ರೈತರಿಗೆ ತಮ್ಮ ಹಸು, ಎತ್ತುಗಳ ಬಗ್ಗೆ ಅತೀವ ಪ್ರೀತಿ ಇರುತ್ತದೆ. ಹಲವು ಕಡೆ ಮನೆಯ ಹಸುವಿನ ಹುಟ್ಟುಹಬ್ಬವನ್ನೂ ಆಚರಿಸಿದ ಘಟನೆ ನಡೆದಿದೆ. ಇಂತಹದೇ ಘಟನೆ ಸ್ವಿಜರ್‌ಲೆಂಡ್‌ನಲ್ಲಿ ನಡೆದಿದೆ.

ಇಲ್ಲೊಬ್ಬ ಗಾಯಗೊಂಡು ಸಂಕಟಪಡುತ್ತಿದ್ದ ತನ್ನ ಪ್ರೀತಿಯ ಎತ್ತನ್ನು ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿಸಿದ್ದಾನೆ. ಗಾಯಗೊಂಡ ಎತ್ತು ನಡೆಯಲು ಕಷ್ಟಪಡುತ್ತಿರುವುದನ್ನು ನೋಡಲಾಗದೆ ರೈತ ಈ ರೀತಿ ಮಾಡಿದ್ದಾನೆ.

ವೃದ್ಧ ಯಜಮಾನನ ಜೀವ ಉಳಿಸಿದ ನಾಯಿ

ಎತ್ತು ಅದಾಗಲೇ ಗಾಯಗೊಂಡು ಕಷ್ಟಪಟ್ಟು  ಕುಂಟುತ್ತಾ ನಡೆಯುತ್ತಿತ್ತು. ಅದಕ್ಕೆ ಇನ್ನಷ್ಟು ಗಾಯಮಾಡಿ ನೋವು ಕೊಡಲು ಇಚ್ಛಿಸದ ರೈತ ಏರ್‌ಲಿಫ್ಟ್ ಪ್ಲಾನ್ ಮಾಡಿದ್ದಾನೆ. ಎತ್ತಿನ ಕುತ್ತಿಗೆಗೆ ಕಟ್ಟಿದ ಹಗ್ಗದ ಸಮೇತ ಏರ್‌ಲಿಫ್ಟ್ ಮಾಡಲಾಗಿದೆ.

ಎತ್ತಿಗೆ ನೋವಾಗದಂತೆ, ನೆಟ್ ಬಳಸಿ ಹಸುವನ್ನು ಏರ್‌ಲಿಫ್ಟ್ ಮಾಡಲಾಗಿದೆ. ಅದೂ ಬೆಟ್ಟ ಗುಡ್ಡಗಾಡು ಪ್ರದೇಶದಲ್ಲಿ. ಸುತ್ತಮುತ್ತ ಗುಡ್ಡಗಳಿರುವ ಪ್ರದೇಶದಲ್ಲಿ ಸುರಕ್ಷಿತವಾಗಿ ಎತ್ತು ಏರ್‌ ಲಿಫ್ಟ್ ಆಗಿದೆ.

ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..!

ಗುಡ್ಡಗಾಡು ಪ್ರದೇಶವಾಗಿದ್ದರಿಂದ ಏರ್‌ಲಿಫ್ಟ್ ಮಾಡಿರದಿದ್ದರೆ ಸಹಜವಾಗಿಯೇ ಹಸುವಿಗೆ ಇನ್ನಷ್ಟು ಕಷ್ಟವಾಗುವುದಲ್ಲದೆ, ಗಾಯ ಇನ್ನಷ್ಟು ನೋಯುತ್ತಿದ್ದು. ತನ್ನ ಪ್ರೀತಿಯ ಎತ್ತು ಕಷ್ಟಪಡುವುದನ್ನು ನೋಡಲಾಗದೆ ರೈತ ಈ ನಿರ್ಧಾರಕ್ಕೆ ಬಂದಿದ್ದಾನೆ. ಅಂತೂ ತನ್ನ ಹಸುವನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಿಸಿದ್ದಾನೆ.