ಬಿಲ್ ಗೇಟ್ಸ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಮೈಕ್ರೋಸಾಫ್ಟ್ ಸಾಮಾಜ್ಯದ ಈ ಅನಭಿಷಿಕ್ತ ದೊರೆ108.8 ಬಿಲಿಯನ್ ಡಾಲರ್ ಗಳ ಒಡೆಯ, ಪತ್ನಿ ಮಿಲಿಂದಾ ಗೇಟ್ಸ್ ಜೊತೆಗಿನ ದಾಂಪತ್ಯದಲ್ಲಿ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಹಿರಿಯ ಮಗಳೇ ಜೆನಿಫರ್ ಕ್ಯಾಥರಿನ್ ಗೇಟ್ಸ್. ಇಪ್ಪತ್ತಮೂರು ವರ್ಷ ವಯಸ್ಸಿನ ಈ ಹುಡುಗಿ ಸ್ಟಾನ್ ಫರ್ಡ್ ಯುನಿವರ್ಸಿಟಿ ವಿದ್ಯಾರ್ಥಿನಿ. ಈಕೆ ಅಲ್ಲಿಂದಲೇ ಹ್ಯೂಮನ್ ಬಯಾಲಜಿಯಲ್ಲಿ ಪದವಿಯನ್ನೂ ಪಡೆಯುತ್ತಾಳೆ. ಬಾಲ್ಯದಿಂದಲೂ ಕುದುರೆಗಳನ್ನು ಕಂಡರೆ ಬಹಳ ಇಷ್ಟ. ಅನೇಕ ಹಾರ್ಸ್ ರೈಡಿಂಗ್ ಕಾಂಪಿಟೀಶನ್ ಗಳಲ್ಲೂ ಭಾಗಿಯಾಗಿದ್ದಾಳೆ.

ಈಕೆಯ ಜೀವನ ಸಂಗಾತಿಯಾಗಲಿರುವ ನಾಸರ್ ಕೂಡಾ ಇದೇ ಯುನಿವರ್ಸಿಟಿ ವಿದ್ಯಾರ್ಥಿ. ಆದರೆ ಈಕೆಗಿಂತ ಕೆಲವು ವರ್ಷ ಸೀನಿಯರ್, ಚಿಕಾಗೊದಲ್ಲಿ ಹುಟ್ಟಿದ ನಾಸರ್ ಬೆಳೆದದ್ದು ಕುವೈಟ್ ನಲ್ಲಿ. ಇವನಿಗೊಬ್ಬ ಸಹೋದರನಿದ್ದಾನೆ. ಈತನ ತಂದೆ ತಾಯಿ ಆರ್ಕಿಟೆಕ್ಚರ್ ಗೆ ಸಂಬಂಧಿಸಿದ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಬಾಲ್ಯದಿಂದಲೇ ನಾಸರ್ ಗೆ ಕುದುರೆಗಳ ವ್ಯಾಮೋಹ. ತನ್ನ ಹತ್ತನೇ ವರ್ಷದಲ್ಲಿ ಈ ಹುಡುಗ ಅಪ್ಪ ಅಮ್ಮನಿಂದ ಕುದುರೆ ಮರಿಯೊಂದನ್ನು ಗಿಫ್ಟ್ ಆಗಿ ಪಡೆದಾಗ ಇವನ ಸಂತೋಷಕ್ಕೆ ಪಾರವೇ ಇರಲಿಲ್ಲ. ದೊಡ್ಡವನಾಗುತ್ತಿರುವಂತೇ ಇವನ ಕುದುರೆಯ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ. ವಿಶ್ವಾದ್ಯಂತ ಸಂಚರಿಸಿ ಕುದುರೆ ಪಳಗಿಸೋದು, ರೈಡ್ ಮಾಡೋದನ್ನು ಕಲಿಯುತ್ತಾನೆ. ತನ್ನ ಐದನೇ ವರ್ಷದಿಂದಲೇ ಕುದುರೆ ಓಡಿಸೋ ಹವ್ಯಾಸ ಇಟ್ಟುಕೊಂಡಿದ್ದ ನಾಸರ್ ಕಾಲೇಜ್ ಲೆವೆಲ್ ಗೆ ಬಂದಾಗ ಈ ಹಾರ್ಸ್ ರೈಡಿಂಗ್ ಅನ್ನು ವೃತ್ತಿಯಾಗಿ ಸ್ವೀಕರಿಸುತ್ತಾನೆ. ಅದರಲ್ಲೂ ಹಾರ್ಸ್ ಜಂಪಿಂಗ್ ಮಾಡೋದರಲ್ಲಿ ನಿಷ್ಣಾತ ಈತ. ಈಜಿಫ್ಟ್ ನ ಹಾರ್ಸ್ ರೈಡರ್ ಆಗಿ ಗುರುತಿಸಿಕೊಂಡಿರುವ ನಾಸರ್ ಅನೇಕ ಕಾಂಪಿಟೀಶನ್ ಗಳಲ್ಲಿ ಈಜಿಫ್ಟ್ ಅನ್ನು ಪ್ರತಿನಿಧಿಸಿದ್ದಾನೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದ್ದನ್ನು ಪತ್ರಿಕೆಗಳು ಶ್ಲಾಘಿಸಿದ್ದವು. ಐಸ್ ನಲ್ಲಿ ಹಾರ್ಸ್ ಜಂಪಿಂಗ್ ಮಾಡೋದರಲ್ಲಿ ಈತನನ್ನು ಮೀರಿಸುವವರಿಲ್ಲ ಎಂಬ ಮಾತಿದೆ.

