ಮಧ್ಯಪ್ರದೇಶದ ರೇವಾದಲ್ಲಿ, ಖ್ಯಾತ ಹೃದಯ ತಜ್ಞರೊಬ್ಬರು ತಮ್ಮ ಪ್ರೇಯಸಿ ಜೊತೆಗಿದ್ದಾಗ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಪತ್ನಿ ಮತ್ತು ಪ್ರೇಯಸಿಯ ನಡುವೆ ಸಾರ್ವಜನಿಕವಾಗಿ ಬೀದಿ ಕಾಳಗ ನಡೆದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಾಕ್ಟರ್ ಪತ್ನಿ ಹಾಗೂ ಗೆಳತಿಯ ನಡುವೆ ಬೀದಿ ಕಾಳಗ

ಒಬ್ಬ ಹುಡುಗಿಗಾಗಿ ಇಬ್ಬರು ಹುಡುಗರು ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ಜಗಳ ಮಾಡುವುದು ಈಗ ಸಾಮಾನ್ಯ ಎನಿಸಿ ಬಿಟ್ಟಿದೆ. ಹಾಗೆಯೇ ಇಲ್ಲೊಬ್ಬರು ಹೃದಯ ತಜ್ಞರ ಹೃದಯಕ್ಕಾಗಿ ಎರಡು ಹೃದಯಗಳು ಪರಸ್ಪರ ಸಾರ್ವಜನಿಕವಾಗಿ ಕಚ್ಚಾಡಿಕೊಂಡಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ನೆಟ್ಟಿಗರ ಹಾಸ್ಯಮಯ ಕಾಮೆಂಟ್‌ಗಳಿಗೆ ಸಾಕ್ಷಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರದಿಯ ಪ್ರಕಾರ ಮಧ್ಯಪ್ರದೇಶದ ರೇವಾದಲ್ಲಿ ಈ ಘಟನೆ ನಡೆದಿದೆ. ರೇವಾದ ಖ್ಯಾತ ಹೃದಯ ತಜ್ಞ ಕೆ.ಡಿ. ಸಿಂಗ್‌ ಗಾಗಿ ಅವರ ಪತ್ನಿ ಹಾಗೂ ಪ್ರೇಯಸಿಯ ಮಧ್ಯೆ ಬೀದಿ ಕಾಳಗ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ವೀಡಿಯೋಗೆ ಹಾಸ್ಯಮಯವಾಗಿ ಕಾಮೆಂಟ್ ಮಾಡ್ತಿದ್ದಾರೆ. ವರದಿಯ ಪ್ರಕಾರ ಹೃದಯ ತಜ್ಞ ಡಾ. ಕೆ.ಡಿ. ಸಿಂಗ್ ಅವರ ಪತ್ನಿ ಕೆ.ಡಿ. ಸಿಂಗ್ ಅವರನ್ನು ಪ್ರೇಯಸಿ ಜೊತೆ ತಿರುಗಾಡುತ್ತಿರುವಾಗ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಪ್ರೇಯಸಿ ಹಾಗೂ ಹೆಂಡತಿ ಮಧ್ಯೆ ದೊಡ್ಡ ಗಲಾಟೆಯಾಗಿದ್ದು, ಇಬ್ಬರು ಬೀದಿಯಲ್ಲೇ ಪರಸ್ಪರರ ಕೂದಲು ಹಿಡಿದುಕೊಂಡು ಕಿತ್ತಾಡಿದ್ದಾರೆ. ಇಬ್ಬರ ನಡುವೆ ಸಿಕ್ಕಿ ಹೃದಯತಜ್ಞರು ಹೈರಾಣಾಗಿದ್ದು, ಇಬ್ಬರ ನಡುವಿನ ಜಗಳ ಬಿಡಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಬಹುಶಃ ನೋಡುಗರು ಯಾರೋ ಈ ಘಟನೆಯನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ವೈರಲ್ ಆಗ್ತಿದೆ.

ಇದನ್ನೂ ಓದಿ: ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

ವೈರಲ್ ಆದ ವೀಡಿಯೋದಲ್ಲಿ ಇಬ್ಬರ ನಡುವಿನ ಜಗಳ ಬಿಡಿಸುವುದಕ್ಕೆ ವೈದ್ಯರು ಹರಸಾಹಸ ಪಡುವುದನ್ನು ಕಾಣಬಹುದಾಗಿದೆ. ಆ ಹೆಂಡ್ತಿ ಗಂಡನ ತಲೆಕೂದಲು ಎಳೆಯುವ ಬದಲು ಮತ್ತೊಬ್ಬ ಮಹಿಳೆಯ ಕೂದಲನ್ನು ಏಕೆ ಎಳೆಯುತ್ತಿದ್ದಾಳೆ ಎಂದು ವೀಡಿಯೋ ನೋಡಿದ ಒಬ್ಬರು ಪ್ರಶ್ನಿಸಿದ್ದಾರೆ. ನಿಮ್ಮ ಗಂಡನಿಗೆ ಥಳಿಸುವ ಬದಲು ಆಕೆಯನ್ನು ಯಾಕೆ ಹಿಡಿದು ಎಳೆಯುತ್ತಿದ್ದೀರಿ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಕೆಲವರು ಇವರು ದಿಲ್ ಕಾ ಡಾಕ್ಟರ್ ಎಂದು ಕಾಮೆಂಟ್ ಮಾಡಿದ್ದಾರೆ. ಇವತ್ತಿನ ದಿನದಲ್ಲಿ ಎಲ್ಲವೂ ಗೋಲ್‌ಮಾಲ್ ಯಾರನ್ನು ನಂಬುವಂತಿಲ್ಲ, ಹೀಗಾಗಿ ಮದುವೆಯಾಗದೇ ಸಿಂಗಲ್ ಆಗಿರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಚಿಕಿತ್ಸೆಗೆಂದು ಬಂದ ಮಹಿಳೆಗೆ ಡಾಕ್ಟರ್ ಹೃದಯ ನೀಡಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ತನ್ನ ಸಾಕುನಾಯಿಗೆ ವರನ ಕಡೆಯವರು ಥಳಿಸಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು