Asianet Suvarna News Asianet Suvarna News

ತನ್ನ ಅಗಾಧ ಸೌಂದರ್ಯಕ್ಕೆ ಅವಿವಾಹಿತಳಾಗಿಯೇ ಉಳಿದ ಜಗತ್ತಿನ ಅತ್ಯಂತ ಸುಂದರಿ!

ಸಿಂಗಲ್  ಆಗಿರುವ ಫ್ಯಾಶನ್ ಸ್ಟೈಲಿಸ್ಟ್ ಮತ್ತು ಟಿಕ್‌ಟಾಕ್  ಸ್ಟಾರ್ ಆಶ್ಲೇ ಸಿಂಗಲ್‌ ಆಗಿರುವ ತನ್ನ  ದುಃಖವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾಳೆ.

fashion stylist named Ashley from texas says she's single because of her over beauty gow
Author
First Published Jun 24, 2024, 9:30 PM IST

ನಮ್ಮ ಸಮಾಜದಲ್ಲಿ ಸೌಂದರ್ಯದ ಬಗ್ಗೆ ವಿಭಿನ್ನ ಮಾನದಂಡಗಳಿವೆ. ಬಣ್ಣವನ್ನು ಮಾತ್ರ ಪರಿಗಣಿಸದೇ ಆಕರ್ಷಕ ವ್ಯಕ್ತಿತ್ವ, ಕಣ್ಣೋಟ, ಮೂಗು, ಕಿವಿ, ಹಲ್ಲು, ಹುಬ್ಬು ಹೀಗೆ ಎಲ್ಲವನ್ನು ಸೌಂದರ್ಯಕ್ಕೆ ಹೋಲಿಸುತ್ತಾರೆ.  ಸಂಬಂಧಗಳನ್ನು ಬೆಳೆಸುವಾಗ ಈ ವೈಶಿಷ್ಟ್ಯವನ್ನು  ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಈಕೆ ಸುಂದರಿಯಾದರೂ ಜೀವನ ಸಂಗಾತಿಯನ್ನು ಹುಡುಕಲು ಸಾಧ್ಯವಾಗದ ಹುಡುಗಿಯಾಗಿದ್ದಾಳೆ. ಅವಳು ತನ್ನ ಅಗಾಧ ಸೌಂದರ್ಯದಿಂದಾಗಿ ಅವಿವಾಹಿತಳಾಗಿದ್ದಾಳೆ.

ಪತ್ನಿ, ಮಗ ಜೈಲು ಭೇಟಿ ವೇಳೆ ದರ್ಶನ್ ಕಣ್ಣೀರ ಧಾರೆ: ಮಗನನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ

"ಸಿಂಗಲ್" ಎಂದು ಗುರುತಿಸಲ್ಪಟ್ಟಿರುವ ಫ್ಯಾಶನ್ ಸ್ಟೈಲಿಸ್ಟ್ ಮತ್ತು ಟಿಕ್‌ಟಾಕ್  ಸ್ಟಾರ್ ಆಶ್ಲೇ ತನ್ನ  ದುಃಖವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾಳೆ.  USA ನ ಟೆಕ್ಸಾಸ್‌ನಲ್ಲಿರುವ ಆಶ್ಲೇಯ ಸೌಂದರ್ಯ, ಬುದ್ಧಿವಂತಿಕೆ ಬಗ್ಗೆ ಹುಡುಗರು  ಹೆದರುತ್ತಾರಂತೆ. ಹೀಗಾಗಿ ನಾನು ಒಂಟಿಯಾಗಿದ್ದೇನೆ ಎಂದು ಆಶ್ಲೇ ಹೇಳಿಕೊಂಡಿದ್ದಾಳೆ.

