ಮಕ್ಕಳು ಮಣ್ಣು ತಿಂದ್ರೆ ತಪ್ಪಲ್ಲ, ಹಾಗಂಥ ಪದೆ ಪದೇ ತಿಂದ್ರೆ ಡೇಂಜರಸ್!
'ಮಕ್ಕಳು ಮನಸ್ಸಿನಲ್ಲಿ ಮುಗ್ಧರು' ಎಂಬ ಗಾದೆ ನಿಜ. ಸಣ್ಣ ಮಕ್ಕಳು ಯಾವಾಗಲೂ ತಮ್ಮ ತುಂಟಾಟಗಳಿಂದ ಹಿರಿಯರ ಹೃದಯವನ್ನು ಗೆಲ್ಲುತ್ತಾರೆ. ಆದರೂ ಮಕ್ಕಳು ಮಾಡುವ ಕೆಲವೊಂದು ಕೆಲಸಗಳು ಹಿರಿಯರಿಗೆ ಕೋಪವನ್ನು ತರಿಸುತ್ತದೆ. ಅದರಲ್ಲಿ ಒಂದು ಕೆಟ್ಟ ಅಭ್ಯಾಸ ಎಂದರೆ ಮಣ್ಣು ತಿನ್ನೋದು. ಮಣ್ಣನ್ನು ತಿನ್ನುವ (Soil eating) ಯಾಸವು ಬಹುತೇಕ ಎಲ್ಲಾ ಮಕ್ಕಳಲ್ಲಿದೆ. ಈ ಅಭ್ಯಾಸವನ್ನು ಬಿಡಿಸೋದು ಹೇಗೆ?
ತಜ್ಞರ ಪ್ರಕಾರ, ಮಕ್ಕಳು ಮಣ್ಣನ್ನು ತಿನ್ನುವುದು ಸಾಮಾನ್ಯ. ಆದರೂ, ದೀರ್ಘಕಾಲದವರೆಗೆ ಮಣ್ಣನ್ನು ತಿನ್ನುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ತಜ್ಞರ ಪ್ರಕಾರ, ಮಣ್ಣನ್ನು ತಿನ್ನುವ ಅಭ್ಯಾಸ ಒಂದು ರೋಗ. ಇದನ್ನು ಪೈಕಾ ಎಂದು ಕರೆಯಲಾಗುತ್ತದೆ. ಇದು ಮಗುವಿನ ಹೊಟ್ಟೆಯಲ್ಲಿ ಹುಳುವನ್ನು ಉಂಟುಮಾಡುತ್ತದೆ.
ಮಕ್ಕಳು ಮಣ್ಣನ್ನು ತಿನ್ನುತ್ತಿದ್ದರೆ ಇದರಿಂದಾಗಿ ಮಗುವಿಗೆ ಹಸಿವಾಗೋದಿಲ್ಲ. ಇದರಿಂದಾಗಿ, ಮಕ್ಕಳು ಆಹಾರ (food for kids) ತಿನ್ನುವುದರಿಂದ ದೂರವಿರುತ್ತಾರೆ. ನಿಮ್ಮ ಮಗುವೂ ಮಣ್ಣನ್ನು ತಿನ್ನುತ್ತಿದ್ದರೆ ಮತ್ತು ನೀವು ಮಗುವಿನ ಅಭ್ಯಾಸವನ್ನು ತೊಡೆದುಹಾಕಲು ಬಯಸಿದರೆ, ಖಂಡಿತವಾಗಿಯೂ ಈ ಸಲಹೆಗಳನ್ನು ಅನುಸರಿಸಿ.
ಬಾಳೆಹಣ್ಣು
ಬಾಳೆಹಣ್ಣು (Banana) ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಮಕ್ಕಳ ಉತ್ತಮ ಆರೋಗ್ಯಕ್ಕೆ ಬೇಕಾದಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಬಾಳೆಹಣ್ಣು ತಿನ್ನೋದ್ರಿಂದ ತೂಕ ಹೆಚ್ಚುತ್ತೆ ಜೊತೆಗೆ ಇದು ಮಗುವಿನ ದೈಹಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಜೇನುತುಪ್ಪ ಮತ್ತು ಹಾಲಿನಲ್ಲಿ ಬಾಳೆಹಣ್ಣುಗಳನ್ನು ಸೇರಿಸಿ ಮಗುವಿಗೆ ನೀಡಿ.
ಬಾಳೆಹಣ್ಣು, ಜೇನು ಮತ್ತು ಹಾಲು ಜೊತೆಯಾಗಿ ಸೇರಿಸಿ ಕುಡಿದ್ರೆ ಇದು ಕಡುಬಯಕೆಗಳ ಸಮಸ್ಯೆಯನ್ನು ಉಂಟುಮಾಡುವುದಿಲ್ಲ. ಅದೇ ಸಮಯದಲ್ಲಿ, ಮಗುವಿನ ಹೊಟ್ಟೆ ಯಾವಾಗಲೂ ತುಂಬಿರುತ್ತದೆ. ಇದರಿಂದಾಗಿ ಮಗುವಿಗೆ ಮಣ್ಣು ತಿನ್ನಬೇಕು ಅನಿಸೋದೆ ಇಲ್ಲ. ಸೋ ಮಕ್ಕಳು ಮಣ್ಣನ್ನು ತಿನ್ನುವ ಅಭ್ಯಾಸವನ್ನು ಬಿಡುತ್ತದೆ.
ಲವಂಗದ ನೀರನ್ನು ನೀಡಿ
ತಜ್ಞರ ಪ್ರಕಾರ, ಲವಂಗದ ನೀರು ಮಗುವಿನ ಮಣ್ಣು ತಿನ್ನುವ ಅಭ್ಯಾಸವನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಮಗುವಿಗೆ ಲವಂಗವನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಮಗುವಿಗೆ ನೀಡಿ. ಮಗು ಲವಂಗದ ನೀರನ್ನು ಕುಡಿಯದಿದ್ದರೆ, ಜೇನುತುಪ್ಪವನ್ನು ಸೇರಿಸಿ. ಇದನ್ನು ಆಗಾಗ್ಗೆ ಸೇವಿಸುತ್ತಿದ್ದರೆ, ಮಗುವಿನ ಮಣ್ಣು ತಿನ್ನುವ (eating mud) ಅಭ್ಯಾಸ ಬಿಟ್ಟು ಹೋಗುತ್ತೆ. ಟ್ರೈ ಮಾಡಿ ನೋಡಿ.
ಅಜ್ವೈನ್ ನೀರು
ಮಗುವಿನ ಮಣ್ಣು ತಿನ್ನುವ ಅಭ್ಯಾಸ ತೊಡೆದು ಹಾಕಲು, ಪ್ರತಿದಿನ ರಾತ್ರಿ ಮಲಗುವಾಗ ಅಜ್ವೈನ್ ನೀರನ್ನು ಕುಡಿಯಿರಿ. ಓಂ ಕಾಳಿನ ನೀರು ಮಣ್ಣನ್ನು ತಿನ್ನುವ ಮಗುವಿನ ಅಭ್ಯಾಸವನ್ನು ನಿವಾರಿಸುತ್ತೆ. ಅದೇ ಸಮಯದಲ್ಲಿ, ಮಗುವಿಗೆ ಕ್ಯಾಲ್ಸಿಯಂ ಸಮೃದ್ಧ ಆಹಾರ (healthy food) ನೀಡಿ. ಇದು ಮಣ್ಣನ್ನು ತಿನ್ನುವ ಮಗುವಿನ ಅಭ್ಯಾಸವನ್ನು ದೂರ ಮಾಡುತ್ತೆ.