Asianet Suvarna News Asianet Suvarna News

ಶಿಸ್ತಿನಲ್ಲಿ ಬೆಳೆದ ಮಕ್ಕಳಲ್ಲಿ ಈ ಗುಣಗಳಿರುತ್ತವೆ? ನೀವೂ ಈ ಗುಂಪಿಗೆ ಸೇರ್ತೀರಾ?

ಮನುಷ್ಯನ ಗುಣ ಸ್ವಭಾವಗಳು ಬೆಳೆದ ವಾತಾವರಣವನ್ನು ಆಧರಿಸಿ ರೂಪುಗೊಳ್ಳುತ್ತವೆ. ಅತಿಯಾದ ಶಿಸ್ತಿನಲ್ಲಿ ಬೆಳೆದ ಮಕ್ಕಳು ಹೇಗೆ ಅದ್ಭುತ ಸಾಧಿಸಬಲ್ಲರೋ ಹಾಗೆಯೇ, ಕೆಲವು ಕೆಟ್ಟ ಗುಣಗಳನ್ನೂ ಅಳವಡಿಸಿಕೊಳ್ಳಬಹುದು. ಶಿಸ್ತಿನ ಹೆಸರಲ್ಲಿ ಕಠೋರ ನಿಯಮಗಳನ್ನು ಹೇರದೇ ಹದವಾದ ಶಿಸ್ತನ್ನು ಮಕ್ಕಳಲ್ಲಿ ರೂಢಿಸುವುದು ಅಗತ್ಯ.
 

Grow with strict parents children can develop special personality traits sum
Author
First Published Sep 7, 2023, 2:33 PM IST

ಮನುಷ್ಯನ ಹಲವು ವರ್ತನೆಗಳಲ್ಲಿ ಬಾಲ್ಯಕಾಲದ ನೆರಳನ್ನು ಕಾಣಬಹುದು. ಮನಸ್ಥಿತಿಯನ್ನು ರೂಪಿಸುವಲ್ಲಿ ಬಾಲ್ಯದ ಬಾಲ್ಯದ ಅನುಭವಗಳೂ ಕಾರಣವಾಗುತ್ತವೆ. ಅದೆಷ್ಟೋ ಸ್ವಭಾವ, ಗುಣಗಳು ಬಾಲ್ಯದ ಅನುಭವ, ಬೆಳೆದ ವಾತಾವರಣದಿಂದ ಒಡಮೂಡುತ್ತವೆ ಎನ್ನಲಾಗುತ್ತದೆ. ಪಾಲಕರ ಧೋರಣೆ, ಜೀವನಶೈಲಿಗಳು ಸಹ ಮಕ್ಕಳ ಮೇಲೆ ಭಾರೀ ಪ್ರಭಾವ ಬೀರುತ್ತವೆ. ಬಾಲ್ಯದ ಬಡತನ ಮಕ್ಕಳ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ವಯಸ್ಕರಾದ ಬಳಿಕ ಹಣಕಾಸು ಸೌಲಭ್ಯ ಹೊಂದಿದರೂ ಅವರಲ್ಲಿ ಹಲವು ಸಮಸ್ಯೆಗಳು ಕಂಡುಬರಬಹುದು. ಹಾಗೆಯೇ, ಅತಿಯಾದ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದ ಮಕ್ಕಳ ಮನಸ್ಥಿತಿ ವಿಭಿನ್ನವಾಗಿ ರೂಪುಗೊಳ್ಳುತ್ತದೆ. ಮಕ್ಕಳನ್ನು ಶಿಸ್ತಿನಿಂದ ಬೆಳೆಸಬೇಕು ಎನ್ನುವುದು ಕೆಲವರ ಧೋರಣೆ. ಆದರೆ, ಶಿಸ್ತು ಅತಿಯಾದರೂ ಅಪಾಯ ತಪ್ಪಿದ್ದಲ್ಲ. ಅತಿಯಾದ ಶಿಸ್ತಿನ ವಾತಾವರಣದಲ್ಲಿ ಬೆಳೆದ ಮಕ್ಕಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಜತೆಗೇ, ಅವರಲ್ಲಿ ಕೆಲವು ಉತ್ತಮ ಗುಣಗಳೂ ಬೆಳೆಯುತ್ತವೆ.
 
ಪಾಲಕರು ಶಿಸ್ತಿನ (Strict) ವಾತಾವರಣದಲ್ಲಿ ಮಕ್ಕಳನ್ನು (Children) ಬೆಳೆಸಿದ್ದರೆ ಅವರಲ್ಲಿ ಸ್ವತಂತ್ರ (Free) ಚಿಂತನೆ ಮತ್ತು ಜೀವನದ ಬಗ್ಗೆ ಕುತೂಹಲ ಹೆಚ್ಚುತ್ತದೆ. ವರ್ತನೆಯ (Behaviour) ಮೇಲೆ ನಿಯಂತ್ರಣ (Control) ಹಾಗೂ ನೋವು, ಹತಾಶೆಗಳನ್ನು ನಿಯಂತ್ರಿಸಿಕೊಳ್ಳುವ ಗುಣವೂ ಬೆಳೆಯುತ್ತದೆ. ಅಂತಹ ಮಕ್ಕಳು ಬಾಹ್ಯ ಪರಿಸ್ಥಿತಿಗೆ ವಿರುದ್ಧವಾಗಿ ಆಂತರಿಕ ಸ್ಫೂರ್ತಿ ಅನುಸರಿಸುವ ಮೂಲಕ ವಿಶಿಷ್ಟ ಮಾರ್ಗದಲ್ಲಿ (Special Path) ಸಾಗುವ ಸಾಧ್ಯತೆ ಹೆಚ್ಚು. ಒಂದು ಹಂತದ ಬಳಿಕ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿ, ಅದ್ಭುತಗಳನ್ನು ಸಾಧಿಸುತ್ತಾರೆ ಎನ್ನುತ್ತವೆ ಅಧ್ಯಯನಗಳು. ಶಿಸ್ತಿನ ಪಾಲಕರಿಂದ ಮಕ್ಕಳ ಮೇಲಾಗುವ ಕೆಟ್ಟ ಪರಿಣಾಮಗಳ ಬಗ್ಗೆಯೂ ಅರಿತುಕೊಳ್ಳುವುದು ಅಗತ್ಯ.

ಕೆಟ್ಟ ಪರಿಣಾಮಗಳು
•    ನಿರ್ಧಾರ (Decision) ಕೈಗೊಳ್ಳುವ ಸಮಸ್ಯೆ
ಅತಿ ಶಿಸ್ತಿನ ಪಾಲಕರ ನಡುವೆ ಬೆಳೆದ ಮಕ್ಕಳಲ್ಲಿ ದೊಡ್ಡವರಾದ ಬಳಿಕ ಸ್ವಯಂ ನಿಯಂತ್ರಣ ಹಾಗೂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಸಮಸ್ಯೆ ಎದುರಿಸುತ್ತಾರೆ. ಅವರಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಂಡು ಗೊತ್ತಿರುವುದಿಲ್ಲ. ಪಾಲಕರು (Parents) ಎಷ್ಟೇ ಕಷ್ಟವಾದ ಸವಾಲು ಎದುರಿಗಿಟ್ಟರೂ ಅದನ್ನು ಎದುರಿಸುವುದೊಂದೇ ಅವರ ಗುರಿಯಾಗಿರುತ್ತದೆ. ಹೀಗಾಗಿ, ಕೆಲವು ಭಾವನೆಗಳನ್ನು (Feelings) ನಿಯಂತ್ರಿಸುವ ವಿಧಾನವೇ ಅವರಿಗೆ ತಿಳಿದಿರುವುದಿಲ್ಲ.

ಮಾಡಿದ ತಪ್ಪಿಗೆ ಕ್ಷಮೆ ಕೇಳಿಬಿಟ್ರೆ ಸಾಕಾ? ಮತ್ತೇನು ಮಾಡಬೇಕು?

•    ಆತ್ಮಗೌರವದ (Self Esteem) ಹೋರಾಟ
ವ್ಯಕ್ತಿತ್ವಕ್ಕೆ (Personality) ಪೂರಕವಾಗುವ ಶಿಸ್ತಿನ ವಾತಾವರಣ ನಿರ್ಮಿಸುವುದು ಬೇರೆ. ಆದರೆ, ಆ ಶಿಸ್ತು ಕಠೋರವಾದರೆ ಮತ್ತು ನಿಯಂತ್ರಿಸುವ ಮಟ್ಟದಲ್ಲಿದ್ದರೆ ಮಕ್ಕಳ ಮೇಲೆ ಭಾರೀ ಪರಿಣಾಮ ಆಗುತ್ತದೆ. ಇಂತಹ ಮಕ್ಕಳಲ್ಲಿ ‘ತಾವು ಉತ್ತಮವಾಗಿಲ್ಲ’ ಎನ್ನುವ ಭಾವನೆ ದಟ್ಟವಾಗಿರುತ್ತದೆ. 