ಆಶ್ಲೇ ತಾನು ಒಬ್ಬಂಟಿಯಾಗಿದ್ದೇನೆ ಮತ್ತು ಸ್ವಲ್ಪ ಸಮಯದವರೆಗೆ ಕೂಡ ನನಗೆ ಸಂಗಾತಿ ಸಿಕ್ಕಿಲ್ಲ ಎಂದು  ಬಹಿರಂಗಪಡಿಸಿದ್ದಾಳೆ. ಈ ಬಗ್ಗೆ ಆಕೆ ಯಾವಾಗಲೂ ಆಶ್ಚರ್ಯಪಡುತ್ತಾಳಂತೆ. ಕಳೆದ ಹಲವು ವರ್ಷಗಳಿಂದ   ಪ್ರೀತಿ- ಪ್ರಣಯ  ಎಂದು ಯಾರೂ ಸಿಕ್ಕಿಲ್ಲ. ನನಗೆ ಯಾರೂ ಹತ್ತಿರವಾಗಿಲ್ಲ ಎಂದಿದ್ದಾಳೆ.

ನಿರ್ದೇಶಕ ತರುಣ್ ಸುಧೀರ್ ಹೃದಯದಲ್ಲಿ ಬೆಳಕಿನ ಕವಿತೆ ಬರೆದ ಬ್ಯೂಟಿಫುಲ್ ನಟಿ!, ಮದುವೆ ಬಗ್ಗೆ ಏನಂದ್ರು?

ನನ್ನ ಸೌಂದರ್ಯವೇ ನನಗೆ ಅಡ್ಡಿ. ಹುಡುಗರಿಗೆ ಸರಳವಾದ ಸಂಬಂಧಗಳು ಬೇಕಾಗಿರುವುದರಿಂದ,  ಯಶಸ್ಸು ಮತ್ತು ನೈಸರ್ಗಿಕ ಆಕರ್ಷಕ ಸೌಂದರ್ಯ ಪುರುಷರನ್ನು ದೂರ ಹೋಗುವಂತೆ ಮಾಡುತ್ತದೆ ಎಂದು ಆಕೆ ನಂಬಿದ್ದಾಳಂತೆ. ಆದರೆ ಕೆಲವು ವ್ಯಕ್ತಿಗಳು ಅವಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಆದ್ರೆ ಆಶ್ಲೇಗೆ ಅವರು ಇಷ್ಟವಾಗಿಲ್ಲ. ಅವರೆಲ್ಲ ಈಗಾಗಲೇ  ಸಂಬಂಧದಲ್ಲಿದ್ದವರು ಎಂದು ಆಶ್ಲೇ ಹೇಳಿದ್ದಾಳೆ. ತನ್ನ ನೈಸರ್ಗಿಕ ಸೌಂದರ್ಯ ಮತ್ತು ವೃತ್ತಿಪರ ಯಶಸ್ಸು ತನ್ನನ್ನು ಸುಲಭವಾಗಿ ಇಷ್ಟಪಡುವ ಪುರುಷರನ್ನು ಬೆದರಿಸುತ್ತದೆ ಎಂದು ಹೇಳಿಕೊಂಡಿದ್ದಾಳೆ.

ಈ ವಿಚಿತ್ರ ಸಮಸ್ಯೆಗೆ ಅನೇಕ ಪ್ರತಿಕ್ರಿಯೆಗಳು ಬಂದಿದೆ. ಆಕೆ ಶ್ರೀಮಂತಿಕೆ, ಜೀವನಶೈಲಿ, ಬುದ್ಧಿವಂತಿಕೆ ಮತ್ತು ಉತ್ತಮ ಸೌಂದರ್ಯವು ಅವಳ ಪ್ರಣಯ ಜೀವನದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ದೈಹಿಕ ನೋಟವನ್ನು ಆಧರಿಸಿ ಸೌಂದರ್ಯವನ್ನು ಅಳೆಯಬಾರದು. ವಿವಿಧ ಸಾಮಾಜಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಅವರೇನು ಮಾಡುತ್ತಾರೆ ಅಬರು ಹೇಗೆ ಬದುಕುತ್ತಾರೆ ಎಂಬುದೇ ಸೌಂದರ್ಯ ಮತ್ತು ಸುಂದರ ಜೀವನ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios