Asianet Suvarna News Asianet Suvarna News

Personality Test: ನೀವು ಶಕ್ತಿಶಾಲಿಯೋ, ಸಹಾನುಭೂತಿಯುಳ್ಳವರೋ? ಈ ಚಿತ್ರದಿಂದ ತಿಳ್ಕೊಳಿ

ಇಲ್ಲೊಂದು ಚಿತ್ರವಿದೆ. ಇದರಲ್ಲಿ ಕೆಲವು ಚಿತ್ರಗಳು ಅಡಕವಾಗಿವೆ. ಯಾವುದು ನಿಮ್ಮ ಕಣ್ಣಿಗೆ ಮೊದಲು ಬೀಳುತ್ತವೆ ಎಂದು ಗುರುತಿಸಿ. ಅವುಗಳ ಮೂಲಕ ನಿಮ್ಮ ವ್ಯಕ್ತಿತ್ವದ ಧನಾತ್ಮಕ ಅಂಶಗಳನ್ನು ತಿಳಿದುಕೊಳ್ಳಿ. 
 

Find yourself are you powerful or empathetic
Author
First Published Sep 11, 2023, 8:10 AM IST

ಕಣ್ಣುಗಳಿಗೆ ಟ್ರಿಕ್ಸ್‌ ನೀಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಇತ್ತೀಚೆಗೆ ಭಾರೀ ಫೇಮಸ್‌ ಆಗುತ್ತಿವೆ. ಟಿಕ್‌ ಟಾಕ್‌ ನಂತಹ ಸಾಮಾಜಿಕ ಜಾಲತಾಣದಲ್ಲಿ ಕೆಲವು ಇಲ್ಯೂಷನ್‌ ಗಳು ಸದ್ದು ಮಾಡುತ್ತವೆ. ಅಂತಹ ಚಿತ್ರವೊಂದು ಇಲ್ಲಿದೆ. ಎರಡು ಗುಡ್ಡಗಳ ನಡುವೆ ಜಲಧಾರೆ ಹರಿಯುತ್ತಿರುವಂತೆ ಕಾಣುವ ಈ ಚಿತ್ರದಲ್ಲಿ ಇನ್ನೂ ಹಲವು ಚಿತ್ರಗಳು ಅಡಗಿವೆ. ಸರಿಯಾಗಿ ನಿಟ್ಟಿಸಿದರೆ ಅವುಗಳಲ್ಲಿ ನಿಮಗೆ ಯಾವುದು ಮೊದಲು ಕಾಣಿಸುತ್ತದೆ ಎಂದು ನೋಡಿ. ಮಹಿಳೆ, ನದಿ, ಕರಡಿ ಅಥವಾ ತೋಳಗಳು ಚಿತ್ರದಲ್ಲಿವೆ. ಅವುಗಳಲ್ಲಿ ಯಾವುದು ಮೊದಲು ನಿಮ್ಮ ಕಣ್ಣಿಗೆ ಕಾಣುತ್ತದೆ ಎನ್ನುವುದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಇದು ಕೇವಲ ಭ್ರಮೆ ಮೂಡಿಸುವಂತಹ ಚಿತ್ರವಲ್ಲ. ಪ್ರತಿಯೊಂದಕ್ಕೂ ವಿವರಣೆಯಿದೆ. ಇವುಗಳಲ್ಲಿ ನೀವು ಯಾವುದನ್ನು ಮೊದಲು ಗುರುತಿಸುತ್ತೀರಿ ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಬಹಿರಂಗವಾಗುತ್ತದೆ. ಒಬ್ಬೊಬ್ಬರ ಕಣ್ಣಿಗೆ ಒಂದೊಂದು ಚಿತ್ರಗಳು ಕಾಣುವುದು ಸಹಜ. 

•    ನದಿ (River)
ವ್ಯಕ್ತಿತ್ವ ಪರೀಕ್ಷೆಯಲ್ಲಿ (Personality Test) ಮೊದಲು ನದಿಯನ್ನು ಗುರುತಿಸುವವರು ಸಾಮೂಹಿಕ (Collective) ಮತ್ತು ಅಂತಃದೃಷ್ಟಿ (Intuition) ಹೊಂದಿರುತ್ತಾರೆ. ಇವರಲ್ಲಿ ಅತಿ ಸೂಕ್ಷ್ಮವಾಗಿ ಗ್ರಹಿಸುವ ಬುದ್ಧಿ ಸದಾಕಾಲ ಜಾಗ್ರತವಾಗಿರುತ್ತದೆ. ಜೀವನದಲ್ಲಿ ಇವರು ಬುದ್ಧಿವಂತಿಕೆಯ (Wise) ಮತ್ತು ಸುರಕ್ಷತೆಯ (Safe) ನಿರ್ಧಾರ ಕೈಗೊಳ್ಳುತ್ತಾರೆ. ಪರಿಸ್ಥಿತಿಯನ್ನು ಇವರು ಚೆನ್ನಾಗಿ ಪರಿಶೀಲನೆ ಮಾಡುತ್ತಾರೆ. ಹೀಗಾಗಿ, ಸ್ಮಾರ್ಟ್‌ (Smart) ನಿರ್ಧಾರ ಕೈಗೊಳ್ಳಬಲ್ಲರು. ಒಂದೊಮ್ಮೆ ನಿರ್ಧಾರ (Decision) ಕೈಗೊಳ್ಳುವಲ್ಲಿ ಗೊಂದಲವಾದರೆ, ಇವರು ಕಲ್ಪನಾತ್ಮಕ ಪರಿಹಾರಗಳ ಬಗ್ಗೆ ಯೋಚಿಸುತ್ತಾರೆ. ಈ ಗುಣ ಇವರು ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಕೌಶಲಪೂರ್ಣವಾಗಿ ನಿಭಾಯಿಸುವುದನ್ನು ತೋರಿಸುತ್ತದೆ.

ಆಕರ್ಷಕವಾಗಿ ಕಾಣ್ಬೇಕೆಂದ್ರೆ ವ್ಯಕ್ತಿತ್ವ ಹೀಗಿರಬೇಕು, ಈ ಹವ್ಯಾಸ ರೂಢಿಸಿಕೊಳ್ಳಿ!

•    ಮಹಿಳೆ (Woman)
ಹಲವು ಅಂಶಗಳ ನಡುವೆ ನೀವು ಮೊದಲು ಮಹಿಳೆಯನ್ನು ಗುರುತಿಸಿದರೆ, ನೀವು ಅತ್ಯಂತ ವರ್ಚಸ್ಸಿನ (Charm) ವ್ಯಕ್ತಿತ್ವ ಹೊಂದಿದ್ದೀರಿ ಎನ್ನುವುದು ತಿಳಿದುಬರುತ್ತದೆ. ಅತ್ಯುತ್ತಮ ಸಂವಹನ (Communicative) ಕೌಶಲ (Skill) ನಿಮ್ಮಲ್ಲಿರುತ್ತದೆ. ಜೀವನದ ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಗುಣಗಳು ನಿಮಗೆ ಪದೇ ಪದೆ ನೆರವಿಗೆ ಬರುತ್ತವೆ. ಇತರರ ಅಗತ್ಯದ ಬಗ್ಗೆ ಸೂಕ್ಷ್ಮತೆ ಹೊಂದಿರುತ್ತೀರಿ ಹಾಗೇಯೇ ಸಹಾನುಭೂತಿ (Empathy) ನಿಮ್ಮಲ್ಲಿರುತ್ತದೆ. ಇವು ನಿಮ್ಮ ವ್ಯಕ್ತಿತ್ವದಲ್ಲಿ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾದ ಗುಣವಾಗಿರುತ್ತವೆ. ನಿಮ್ಮಲ್ಲಿ ಅಂತಃದೃಷ್ಟಿಯೂ ಅತ್ಯುತ್ತಮವಾಗಿರುತ್ತದೆ. ಹಲವು ಸನ್ನಿವೇಶಗಳ ಸಂಕೀರ್ಣತೆಯನ್ನು ಎದುರಿಸಲು ಇದರಿಂದ ಅನುಕೂಲವಾಗುತ್ತದೆ. ವಿಶಿಷ್ಟ ಕಲ್ಪನಾಶಕ್ತಿಯೂ (Imaginative) ನಿಮ್ಮಲ್ಲಿರುತ್ತದೆ. ಈ ಗುಣ ನಿಮ್ಮ ಆಸ್ತಿಯಂತೆ. ವಿವಿಧ ಸವಾಲುಗಳಿಗೆ ವಿಶಿಷ್ಟ ಪರಿಹಾರ ಗುರುತಿಸಲು ಇದು ನೆರವಾಗುತ್ತದೆ. 


