ಹಳದಿ ದುಪ್ಪಟ್ಟಾಗೆ ಫುಲ್ ಫಿದಾ, ಅನೈತಿಕ ಸಂಬಂಧ ಚಿಗುರಿದ ಕಥೆಯೇ ವಿಚಿತ್ರ !
ನಮ್ಮ ಜೀವನದಲ್ಲಿ ಅನೇಕ ತಿರುವುಗಳಿರ್ತವೆ. ಕೆಲವು ಬಾರಿ ನಾವು ಭೇಟಿಯಾದ ವ್ಯಕ್ತಿಗಳು ನಮ್ಮನ್ನು ಆಕರ್ಷಿಸುತ್ತಾರೆ. ಈ ಆಕರ್ಷಣೆ ಅಫೇರ್ ಗೆ ತಿರುಗೋದಿದೆ. ಕೆಲವೇ ದಿನ ಅಫೇರ್ ನಲ್ಲಿದ್ದರೂ ಮರೆಯಲಾಗದ ಅನುಭವಪಡೆದ ಕೆಲವರ ಕಥೆ ಇಲ್ಲಿದೆ.
ಮದುವೆ ಹಾಗೂ ಅಫೇರ್ ಇವೆರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮದುವೆ ಪ್ರೀತಿಯ ಬೆಸುಗೆ, ಶಾಶ್ವತ ಕೊಂಡಿ. ಆದ್ರೆ ಅಫೇರ್ಗೆ ಯಾವುದೇ ಸ್ಥಿರತೆಯಿಲ್ಲ. ಇದ್ರಲ್ಲಿ ನಂಬಿಕೆ ಇಡೋದು ಕಷ್ಟ. ಕ್ಷಣಿಕ ಸುಖವನ್ನು ನೀಡುವ ಅಫೇರ್, ಭವಿಷ್ಯದಲ್ಲಿ ನೋವನ್ನು ನೀಡುತ್ತದೆ. ಮದುವೆ ನಂತ್ರ ವಿವಾಹೇತ ಸಂಬಂಧ ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಆದ್ರೆ ಇದ್ರ ಅಂತ್ಯ ಮಾತ್ರ ದುರಂತದಲ್ಲಿ ಕೊನೆಯಾಗ್ತಿದೆ. ಮೊದಲ ಪ್ರೀತಿ ಹೇಗೆ ನೆನಪಿನಂಗಳದಿಂದ ಮಾಸಲು ಸಾಧ್ಯವಿಲ್ಲವೋ ಅಫೇರ್ ನೆನಪು ಕೂಡ ಮಾಸೋದಿಲ್ಲ. ಅಫೇರ್ ಹೊಂದಿದ್ದ ವ್ಯಕ್ತಿ ಒಂದಲ್ಲ ಒಂದು ಸಮಯದಲ್ಲಿ ಕಾಡೋದುಂಟು. ಕಚೇರಿ ಅಫೇರ್ ಗೆ ಪ್ರಸಿದ್ಧ ಸ್ಥಳವೆಂದ್ರೆ ತಪ್ಪಾಗಲಾರದು. ಸಹೋದ್ಯೋಗಿಗಳ ಮಧ್ಯೆ ಅಫೇರ್ ಸಾಮಾನ್ಯ. ಅಫೇರ್ ಹೊಂದಿದ್ದ ಕೆಲವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವರ ಚಿತ್ರ ವಿಚಿತ್ರ ಅನುಭವವನ್ನು ನಾವಿಂದು ನಿಮ್ಮ ಮುಂದೆ ಇಡ್ತಿದ್ದೇವೆ.
