆ ಮಾಡುವ ಕನಿಷ್ಠ ಜ್ಞಾನ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವರ, ಕುಟುಂಬಸ್ಥರು ಸಿಂಧೂರ ತೊಡಿಸಿದ್ದಾರೆ. ನಾನು ಸಿಂಧೂರ ತೊಡಿಸುತ್ತಿದ್ದಂತೆ ಒಂದೇ ಸಮನೆ ಕುಸಿದು ಬೀಳುವ ನಾಟಕ ಆಡಿದ್ದಾಳೆ. ಆಕೆ ಕಣ್ಣುಗಳು ಮಂಜಾಗಿಲ್ಲ, ಸುಮ್ಮನೆ ಮುಚ್ಚಿದ್ದಾಳೆ. ಇನ್ನು ಮದುವೆ ಮುಗಿದಿಲ್ಲ, ವೇದಿಕೆಯಲ್ಲೇ ಇಷ್ಟು ನಾಟಕ ಮಾಡುತ್ತಿದ್ದಾಳೆ. ಮದುವೆಯಾದ ಬಳಿಕ ಈ ನಾಟಕ ದಿನವೂ ಮುಂದವರಿಯಲಿದೆ. ಈ ಹುಡುಗಿ ನನಗೆ ಬೇಡ ಎಂದು ಪಟ್ಟು ಹಿಡಿದ್ದಾನೆ.
300 ಕೋಟಿ ರೂ ಜೆಟ್, 40 ಕೋಟಿ ಮನೆ; ದಿಗ್ಗಜರಿಂದ ಅನಂತ್ ರಾಧಿಕಾಗೆ ಸಿಕ್ಕಿದೆ ಭರ್ಜರಿ ಗಿಫ್ಟ್!
ಕುಟುಬಂಸ್ಥರು, ಆಪ್ತರು ವರನ ಸಂತೈಸಿದ್ದಾರೆ. ಈ ರಂಪಾಟದಿಂದ ಗಾಬರಿಯಾದ ವಧು ಎದ್ದಿದ್ದಾಳೆ. ಈ ವೇಳೆ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಆದರೆ ಈ ಮದುವೆ ನಡೆದಿದೆಯಾ ಅನ್ನೋ ಕುರಿತು ಯಾವುದೇ ಮಾಹಿತಿ ಇಲ್ಲ.