Asianet Suvarna News Asianet Suvarna News

ಮಗನ ಹೆಂಡ್ತಿ ಮೇಲೆ ಮಾವನಿಗೆ ಸಖತ್ ಲವ್..!

  • ಪ್ರೀತಿಗೆ ವಯಸ್ಸು, ಸಂಬಂಧ ಯಾವುದೂ ಅಡ್ಡವಿಲ್ಲ
  • ಮಗನ ಹೆಂತಿಯೊಂದಿಗೆ ಪ್ರೀತಿಯಾಯ್ತು
  • ಯಾ ಪ್ರೇಮಿಗಳಿಗೂ ಕಮ್ಮಿ ಇಲ್ಲ ಈ ಮಾವ-ಸೊಸೆಯ ಲವ್ ಸ್ಟೋರಿ
Father in law liked her daughter in law so much took her away baby was born dpl
Author
Bangalore, First Published Aug 27, 2021, 3:16 PM IST
  • Facebook
  • Twitter
  • Whatsapp

ಲಕ್ನೋ(ಏ.27): ಸಮಾಜದ ನಿಯಮಗಳಿಗೆ, ಕಟ್ಟುಪಾಡುಗಳಿಗೆ ವಿರುದ್ಧವಾಗಿ ನಡೆಯುವ ಪ್ರೇಮ ಸಂಬಂಧಗಳು ಯಾವಾಗಲೂ ಚರ್ಚೆಯ ವಿಷಯವಾಗುತ್ತದೆ. ಉತ್ತರ ಪ್ರದೇಶದ ಬಡೌನ್‌ನಲ್ಲಿ ನಡೆದಿರುವ ಪ್ರೇಮ ಪ್ರಸಂಗ ಖಂಡಿತವಾಗಿಯೂ ಇಂಟ್ರೆಸ್ಟಿಂಗ್. ಈ ಪ್ರಕರಣದಲ್ಲಿ ಮಾವನೇ ಮಗನ ಹೆಂಡತಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ನಂತರ ಆಕೆಯ ಜೊತೆಗೆ ತಲೆಮರೆಸಿಕೊಂಡಿದ್ದಾನೆ. ಪ್ರೀತಿಸಿ ಮದುವೆಯಾಗಿ ಸೊಸೆಯನ್ನೇ ಧರ್ಮಪತ್ನಿಯಾಗಿ ಸ್ವೀಕರಿಸಿದ್ದಾನೆ.

ಅಂದ ಹಾಗೆ ಈ ಪ್ರೇಮ ಪ್ರಸಂಗದಲ್ಲಿ ಇನ್ನೂ ಅಚ್ಚರಿ ಹುಟ್ಟಿಸೋ ವಿಚಾರ. ಇವೆಲ್ಲವೂ ನಡೆದಿದ್ದು ಸೊಸೆಯ ಒಪ್ಪಿಗೆಯಿಂದಲೇ. ಹೌದು. ತನ್ನ ಗಂಡನನ್ನು ಬಿಟ್ಟು ಗಂಡನ ತಂದೆಯ ಪ್ರೀತಿಯಲ್ಲಿ ಹುಚ್ಚಿಯಾಗಿದ್ದಾಳೆ ಈಕೆ. ಇಬ್ಬರೂ ತಮ್ಮ ನಡುವಿನ ಸಂಬಂಧ ಮರೆತು ಪ್ರೀತಿಯಲ್ಲಿ ಮುಳುಗಿದ್ದಾರೆ.

 

ಬಡೌನ್‌ನ ಕೊಟ್ವಾಲಿಯ ಬಿಸೌಲಿ ಎಂಬು ಜಾಗದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಯುವತಿಯ ಮಾಜಿ ಪತಿ ಆಕೆ ಕಾಣೆಯಾದಾಗ ಪತ್ನಿ ಹಾಗೂ ತಂದೆಯ ವಿರುದ್ಧ ದೂರು ದಾಖಲಿಸಿದ್ದ. ಈ ಬಗ್ಗೆ ಪಂಚಾಯಿತಿಯೂ ನಡೆಯಿತು. ಎಲ್ಲರೂ ಮಗನ ಹೆಂಡತಿಯನ್ನು ಮದುವೆಯಾದ ಮಾವನ ನಿರ್ಧಾರವನ್ನೇ ಬೆಂಬಲಿಸಿದ್ದಾರೆ.

ವಾಸ್ತವವಾಗಿ ಯುವತಿ ತನ್ನ ಮಾಜಿ ಪತಿಯನ್ನು ಮದುವೆಯಾದಾಗ, ಆತ ಅಪ್ರಾಪ್ತನಾಗಿದ್ದನು. ಇದಾದ ನಂತರ ಮಹಿಳೆ ಆತನಿಗೆ ವಿಚ್ಛೇದನ ನೀಡಿದ್ದಾರೆ. ಆಕೆ ತನ್ನ ಸ್ವಂತ ಇಚ್ಛೆಯಂತೆ ತನ್ನ ಮಾವನನ್ನು ಮದುವೆಯಾಗಿದ್ದಾಳೆ. ಮಹಿಳೆ ಮತ್ತು ಆಕೆಯ ಮಾಜಿ ಪತಿ 2016 ರಲ್ಲಿ ವಿವಾಹವಾಗಿದ್ದರು. ಒಂದು ವರ್ಷದ ಹಿಂದೆ ಅವರ ತಾಯಿ ಸಾವನ್ನಪ್ಪಿದ್ದು ಮದುವೆಯ ಆತುರಕ್ಕೆ ಕಾರಣವಾಗಿತ್ತು.

ಈ ಸಂದರ್ಭ ಅಪ್ರಾಪ್ತ ಮಗನ ಹೆಂಡತಿ ಮೇಲೆ ಮಾವನಿಗೆ ಪ್ರೀತಿಯಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು. ಇದಾದ ನಂತರ, ಇಬ್ಬರೂ ಮಹಿಳೆ ತನ್ನ ಗಂಡನನ್ನು ವಿಚ್ಛೇದನ ಮಾಡಿ ತನ್ನ ಮಾವನನ್ನು ಮದುವೆಯಾಗುವುದಾಗಿ ನಿರ್ಧರಿಸಿದರು. ತನ್ನ ಸೊಸೆಯನ್ನು ಮದುವೆಯಾದ ವ್ಯಕ್ತಿಯ ಹೆಸರು ದೇವಾನಂದ್ ಎಂದು ಹೇಳಲಾಗುತ್ತಿದೆ. ಅವನ ವಯಸ್ಸು ಸುಮಾರು 45 ವರ್ಷ. ಮದುವೆಯಾದ 6 ತಿಂಗಳ ನಂತರ, ಮಹಿಳೆ ಮತ್ತು ಆಕೆಯ ಮಾಜಿ ಪತಿಯ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಯಿತು. ಅದರ ನಂತರ ಮಹಿಳೆಯ ಮಾವನೊಂದಿಗೆ ಹೆಚ್ಚು ನಿಕಟತೆಯನ್ನು ಕಂಡು ಇಬ್ಬರೂ ಮದುವೆಯಾದರು.

Follow Us:
Download App:
  • android
  • ios