Asianet Suvarna News Asianet Suvarna News

ಮಡಿಕೆಯೊಂದಿಗೆ ಮದ್ವೆಯಾಗಲು ಹೇಳಿದ ಪಾಲಕರು, ನ್ಯಾಯ ಕೇಳಿದ ಯುವತಿ

ಭಾರತದಲ್ಲಿ ಮದುವೆಗೆ ಮುನ್ನ ಕೆಲ ಆಚರಣೆಗಳನ್ನು ಪಾಲಿಸಬೇಕು. ಈಗ್ಲೂ ಜನರು ಅದ್ರಲ್ಲಿ ನಂಬಿಕೆಯಿಟ್ಟುಕೊಂಡಿದ್ದಾರೆ. ಮಕ್ಕಳಿಗೆ ಸಂಪ್ರದಾಯ ಪಾಲನೆ ಮಾಡುವಂತೆ ಸಲಹೆ ನೀಡ್ತಾರೆ. ಈ ಯುವತಿ ಕೂಡ ಪಾಲಕರ ಒತ್ತಡಕ್ಕೆ ಬಿದ್ದಿದ್ದಾಳೆ. ಅವರು ಹೇಳಿದ್ದನ್ನು ಮಾಡಲು ಮನಸ್ಸಿಲ್ಲದೆ ಒದ್ದಾಡ್ತಿದ್ದಾಳೆ. 
 

Girl Force To Marry Pot For Husbands Health Asks For Advice On Social Media Reddit Post Viral roo
Author
First Published Oct 6, 2023, 2:17 PM IST

ಮದುವೆಗೆ ಸಂಬಂಧಿಸಿದಂತೆ ಅನೇಕ ಪದ್ಧತಿಗಳನ್ನು ನಮ್ಮಲ್ಲಿ ಆಚರಿಸಿಕೊಂಡು ಬರಲಾಗ್ತಿದೆ. ಒಂದೊಂದು ಸಮುದಾಯ, ಜನಾಂಗದಲ್ಲಿ ಬೇರೆ ಬೇರೆ ಪದ್ಧತಿಗಳಿವೆ. ಕೆಲವೊಂದು ಕಡೆ ವಾರದ ಹಿಂದಿನಿಂದಲೇ ಮದುವೆ ಆಚರಣೆಗಳು ಶುರುವಾಗುತ್ತದೆ. ಮದುವೆ ದಿನ ಕೂಡ ಸಂಪ್ರದಾಯ, ಪೂಜೆ, ಪದ್ಧತಿಗಳನ್ನು ಪಾಲಿಸಿ ವಧು – ವರರು ಸುಸ್ತಾಗೋದಿದೆ. 

ಈಗಿನ ಜನರು ಹಿಂದಿನಂತೆ ವಾರಗಟ್ಟಲೆ ಮದುವೆ (Marriage) ಆಗೋದಿಲ್ಲ. ತುಂಬಾ ಸರಳವಾಗಿ ವಿವಾಹವಾಗಲು ಬಯಸ್ತಾರೆ. ಆದ್ರೆ ಪಾಲಕರು, ಸಂಬಂಧಿಕರ ಒತ್ತಡ (Pressure) ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಕೆಲವೊಂದು ಪದ್ದತಿ ವಿಚಿತ್ರವೆನ್ನಿಸಿದ್ರೂ ಅದನ್ನು ಪಾಲಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಂದೆ – ತಾಯಿಗೆ ನೋವಾಗದಿರಲಿ ಎನ್ನುವ ಕಾರಣಕ್ಕೆ ಕೆಲವರು ತುಟಿಕ್ ಪಿಟಿಕ್ ಎನ್ನದೆ ಪದ್ಧತಿ ಪಾಲಿಸ್ತಾರೆ. ಮತ್ತೆ ಕೆಲವರು ಇದನ್ನು ವಿರೋಧಿಸುತ್ತಾರೆ. ಈಗ ಯುವತಿಯೊಬ್ಬಳು ತನ್ನ ವಿರೋಧವನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾಳೆ. ಮದುವೆ ನಿಶ್ಚಯವಾದ್ಮೇಲೆ ಪಾಲಕರು ಹೇಳ್ತಿರುವ ಯಾವ ಆಚರಣೆ ಕಿರಿಕಿರಿ ನೀಡಿದೆ ಎಂಬುದನ್ನು ಆಕೆ ವಿವರಿಸಿದ್ದಾಳೆ.

ಹಾಸನದ ಕಾಡಲ್ಲಿ ದಂಪತಿ ವನವಾಸ, ಅರಣ್ಯದೊಂದಿಗೇ ಅನುದಿನದ ಅನುರಾಗ!

ರೆಡ್ಡಿಟ್ (Reddit) ನಲ್ಲಿ ಆಕೆ ನೀಡಿದ ಮಾಹಿತಿ ಪ್ರಕಾರ, ಅವಳು ಮುಂಬೈನವಳು. ಆಕೆಗೆ ಮದುವೆ ನಿಶ್ಚಯವಾಗಿದೆ. ಮದುವೆಗೆ ಮೊದಲು ಮಣ್ಣಿನ ಮಡಿಕೆ ಜೊತೆ ಮದುವೆ ಆಗುವಂತೆ ಪಾಲಕರು ಒತ್ತಾಯ ಮಾಡ್ತಿದ್ದಾರೆ. ಮಣ್ಣಿನ ಮಡಿಕೆ (Pot) ಜೊತೆ ಮೊದಲ ಮದುವೆ ನಡೆದ್ರೆ, ಆಕೆ ಮದುವೆಯಾಗುವ ಪತಿ ಆಯಸ್ಸು ಹೆಚ್ಚಾಗುತ್ತದೆ, ದಾಂಪತ್ಯದಲ್ಲಿ ಯಾವುದೇ ಬಿರುಕು ಕಾಣಿಸಿಕೊಳ್ಳುವುದಿಲ್ಲವೆಂದು ಅವರು ಹೇಳ್ತಿದ್ದಾರೆ.

