ಗ್ರೀಸ್ ರಾಜಕುಮಾರಿ ಹಾಗೂ ಭಾರತದ ವಕೀಲನ ಮದುವೆ ಕಳೆದ ವರ್ಷ ಭಾರಿ ಸದ್ದು ಮಾಡಿತ್ತು.ಇದೀಗ ಗ್ರೀಸ್ ರಾಜಕುಮಾರಿಯ ಹಳದಿ ಶಾಸ್ತ್ರದ ಫೋಟೋ ಒಂದು ವೈರಲ್ ಆಗಿದೆ.  ಗ್ರೀಸ್ ರಾಜಕುಮಾರಿಯನ್ನು ವರಿಸಿದ ಭಾರತದ ಈ ವಕೀಲ ಯಾರು? 

ನವದೆಹಲಿ(ಮೇ.15) ಪ್ರೀತಿ ಮದುವೆಯಾಗುವುದು ಹೊಸದೇನಲ್ಲ. ಆದರೆ ಕೆಲ ಪ್ರೀತಿ ಹಾಗೂ ಮದುವೆ ಸುದ್ದಿಯಾಗುತ್ತದೆ. ಹೀಗೆ ಗ್ರೀಸ್ ರಾಜಕುಮಾರಿ ಹಾಗೂ ಭಾರತೀಯ ಮೂಲದ ವಕೀಲನ ವಿವಾಹ ಕಳೆದ ವರ್ಷ ಭಾರಿ ಸದ್ದು ಮಾಡಿತ್ತು. ಆಕೆ ಗ್ರೀಸ್ ರಾಜಮನೆತನ ರಾಜಕುಮಾರಿ. ಈತ ಖ್ಯಾತ ವಕೀಲ. ಇಬ್ಬರ ನಡುವಿನ ಪ್ರೀತಿ ಇವರನ್ನು ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಿತ್ತು. ಗ್ರೀಸ್ ರಾಜಕುಮಾರಿ ಥಿಯೋಡರಾ ಹಾಗೂ ಭಾರತೀಯ ಮೂಲದ ವಕೀಲ ಆಟಾರ್ನಿ ಮ್ಯಾಥ್ಯೂ ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಅದ್ಧೂರಿಯಾಗಿ ನಡೆದಿದೆ. ಇದೀಗ ಹಳೇ ಫೋಟೋಗಳು ಮತ್ತೆ ಮುನ್ನಲೆಗೆ ಬಂದಿದೆ.

ಗ್ರೀಸ್ ರಾಜಕುಮಾರಿ ಥಿಯೋಡರಾ ಗ್ರೀಸ್‌ನ ಕೊನೆಯ ರಾಜ ಕಾಂಸ್ಟಾಟೈನ್ ಹಾಗೂ ರಾಣಿ ಅನ್ನೆ ಮ್ಯಾರಿ ಪುತ್ರಿ. 1973ರ ವರಗೆ ಗ್ರೀಸ್‌ನಲ್ಲಿ ರಾಜ ಆಡಳಿತವಿತ್ತು. ಆದರೆ 1973ರಲ್ಲಿ ರಾಜ ಅಧಿಕಾರ ಅಂತ್ಯಗೊಂಡಿತ್ತು. ಬಳಿಕ ಪ್ರಜಾಪ್ರಭುತ್ವ ಆಡಳಿತ ಅಸ್ತಿತ್ವಕ್ಕೆ ಬಂದಿತ್ತು. ಈ ವೇಳೆ ಕೊನೆಯದಾಗಿ ಗ್ರೀಸ್ ಆಡಳಿತ ನೋಡಿಕೊಂಡಿದ್ದ ರಾಜನ ಪುತ್ರಿಯೇ ಈ ಥಿಯೋಡರಾ. ಈಕೆಯ ಜೊತೆ ಭಾರತದ ವಕೀಲನ ಪ್ರೀತಿ ಬಳಿಕ ಮದುವೆಯ ಅರ್ಥ ಪಡೆದಿತ್ತು.