 

ಭೇಟಿ, ಗೆಳೆತನ, ಪ್ರೇಮ

ಜೆನಿಫರ್ ಪ್ಯಾರಿಸ್ ಫ್ಯಾಂಥರ್ಸ್ ಎಂಬ ಹಾರ್ಸ್ ರೈಡಿಂಗ್ ಗೆ ಸಂಬಂಧಿಸಿದ ಸಂಸ್ಥೆಯ ಅಧ್ಯಕ್ಷೆ, ನಾಸರ್ ಅಲ್ಲಿಯ ಮೆಂಬರ್. ಇಲ್ಲಿ ಅವರಿಬ್ಬರ ಸ್ನೇಹ ಆರಂಭವಾಯಿತು. ಬಹಳ ಸ್ನೇಹಮಯ ವ್ಯಕ್ತಿತ್ವದ ನಾಸರ್ ಜೆನಿಫರ್ ಳಂಥಾ ರಾಜಕುಮಾರಿಯ ಹೃದಯ ಕದ್ದದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ ಅಂತ ಇವರ ಗೆಳೆಯರು ವಿಶ್ಲೇಷಿಸುತ್ತಾರೆ. ಕಳೆದ ಕೆಲವು ವರ್ಷದಿಂದ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು. ೨೦೧೬ ಅಥವಾ ೨೦೧೭ರಲ್ಲಿ ಇವರಿಬ್ಬರ ನಡುವೆ ರಿಲೇಶನ್ ಶಿಪ್ ಆರಂಭವಾಗಿರಬೇಕು ಅನ್ನುತ್ತವೆ ಕೆಲವು ವರದಿಗಳು. ಮೂರು ದಿನಗಳ ಹಿಂದೆ ಜೆನಿಫರ್ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮಿಬ್ಬರ ಪ್ರೇಮಕತೆಯನ್ನು ಹಾಕಿ ತಾವಿಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿರುವುದನ್ನು ಹೇಳಿದಾಗ ಇಡೀ ಜಗತ್ತಿನಿಂದ ಇವರಿಬ್ಬರಿಗೆ ಕಂಗ್ರಾಜ್ಯುಲೇಶನ್ ಗಳ ಮಹಾಪೂರವೇ ಹರಿದುಬಂತು.

