Asianet Suvarna News Asianet Suvarna News

Kamasutra Tips: ಲಿಂಗದ ಗಾತ್ರಕ್ಕನುಸಾರ ಪುರುಷರಲ್ಲಿ ವೈವಿಧ್ಯ- ವಾತ್ಸಾಯನ ಹೇಳ್ತಾನೆ ಬಗೆಬಗೆ!

ಕಾಮಸೂತ್ರ ನಮ್ಮ ದೇಶದ ಅತ್ಯಂತ ಪುರಾತನ ಕಾಮಶಾಸ್ತ್ರ ಪಠ್ಯ. ಇದರಲ್ಲಿ ಮಹಿಳೆಯರಂತೆ, ಪುರುಷರನ್ನೂ ಅವರ ಲಿಂಗದ ಗಾತ್ರ, ಸಾಮರ್ಥ್ಯಕ್ಕೆ ಅನುಸಾರವಾಗಿ ಮಹರ್ಷಿ ವಾತ್ಸಾಯನ ವಿಂಗಡಿಸಿದ್ದಾನೆ. ಅದ್ಯಾವುದು? ಬನ್ನಿ ತಿಳಿಯೋಣ.

Vathsayana Kamasutra categorizes variety of men according to size of penis
Author
Bengaluru, First Published Jan 31, 2022, 4:37 PM IST

ವಾತ್ಸಾಯನ (Vathsayana) ಮಹರ್ಷಿ ಬರೆದ ಕಾಮಶಾಸ್ತ್ರ ಅಥವಾ ಕಾಮಸೂತ್ರ (Kamasutra) ಪುರುಷರಲ್ಲಿ (Men) ಮೂರು ವೈವಿಧ್ಯಗಳನ್ನು ಗುರುತಿಸುತ್ತದೆ. ಅದೂ ಕೂಡ ಅವರ ಶಿಶ್ನದ (Penis) ಗಾತ್ರ, ಆಕಾರಕ್ಕೆ ಅನುಸಾರವಾಗಿ. ಅದು ಹೇಗೆ? ಮೂರು ರೀತಿಯ ಪುರುಷರು- ಸಶಕ (ಮೊಲ), ವೃಷಭ (ಗೂಳಿ) ಮತ್ತು ಅಶ್ವ (ಕುದುರೆ). ಇದು ಅವರ ಲಿಂಗದ ಉದ್ದದಂತೆ ವರ್ಗೀಕರಿಸಿರುವ ರೀತಿ. 
ಮನುಷ್ಯನ ಬಾಹ್ಯ ನೋಟವು ಅವನ ಲಿಂಗದ ಉದ್ದದ ನೇರ ಪ್ರತಿಬಿಂಬವಾಗಿದೆ. ಒಬ್ಬ ಕುಳ್ಳ ಮನುಷ್ಯನಿಗೆ ಚಿಕ್ಕ ಲಿಂಗ ಇರುತ್ತದೆ. ಆದರೆ ಉದ್ದನೆಯ ಮನುಷ್ಯನಿಗೆ ಸಾಮಾನ್ಯವಾಗಿ ಉದ್ದವಾದ ಲಿಂಗ ಇರುತ್ತದೆ. ಆದ್ದರಿಂದ ಮನುಷ್ಯನನ್ನು ನೋಡುವ ಮೂಲಕ ಮತ್ತು ಅವನ ಹಾವಭಾವ, ನೋಟ, ಅವನು ಮಾತನಾಡುವ ಮತ್ತು ತನ್ನನ್ನು ತಾನು ಬಿಂಬಿಸಿಕೊಳ್ಳುವ ರೀತಿಯನ್ನು ಗಮನಿಸುವ ಮೂಲಕ ಒಬ್ಬ ಮನುಷ್ಯನು ಮೊಲವೋ, ಗೂಳಿಯೋ ಅಥವಾ ಕುದುರೆಯೋ ಎಂಬುದನ್ನು ನೀವು ಸುಲಭವಾಗಿ ಊಹಿಸಬಹುದು.

Feelfree: ಹಳೇ ಬಾಯ್‌ಫ್ರೆಂಡ್‌ ಜೊತೆ ಪತ್ನಿ ಸೆಕ್ಸ್ ಮಾಡ್ತಾ ಇರಬಹುದೇ? ತಿಳಿಯೋದು ಹೇಗೆ?

ಸಶಕ (Hare man)
ಸಶಕ ಅಥವಾ ಮೊಲದ ರೀತಿಯ ಪುರುಷನು ಸಾಮಾನ್ಯವಾಗಿ ಕಡಿಮೆ ಎತ್ತರದವರು. ಸಾಮಾನ್ಯವಾಗಿ ದುಂಡಗಿನ ಅಥವಾ ಚದರ ಮುಖವನ್ನು ಹೊಂದಿರುತ್ತಾರೆ. ಅವರ ಎದೆಯು ಶುದ್ಧವಾಗಿರುತ್ತದೆ ಅಂದರೆ ಕೂದಲುಗಳಿರುವುದಿಲ್ಲ. ಮತ್ತು ಅವರ ಕೂದಲು ರೇಷ್ಮೆಯಂತಿರುತ್ತದೆ. ಅವರ ಅಂಗೈಯು ಕೆಂಪು ಮತ್ತು ಆಕರ್ಷಕವಾಗಿರುತ್ತದೆ. ಆದರೆ ಅವರ ಮುಖದ ಬಣ್ಣವು ತೆಳುವಾಗಿರುತ್ತದೆ. ಚಿಕ್ಕ ಕುತ್ತಿಗೆ, ಚಿಕ್ಕ ಭುಜಗಳು ಮತ್ತು ಕಾಲುಗಳು ತೆಳ್ಳಗಿರುತ್ತವೆ. ಇವರ ಹಸಿವು ಕಡಿಮೆ. ಹಾಗೆಯೇ ಇವರ ಕಾಮದ ಬಯಕೆಯೂ ಕಡಿಮೆಯೂ. ಇವರ ಶಿಶ್ನ ಹೆಚ್ಚೆಂದರೆ ಆರು ಅಂಗುಲ ಅಗಲ ಇರಬಹುದು. ಇವರು ಸಾಮಾನ್ಯವಾಗಿ ಮಹಿಳೆಯರ ಕಡೆಗೆ ಹೆಚ್ಚು ಒಲವು ಮತ್ತು ಕಾಮವನ್ನು ತೋರಿಸುವುದಿಲ್ಲ. ಇಂಥವರನ್ನು ಸಂಗಾತಿಯಾಗಿ ಪಡೆದವರು ಇವರಿಂಧ ಕಾಮಸುಖವನ್ನು ಪಡೆಯಬೇಕಿದ್ದರೆ ತುಂಬಾ ಪ್ರಚೋದನೆ ಒಡ್ಡಬೇಕಾಗುತ್ತದೆ.

ವೃಷಭ (Bull Man)
ವೃಷಭ ಅಥವಾ ಗೂಳಿ ಮನುಷ್ಯರು ಎತ್ತರದವರು, ಚೂಪಾದ ತಲೆ, ಎತ್ತರವಾಗಿ ಮತ್ತು ಮೇಲಕ್ಕೆತ್ತಿದಂತೆ ಕಾಣುವವರು. ರೊಚ್ಚಿಗೆದ್ದು ಮುನ್ನುಗ್ಗಲು ಬಯಸುವ ಗೂಳಿಯಂತೆ ಕಾಣುತ್ತಾರೆ. ಅವರ ದೇಹವು ರೋಮದಿಂದ ಕೂಡಿರುತ್ತದೆ. ಎದೆಯಲ್ಲಿ ಸಾಕಷ್ಟು ರೋಮವಿರಬಹುದು. ಎದೆ ಒರಟು ಮತ್ತು ಕಠಿಣ. ಅವರ ಅಂಗೈಗಳು ಕೆಂಪಾಗಿರುತ್ತವೆ. ಭುಜಗಳು ಮೇಲಕ್ಕೆ ಎದ್ದಂತೆ ಇರುತ್ತವೆ. ಅಲೆಗಳಂತಹ ವಕ್ರಾಕೃತಿಗಳನ್ನು ಹೊಂದಿರುತ್ತವೆ. ಇವರಲ್ಲಿ ಕ್ಷುಲ್ಲಕತನ, ಅಲ್ಪ ಸ್ವಭಾವ, ಆಕ್ರಮಣಕಾರಿ ಬುದ್ಧಿ ಕಂಡುಬರಬಹುದು. ಇವರ ಹೊಟ್ಟೆಯು ಚಿಕ್ಕದು ಹಾಗೂ ಇವರ ಹಸಿವು ಮಧ್ಯಮವಾಗಿರುತ್ತದೆ. ಹೊಟ್ಟೆಯು ಆಮೆಯಂತೆ ಕಾಣುತ್ತದೆ. ನಡಿಗೆ ಸಿಂಹದಂತೆ ಇರುತ್ತದೆ. ಇವರ ದೇಹವು ಮಜ್ಜೆಯಲ್ಲಿ ಸಮೃದ್ಧವಾಗಿರುತ್ತದೆ. ಈ ರೀತಿಯ ಪುರುಷರತ್ತ ಮಹಿಳೆಯರು ವಿವಿಧ ಕಾರಣಗಳಿಗಾಗಿ ಆಕರ್ಷಿತರಾಗಬಹುದು. ಇವರ ಶಿಶ್ನ ಸುಮಾರು ಒಂಬತ್ತು ಅಂಗುಲ ಉದ್ದ ಇರುತ್ತದೆ. ಕಾಮದಲ್ಲಿ ಇವರು ಹೆಚ್ಚು ಸುಖವನ್ನು ಕೊಡಬಹುದು. ಆದರೆ ಸಂಗಾತಿಯ ಸುಖವನ್ನು ಇವರು ಹೆಚ್ಚು ಲೆಕ್ಕಿಸದೆ, ತಮ್ಮದೇ ಸುಖದತ್ತ ಹೆಚ್ಚು ಗಮನ ಕೊಡುತ್ತಾರೆ. 

