ಶನಿಮಹಾತ್ಮನಿಗೆ ಈ ಕೆಲವು ರಾಶಿಗಳು ತುಂಬಾ ಇಷ್ಟ
ಶನಿ ಮಹಾತ್ಮನಿಗೆ ಕೆಲವು ರಾಶಿಗಳೆಂದರೆ ತುಂಬಾ ಪಸಂದ್. ಅದಕ್ಕೇ ಆಯಾ ರಾಶಿಗಳಲ್ಲಿ ಹುಟ್ಟಿದವರಿಗೆ ಹೆಚ್ಚು ಪ್ರೀತಿಯನ್ನೂ ಸುರಿಸುತ್ತಾನೆ; ಕಾಟವನ್ನೂ ಕೊಡುತ್ತಾನೆ.
ದೇವರಿಗೂ ಹೆದರದ ಕೆಲವರು ಶನೀಶ್ವರ ಎಂದರೆ ಬೆಚ್ಚಿ ಬೀಳುತ್ತಾರೆ. ಅದಕ್ಕೆ ಕಾರಣ ಆತ ಏಳುವರೆ ವರ್ಷ ಕಾಲ ನೀಡುವ ಕಾಟ. ಪ್ರತಿಯೊಬ್ಬರ ಬದುಕಿನಲ್ಲೂ, ಅವರು ಬೇಗ ಸಾಯದಿದ್ದರೆ, ಕನಿಷ್ಠ ಎರಡು ಸಲ ಸಾಡೇಸಾತಿ ಅನುಭವಿಸಬೇಕಾಗುತ್ತದೆ. ಉಳಿದಂತೆ ಪಂಚಮ ಶನಿ, ಅಷ್ಟಮ ಶನಿ ಎಂದೆಲ್ಲಾ ತೊಂದರೆಗಳನ್ನ ನೀಡುತ್ತಲೇ ಇರುತ್ತಾನೆ ಶನಿದೇವ. ಹಾಗೆಂದು ಒಳಿತನ್ನೂ ನೀಡುತ್ತಾನೆ. ಆದರೆ ನಾವು ಸಾಮಾನ್ಯವಾಗಿ ಕೆಟ್ಟದನ್ನು ಮಾತ್ರ ನೋಡುತ್ತೇವಲ್ಲಾ. ಅದಿರಲಿ, ಯಾವ ರಾಶಿಗಳು ಶನಿಯಿಂದ ಹೆಚ್ಚಿನ ಏಟನ್ನೂ ಆಶೀರ್ವಾದವನ್ನೂ ಪಡೆಯುತ್ತವೆ? ಇಲ್ಲಿದೆ ನೋಡಿ.
ಪ್ರಾಮಾಣಿಕತೆ, ಧೈರ್ಯ ಫೆಬ್ರವರಿಯಲ್ಲಿ ಹುಟ್ಟಿದವರ ವಿಶೇಷತೆ ...
ಅಂದ ಹಾಗೆ, ಯಾವುದೇ ರಾಶಿಯಲ್ಲಿ ಸೂರ್ಯ ಚಲಿಸುತ್ತಿರುವಾಗ, ಅಂದರೆ ಸುಮಾರು ಒಂದು ಮಾಸ ಕಾಲ, ಆ ರಾಶಿಯವರ ಮೇಲೆ ಶನಿಯು ಯಾವುದೇ ದುಷ್ಪ್ರಭಾವವನ್ನು ಬೀರುವುದಿಲ್ಲ. ಯಾಕೆಂದರೆ ಸೂರ್ಯನು ಶನಿಯ ತಂದೆ. ತಂದೆಯ ಅಧಿಕಾರ ನಡೆಯುವಲ್ಲಿ ಮಗ ಸುಮ್ಮನಿರುವುದು ಸಹಜ ತಾನೆ? ಆದರೆ ಸೂರ್ಯನಿಗೂ ಒಂದೊಮ್ಮೆ ಶನಿಯು ಪೀಡಿಸಿದ್ದ ಎಂಬ ಕತೆಯನ್ನು ನೆನಪಿಟ್ಟುಕೊಳ್ಳಿ. ಅದರಂತೆ, ಶನಿಯನ್ನು ಯಾರೂ ಸುಲಭವಾಗಿ ತಡೆಗಟ್ಟಲಾರರು. ಆತ ಒಳಿತು ಮಾಡಬೇಕಾದಲ್ಲಿ ಒಳಿತೇ ಮಾಡುತ್ತಾನೆ, ಪಾಠ ಕಲಿಸುವಲ್ಲಿ ಪಾಠವನ್ನು ಕಲಿಸದೆ ಇರಲಾರ.
ಮೇಷ
ಮೇಷ ರಾಶಿಯವರು ಶನೀಶ್ವರನಿಗೆ ತುಂಬ ಇಷ್ಟ. ಅವನು ದೂರದ ಕುಂಭ ರಾಶಿಯಲ್ಲಿ ಕುಳಿತಿದ್ದರೂ ಕೆಲವೊಮ್ಮೆ ಮೇಷದ ಮೇಲೆ ಒಂದು ಕಣ್ಣು ಇಟ್ಟೇ ಇರುತ್ತಾನೆ. ಮೇಷ ರಾಶಿಯವರ ಜೀವನದಲ್ಲಿ ಆಗುವ ಯಾವುದೇ ಚಟುವಟಿಕೆಗಳೂ ಇವನ ಒಂದು ಕಣ್ಣೋಟ ಇಲ್ಲದೆ ನಡೆಯಲಾರವು. ಇವನು ಅವರಿಗೆ ಒಳಿತನ್ನೂ ಮಾಡುತ್ತಾನೆ. ಹಾಗೇ ಕೆಲವು ಕಷ್ಟಗಳನ್ನೂ ಕೊಡುತ್ತಾನೆ. ಕಷ್ಟ ಕೊಡುವಲ್ಲಿ ಅವನ ಉದ್ದೇಶ ಇವರು ದೇವರ ಧ್ಯಾನ ಮಾಡಲಿ ಎಂಬುದೇ ಆಗಿರುತ್ತದೆ.
ಎಲ್ಲ ಕಡೆಯೂ ಸಾಲ, ಯಾವಾಗ್ಲೂ ಟೆನ್ಶನ್: ಈ ಸರಳ ವಾಸ್ತು ಪಾಲಿಸಿ ...
ಮಿಥುನ
ಮಿಥುನ ರಾಶಿಯವರ ಮೇಲೆ ಶನಿಯು ಅಧಿಕಾರವನ್ನು ಚಲಾಯಿಸುತ್ತಾನೆ. ಆತನ ಅಧಿಕಾರವು ಈ ರಾಶಿಯವರ ಕಾರ್ಯಕಾರಿ ಸ್ಥಾನದಲ್ಲಿ ಅಂದರೆ ಕಚೇರಿ, ಕೆಲಸ, ಉದ್ಯಮದ ಜಾಗದಲ್ಲಿ ವ್ಯಕ್ತವಾಗುತ್ತದೆ. ಇವರು ಮಾಡುವ ಪ್ರತಿಯೊಂದು ಉದ್ಯೋಗದ ಮೇಲೂ ಆತನ ಪ್ರಭಾವ ಇದ್ದೇ ಇರುತ್ತದೆ. ಹೀಗಾಗಿ ಅವರ ಗಳಿಕೆ, ಹಣ ಸಂಪಾದನೆಯ ಮೇಲೂ ಶನಿಯ ಪ್ರಭಾವ ಬೀಳುತ್ತದೆ. ಆದ್ದರಿಂದಲೇ ಇವರ ಪದವಿಯಲ್ಲಿ ಮತ್ತು ಸಂಪಾದನೆಯಲ್ಲಿ ತೀವ್ರಗತಿಯ ಏರಿಕೆ ಇಳಿಕೆ ಆಗುವ ಸಂಭವ ಉಂಟು.
