Asianet Suvarna News Asianet Suvarna News

ಗೌತಮ ಬುದ್ಧನ ಈ ಮಾತು ಪಾಲಿಸಿದ್ರೆ ಜೀವನದಲ್ಲಿ ಸೋಲು ಸಾಧ್ಯವಿಲ್ಲ

ಜೀವನ ಒಂದು ಮಕ್ಕಳಾಟವಿದ್ದಂತೆ. ಅದ್ರಲ್ಲಿ ನಾನಾ ಆಟಗಳು ಬಂದು ಹೋಗ್ತಿರುತ್ತವೆ. ಮಕ್ಕಳಂತೆ ನಮ್ಮ ಮನಸ್ಸು ಅನೇಕ ಬಾರಿ ಚಂಚಲಗೊಳ್ಳುತ್ತದೆ. ತಪ್ಪು ಹೆಜ್ಜೆಯಿಟ್ಟು ಎಡವಿ ಬೀಳುತ್ತೇವೆ. ಇದೆಲ್ಲವೂ ಜೀವನದಲ್ಲಿ ಆಗ್ಬಾರದು ಅಂದ್ರೆ ಬುದ್ಧನ ಮಾರ್ಗದಲ್ಲಿ ನಡೆಯಬೇಕು. 
 

Gautam Buddha Four Life Lessons
Author
First Published Jan 25, 2023, 2:48 PM IST

ಆಸೆಯೇ ದುಃಖಕ್ಕೆ ಮೂಲ ಎಂಬ ಜೀವನ ಮಂತ್ರದಿಂದ ಇಡೀ ಜಗತ್ತಿಗೆ ಜ್ಞಾನದ ಬೆಳಕು ತೋರಿಸಿದ ದಾರ್ಶನಿಕ ವ್ಯಕ್ತಿ ಭಗವಂತ ಬುದ್ಧ. ಬೌದ್ಧ ಧರ್ಮದ ಸಂಸ್ಥಾಪಕನಾದ ಬುದ್ಧನ ಮೂಲ ಹೆಸರು ಸಿದ್ಧಾರ್ಥ. ಈತ ಬೋಧಿವೃಕ್ಷದ ಕೆಳಗೆ ಜ್ಞಾನೋದಯಗೊಂಡು ಇಡೀ ಮನುಕುಲಕ್ಕೆ ಜೀವನದ ಆದರ್ಶಗಳನ್ನು ಸಾರಿದ ಮಹಾನುಭಾವ. ಬುದ್ಧ ತನ್ನ ಜ್ಞಾನ, ಧ್ಯಾನದ ಅರಿವಿನಿಂದ ಲೋಕಕ್ಕೆ ದುಃಖದಿಂದ ಬಿಡುಗಡೆ ಹೊಂದುವ ಮಾರ್ಗವನ್ನು ತೋರಿದ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಕ್ಷಣಿಕ ಸುಖಕ್ಕಾಗಿ ಸ್ವಾರ್ಥ, ದುರಾಸೆಗಳನ್ನು ಬೆಳೆಸಿಕೊಳ್ಳುತ್ತದೆ. ಇಂತಹ ಭಾವನೆಗಳು ನಿಮ್ಮನ್ನು ಆಳಲು ಬಿಡಬಾರದು. ಆಸೆಗಳನ್ನು ನಿಮ್ಮಿಂದ ದೂರವಿಡಬೇಕು ಎಂಬ ತತ್ವವನ್ನು ಬುದ್ಧ ಸಾರುತ್ತಾನೆ. ಇಂತಹ ಬುದ್ಧನ ಸಂದೇಶಗಳನ್ನು ನಾವು ಪಾಲಿಸಿದರೆ ನಮ್ಮಲ್ಲಿ ಪ್ರಾಮಾಣಿಕತೆ, ದಯೆ, ಧೈರ್ಯ ಬರುತ್ತದೆ. ಇದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಜೀವನಕ್ಕೆ ಉತ್ತಮ ದಾರಿದೀಪವಾಗುವ ಬುದ್ಧನ ಕೆಲವು ವಿಚಾರಗಳನ್ನು ನಾವು ತಿಳಿಯೋಣ.

ಎಲ್ಲರನ್ನೂ ಪ್ರೀತಿ (Love) ಸುವುದನ್ನು ಕಲಿ : ಪ್ರತಿಬಾರಿಯೂ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬುದು ಸುಳ್ಳು. ಏಕೆಂದರೆ ದ್ವೇಷವನ್ನು ದ್ವೇಷದಿಂದಲೇ ಗೆಲ್ಲುತ್ತೇನೆ ಎಂದು ಹೊರಟರೆ ಸಂಬಂಧಗಳು ನುಚ್ಚು ನೂರಾಗುತ್ತವೆ. ಒಬ್ಬರೊಡನೆ ದ್ವೇಷ ಬೆಳೆಸುತ್ತ ಹೋಗುವುದರಲ್ಲಿ ಅರ್ಥವಿಲ್ಲ. ದ್ವೇಷದ ಬದಲು ಪ್ರೀತಿಯಿಂದ ಒಬ್ಬರ ಮನಸ್ಸ (Mind) ನ್ನು ಗೆಲ್ಲುವುದೇ ಬುದ್ಧನಿಂದ ನಾವು ಮೊದಲು ಕಲಿಯಬೇಕಾದ ಗುಣ. ದುಃಖ, ಕೋಪ, ಹತಾಶೆಗಳನ್ನು ಹೋಗಲಾಡಿಸುವ ಶಕ್ತಿ ಪ್ರೀತಿಗೆ ಮಾತ್ರ ಇದೆ. 

ಶಾಂತರಾಗಿರುವುದು ಬಹಳ ಮುಖ್ಯ : ಮಾತು (Speech) ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಅನ್ನೋ ಹಾಗೆ ಕೆಲವೊಮ್ಮೆ ಮಾತಿನಿಂದಲೇ ಸಂಘರ್ಷಗಳು ಶುರುವಾಗುತ್ತವೆ. ಅಂತಹ ಸಮಯದಲ್ಲಿ ಮೌನವಾಗಿರುವುದು ಬುದ್ಧಿವಂತರ ಲಕ್ಷಣ. ಸುತ್ತಲಿನ ಜಗತ್ತಿನ ಆಗುಹೋಗುಗಳನ್ನು ನೋಡುವ ಬುದ್ಧಿವಂತಿಕೆ ನಿಮ್ಮಲ್ಲಿರಬೇಕು. ಅದನ್ನರಿತು ನೀವು ಕೆಲಸ ಮಾಡಿದಾಗ ನೀವು ಯಾರೆಂದು ಜಗತ್ತಿಗೆ ತಿಳಿಯುತ್ತದೆ. ಅದರ ಬದಲು ನಿಮ್ಮ ಅನಗತ್ಯ ಮಾತು, ಜ್ಞಾನಗಳನ್ನು ಯಾರೂ ಗೌರವಿಸುವುದಿಲ್ಲ.

Parenting Tips: ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸುವ ಮುನ್ನ ಇದನ್ನೋದಿ

ತಿಳಿದು ಮಾತನಾಡಿ : ಮಾತು ಹರಿತವಾದ ಆಯುಧದಂತೆ. ಒಳ್ಳೆಯ ಮಾತಿನಿಂದ ಹೇಗೆ ಜಗತ್ತನ್ನು ಗೆಲ್ಲಬಹುದೋ ಹಾಗೆ ಕೆಟ್ಟ ಮಾತಿನಿಂದ ವಿನಾಶ ಕೂಡ ಮಾಡಬಹುದು. ನಮ್ಮ ನಾಲಗೆಯಿಂದ ಹೊರಡುವ ಪ್ರತಿ ಮಾತುಗಳು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಭಗವಂತ ಬುದ್ಧ ಹೇಳುತ್ತಾನೆ. ಹಾಗಾಗಿ ನಾವು ಇತರರೊಂದಿಗೆ ಮಾತನಾಡುವಾಗ ತಿಳಿದು, ವಿಚಾರಿಸಿ ಮಾತನಾಡಬೇಕು. ನಾವಾಡುವ ಬಿರುಸಿನ ಮಾತುಗಳು ಎದುರಿನ ವ್ಯಕ್ತಿಯ ಮೇಲೆ ಕೆಟ್ಟ ಪ್ರಭಾವ ಬೀರಬಹುದು. ಅದೇ ನಾವು ಒಳ್ಳೆಯ ಮಾತುಗಳನ್ನಾಡಿದಾಗ ಆ ವ್ಯಕ್ತಿ ಸಕಾರಾತ್ಮಕವಾಗಿ ನಡೆಯುತ್ತಾನೆ.

ಜೀವನದ ಗುರಿಯೇ ನಿಮ್ಮ ಲಕ್ಷ್ಯವಾಗಿರಲಿ : ನಿಮ್ಮ ಜೀವನದಲ್ಲಿ ಗುರಿ ಸಾಧಿಸುವ ಕನಸನ್ನು ಕಟ್ಟಿಕೊಳ್ಳಬೇಕು. ಬುದ್ಧನ ವಿಚಾರಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡರೆ ಇಂತಹ ಮಹತ್ವಾಕಾಂಕ್ಷೆಗಳು ತಾವಾಗಿಯೇ ಬರುತ್ತವೆ. ನಮ್ಮಲ್ಲಿ ಸದ್ಗುಣಗಳು ಇದ್ದಾಗ ನಮ್ಮ ಆಚಾರ ವಿಚಾರ ಗುರಿ ಕೂಡ ಒಳ್ಳೆಯದೇ ಆಗಿರುತ್ತದೆ ಮತ್ತು ಅದರಿಂದ ಇತರರಿಗೂ ಒಳ್ಳೆಯಾಗುತ್ತದೆ.

ಮಗು ಸದಾ ಡಲ್ ಇರುತ್ತಾ? ಮೂಡ್ ಆಫ್ ಆಗುತ್ತಿದ್ದರೆ ಈ ಸಮಸ್ಯೆ ಇರ್ಬಹುದು

ಅವಲಂಬನೆ ಬೇಡ ಎನ್ನುತ್ತಾನೆ ಬುದ್ಧ (Buddha) : ಇನ್ನೊಬ್ಬರ ಮೇಲೆ ನಿಮ್ಮ ಜೀವನ ಅವಲಂಬಿತವಾಗಬಾರದು ಎಂಬುದು ಬುದ್ಧನ ವಿಚಾರವಾಗಿದೆ. ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕು. ನಮ್ಮ ಕೆಲಸಕ್ಕಾಗಿ ಅಥವಾ ನಮ್ಮ ಜೀವನ ನಿರ್ವಹಣೆಗಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಿರಬಾರದು. ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಹೆದರಿ ಕೂತರೆ ಅದು ನಮ್ಮನ್ನು ಇನ್ನಷ್ಟು ಹೆದರಿಸುತ್ತದೆ ಹಾಗೂ ಯಾವುದೇ ಕೆಲಸಕ್ಕೆ ಕೈ ಹಾಕಲು ಅಂಜುವಂತೆ ಮಾಡುತ್ತದೆ. ಹಾಗಾಗಿ ಜೀವನದಲ್ಲಿ ಹೆದರಿಕೆಯನ್ನು ತ್ಯಾಗ ಮಾಡಬೇಕು. ಆಗ ಮಾತ್ರ ಗೆಲುವು ನಿಮ್ಮದಾಗಲು ಸಾಧ್ಯ ಎಂದು ಬುದ್ಧ ಹೇಳುತ್ತಾನೆ.

Follow Us:
Download App:
  • android
  • ios