Feel free: ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

ಅಶ್ವ (Horse Man)
ಅಶ್ವ ಕುದುರೆ ಮನುಷ್ಯರ ಶಿಶ್ನದ ಉದ್ದ ಹನ್ನೆರಡು ಅಂಗುಲದವರೆಗೂ ಇರಬಹುದು ಅಥವಾ ಇನ್ನೂ ಹೆಚ್ಚಿರಬಹುದು. ಪುರುಷರಲ್ಲಿ ಇವರು ಬಲವಾದ ಕಾಮಶಕ್ತಿಯನ್ನು ಹೊಂದಿದವರು. ಇವರು ಕಬ್ಬಿಣದ ಗಟ್ಟಿಯಷ್ಟು ಕಠಿಣವಾದ ವಿಶಾಲವಾದ ಎದೆಯೊಂದಿಗೆ ಸ್ನಾಯುಗಳನ್ನು ಹೊಂದಿರುತ್ತಾರೆ. ಇವರ ಧ್ವನಿಯು ಆಳವಾಗಿರುತ್ತದೆ ಮತ್ತು ಇವರು ತುಂಬಾ ಕಡಿಮೆ ಮಾತನಾಡುತ್ತಾರೆ. ಕೆಲವೇ ಜನರ ಸಹವಾಸವನ್ನು ಇಟ್ಟುಕೊಳ್ಳುತ್ತಾರೆ. ಆದರೆ ಗೂಳಿ ಥರದವರಂತೆ ಕ್ಷುಲ್ಲಕ ಬುದ್ಧಿಯವರಲ್ಲ. ನಯಗೊಳಿಸಿದ ಉಗುರುಗಳೊಂದಿಗೆ ಉದ್ದವಾದ ಬೆರಳುಗಳು, ದೊಡ್ಡ ಮತ್ತು ಅಸ್ಥಿರವಾದ ಕಣ್ಣುಗಳು, ಬಾಗಿದಂತಿರುವ ಕೈಕಾಲುಗಳು ಮತ್ತು ಮೊಣಕಾಲುಗಳು ಇರುತ್ತವೆ. ವೃಷಭ ಪುರುಷನಿಗೆ ಹೋಲಿಸಿದರೆ ಅಶ್ವ ಪುರುಷ ಶಾಂತ ಮತ್ತು ಸಮನ್ವಯ ಸ್ವಭಾವದವನು. ಅಷ್ಟು ಸುಲಭವಾಗಿ ಉದ್ರೇಕಗೊಳ್ಳುವುದಿಲ್ಲ. ಈ ಮನುಷ್ಯನ ನಡಿಗೆ ತ್ವರಿತವಾಗಿರುತ್ತದೆ. ಅವರು ರಹಸ್ಯವಾಗಿ ಇತರ ಮಹಿಳೆಯರನ್ನು ಬಯಸುತ್ತಾರೆ. ಆದರೆ ಯಾರಿಗೂ ತಮ್ಮ ಉದ್ದೇಶಗಳನ್ನು ಬಹಿರಂಗಪಡಿಸುವುದಿಲ್ಲ. ಇವರ ಕಾಮಾಸಕ್ತಿಯನ್ನು ಕಂಡುಕೊಳ್ಳುವುದು ಹಾಗೂ ಉದ್ರೇಕಿಸುವುದು ಸುಲಭವಲ್ಲ. ಉದ್ರೇಕದ ಬಳಿಕ ಇವರು ಸ್ತ್ರೀಯರಿಗೆ ಸಾಕೋ ಸಾಕು ಎನಿಸುವಷ್ಟು ಸುಖವನ್ನು ಒದಗಿಸಿಕೊಡುತ್ತಾರೆ.

No sex after childbirth: ಮಗು ಬಂದ ಬಳಿಕ ಸೆಕ್ಸ್ ಇಲ್ಲ, ಹೀಗಾದರೆ ಏನು ದಾರಿ?

Follow Us:
Download App:
  • android
  • ios