ಮೊದಲ ರಾತ್ರಿಯಲ್ಲೇ ಮಗನನ್ನು ಬಿಡೆಂದು ಸೊಸೆಗೆ 4 ಲಕ್ಷ ರೂ. ಆಮೀಷ ಒಡ್ಡಿದ ಮಾವ!

ಮದುವೆಯಲ್ಲಿ ನಾನಾ ಸಮಸ್ಯೆಗಳು ಬರುತ್ತವೆ. ಸಣ್ಣಪುಟ್ಟ ವಿಷ್ಯಕ್ಕೆ ಗಲಾಟೆ ಮಾಡಿಕೊಳ್ಳುವ ಜನರಿದ್ದಾರೆ. ಅನೇಕ ಬಾರಿ ಜಗಳ ಯಾಕೆ ಶುರುವಾಯ್ತು ಅನ್ನೋದೇ ಗೊತ್ತಾಗದೆ ಮದುವೆ ಮುರಿದು ಬಿದ್ದಿರುತ್ತದೆ. ಇಲ್ಲೂ ಅದೇ ಆಗ್ಬೇಕಿತ್ತು. ಆದ್ರೆ ವರ ಇಲ್ಲಿ ಹೀರೋ ಆಗಿದ್ದಾನೆ.
 

Father In Law Offered Bride Lakhs Of Money To Leave Husband On Wedding Night roo

ಪ್ರೀತಿಸಿ ಮದುವೆ ಆಗ್ಬೇಕು ಎಂದೇನಿಲ್ಲ. ಮದುವೆ ಆದ್ಮೇಲೂ ಪ್ರೀತಿ ಚಿಗುರಬಹುದು. ಮದುವೆ ಸಂದರ್ಭದಲ್ಲಿ ಇವರು ನಮ್ಮವರಾಗಬಲ್ಲರು ಎಂಬ ಭರವಸೆ ಸಿಕ್ಕಲ್ಲಿ ಕಣ್ಮುಚ್ಚಿಕೊಂಡು ಮದುವೆ ಆಗ್ಬಹುದು. ನಿಮ್ಮ ಭರವಸೆಯನ್ನು ಸತ್ಯ ಮಾಡುವುದು ಇಬ್ಬರ ಕೈನಲ್ಲಿದೆ. ದಂಪತಿ ಮಧ್ಯೆ ಕುಟುಂಬಸ್ಥರು ಬಂದಾಗ ಪರಿಸ್ಥಿತಿ ಹದಗೆಡುತ್ತದೆ. ಕುಟುಂಬಸ್ಥರಿಗೆ ದಾಂಪತ್ಯದಲ್ಲಿ ಮೂಗು ತೂರಿಸಲಿ ಅವಕಾಶಕೊಡದೆ ಹೋದ್ರೆ ಆಗ ಸಂಸಾರ ದೀರ್ಘಕಾಲ ಸಂತೋಷದಿಂದ ಕೂಡಿರುತ್ತದೆ. ಅರೇಂಜ್ ಮ್ಯಾರೇಜ್ ಆಗ್ತಿರುವ ವೇಳೆ ವಧು – ವರರು ಕುಟುಂಬವನ್ನು ಹೆಚ್ಚುಆ ಶ್ರಯಿಸಿರುತ್ತಾರೆ. ಕುಟುಂಬಸ್ಥರಲ್ಲಿ ಒಬ್ಬರಿಗೆ ಈ ಸಂಬಂಧ ಇಷ್ಟವಿಲ್ಲ ಎಂದ್ರೂ ಮದುವೆ ಮುರಿದು ಹೋಗುತ್ತದೆ. ಆದ್ರೆ ಈ ಮದುವೆ ಸ್ವಲ್ಪ ಭಿನ್ನವಾಗಿದೆ. ಮದುವೆ ವೇಳೆ ಸಾಕಷ್ಟು ಡ್ರಾಮಾ ನಡೆದಿದೆ. ವರನ ಕಡೆಯವರು ವಧುವಿಗೆ ಅವಮಾನ ಮಾಡಿದ್ದಾರೆ. ಹಣ ನೀಡಿ ಮದುವೆ ಮುರಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಮದುವೆ ಮಂಟಪದಲ್ಲಿ ನಡೆದ ಎಲ್ಲಾ ಗಲಾಟೆ – ಜಗಳಗಳ ಮಧ್ಯೆಯೂ ಅಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಅದೇನು ಎಂಬುದನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. 

ಸಾಮಾಜಿಕ ಜಾಲತಾಣ (Social Network) ರೆಡ್ಡಿಟ್ ನಲ್ಲಿ ಆತ ಈ ವಿಷ್ಯವನ್ನು ಬರೆದಿದ್ದಾನೆ. ನಾನು ಅಲ್ಲೇ ಇದ್ದೆ. ಆ ಮದುವೆಯಲ್ಲಿ ಮೂರು ಗುಂಪುಗಳಿತ್ತು. ಒಂದು ಗುಂಪು ವರನ ಕಡೆಯವರು. ಇನ್ನೊಂದು ವಧು ಕಡೆಯವರದ್ದು. ಮತ್ತೊಂದು ವಧು (Bride) ವಿನ ಅಮ್ಮನ ತವರಿನವರದ್ದು. ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನಾನು ಅವರನ್ನು ಒಪ್ಪಿಸುವ ಪ್ರಯತ್ನ ನಡೆಸಿದ್ದೆ ಎಂದು ವ್ಯಕ್ತಿ ಬರೆದುಕೊಂಡಿದ್ದಾನೆ.

