ಇಬ್ಬರ ಮಧ್ಯೆ ಏನೋ ಆಗಬಾರದು ಆಗ್ತಿದೆ, ರಿಫ್ರೆಶ್ ಅಗಲು ಮಾಡುವುದೇನು?
ವರ್ಷ ವರ್ಷದಲ್ಲಿ ಸಂಬಂಧ ಗಟ್ಟಿಯಾಗ್ಬೇಕೆ ವಿನಃ ದುರ್ಬಲವಾಗ್ಬಾರದು. ಪತಿ – ಪತ್ನಿ ಇಷ್ಟಕಷ್ಟಗಳನ್ನು ಅರಿತು ನಡೆಯಬೇಕೇ ಹೊರತು ಒಟ್ಟಿಗಿರೋದೇ ಕಷ್ಟವಾಗ್ಬಾರದು. ನೀವಿಬ್ಬರೂ ದೂರವಾಗ್ತಿದಿರಿ ಎಂಬುದನ್ನು ಈ ಸಂಕೇತದಿಂದ ತಿಳಿಯಿರಿ.
ಎರಡು ಜೀವಗಳು ಒಂದಾಗಿದ್ದಾಗ್ಲೇ ಬದುಕು ಹಸನಾಗಿರಲು ಸಾಧ್ಯ. ಒಂಟಿ ಜೀವನ ಆರಂಭದಲ್ಲಿ ಸುಖ ನೀಡಿದ್ರೂ ವಯಸ್ಸಾಗ್ತಿದ್ದಂತೆ ಮನಸ್ಸು ಸಂಗಾತಿಯನ್ನು ಬಯಸುತ್ತದೆ. ಮದುವೆಯನ್ನು ಒಂದೆರಡು ದಿನಕ್ಕೆ ಬೇರೆ ಆಗಲು ಮಾಡಿಕೊಳ್ಳೋದಲ್ಲ. ಮದುವೆ ಅನ್ನೋದೇ ಹೊಂದಾಣಿಕೆ, ನಂಬಿಕೆ, ವಿಶ್ವಾಸ, ಪ್ರೀತಿ ಮೇಲೆ ನಿಂತಿದೆ. ಜೀವನ ಪರ್ಯಂತ ಒಟ್ಟಿಗಿರೋದು ಹೇಳಿದಷ್ಟು ಸುಲಭವಲ್ಲವೇ ಅಲ್ಲ. ಮದುವೆಯಾದ ಆರಂಭದ ದಿನಗಳಲ್ಲಿ ಎಲ್ಲವೂ ಕನಸಿನಂತೆ ಕಳೆಯುತ್ತದೆ. ಆದ್ರೆ ಇಬ್ಬರು ಒಟ್ಟಿಗೆ ದಿನ ಕಳೆಯಲು ಶುರು ಮಾಡಿದಾಗ್ಲೆ ಸಮಸ್ಯೆಗಳು ಅರಿವಾಗೋದು. ನಿಮ್ಮಿಬ್ಬರ ಸಂಬಂಧ ಹಳಸಲು ಶುರುವಾಗಿದೆ ಎಂಬುದನ್ನು ಕೆಲ ಸಂಕೇತದ ಮೂಲಕ ನೀವು ತಿಳಿಯಬಹುದು. ಬರೀ ಸಂಬಂಧ ಹಾಳಾಗ್ತಿದೆ ಅಂತ ಕೈಕಟ್ಟಿ ಕುಳಿತುಕೊಳ್ಳೋದಲ್ಲ. ಅದನ್ನು ಸರಿಪಡಿಸುವ ಪ್ರಯತ್ನ ಕೂಡ ಮಾಡ್ಬೇಕು. ಸಂಗಾತಿ ದೂರವಾಗ್ತಿದ್ದಾರೆ ಎಂಬುದನ್ನು ಯಾವ ಸಂಕೇತದಿಂದ ತಿಳಿಯೋದು ಹಾಗೆ ಅದನ್ನು ಹೇಗೆ ಬಗೆಹರಿಸಬಹುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಂಗಾತಿ ಮಧ್ಯೆ ಭಿನ್ನಾಭಿಪ್ರಾಯದ ಲಕ್ಷಣ ಇದು :
* ನಿಮಗೆ ಅಚ್ಚರಿ ಎನ್ನಿಸಬಹುದು, ಸಂಗಾತಿ ಮಧ್ಯೆ ಅಂತರ ಕಾಣಿಸಿಕೊಂಡಾಗ ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಬಾಳಲು ಶುರು ಮಾಡ್ತಾರೆ. ಒಬ್ಬರ ಮುಖ (Face) ನೋಡಿ ಮತ್ತೊಬ್ಬರು ನಗೋ (Smile) ದನ್ನು ಕೂಡ ಮರೆತಿರುತ್ತಾರೆ.