•    ಇತರರ ಜತೆಗೂ ಕಟ್ಟುನಿಟ್ಟು 
ಮಕ್ಕಳು ತಾವೇನು ಅನುಭವಿಸುತ್ತಾರೋ, ಕಾಣುತ್ತಾರೋ ಅದನ್ನು ಪ್ರತಿಫಲಿಸುತ್ತಾರೆ. ಅತಿಯಾದ ಶಿಸ್ತುಬದ್ಧ ವಾತಾವರಣದಲ್ಲಿ ಬೆಳೆದ ಮಕ್ಕಳು ಯಾರೊಂದಿಗೂ ಮುಕ್ತವಾಗಿ ಬೆರೆಯದ ಗುಣ ರೂಢಿಸಿಕೊಳ್ಳಬಹುದು. ತಮ್ಮ ಕುರಿತೂ ಶಿಸ್ತಿನಿಂದಲೇ ಯೋಚಿಸಬಹುದು. ತಮ್ಮ ಚಿಕ್ಕಪುಟ್ಟ ತಪ್ಪುಗಳನ್ನು ಕ್ಷಮಿಸಿಕೊಳ್ಳದೆ ಹಿಂಸೆ ಅನುಭವಿಸಬಹುದು.

•    ನಂಬಿಕೆಯ (Trust) ಪ್ರಶ್ನೆ
ಸ್ವಯಂಪ್ರೇರಿತವಾಗಿ ಯಾವುದಾದರೂ ಕೆಲಸ ಮಾಡಲು ಇವರಿಂದ ಸಾಧ್ಯವಾಗದಿರಬಹುದು. ಸಂಬಂಧ (Relation) ಮತ್ತು ಬದ್ಧತೆಗಳನ್ನು ನಂಬದಿರಬಹುದು. ಹೆಚ್ಚು ಶಿಸ್ತಿಲ್ಲದ ವಾತಾವರಣದಲ್ಲಿ ಇವರಿಗೆ ಕಷ್ಟವಾಗುತ್ತದೆ. ಶಿಸ್ತಿನ ವಾತಾವರಣದಲ್ಲೇ ಕಂಫರ್ಟ್ ಆಗಿರುತ್ತಾರೆ.

Personality Tips: ಮಕ್ಕಳು ದೊಡ್ಡೋರಾಗ್ತಾ ಇದಾರೆ ಅಂತಾದ್ರೆ ಈ ಕೆಲ್ಸಗಳನ್ನ ಕಲಿತ್ಕೊಳ್ಬೇಕು!

•    ಜೀವನದ ಬಗ್ಗೆ ನಿಷ್ಕ್ರಿಯ (Passive) ಧೋರಣೆ
ಬಾಲ್ಯದಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದನ್ನು ಖಚಿತವಾಗಿ ರೂಢಿಸಿಕೊಳ್ಳುವುದರಿಂದ ಮನೆಯಿಂದ ಹೊರಗಿರುವ ಸಮಯದಲ್ಲಿ ಅಥವಾ ಆ ವಾತಾವರಣದಿಂದ ದೂರವಿದ್ದಾಗ ಏನು ಮಾಡಬೇಕೆಂದು ತಿಳಿಯದೇ ನಿಷ್ಕ್ರಿಯ ಧೋರಣೆ ತಳೆಯಬಹುದು. 

•    ಕೋಪ ಮತ್ತು ಖಿನ್ನತೆ (Depression) 
ಅತಿಯಾದ ಶಿಸ್ತು ಮತ್ತು ಕಟ್ಟುನಿಟ್ಟಿನ ನಿಯಮಗಳಿಂದ ಮಕ್ಕಳಲ್ಲಿ ಆಳವಾಗಿ ತಮ್ಮ ಬಗ್ಗೆ ಮೌಲ್ಯವಿಲ್ಲದ ಭಾವನೆ ನೆಲೆಯಾಗಬಹುದು. ಹೀಗಾಗಿ, ಇಂತಹ ಮಕ್ಕಳಲ್ಲಿ ಕೋಪ ಮತ್ತು ಖಿನ್ನತೆಯ ಭಾವನೆ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತವೆ.

Latest Videos
Follow Us:
Download App:
  • android
  • ios