Asianet Suvarna News Asianet Suvarna News

ಹಾಸನದ ಕಾಡಲ್ಲಿ ದಂಪತಿ ವನವಾಸ, ಅರಣ್ಯದೊಂದಿಗೇ ಅನುದಿನದ ಅನುರಾಗ!

ಇವರ ಬದುಕಿನ ರೀತಿಯೇ, ಲೈಫ್‌ಸ್ಟೈಲೇ ಹೀಗೆ. ಕಾಡೇ ಇವರಿಗೆ ಆನಂದದಾಯಕ. ಸಿಟಿ ಬದುಕು ನೀರಸ. ಅದಕ್ಕಾಗಿಯೇ ಪೇಟೆಯ ಅಗತ್ಯವೇ ಇಲ್ಲದಂತೆ ಬದುಕುತ್ತಿದ್ದಾರೆ. ಯಾರಿವರು?

sustainable wild side life of couple in Sakleshpur of hassan makes life eco friendly bni
Author
First Published Oct 6, 2023, 12:24 PM IST

ಪಶ್ಚಿಮ ಘಟ್ಟದ ನಡುವಿನ ಊರಾದ ಸಕಲೇಶಪುರದ ಎಲ್ಲೋ ಒಂದು ಕಡೆ, ಕಾಡಂಚಿನಲ್ಲಿ ಒಂದು ದಂಪತಿ ಮನೆ ಮಾಡಿಕೊಂಡಿದೆ. ದಂಪತಿಗೆ ಇಬ್ಬರು ಮಕ್ಕಳು. ಜತೆಗೆ ಮೂರು ನಾಯಿಗಳು. ಮನೆಯ ಸುತ್ತಮುತ್ತ ಕಾಡು ಮತ್ತು ಇವರೇ ಅಗೆದು ಬಗೆದು ಮಾಡಿದ ಕೃಷಿ. ತಾವೇ ಸ್ವತಃ ಕೈಯಾರೆ ಕಟ್ಟಿ ಬೆಳೆಸಿದ ಮಣ್ಣಿನ ಮನೆ, ಕೋಳಿಗೂಡು ಮತ್ತಿತರ ಸಣ್ಣಪುಟ್ಟ ರಚನೆಗಳು. ಇವರು ಪೇಟೆಗೆ ಬರುವುದೇ ಇಲ್ಲ. ಪೇಟೆಯ ಯಾವ ಅವಲಂಬನೆಯೂ ಇಲ್ಲ. ಮಕ್ಕಳು ಶಾಲೆಗೆ ಹೋಗುವುದಿಲ್ಲ. ಅಪ್ಪ ಅಮ್ಮನ ಜತೆಗೆ ತೋಟದಲ್ಲಿ ತರಕಾರಿ ಬೆಳೆಯುತ್ತಾರೆ. ಕಾಡಿನಿಂದ ಬರುವ ನೀರು ಕುಡಿಯುತ್ತಾರೆ. ಚಂದದ ಪುಟ್ಟ ಕೊಳದಲ್ಲಿ ಈಜುತ್ತಾರೆ. ನಾಯಿಗಳ ಜತೆಗೆ ಆಡುತ್ತಾರೆ. ಪ್ರಕೃತಿಯಲ್ಲಿ ಒಂದಾಗಿ ಇರುತ್ತಾರೆ.

ಇದೆಲ್ಲ ಯಾವುದೋ ಕನಸಿರಬೇಕು ಎನ್ನುತ್ತೀರಾ? ಹಾಗೇನೂ ಇಲ್ಲ. ಅವರಿಬ್ಬರ ಹೆಸರು ಗೌತಮ್‌ ಕೋಟಮರಾಜು ಮತ್ತು ವೆನೆಷಿಯಾ. ಇವರ ಬದುಕಿನ ರೀತಿಯೇ, ಲೈಫ್‌ಸ್ಟೈಲೇ ಹೀಗೆ. ಔಷಧೀಯ ವನ ನೆಡುವುದು, ಮಣ್ಣಿನ ಕೊಳವನ್ನು ಅಗೆಯುವುದು, ಮಣ್ಣಿನ ಮುದ್ದೆಗಳಿಂದ ಕಟ್ಟಡ ರಚನೆ, ಅರಣ್ಯ ಪಾಲನೆವರೆಗೆ ವೆನೆಷಿಯಾ ಮತ್ತು ಗೌತಮ್ ಕೋಟಮರಾಜು ಅವರು ಪ್ರಯತ್ನಿಸದ್ದೇನೂ ಇಲ್ಲ.

ಇವರ ಬದುಕಿನ ಬಗ್ಗೆ ವೆನೆಷಿಯಾ ಅವರ ಮಾತುಗಳನ್ನೇ ಮುಂದೆ ಕೊಡುತ್ತೇವೆ. ಓದಿ:

 

ʼಆಗ ನಾನು ನಮ್ಮ ಮೊದಲ ಮಗ ಉತ್ಪಲಾಕ್ಷನನ್ನು ಹೊಟ್ಟೆಯಲ್ಲಿ ಹೊತ್ತಿದ್ದ ಗರ್ಭಿಣಿಯಾಗಿದ್ದೆ. ಗೌತಮ್ ಮತ್ತು ನಾನು ಅವನು ಮುಂದೆ ಬೆಳೆಯುವ ಸಿಟಿ ವಾತಾವರಣ ಅನಾರೋಗ್ಯಕರ ಎಂದು ಕಂಡುಕೊಂಡೆವು. ನಾವು ನಗರದ ಜೀವನದ ಬಗ್ಗೆ ಅಸಂತೃಪ್ತಿ ಹೊಂದಿದ್ದೆವು. ಅದಕ್ಕೆ ವಿರಾಮ ನೀಡಲು ನಿರ್ಧರಿಸಿದೆವು. ಆರಂಭದಲ್ಲಿ ತೋಟಗಳು ಮತ್ತು ಕಾಫಿಗೆ ಹೆಸರುವಾಸಿಯಾದ ಸಕಲೇಶಪುರಕ್ಕೆ ವಾರಾಂತ್ಯದ ಪ್ರವಾಸ ಹೋದೆವು. ಕಾಡಿಕಾಡಿನೊಳಗೆ ಟೆಂಟ್‌ಗಳಲ್ಲಿ ವಾಸಿಸಿದೆವು.ʼ

ಸ್ವಲ್ಪ ಸಮಯದ ನಂತರ, ಕಾಡೇ ನಮ್ಮ ಜೀವನ, ಇದೇ ಶಾಶ್ವತ ಜೀವನ ಮಾರ್ಗ ಎನಿಸತೊಡಗಿತು. ಸಿಟಿಯಲ್ಲಿ ಕಲೆ ಹಾಕುವ ಏನೆಲ್ಲ ವಸ್ತುರಾಶಿಗಳು ಇಲ್ಲದೆಯೂ ಕನಿಷ್ಠ ಅಗತ್ಯವಸ್ತುಗಳೊಂದಿಗೆ ಬದುಕಬಹುದು ಎಂಬುದು ಅವರಿಗೆ ಅರ್ಥವಾಯಿತು. ದಂಪತಿ ಸಕಲೇಶಪುರದ ಕಾಡಿನ ಬದಿಯುಲ್ಲಿ ಜಮೀನು ಖರೀದಿಸಿದರು. ವಾರಾಂತ್ಯದಲ್ಲಿ ಅಲ್ಲಿಗೆ ಹೋಗಿ ಬರತೊಡಗಿದರು. ನಂತರ ವೆನೆಷಿಯಾ ಮತ್ತು ಮಕ್ಕಳು ಅಲ್ಲಿರತೊಡಗಿದರು. ಗೌತಮ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತ ವಾರಾಂತ್ಯದಲ್ಲಿ ಸಕಲೇಶಪುರಕ್ಕೆ ಹೋಗತೊಡಗಿದರು. ಕೊನೆಗೆ ಗೌತಮ್‌ ಕೂಡ ಕೆಲಸಕ್ಕೆ ರಾಜೀನಾಮೆ ನೀಡಿ ಇಲ್ಲಿಗೆ ಬಂದರು.

ಕೆಲವು ವರ್ಷಗಳ ಹಿಂದೆ ಇಲ್ಲಿ ಇವರಿಗೆ ಬದುಕಲು ಇದ್ದುದು ಕೇವಲ ಟೆಂಟ್, ಕೆಲವು ಮಲಗುವ ಬ್ಯಾಗ್‌ಗಳು, ಅಡುಗೆಯ ಪಾತ್ರೆ ಇತ್ಯಾದಿ. ಈ ಜೀವನಶೈಲಿಗೆ ಇವರು ʻದಿ ವೈಲ್ಡ್ ಸೈಡ್' ಎಂದು ಹೆಸರಿಸಿದರು. ನಿಧಾನವಾಗಿ ಸರಳವಾದ ಮತ್ತು ಪ್ರಮುಖವಾದ ಕೆಲಸ ಸಂಗತಿಗಳನ್ನು ಸೇರಿಸಲು ಪ್ರಾರಂಭಿಸಿದರು.

ಲಲಿತಾ ಪಂಚಮಿಯ ಮಹತ್ವ, ಮುಹೂರ್ತ ತಿಳ್ಕೊಳಿ, ಆರೋಗ್ಯಕ್ಕಾಗಿ ಲಲಿತಾರಾಧನೆ ಮಾಡಿ

ಇಂದು ಅಲ್ಲಿ ಎಂದೂ ಕಲುಷಿತವಾಗದ ಸ್ನಾನಗೃಹ, ಅಡುಗೆಗೆ ಕನಿಷ್ಠ ವ್ಯವಸ್ಥೆ ಮತ್ತು ಬಟ್ಟೆ ಒಗೆಯಲು ಸಿಂಕ್, ಕಾಂಪೋಸ್ಟ್ ಶೌಚಾಲಯ, ಸೌದೆ ಒಲೆ ಇವೆ. ನೀವು ಇವರ ಜಮೀನಿಗೆ ಭೇಟಿ ನೀಡಿದರೆ ತರಕಾರಿ ತೋಟ, ಮಣ್ಣಿನ ಕೊಳದ ಜೊತೆಗೆ ಅಡುಗೆಗಾಗಿ ಹಳೆಯ ಪಾತ್ರೆಗಳನ್ನು ಕಾಣಬಹುದು. ಅವರು ಯಾವುದೇ ಕೃಷಿ ಕೆಲಸಕ್ಕೆ ಕೂಲಿ ಬಳಸುವುದಿಲ್ಲ. ಸ್ವತಃ ಮಾಡುತ್ತಾರೆ. ಒಮ್ಮೊಮ್ಮೆ ಕೆಲವು ಸ್ವಯಂಸೇವಕರು ಸಹಾಯ ಮಾಡಲು ಬರುತ್ತಾರೆ.

ಇವರ ಮಕ್ಕಳು ಕೂಡ ಆಡುವುದರ ಜತೆಗೆ ಈ ಕೆಲಸಗಳಲ್ಲಿ ಸಕ್ರಿಯವಾಗಿ ಸಹಾಯ ಮಾಡುತ್ತಾರೆ. ಅವರ ಹೆಸರು ಉತ್ಪಲಾಕ್ಷ ಮತ್ತು ಥಿಯೋಸ್. ಜಮೀನಿನಲ್ಲಿ ಅವರ ಸುಸ್ಥಿರ ಕೆಲಸಗಳ ಅತ್ಯುತ್ತಮ ಉದಾಹರಣೆಯೆಂದರೆ ಮಣ್ಣಿನ ಮುದ್ದೆಗಳನ್ನು ಬಳಸಿ ಮಾಡಿದ ಮೂಲಭೂತ ಮಣ್ಣಿನ ಕಟ್ಟಡಗಳು. "ನಾವು ಇಲ್ಲಿ ಮಾಡಿದ ಏಕೈಕ ಆಧುನಿ ಸಂಗತಿ ಎಂದರೆ ಮಗುವಿನ ಲಾಂಡ್ರಿ ಅಗತ್ಯಗಳನ್ನು ನಿರ್ವಹಿಸಲು ಟ್ಯಾಪ್ ಮತ್ತು ಸೋಲಾರ್ ವಾಟರ್ ಹೀಟರ್ ಮೂಲಕ ಹರಿಯುವ ನೀರು.

ವರ್ಷಕ್ಕೊಮ್ಮೆ ಇವರು ಇಂಗ್ಲೆಂಡ್‌ನಲ್ಲಿರುವ ವೆನೆಷಿಯಾ ಅವರ ಮನೆಗೆ ಮತ್ತು ಬೆಂಗಳೂರಿನಲ್ಲಿರುವ ಗೌತಮ್ ಅವರ ಮನೆಗೆ ಭೇಟಿ ಕೊಡುತ್ತಾರೆ. ಅದು ಬಿಟ್ಟರೆ ಕುಟುಂಬವು ಫಾರ್ಮ್‌ನಲ್ಲೇ ಇರುತ್ತದೆ. ನಗರ ಜೀವನದ ಕಿರಿಕಿರಿಗಳಿಂದ ಮುಕ್ತವಾಗಿರುತ್ತದೆ. ನಗರಕ್ಕೆ ಹಿಂತಿರುಗುವುದು ಸಮಗೆ ಸಂತೋಷವಾಗುವುದಿಲ್ಲ ಎನ್ನುತ್ತಾರೆ ವೆನೆಷಿಯಾ.

ಹೃದಯ, ಮೂಳೆ ಸ್ಟ್ರಾಂಗ್ ಆಗಬೇಕು ಅಂದ್ರೆ ಬ್ರೇಕ್ ಫಾಸ್ಟ್ ಗೆ ಇವನ್ನ ತಿನ್ನಿ
 

Follow Us:
Download App:
  • android
  • ios