ಯುವತಿ ನಾಸ್ತಿಕಳಾಗಿದ್ದು, ಆಕೆಗೆ ಇದ್ರಲ್ಲೆಲ್ಲ ವಿಶ್ವಾಸವಿಲ್ಲ. ಮಣ್ಣಿನ ಮಡಿಕೆ ಜೊತೆ ಮದುವೆಯಾಗಲು ನನಗೆ ಇಷ್ಟವಿಲ್ಲ. ನನ್ನ ಮನಸ್ಸಿಗೆ ವಿರುದ್ದವಾಗಿ ನಾನು ಈ ಕೆಲಸ ಮಾಡೋದಿಲ್ಲ. ಆದ್ರೆ ಮನೆಯಲ್ಲಿ ತಂದೆ – ತಾಯಿ ಇಡೀ ದಿನ ಇದೇ ವಿಷ್ಯವನ್ನು ಚರ್ಚಿಸುತ್ತಿದ್ದಾರೆ. ನನಗೆ ಒತ್ತಡ ಹೇರ್ತಿದ್ದಾರೆ. ಇದ್ರಿಂದ ಮಾನಸಿಕ ಕಿರಿಕಿರಿ ಆಗ್ತಿದೆ ಎನ್ನುತ್ತಾಳೆ ಆಕೆ. 

ಸುಶಾಂತ್‌ ಸಿಂಗ್‌ ಸಾವಿಗಾಗಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಮಾಟ-ಮಂತ್ರ ಮಾಡಿದ್ರಾ?

ನನ್ನ ತಂದೆ- ತಾಯಿ ಅಶಿಕ್ಷಿತರಲ್ಲ. ತಾಯಿ ಬಿ.ಕಾಮ್ ಪದವೀಧರೆ. ತಂದೆ ಇಂಜಿನಿಯರ್ ಮುಗಿಸಿದ್ದಾರೆ. ಆದ್ರೂ ಹಳೆ ಪದ್ಧತಿಯನ್ನು ಪಾಲಿಸುವಂತೆ ನನಗೆ ಹೇಳ್ತಿದ್ದಾರೆ. ನಾನೇನು ಮಾಡ್ಲಿ ಎಂದು ಯುವತಿ ರೆಡ್ಡಿಟ್ ಬಳಕೆದಾರರಿಗೆ ಪ್ರಶ್ನೆ ಕೇಳಿದ್ದಾಳೆ.

ರೆಡ್ಡಿಟ್ ನಲ್ಲಿ ಈಕೆ ಪೋಸ್ಟ್ ವೈರಲ್ ಆಗಿದೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಜನರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ನೀವು ಆಯ್ಕೆ ಮಾಡಿದ ಮಣ್ಣಿನ ಮಡಿಕೆ, ಕೆಟಲ್ ಜೊತೆ ಓಡಿ ಹೋಯ್ತು ಎಂದು ಪಾಲಕರಿಗೆ ಹೇಳಿ ಎಂದು ಒಬ್ಬರು ಹೇಳಿದ್ದಾರೆ. ಅಯ್ಯೋ, ಮಣ್ಣಿನ ಮಡಿಕೆಗೆ ಈ ಸ್ಥಿತಿ ಬರಬಾರದಿತ್ತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಮಡಿಕೆ ಮದುವೆ ಸಂಪ್ರದಾಯ: ಭಾರತದಲ್ಲಿ ಜಾತಕವನ್ನು ನಂಬುವ ಜನರ ಸಂಖ್ಯೆ ಹೆಚ್ಚಿದೆ. ಜಾತಕ ನೋಡಿ ವಿವಾಹ ಮಾಡುವ ಪದ್ಧತಿ ಇದೆ. ಜಾತಕದಲ್ಲಿ ಕೆಲ ದೋಷವಿದ್ದಾಗ ಈ ಮಣ್ಣಿನ ಮಡಿಕೆಗೆ ವಿವಾಹ ನಡೆಯುತ್ತದೆ. ಮಂಗಳ ಗ್ರಹ ಸೌಮ್ಯ ಅಥವಾ ಪೂರ್ಣ ಪ್ರಭಾವದ ಅಡಿಯಲ್ಲಿ ಜನಿಸಿದ ಪುರುಷರು ಮತ್ತು ಮಹಿಳೆಯರನ್ನು ಮಾಂಗ್ಲಿಕ್ ಅಥವಾ ಮಂಗಳ ಶಾಪಗ್ರಸ್ತ  ಎಂದು ಕರೆಯುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇವರ ಮದುವೆ ಮುರಿದು ಬೀಳುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಮೊದಲು ಅವರಿಗೆ ಮಡಿಕೆ ಜೊತೆ ಮದುವೆ ಮಾಡಿಸಲಾಗುತ್ತದೆ. ಕೆಲವೊಮ್ಮೆ ಮರ ಅಥವಾ ಯಾವುದಾದ್ರೂ ಪ್ರಾಣಿ ಜೊತೆ ಮದುವೆ ಮಾಡುವ ಪದ್ಧತಿಯೂ ಜಾರಿಯಲ್ಲಿದೆ. ಹೀಗೆ ಮಾಡಿದ್ರೆ ಎರಡನೇ ಮದುವೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದು ಜನರ ನಂಬಿಕೆ. 
 

Follow Us:
Download App:
  • android
  • ios