ಪೆನ್ಷನ್ ಬರೋ ಏಜಲ್ಲಿ ಯಾಕೆ ಟೆನ್ಷನ್? ಬಾಲ್ಯ ವಿವಾಹದಂತೆ ವೃದ್ಧರ ಮದ್ವೆ ಬ್ಯಾನ್ ಮಾಡಿ ಎಂದ ಯುವಕರು!
* ಮುಖಕ್ಕೆ ಮುಖಕೊಟ್ಟು ಮಾತನಾಡೋದನ್ನು ಮರೆಯುವ ಸಂಗಾತಿ ಮನೆಯಲ್ಲಿದ್ರೂ ಇಲ್ಲದಂತೆ ಬದುಕುತ್ತಿರುತ್ತಾರೆ. ಒಬ್ಬರ ದಿಕ್ಕು ದಕ್ಷಿಣಕ್ಕಾದ್ರೆ ಇನ್ನೊಬ್ಬರ ದಿಕ್ಕು ಉತ್ತರಕ್ಕಾಗಿರುತ್ತದೆ. ಸಂಗಾತಿಯನ್ನು ನಿರ್ಲಕ್ಷ್ಯಿಸಿ ಜೀವನ ನಡೆಸಲು ಶುರು ಮಾಡ್ತಾರೆ.
* ಸಂಗಾತಿ ಯಾವ ಕೆಲಸ ಮಾಡ್ತಿದ್ದಾರೆ ಎಂಬುದನ್ನು ತಿಳಿಯುವ ಆಸಕ್ತಿ ಪರಸ್ಪರರಿಗಿರೋದಿಲ್ಲ. ಸಂಗಾತಿ ವೃತ್ತಿ ಜೀವನದ ಏಳ್ಗೆ, ವೃತ್ತಿಯಲ್ಲಿ ಏನಾಗ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅವರಿಗಿರೋದಿಲ್ಲ.
* ಸಂಗಾತಿ ಮಧ್ಯೆ ಮಾತು ಸತ್ತಿರುತ್ತದೆ. ಪ್ರೀತಿ, ರೋಮ್ಯಾಂಟಿಕ್ ಮಾತು ಮರೆಯುವ ಸಂಗಾತಿ ಮನೆ ಕೆಲಸ, ಮಕ್ಕಳು ಸೇರಿದಂತೆ ನಿತ್ಯದ ಆಗುಹೋಗುಗಳಿಗೆ ಮಾತ್ರ ಸೀಮಿತವಾಗ್ತಾರೆ.
ಇಬ್ಬರು ತಮ್ಮಲ್ಲೇ ತಾವು ಕಳೆದು ಹೋಗಿದ್ದು, ಸಂಗಾತಿಗೆ ಜೀವನದಲ್ಲಿ ಆಧ್ಯತೆ ನೀಡ್ತಿಲ್ಲ ಎಂದಾದ್ರೆ ನಿಮ್ಮ ಸಂಬಂಧ ಸರಿ ದಾರಿಯಲ್ಲಿ ಸಾಗುತ್ತಿಲ್ಲ ಎಂದರ್ಥ. ನಿಮ್ಮ ಸಂಬಂಧವನ್ನು ರೀಪ್ರೆಶ್ ಮಾಡುವ ಅಗತ್ಯವಿದೆ ಎಂದೇ ಭಾವಿಸಿ. ದಾಂಪತ್ಯದಲ್ಲಿ ಮತ್ತೆ ಹೊಸತನ ತರಲು ಕೆಲ ಪ್ರಯತ್ನವನ್ನು ಮಾಡಿ.