ಹಳದಿ (Yellow) ದುಪ್ಪಟ್ಟಾ : ಆತನಿಗೆ ಆಗ 25 ವರ್ಷ. ಅವಿವಾಹಿತ ವ್ಯಕ್ತಿ. ಆತನ ಕಚೇರಿಯಲ್ಲಿ ಒಬ್ಬ ಮಹಿಳೆ ಹಳದಿ ಬಣ್ಣದ ಪ್ರೇಮಿಯಾಗಿದ್ಲಂತೆ. ಪ್ರತಿದಿನ ಹಳದಿ ಬಟ್ಟೆ ಧರಿಸುತ್ತಿದ್ದಳಂತೆ. ಒಂದು ದಿನ ಆತ ಮತ್ತು ಈಕೆ ಲಿಫ್ಟ್ (Lift ) ನಲ್ಲಿ ಹೋಗ್ತಿದ್ದರಂತೆ. 12 ನೇ ಮಹಡಿಗೆ ಬರುವ ಸಂದರ್ಭದಲ್ಲಿ ಲಿಫ್ಟ್ ಕೈಕೊಟ್ಟಿತ್ತಂತೆ. ಅಲ್ಲಿಯೇ ಕೆಲ ಸಮಯ ಕಳೆಯುವುದು ಅವರಿಗೆ ಅನಿವಾರ್ಯವಾಗಿತ್ತಂತೆ. ಆ ನಂತ್ರ ಇಬ್ಬರು ಸಾಕಷ್ಟು ಹತ್ತಿರವಾಗಿದ್ದರಂತೆ. ಪ್ರೀತಿ ಮಾಡ್ತಿದ್ದೇವೆ ಎಂದುಕೊಂಡಿದ್ದ ಈತ ಆಕೆಗೆ ಮುತ್ತಿಟ್ಟಿದ್ದನಂತೆ. ಹೆರಿಗೆ ನಂತ್ರ ಆಕೆ ಮತ್ತಷ್ಟು ಹತ್ತಿರವಾಗಿದ್ದಳಂತೆ. ಅಫೇರ್ ಮುಚ್ಚಿಡಲು ಸಾಕಷ್ಟು ಪ್ರಯತ್ನ ನಡೆಸಿದ್ದನಂತೆ. ಆದ್ರೆ ಒಂದು ದಿನ ಬಾಸ್ ಕಲರೆದ್ರಂತೆ. ಲಿಫ್ಟ್ ನಲ್ಲಿ ಮೇಕ್ ಔಟ್ ಸೆಷನ್‌ನ ವೀಡಿಯೊ ತುಣುಕನ್ನು ತೋರಿಸಿದ್ರಂತೆ. ಅಫೇರ್ ಮಾಡ್ತಿದ್ದ ಮಹಿಳೆ ಬಾಸ್ ಸೊಸೆ ಅನ್ನೋದು ಆಗ ಈತನಿಗೆ ಗೊತ್ತಾಯ್ತಂತೆ. ನಾನು ದಂಗಾದೆ. ಭೂಮಿ ಕಂಪಿಸಿದ ಅನುಭವವಾಯ್ತು. ನನ್ನನ್ನು ಕೆಲಸದಿಂದ ಕಿತ್ತು ಹಾಕಿದ್ರು. ಬೇರೆ ಕೆಲಸ ಹುಡುಕಲು ಊರು ಬಿಟ್ಟೆ. ಆದ್ರೆ ಈ ಘಟನೆ ನಡೆದು 10 ವರ್ಷವಾದ್ರೂ ನನಗೆ ಆ ದಿನಗಳ ನೆನಪು ಆಗಾಗ ಬರುತ್ತಿರುತ್ತೆ ಎನ್ನುತ್ತಾನೆ ವ್ಯಕ್ತಿ.
ಇಂಥ ಅನುಭವ ಎಂದೂ ಆಗಿರಲಿಲ್ಲ : ನನಗೂ ಮದುವೆಯಾಗಿದೆ. ಆಕೆಗೂ ಮದುವೆಯಾಗಿದೆ. ನಾವಿಬ್ಬರೂ ಕಚೇರಿಯಲ್ಲಿ ಬೇರೆ ಬೇರೆ ಟೀಂನಲ್ಲಿ ಕೆಲಸ ಮಾಡ್ತಿದ್ವಿ. ಟೀ ಕುಡಿಯಲು ಒಟ್ಟಿಗೆ ಬರ್ತಿದ್ವಿ. ಕಚೇರಿಯಲ್ಲಿ ಪ್ರತಿದಿನ ಸಿಗ್ತಿದ್ದವರು ನಂತ್ರ ಕಚೇರಿ ಹೊರಗೆ ಭೇಟಿಯಾಗಲು ಶುರು ಮಾಡಿದ್ವಿ. ನಾವಿಬ್ಬರೂ ಪರಸ್ಪರ ಭಾವನೆ ವ್ಯಕ್ತಪಡಿಸ್ತಿದ್ವಿ. ಕೆಲ ದಿನಗಳ ನಂತ್ರ ಅವರಿಗೆ ಟ್ರಾನ್ಸಫರ್ ಆಯ್ತು. ಈಗ ಎಲ್ಲಿದ್ದಾರೆ ಗೊತ್ತಿಲ್ಲ. ಆದ್ರೆ ಅವರ ಜೊತೆಗೆ ಕಳೆದ ಕ್ಷಣ, ಆ ಅನುಭವ ಎಂದೂ ಆಗಿಲ್ಲ ಎನ್ನುತ್ತಾನೆ ಆತ.
