Father's day: ಲೈಫಿನ ಹೀರೋ ಅಪ್ಪನಿಂಗೆ ಏನು ಗಿಫ್ಟ್ ಕೊಡುತ್ತೀರಿ?
ನಮ್ಮೆಲ್ಲರಿಗೂ ತಂದೆ ತಾಯಿಯ ಮೇಲೆ ಪ್ರೀತಿ ಇರುತ್ತದೆ. ಆದರೆ, ನಮ್ಮ ಕೆಲವು ಕೆಲಸ ಹಾಗೂ ಒತ್ತಡಗಳ ನಡುವೆ ಅವರನ್ನು ಮರೆತು ಬಿಡುತ್ತೀವಿ. father's day ಜೂನ್ 19 ರಂದು ಆಚರಿಸಾಗುತ್ತದೆ. ಅಂದು ನಿಮ್ಮ ತಂದೆಗೆ ಒಂದು ಸರ್ಪ್ರೈಸ್ ನೀಡುವ ಮೂಲಕ ಅವರ ಮುಖದಲ್ಲಿ ಮೂಡುವ ಆ ಸುಂದರ ನಗುವಿಗೆ ಕಾರಣರಾಗಿ.
ತಂದೆ ತಾಯಿ ಮಕ್ಕಳಿಗೆ ಜನ್ಮ ನೀಡಿದರೆ ಅಲ್ಲಿಂದ ಅವರ ಜೀವನದ ಮತ್ತೊಂದು ಅದ್ಯಾಯ ಪ್ರಾರಂಭ ಆದ ಹಾಗೆ. ತಮ್ಮ ಮಗುವೊಂದು ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ತಿಳಿದಾಗನಿಂದ ಅವರಿಡುವ ಪ್ರತಿಯೊಂದು ಹೆಜ್ಜೆಯೂ ತಮ್ಮ ಮಗುವಿನ ಭವಿಷ್ಯದ (Future) ನಿರ್ಮಾಣಕ್ಕೆ ಆಗಿರುತ್ತದೆ. ಅಮ್ಮ 9 ತಿಂಗಳ ಕಾಲ ಮಗುವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ಜೋಪಾನ ಮಾಡಿದರೆ, ಅಪ್ಪ ಆ ಮಗುವಿನ ಜೊತೆ ಅದನ್ನು ಹೊತ್ತಿರುವ ತನ್ನ ಹೆಂಡತಿಯ ಕಾಳಜಿಯ ಹೊಣೆಯನ್ನೂ ಹೊತ್ತಿರುತ್ತಾರೆ. ಅಪ್ಪ ಅಂದ್ರೇನೆ ಹಾಗೆ, ಹೆಂಡತಿ (Wife) ಮತ್ತು ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿರುವ ವ್ಯಕ್ತಿ.
ಅಮ್ಮ ತನ್ನ ಮಗುವಿನ ಉಸಿರ ಏರಿಳಿತವನ್ನು ಅರ್ಥೈಸಿಕೊಳ್ಳ ಬಲ್ಲಳು. ಮಗುವು 'ಅಮ್ಮಾ' ಎಂದು ಕರೆಯುವ ಧಾಟಿಯಲ್ಲಿಯೇ ಅದಕ್ಕೆ ಏನು ಬೇಕಾಗಿದೆ ಎಂದು ಮಗು ಕೇಳದೆಯೂ ತಿಳಿದುಕೊಳ್ಳುವ ಬುದ್ಧಿವಂತೆ. ಅಮ್ಮ ತನ್ನ ಮಗುವಿಗಾಗಿ ತೋರುವ ಪ್ರೀತಿ ಹಾಗೂ ತ್ಯಾಗವನ್ನು (Sacrifice) ಜನರು ಗುರುತಿಸುತ್ತಾರೆ. ಆದರೆ, ಕೆಲವೊಮ್ಮೆ ತಂದೆ ಮಾಡುವ ತ್ಯಾಗ ಯಾರಿಗೂ ಕಾಣದೆ ಹೋಗಿಬಿಡಬಹುದು. ತನ್ನನ್ನು ಗುರುತಿಸಲಿ ಎಂದು ಅಪ್ಪ ಎಂದಿಗೂ ಬಯಸುವುದೂ ಇಲ್ಲ. ತನ್ನ ಹೆಂಡತಿ ಮತ್ತು ಮಕ್ಕಳ ಸಂತೋಷದ ಮುಂದೆ ಆತನಿಗೆ ಬೇರೆಲ್ಲವೂ ಶೂನ್ಯ. ಆದರೆ, ಇದೀಗ ತಂದೆಯ ದಿನ. ಇನ್ನಾದರೂ ಅವರ ತ್ಯಾಗವನ್ನು ಗುರುತಿಸಬೇಕಲ್ಲವೆ.
ನೀವು ಒಂದೇ ಒಂದು ಕರೆ ಮಾಡಿ ಕಷ್ಟದಲ್ಲಿ ಇದ್ದೀರ ಎಂದು ಹೇಳಿದರೆ ಸಾಕು, ತಮಗೆ ಅದೆಷ್ಟೇ ಮುಖ್ಯ ಕೆಲಸ ಇರಲಿ ಅದೆಲ್ಲವನ್ನೂ ಬಿಟ್ಟು ಓಡಿ ಬಂದುಬಿಡುತ್ತಾರೆ ಅಪ್ಪ. ಮಕ್ಕಳು ಆಟ ಆಡುವ ವಸ್ತು ಅಥವಾ ತಿಂಡಿ ತಿನಿಸು ಅದೇನೇ ಬೇಕು ಎಂದು ಕೇಳಿದರೂ ಕೆಲವೇ ಕ್ಷಣದಲ್ಲಿ ಅದನ್ನು ಮಕ್ಕಳ ಎದುರಿಗೆ ಇಡುತ್ತಾರೆ. ಕೋಪ (Anger) ಬಂದಾಗ ಗದರುವ ಹಾಗೆ ಕಾಣುವ ಅಪ್ಪ ತನ್ನ ಮಗುವಿಗೆ ಗದರಿದೆನಲ್ಲಾ ಎಂದು ನೊಂದುಕೊಳ್ಳುವುದು ಯಾರಿಗೂ ತಿಳಿಯುವುದೇ ಇಲ್ಲ. ಸದಾ ಕಾಲ ಹೆಂಡತಿ ಮತ್ತು ಮಕ್ಕಳ ಕಾಳಜಿ ಮಾಡುವ ಅಪ್ಪ ತನ್ನ ನೋವನ್ನು ತಾನೇ ನುಂಗಿಕೊಳ್ಳುತ್ತಾರೆ. ನೀವು ಗಮನಿಸಿರಬಹುದು, ಅಪ್ಪ ನಿಮ್ಮ ಜೊತೆಗಿದ್ದಾರೆ ಎಂದಾದರೆ ಇಡೀ ಜಗವೇ ನಿಮ್ಮ ಜೊತೆ ಇದ್ದಂತೆ ಅದರಷ್ಟು ಧೈರ್ಯ (Dare) ನಿಮಗೆ ಬೇರೆ ಯಾವುದೇ ವಿಚಾರದಲ್ಲಿಯೂ ಸಿಗಲು ಸಾಧ್ಯವಿಲ್ಲ.
ಮಕ್ಕಳು ಮಣ್ಣು ತಿಂದ್ರೆ ತಪ್ಪಲ್ಲ, ಹಾಗಂಥ ಪದೆ ಪದೇ ತಿಂದ್ರೆ ಡೇಂಜರಸ್!
ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಇದೆ. ಮಕ್ಕಳು ಏನೇ ಮಾಡಿದರೂ ಅದು ತಂದೆ ತಾಯಿಗೆ ಖುಷಿ ತರಿಸುತ್ತದೆ. ಅದರಲ್ಲಿಯೂ ತಮ್ಮ ಮಕ್ಕಳು ಏನಾದರೂ ಸಣ್ಣ ಸಾಧನೆ ಮಾಡಿದರೂ ಸಾಕು ಅಪ್ಪನಿಗೆ ಅದೇ ಗರ್ವ. ಅದೇನೇ ವಿಷಯಕ್ಕೂ ಬೇರೆಯವರೊಂದಿಗೆ ರಾಜಿ (Compromise) ಆಗದೆ ಇರುವ ಅಪ್ಪ ತನ್ನ ಮಕ್ಕಳಿಗಾಗಿ ಎಲ್ಲಾ ಕಡೆಯೂ ರಾಜಿಯಾಗುತ್ತಾರೆ. ಆದರೆ, ಅದೇ ತಮ್ಮ ಮಕ್ಕಳ ತಂಟೆಗೆ ಬರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಹೀಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಅಪ್ಪ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಕನಸು ನನಸು ಮಾಡುವ ಓಟದಲ್ಲಿ ತನ್ನ ಎಷ್ಟೋ ಕನಸುಗಳನ್ನು ಸಮಾಧಿ ಮಾಡಿರುತ್ತಾರೆ.
ಯುವಜನರು ಪೋಷಕರ ಜೊತೆ ಹೇಗಿರಬೇಕು, ಉದ್ಯಮಿ ಆನಂದ್ ಮಹೀಂದ್ರಾ ಟಿಪ್ಸ್
Father's day ಯಂದು ನಿಮ್ಮ ತಂದೆಗೆ ಸರ್ಪ್ರೈಸ್ ನೀಡಿ. ಯಾವಾಗಲೂ ಮಕ್ಕಳ ಇಷ್ಟ- ಕಷ್ಟಗಳ ಕುರಿತು ಚಿಂತಿಸುವ ಅಪ್ಪ ತನ್ನ ಇಷ್ಟಗಳ ಬಗ್ಗೆ ಹೇಳುವುದೇ ಇಲ್ಲ. ಆದರೂ, ಅವರು ಸಂತೋಷ ಪಡುವ ರೀತಿಯಲ್ಲಿ ಅವರಿಗಾಗಿ ಗಿಫ್ಟ್ ಖರೀದಿಸಿ ಇಲ್ಲವೇ ಅವರ ನೆಚ್ಚಿನ ಅಡುಗೆ ನೀವೇ ನಿಮ್ಮ ಕೈಯಾರೆ ತಯಾರಿಸಿ ಕೊಡಿ, ನಿಮಗೆ ಅವರ ಮೇಲಿರುವ ಪ್ರೀತಿ ಹಂಚಿಕೊಳ್ಳಿ, ತಂದೆ ತಾಯಿ ಜೊತೆ ಕುಳಿತು ಮನಬಿಚ್ಚಿ ಮಾತನಾಡಿ ಅವರ ಮಾತುಗಳನ್ನು ಆಲಿಸಿ. ಹೀಗೆ ನೀವು ಮಾಡುವ ಸಣ್ಣ ಪುಟ್ಟ ಕೆಲಸಗಳು ಅವರಿಗೆ ಸ್ವರ್ಗ ಸುಖ ನೀಡುತ್ತದೆ ಎಂಬುದು ನೆನಪಿಡಿ (Remember), ಇದೆಲ್ಲ ಬರಿಯ father's day ಗೆ ಸೀಮಿತವಾಗಿ ಉಳಿಯದೆ ಇರಲಿ. ಪ್ರತಿದಿನ ಸಾಧ್ಯವಾದಷ್ಟು ನಿಮ್ಮ ತಂದೆ ತಾಯಿಗೆ ಸಮಯ ನೀಡಿ ಅವರನ್ನು ಖುಷಿ ಪಡಿಸಿ. ಕಾಣದ ದೇವರಿಗೆ ಕೈ ಮುಗಿಯುವ ಬದಲಿಗೆ ಕಣ್ಣೆದುರೇ ಇರುವ, ಕೇಳದೇ ಇದ್ದರೂ ಎಲ್ಲವನ್ನೂ ನೀಡುವ ಅಪ್ಪ ಅಮ್ಮನೇ ನಿಜವಾದ ದೇವರಲ್ಲವೆ...