•    ತೋಳ (Wolf)
ಈ ಚಿತ್ರದಲ್ಲಿ ನೀವು ತೋಳವನ್ನು ಮೊದಲು ಗುರುತಿಸಿದರೆ ನೀವು ಜೀವನದಲ್ಲಿ ಎದುರಾಗುವ ಅಡೆತಡೆಗಳನ್ನು ಭಯವಿಲ್ಲದೆ ಧೈರ್ಯವಾಗಿ ಎದುರಿಸುತ್ತೀರಿ. ಭಯ (Fear), ಆತಂಕ ನಿಮ್ಮಲ್ಲಿ ಯಾವತ್ತೂ ಮನೆ ಮಾಡುವುದಿಲ್ಲ. ಕಾರ್ಯಪ್ರವೃತ್ತರಾಗುವ ಗುಣ ನಿಮ್ಮಲ್ಲಿರುತ್ತದೆ. ಆದರೆ, ನಿಮ್ಮ ಧೋರಣೆ ಹೇಗಿರುತ್ತದೆ ಎಂದರೆ, ಮೊದಲು ಕಾರ್ಯಪ್ರವೃತ್ತರಾಗುವುದು, ಬಳಿಕ ಯೋಚಿಸುವುದು. ಅತ್ಯಂತ ಹಿರಿದಾದ ಗುಣ ಹೊಂದಿದ್ದು, ಚಿಕ್ಕಪುಟ್ಟ ಸಂಗತಿಗಳು ನಿಮ್ಮ ಆದ್ಯತೆಯಲ್ಲಿ ಇರುವುದಿಲ್ಲ. ಅವಕಾಶಗಳನ್ನು (Opportunity) ಸರಕ್ಕನೆ ಗುರುತಿಸುವ, ಬಳಸಿಕೊಳ್ಳುವ ಚಾಕಚಕ್ಯತೆ ನಿಮ್ಮಲ್ಲಿರುತ್ತದೆ. ಇತರರು ಹೇಗಿದ್ದಾರೋ ಹಾಗೆಯೇ ಅವರನ್ನು ಸ್ವೀಕರಿಸುವ ಉತ್ತಮ ಗುಣವಿರುತ್ತದೆ.

ಶಿಸ್ತಿನಲ್ಲಿ ಬೆಳೆದ ಮಕ್ಕಳಲ್ಲಿ ಈ ಗುಣಗಳಿರುತ್ತವೆ? ನೀವೂ ಈ ಗುಂಪಿಗೆ ಸೇರ್ತೀರಾ?

•    ಕರಡಿ (Bear)
ಈ ಚಿತ್ರದಲ್ಲಿ ಯಾರು ಮೊದಲು ಕರಡಿಯನ್ನು ಗುರುತಿಸುತ್ತಾರೋ ಅವರು ಶಾಂತವಾದ (Calm) ಮನಸ್ಥಿತಿಯನ್ನು (Mentality) ಹೊಂದಿರುತ್ತಾರೆ. ಜೀವನದ ಬಗ್ಗೆ ಧನಾತ್ಮಕ ಧೋರಣೆ ಹೊಂದಿರುತ್ತಾರೆ. ಜೀವನದಲ್ಲಿ ಸಾಧನೆ ಮಾಡುವಂತಹ ಅತ್ಯುತ್ತಮ ಕೌಶಲಗಳನ್ನು (Skill) ಹೊಂದಬಲ್ಲರು. ತಮ್ಮ ಬಗ್ಗೆ ಅನಗತ್ಯ ಗಮನ ಪಡೆದುಕೊಳ್ಳದೇ ಸಾಧನೆ ಮಾಡಬಲ್ಲರು. ಶ್ರಮ ಮತ್ತು ಬದ್ಧತೆಯೇ ಇವರ ಜೀವನಮೌಲ್ಯವಾಗಿರುತ್ತದೆ. ಈ ಗುಣವೇ ಸಾಧನೆಗೂ ಪೂರಕವಾಗುತ್ತದೆ.  

Latest Videos
Follow Us:
Download App:
  • android
  • ios