ಓದೋ ವಯಸ್ಸು, ಪ್ರೀತಿಸೋ ಖಯಾಲಿ; ತಜ್ಞರು ಏನಂತಾರೆ ?
ನಾವು ಪರಸ್ಪರ ಆಕರ್ಷಣೆಗೊಳಗಾಗ್ತಿದ್ವಿ : ನಾನು ಅವನಿಗಿಂತ ದೊಡ್ಡವನಾಗಿದ್ದೆ. ನಮ್ಮ ಸಂಬಂಧಕ್ಕೆ ಭವಿಷ್ಯವಿಲ್ಲ ಎಂಬುದು ನನಗೆ ತಿಳಿದಿತ್ತು. ಆದ್ರೂ ಪರಸ್ಪರ ಆಕರ್ಷಿತರಾಗಿದ್ವಿ. ನಾವಿಬ್ಬರೂ ಸರಿಯಾಗಿ ಮಾತನಾಡ್ತಿರಲಿಲ್ಲ. ಆದ್ರೆ ಸಂಬಂಧ ಬೆಳೆಸಲು ಬೇರೆ ಬೇರೆ ಕಡೆ ಹೋಗ್ತಿದ್ವಿ. ಇದೆಲ್ಲವೂ ಒಂದು ವರ್ಷ ನಡೆಯಿತು. ಕೊನೆಗೆ ನಾನು ಮದುವೆಯಾದೆ. ಅವನು ನಿಶ್ಚಿತಾರ್ಥ ಮಾಡಿಕೊಂಡ. ಈಗ ಆತನ ಬಗ್ಗೆ ತಿಳಿದಿಲ್ಲ ಎನ್ನುತ್ತಾಳೆ ಈಕೆ.
ಕಿರುಚಾಡುತ್ತಾಳೆ ಹೆಂಡತಿ, ಸಾಕಪ್ಪ ಸಾಕು ಅನಿಸಿದೆ ಅಂತಿದ್ದಾನೆ ಪತಿರಾಯ
ನನ್ನ ಜೀವನ ಬದಲಿಸಿದ ಘಟನೆ : ನಾವು ಎರಡು ವರ್ಷದಿಂದ ಒಟ್ಟಿಗೆ ಸುತ್ತಾಡ್ತಾ ಇದ್ವಿ. ನಾವಿಬ್ಬರೂ ಮದುವೆಯಾಗ್ತೀವಿ ಎಂದುಕೊಂಡದ್ದರು. ಆದ್ರೆ ಒಂದು ದಿನ ಆಕೆಯನ್ನು ಭೇಟಿಯಾಗಲು ವ್ಯಕ್ತಿಯೊಬ್ಬ ಬಂದಿದ್ದ. ಆ ದಿನ ನನ್ನ ಜೀವನ ಬದಲಾಯ್ತು. ಆಕೆಗೆ ಮದುವೆಯಾಗಿತ್ತು. ಪತಿ ವಿದೇಶದಲ್ಲಿದ್ದ. ಈ ಸಂಗತಿಯನ್ನು ಆಕೆ ಎಂದೂ ಹೇಳಿರಲಿಲ್ಲ. ಈ ಆಘಾತದಿಂದ ಹೊರಬರಲು ನನಗೆ 4 ವರ್ಷ ಬೇಕಾಯ್ತು.