Viral Video : ಫ್ರೆಂಡ್ಸ್ ತಂದ ಬರ್ತ್ ಡೇ ಕೇಕ್ ಕಟ್ ಆಗ್ಲಿಲ್ಲ… ಎಂಥ ಕಿತಾಪತಿ ಮಾಡಿದ್ರು ಹಾಗಾದ್ರೆ?
ಫ್ರೆಂಡ್ಸ್ ಸೇರಿದ್ರು ಅಂದ್ಮೇಲೆ ಒಂದಿಷ್ಟು ಮೋಜು ಇರ್ಲೇಬೇಕು. ಏಪ್ರಿಲ್ ಒಂದು, ಹುಟ್ಟುಹಬ್ಬ, ಮದುವೆ ಸಂದರ್ಭದಲ್ಲಿ ಸ್ನೇಹಿತರು ತಮಾಷೆ ಮಾಡ್ತಿರುತ್ತಾರೆ. ಈಗ ಬರ್ತ್ ಡೇ ಟೈಂನಲ್ಲಿ ಚೇಷ್ಟೆ ಮಾಡಿದ ಸ್ನೇಹಿತರ ವಿಡಿಯೋ ಒಂದು ವೈರಲ್ ಆಗಿದೆ.
ಫ್ರೆಂಡ್ ಯಾವಾಗ್ಲೂ ಸ್ಪೇಷಲ್ ಆಗಿ ಇರ್ತಾರೆ. ಸ್ನೇಹಿತರು ಕಷ್ಟದಲ್ಲಿ, ಸುಖದಲ್ಲಿ ಮಾತ್ರವಲ್ಲ ಮನರಂಜನೆ ನೀಡೋದ್ರಲ್ಲೂ ಮುಂದಿರ್ತಾರೆ. ನಾಲ್ಕೈದು ಗೆಳೆಯರು ಒಟ್ಟಿಗೆ ಸೇರಿದ್ರು ಅಂದ್ರೆ ಅಲ್ಲೊಂದು ಸ್ಪೇಷಲ್ ಇರ್ಲೇಬೇಕು. ಹುಟ್ಟುಹಬ್ಬ, ಮದುವೆ ಸಂದರ್ಭದಲ್ಲಿ ಸ್ನೇಹಿತರು ಹೆಚ್ಚು ಎಂಜಾಯ್ ಮಾಡ್ತಾರೆ.
ಹುಟ್ಟುಹಬ್ಬ (Birthday) ದ ಸಂದರ್ಭದಲ್ಲಿ ಸಾಮಾನ್ಯವಾಗಿ ಮೋಜು, ಮಸ್ತಿ ಇದ್ದೇ ಇರುತ್ತೆ. ಸ್ನೇಹಿತ (Friend)ರ ಹುಟ್ಟುಹಬ್ಬದ ದಿನ ಕೇಕ್ (Cake) ಕತ್ತರಿಸೋದು ಕಾಮನ್. ಮನೆ ಅಥವಾ ಹಾಲ್ ಸಿಂಗರಿಸಿ, ಸ್ನೇಹಿತರಿಗೆ ಇಷ್ಟವಾಗುವ ವ್ಯಕ್ತಿಗಳನ್ನು ಇನ್ವೈಟ್ ಮಾಡಿ, ಅವರಿಗೆ ಸರ್ಪ್ರೈಸ್ (Surprise) ನೀಡುವ ಗೆಳೆಯರನ್ನು ನೀವು ನೋಡಿರ್ತೀರಿ. ಫ್ರೆಂಡ್ಸ್ ಎಲ್ಲ ಸೇರಿ ಗೆಳೆಯನೊಬ್ಬನಿಗೆ ಫ್ರ್ಯಾಂಕ್ ಮಾಡೋದು ಕೂಡ ಸಾಮಾನ್ಯ ಸಂಗತಿ. ಫ್ರ್ಯಾಂಕ್ ವಿಷ್ಯ ಅವರ ಮಧ್ಯೆ ಅನೇಕ ದಿನ ಚರ್ಚೆಯಾಗ್ತಿರುತ್ತದೆ. ನಾನು ಹೀಗೆ ಮಾಡ್ದೆ, ಆತ ಹೀಗೆ ಮಾಡ್ದಾ ಅಂತಾ ಅವರಲ್ಲೇ ಮಾತುಗಳು ನಡೆಯುತ್ತಿರುತ್ತವೆ. ಈಗ ಸಾಮಾಜಿಕ ಜಾಲತಾಣದಲ್ಲಿ ಇಂಥ ವಿಡಿಯೋ (Video) ಗಳನ್ನು ಹಂಚಿಕೊಳ್ಳಲಾಗುತ್ತದೆ. ವ್ಯಕ್ತಿಯೊಬ್ಬನ ಬರ್ತ್ ಡೇ ದಿನ ಸ್ನೇಹಿತರು ಚೇಷ್ಟೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
138 ವರ್ಷಗಳಲ್ಲೇ ಮೊದಲ ಬಾರಿ ಕುಟುಂಬದಲ್ಲಿ ಹೆಣ್ಣು ಮಗು ಜನನ : ಲಕ್ಷ್ಮಿಯ ಆಗಮನಕ್ಕೆ ಕುಣಿದಾಡಿದ ಕುಟುಂಬ
ವೈರಲ್ ವಿಡಿಯೋದಲ್ಲಿ ಏನಿದೆ? : ವಿಡಿಯೋವನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಹಂಚಿಕೊಳ್ಳಲಾಗಿದೆ. ಅಭಿ ಎನ್ನುವವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ನೇಹಿತರೆಲ್ಲ ಸೇರಿ ಫ್ರೆಂಡ್ ಬರ್ತ್ ಡೇಗೆ ತಯಾರಿ ಮಾಡಿಕೊಂಡಿದ್ದಾರೆ. ದಾರಿ ಮಧ್ಯೆ ಮೇಜನ್ನು ಹಾಕಲಾಗಿದೆ. ಸುತ್ತಮುತ್ತ ಗಿಡಗಳನ್ನು ನೀವು ನೋಡ್ಬಹುದು. ಮೇಜಿನ ಮೇಲೆ ಕೇಕ್ ಇಡಲಾಗಿದೆ. ಕೆಳಗೆ ಸೌಂಡ್ ಬಾಕ್ಸ್ (Sound Box) ಇಟ್ಟು, ಮ್ಯೂಸಿಕ್ ಪ್ಲೇ ಮಾಡಲಾಗ್ತಿದೆ. ಬರ್ತ್ ಡೇ ಬಾಯ್, ಕೇಕ್ ಕತ್ತರಿಸುವ ತಯಾರಿ ನಡೆಸಿದ್ದಾನೆ. ಬಿಳಿ ಬಣ್ಣದ ಬೇಸ್ ಮೇಲೆ ಕೆಂಪು ಹಾಗೂ ಹಳದಿ ಹೂಗಳ ಕೇಕ್ ಡಿಸೈನ್ ನೀವು ನೋಡ್ಬಹುದು. ಸ್ನೇಹಿತರ ಮಧ್ಯೆ ನಿಂತ ವ್ಯಕ್ತಿ, ಕೇಕ್ ಕತ್ತರಿಸಲು ಮುಂದಾಗ್ತಾನೆ. ಇನ್ನೇನು ಕೇಕ್ ಕತ್ತರಿಸಿ ಆಪ್ತರಿಗೆ ತಿನ್ನಬೇಕು, ಆದ್ರೆ ಕೇಕ್ ಕತ್ತರಿಸೋದಿಲ್ಲ. ಚಾಕು ತಾಗುತ್ತಿದ್ದಂತೆ ಕೇಕ್ ನಿಂದ ಬರ್ತಿದ್ದ ಸೌಂಡ್ ನೋಡಿ ಅನುಮಾನಗೊಂಡ ವ್ಯಕ್ತಿ ಕೇಕ್ ಬುಡದಲ್ಲಿ ಎತ್ತಿ ನೋಡ್ತಾನೆ. ಆಗ ಅದು ಕೇಕ್ ಅಲ್ಲ ಅಲ್ಯೂಮಿನಿಯಂ ಪಾತ್ರೆ ಎಂಬುದು ಗೊತ್ತಾಗುತ್ತದೆ. ಸತ್ಯ ತಿಳಿಯುತ್ತಿದ್ದಂತೆ ವ್ಯಕ್ತಿ ಪಾತ್ರೆ ಹಿಡಿದೇ ಸ್ನೇಹಿತರನ್ನು ಬೆನ್ನಟ್ಟಿಕೊಂಡು ಹೋಗ್ತಾನೆ. ಆತನಿಂದ ತಪ್ಪಿಸಿಕೊಳ್ಳಲು ಸ್ನೇಹಿತರೆಲ್ಲ ಮುಂದೆ ಓಡ್ತಿರೋದನ್ನು ನೀವು ನೋಡ್ಬಹುದು.
Health Tips: ನಿಮ್ಮ ದೇಹದ ತೂಕ ಹೆಚ್ತಾ ಇದ್ಯಾ? ಈ ಲಕ್ಷಣಗಳ ಮೂಲಕ ತಿಳ್ಕೊಳ್ಳಿ
ನಗುತರಿಸುವ ಈ ವಿಡಿಯೋಕ್ಕೆ ಸಿಕ್ಕಿದೆ ಸಾವಿರಾರು ಲೈಕ್ಸ್ : ಈ ವಿಡಿಯೋ ತುಂಬಾ ತಮಾಷೆಯಾಗಿದೆ. ಬಾಲ್ಯದಲ್ಲಿ ಅಥವಾ ಸ್ನೇಹಿತರು ಜೊತೆಗಿದ್ದಾಗ ನಾವು ಮಾಡಿದ ಚೇಷ್ಟೆಯನ್ನು ಇದು ನೆನಪಿಸುತ್ತದೆ. ನೀವೂ ನಿಮ್ಮ ಸ್ನೇಹಿತರಿಗೆ ಇಂಥ ಚೇಷ್ಟೆ ಮಾಡ್ಬಹುದು. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅಭಿ, ಕಮಿನೇ ದೋಸ್ತ್ ಎಂದು ಶೀರ್ಷಿಕೆ ಹಾಕಿದ್ದಾನೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಒಂದೂವರೆ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಏಳು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಸ್ನೇಹಿತರ ತಮಾಷೆ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಅನೇಕರು ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಅದಕ್ಕಾಗಿ ನಗುವಿನ ಇಮೋಜಿ ಹಾಕಿದ್ದಾರೆ. ಇನ್ನು ಕೆಲವರು ಬರ್ತ್ ಡೇ ವಿಶ್ ಮಾಡಿದ್ದಾರೆ. ಇವರು ಬಾಯ್ಸ್ ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ಇವರೇ ರಿಯಲ್ ಫ್ರೆಂಡ್ಸ್ ಎಂದು ಕಮೆಂಟ್ ಮಾಡಿದ್ದಾನೆ.