ಕುಂಭ
ಕುಂಭ ರಾಶಿಯವರಿಗೆ ಸಾಡೇಸಾತಿಯು ಬಹಳ ಕಷ್ಟಕರವಾಗಿರಬಹುದು. ಆದರೆ ಅಷ್ಟಮ ಶನಿ ಮತ್ತು ಪಂಚಮ ಶನಿಯಲ್ಲಿ ಶನಿಯು ಭಾಗ್ಯದಾಯಕನಾಗಿರುತ್ತಾನೆ. ಹಾಗೆಯೇ ಸಾಡೇಸಾತಿಯ ಸಂದರ್ಭದಲ್ಲಿ ಇವರು ಕಚೇರಿಯಲ್ಲೂ ಕುಟುಂಬದಲ್ಲೂ ಬಂಧುವರ್ಗದಲ್ಲೂ ಉನ್ನತೋನ್ನತ ಸ್ಥಾನವನ್ನೂ ಅಧಿಕಾರ ಸಂಪತ್ತುಗಳನ್ನೂ ಹೊಂದುತ್ತಾರೆ. ಇವರು ತಲುಪದ ಎತ್ತರಗಳೇ ಇರಲಿಕ್ಕಿಲ್ಲ. ಆದರೆ ತುಂಬಾ ಎತ್ತರ ಹೋದ ಮೇಲೆ ಕೆಳಗೆ ಬಿದ್ದರೆ, ತುಂಬಾ ಏಟಾಗುತ್ತದೆ ಅನ್ನುವದೂ ನೆನಪಿರಬೇಕು.
ಮನೆಮಂದಿ ನೆಗೆಟಿವ್ ಎನರ್ಜಿ ಪರಿಣಾಮದಿಂದ ತಪ್ಪಿಸಲು ಈ ವಾಸ್ತು ಟಿಪ್ಸ್ ಪಾಲಿಸಿ ...
ತುಲಾ
ಇವರನ್ನು ನೋಡಿದ ಕೂಡಲೇ ಶನೀಶ್ವರನಿಗೆ ತುಂಬಾ ಸಂತೋಷವಾಗುತ್ತದೆ. ಇವರ ಬಂಧುಬಳಗದಲ್ಲಿ ಪೀಡೆಗಳನ್ನೂ ಕಾಟಗಳನ್ನು ತರಲೆ ತಕರಾರುಗಳನ್ನೂ ತಂದಿಟ್ಟು ತಮಾಷೆ ನೋಡುತ್ತಾನೆ. ಕಚೇರಿಯಲ್ಲೂ ಸಂಬಂದಗಳ್ನು ಹದಗೆಡಿಸುತ್ತಾನೆ. ಇದಕ್ಕೆಲ್ಲ ಏನು ಪರಿಹಾರ? ಶನೀಶ್ವರನನ್ನು ಪ್ರಾರ್ಥಿಸುವುದು ಒಂದೇ ದಾರಿ. ಶನೀಶ್ವರನ ಗುಡಿಗೆ ಹೋಗಿ, ಎಳ್ಳೆಣ್ಣೆಯ ದೀಪ ಹಚ್ಚಿ, ಕಾಗೆಗಳಿಗೆ ಆಹಾರ ಕೊಡಿ, ದಾನ ನೀಡಿ. ಈ ರಾಶಿಗೆ ಶನಿ ಒಲಿದರೆ ಮಾತ್ರ ಜೀವಮಾನದುದ್ದಕ್ಕೂ ಕೂತು ಉಣ್ಣುವಂಥ ಐಶ್ವರ್ಯ ಕೊಡುತ್ತಾನೆ.
ಮೀನ
ಶನಿಯಿಂದ ಭಾಗ್ಯ ಪಡೆಯುವವರಲ್ಲಿ ಇವರ ಹೆಸರು ಮೊದಲಿಗರಾಗಿ ನಿಲ್ಲುತ್ತದೆ. ಶನಿಯಿಂದ ಏಟು ಬೀಳುವುದೂ ಸಂಪತ್ತು ಬರುವುದೂ ಸುಖ ಸಿಗುವುದೂ ಇವರಿಗೆ ಸಮಪ್ರಮಾಣದಲ್ಲಿ. ಅದರೆ ಇವರು ಅದನ್ನೆಲ್ಲ ಸಮಚಿತ್ತದಿಂದ ಸ್ವೀಕರಿಸಲು ರೆಡಿ ಇರಬೇಕು. ಶನಿಯು ಇವರಿಗೆ ಕೊಡಬೇಕಾದಲ್ಲಿ ಕೊಟ್ಟೇ ಕೊಡುತ್ತಾನೆ ಹಾಗೂ ಕೊಡದೆ ಇರಲಾರ ಕೂಡ. ಹೀಗಾಗಿ ಸಂಕಷ್ಟಗಳು ಬಂದರೆ ದೇವರನ್ನು ನೆನೆಯಲು ಶನೀಶ್ವರನು ಮಾಡಿದ ಕೃಪೆ ಎಂದು ತಿಳಿಯಬೇಕು.