• ಸಂಬಂಧ ಹಳಿ ತಪ್ಪುತ್ತಿದೆ ಎಂದು ಭಾವಿಸುವ ಜನರು ಮೊದಲು ಒಂದು ಪೇಪರ್, ಪೆನ್ ತೆಗೆದುಕೊಂಡು ನಿಮ್ಮ ಹಿಂದಿನ ಖುಷಿ ದಿನಗಳನ್ನು ಬರೆಯಿರಿ. ಆಗ ನೀವು ಹೇಗೆಲ್ಲ ಇಬ್ಬರು ಒಟ್ಟಿಗೆ ಸಮಯ ಕಳೆದಿದ್ದಿರಿ ಎಂಬುದನ್ನು ನೆನಪು ಮಾಡಿಕೊಳ್ತಾ ಅದನ್ನು ಪೇಪರ್ ಮೇಲೆ ಬರೆಯಿರಿ. ನಂತ್ರ ಆ ಕೆಲಸವನ್ನು ಮತ್ತೆ ಒಟ್ಟಿಗೆ ಮಾಡುವ ಪ್ರಯತ್ನ ಶುರು ಮಾಡಿ.
• ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಮೂರು ಹೊತ್ತು ಗ್ಯಾಜೆಟ್ ಮುಂದಿರೋದನ್ನು ಬಿಟ್ಟು ಹೊರಗೆ ಬನ್ನಿ. ನಿಮ್ಮ ಸಂಗಾತಿ ಜೊತೆ ಗುಡ್ ಆಕ್ಟಿವಿಟಿಯಲ್ಲಿ ಪಾಲ್ಗೊಳ್ಳಿ. ಇಬ್ಬರು ಪ್ರವಾಸಕ್ಕೆ ಹೋಗಿ ಬನ್ನಿ. ಇಲ್ಲವೆ ವಾಕಿಂಗ್, ಅಡುಗೆ, ವ್ಯಾಯಾಮವನ್ನು ಒಟ್ಟಿಗೆ ಮಾಡಲು ಶುರು ಮಾಡಿ.
ಅಮೃತಧಾರೆ: ಮೌಲ್ಯಗಳೇ ಉಸಿರಾದ ಮಿಡಲ್ ಕ್ಲಾಸ್ ಅಪೇಕ್ಷಾ ದಾರಿ ತಪ್ತಿದ್ದಾಳಾ?
• ನಿಮ್ಮ ಜೀವನ ಮೊದಲಿನಂತೆ ರಸಭರಿತವಾಗಬೇಕೆಂದ್ರೆ ಕಮಿಟ್ಮೆಂಟ್ ಕಡಿಮೆ ಮಾಡಿಕೊಳ್ಳಿ. ನಿಮ್ಮ ತಲೆ ಮೇಲೆ ಹೆಚ್ಚು ಜವಾಬ್ದಾರಿ ಬರ್ತಿದ್ದಂತೆ ನಿಮಗೆ ಸಮಯ ಸಿಗೋದಿಲ್ಲ. ನೀವು ಜವಾಬ್ದಾರಿ ಮುಗಿಸೋದ್ರಲ್ಲಿ ನಿರತರಾಗುವ ಕಾರಣ ಸಂಗಾತಿಗೆ ಸಮಯ ನೀಡಲಾಗುವುದಿಲ್ಲ.
• ನಿಮ್ಮನ್ನು ನೀವು ಮೊದಲು ಪ್ರೀತಿಸಲು ಕಲಿಯೋದು ಮುಖ್ಯ. ಯಾವಾಗ ನಿಮ್ಮನ್ನು ನೀವು ಪ್ರೀತಿಸಿ, ಆರೈಕೆ ಮಾಡಿಕೊಳ್ತೀರೋ ಆಗ ನೀವು ಖುಷಿಯಾಗ್ತೀರಿ. ನೀವು ಖುಷಿಯಾದ್ರೆ ನಿಮ್ಮ ಸುತ್ತಮುತ್ತಲಿನವರನ್ನು ಸುಲಭವಾಗಿ ಖುಷಿಯಾಗಿಟ್ಟುಕೊಳ್ಳಬಹುದು.