ಶೋಯೆಬ್‌ ಮಲೀಕ್‌ಗೆ 'ಖುಲಾ' ನೀಡಿದ ಸಾನಿಯಾ, ಮುಸ್ಲಿಂ ಹೆಣ್ಣುಮಕ್ಕಳಿಗಿದೆ ಇಂಥದ್ದೊಂದು ಅಧಿಕಾರ!

ಎಲ್ಲರ ಒಪ್ಪಿಗೆ ಮೇರೆಗೆ ಮದುವೆ (Wedding) ಏನೋ ನಿಶ್ಚಯವಾಗಿದೆ. ಮದುವೆ ಮನೆಯಲ್ಲಿ ವಧುವಿನ ಜೊತೆ ವರನ ತಂದೆ ಡಾನ್ಸ್ ಕೂಡ ಮಾಡಿದ್ದಾನೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ. ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿದೆ. ನಮಗೆ ಈ ಹೆಣ್ಣು ಒಪ್ಪಿಗೆ ಇಲ್ಲ. ನನ್ನ ಮಗನಿಗೆ ಈಕೆ ಪತ್ನಿಯಾಗಿ ಬರೋದು ಬೇಡ ಎಂದು ವರನ ಅಪ್ಪ ಹೇಳಲು ಶುರು ಮಾಡಿದ್ದಾನೆ. ಇದಕ್ಕೆ ವರನ ಕಡೆಯವರು ಬೆಂಬಲ ನೀಡಿದ್ದಾರೆ.

ನಾಲ್ಕು ಲಕ್ಷ ರೂಪಾಯಿ ನೀಡುತ್ತೇವೆ. ನೀವು ಮದುವೆ ಮುರಿದುಕೊಳ್ಳಿ ಎಂದು ವರನ ಕಡೆಯವರು ವಧು ಕಡೆಯವರಿಗೆ ಒತ್ತಡ ಹಾಕುವ ಪ್ರಯತ್ನ ಕೂಡ ನಡೆದಿದ್ದಾರೆ. ಮೂರು ಗುಂಪಿನ ಮಧ್ಯೆ ಸಾಕಷ್ಟು ಚರ್ಚೆ ನಡೆದಿದೆ.

ಈ ಮಧ್ಯೆ ಇವರ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ ವರ, ಎಲ್ಲರನ್ನು ಅಚ್ಚರಿಗೊಳಿಸಿದ್ದಾನೆ. ಆತ ವಧು ಪರ ನಿಂತಿದ್ದಾನೆ. ನನಗೆ ವಧು ಇಷ್ಟ. ಆಕೆ ಜೊತೆ ನಾನು ಸಂಸಾರ ನಡೆಸಲು ಸಿದ್ಧ ಎಂದಿದ್ದಾರೆ. ಆದ್ರೆ ಇದಕ್ಕೆ ವರನ ಕಡೆಯವರು ಒಪ್ಪಲಿಲ್ಲ. ಈ ಮದುವೆ ಒಪ್ಪಿಗೆ ಇಲ್ಲ ಎಂದೇ ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರ ನಿರ್ಧಾರವನ್ನು ದಿಕ್ಕರಿಸಿದ ವರ, ವಧುವಿನ ಕೈ ಹಿಡಿಯಲು ಕುಟುಂಬಸ್ಥರನ್ನು ದೂರ ಮಾಡಿದ್ದಾನೆ. ಈ ಘಟನೆ ನಡೆದು ಇಂದಿಗೆ ಮೂವತ್ತು ವರ್ಷ ಕಳೆದಿದೆ. ಇವರಿಬ್ಬರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇಬ್ಬರ ದಾಂಪತ್ಯ ಚೆನ್ನಾಗಿದೆ ಎಂದು ಆತ ಬರೆದುಕೊಂಡಿದ್ದಾನೆ.

ಶುಭಮನ್ ಗಿಲ್‌ ತಂಗಿ ಜೊತೆ ಕಾಣಿಸಿಕೊಂಡ ಸಚಿನ್ ಪುತ್ರಿ: ಸಂಬಂಧ ಫಿಕ್ಸ್ ಎಂದ ನೆಟ್ಟಿಗರು!

ಇದನ್ನು ಓದಿದ ಜನರು ಒಂದೊಂದು ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ವರನ ತಂದೆ – ತಾಯಿಗೆ ಪ್ರೀತಿ, ಮದುವೆ ಮಹತ್ವದ್ದಾಗಿರಲಿಲ್ಲ. ಅವರಿಗೆ ಹಣ ಮುಖ್ಯ ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು ಜಾತಿ ಬೇರೆ ಆಗಿರಬೇಕು, ಧರ್ಮ ಬೇರೆ ಆಗಿರಬೇಕು, ಯಾವುದೋ ಒಂದು ಸಮಸ್ಯೆ ಇರಬೇಕು. ಅದಕ್ಕೆ ಪಾಲಕರು ಮದುವೆ ವಿರೋಧಿಸಿದ್ದರು ಎಂದು ಬರೆದಿದ್ದಾರೆ. ಇಬ್ಬರು ಇನ್ನಷ್ಟು ದಿನ ಸುಖವಾಗಿ ಬಾಳಲಿ ಎಂದು ಅನೇಕರು ಹರಸಿದ್ದಾರೆ. 
 

Latest Videos
Follow Us:
Download App:
  • android
  • ios