ಮದುವೆ ನಿಶ್ಚಯವಾಗಿದ್ದ ಜೋಡಿಗಳೇ ಬೇರೆ, ವಧು-ವರರು ಮದುವೆಯಾಗಿದ್ದು ಮತ್ಯಾರನ್ನೋ; ವಿಚಿತ್ರ ಮದುವೆ ಕಥೆ!

ಥಿಯೋಡರ್ ಹುಟ್ಟಿ ಬೆಳೆದಿದ್ದು ಲಂಡನ್‌ನಲ್ಲಿ. ಲಂಡನ್‌ನಲ್ಲಿ ಬಾಲ್ಯದ ವಿದ್ಯಾಭ್ಯಾಸ ಮಾಡಿದ್ದಾರೆ. ಕಾಲೇಜು ಹಾಗೂ ಉನ್ನತ ವ್ಯಾಸಾಂಗಕ್ಕಾಗಿ ಥಿಯೋಡರ್ ಲಂಡನ್‌ನಿಂದ ಅಮೆರಿಕಾಗೆ ಸ್ಥಳಾಂತರಗೊಂಡಿದ್ದರು. ಈ ವೇಳೆ ಗೆಳೆಯನಾಗಿ ಜೊತೆಯಾದ ಭಾರತೀಯ ಮೂಲದ ಮ್ಯಾಥ್ಯೂ ಕುಮಾರ್ ಇದೀಗ ಸತಿ ಪತಿಗಳಾಗಿದ್ದಾರೆ. 2016ರಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಬಳಿಕ ಪ್ರೀತಿ ಶುರುವಾಗಿತ್ತು. 2018ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, 2024ರ ಸೆಪ್ಟೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

View post on Instagram

ಯಾರು ಈ ಮಾಥ್ಯೂ ಕುಮಾರ್
ಮಾಥ್ಯೂ ಕುಮಾರ್ ಕ್ಯಾಲಿಫೋರ್ನಿಯಾದಲ್ಲಿ ಖ್ಯಾತ ಲಾಯರ್. ಮಾಥ್ಯೂ ಕುಮಾರ್ ತಂದೆ ಶಲೇಂದ್ರ ಸ್ಯಾಮ್ ಕುಮಾರ್. ಭಾರತೀಯ ಮೂಲದ ಫಿಜಿ ಪ್ರಜೆಯಾಗಿದ್ದಾರೆ. ಶಲೇಂದ್ರ ಸ್ಯಾಮ್ ಕುಮಾರ್ ಮೂಲ ಡೆಹ್ರಡೂನ್. ಆದರೆ ಫಿಜಿಯಲ್ಲಿ ನೆಲೆಸಿ್ದ್ದಾರೆ. ಇತ್ತ ಮಾಥ್ಯೂ ಕುಮಾರ್ ಕ್ಯಾಲಿಫೋರ್ನಿಯಾದಲ್ಲಿ ಬೆಲೆದು ಇಲ್ಲೆ ನೆಲೆಸಿದ್ದಾರೆ. ಡೆಹ್ರಡೂನ್‌ನಲ್ಲೇ ಥಿಯೋಡರಾ ಹಾಗೂ ಮಾಥ್ಯೂ ಕುಮಾರ್ ಹಳದಿ ಶಾಸ್ತ್ರವೂ ನಡೆದಿತ್ತು. ಬಳಿಕ ಗ್ರೀಕ್ ಆರ್ಥಡಾಕ್ಸ್ ಚರ್ಚ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು.

ಹಳೇ ಫೋಟೋ ಹಾಗೂ ಮದುವೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಇದೀಗ ಈ ಅದ್ದೂರಿ ಮದುವೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಭಾರತೀಯ ಶ್ರೀಮಂತರು ಗ್ರೀಸ್‌ನಲ್ಲಿ ಆಸ್ತಿ ಖರೀದಿಗೆ ಮುಗಿಬಿದ್ದಿದ್ದೇಕೆ?