 

ಹಾರ್ಸ್ ರೈಡರ್ ಜೊತೆ ಮದುವೆ ಆಗ್ತಿನಿ ಎಂದ ಮಗಳು: ಬಿಲ್ ಗೇಟ್ಸ್ ರೆಸ್ಪಾನ್ಸ್?

 

'ನಯೆಲ್ ಸಾಸರ್ ನಿನ್ನಂಥವರು ಈ ಜಗತ್ತಿನಲ್ಲಿ ಬೇರ್ಯಾರೂ ಇಲ್ಲ ಅನಿಸುತ್ತದೆ. ಕೋಟಿ ಕೋಟಿ ಬಾರಿ ನಿನ್ನನ್ನು ಪ್ರೀತಿಸುವೆ. ಹಿಮಗಡ್ಡೆಗಳ ನಡುವಿನ ಇಂಥಾ ಜಾಗದಲ್ಲಿ ನೀನು ನನಗೆ ಪ್ರೊಪೋಸ್ ಮಾಡಿದ್ದು ಹೃದಯ ತಟ್ಟಿತು. ನಿನ್ನ ಜೊತೆಗೆ ಜೀವನಪೂರ್ತಿ ಪ್ರೀತಿಸುತ್ತಾ, ಕಲಿಯುತ್ತಾ, ನಗುತ್ತಾ ಇರುತ್ತೇನೆ ಎಂಬ ಭರವಸೆ ಇದೆ' ಎಂದಿರುವ ಜೆನಿಫರ್ ನೋಟ್ ಗೆ ಕೋಟ್ಯಾಂತರ ಜನ ಅಕ್ಕರೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾಸರ್, ನಾನು ಅತ್ಯಂತ ಅದೃಷ್ಟಶಾಲಿ, ಕಲ್ಪನೆಯಲ್ಲೂ ನಿನ್ನನ್ನು ಬಿಟ್ಟಿರಲಾರೆ. ನನ್ನ ಜೀವನವೇ ನಿನಗೆ ಅರ್ಪಿತ'ಎಂದು ಸೊಗಸಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. 29 ವರ್ಷ ವಯಸ್ಸಿನ ಈ ಹುಡುಗ ಬಿಲ್ ಗೇಟ್ಸ್ ಲೆವೆಲ್ ನ ಬಿಲಿಯನೇರ್ ಅಲ್ಲದಿದ್ದರೂ ಮಿಲಿಯನೇರ್ ಅಂತೂ ಹೌದು. ಈತನ ತಂದೆ ತಾಯಿ ಶ್ರೀಮಂತ ಕುಟುಂಬಕ್ಕೇ ಸೇರಿದವರು. 'ನಾನೇನು ಸೆಲೆಬ್ರಿಟಿ ಅಲ್ಲ. ಸಿಂಪಲ್ ಹುಡುಗ' ಅಂತ ಹೇಳಿಕೊಂಡಿರುವ ಈತನ ಸಿಂಪ್ಲಿಸಿಟಿಯನ್ನು ಮೀಡಿಯಾಗಳು ಹೊಗಳಿವೆ.

 

ಮಲ್ಲಿಕಾ ಶೆರಾವತ್‌ ವಿತ್ ಬಿಲ್‌ ಗೇಟ್ಸ್‌: ಏನಿದು ಇಂಟ್ರೆಸ್ಟಿಂಗ್ ಫೋಟೋ!

 

'ನಾವಿಬ್ಬರೂ ಸ್ಪೋರ್ಟ್ಸ್ ಪ್ರಿಯರು. ಈ ಪ್ರೀತಿಯೇ ನಮ್ಮಿಬ್ಬರನ್ನೂ ಒಂದಾಗಿಸಿತು' ಅನ್ನುವ ಈ ಜೋಡಿಗೆ ಜೀವನಪರ್ಯಂತ ಸ್ಪೋಟ್ಸ್, ಹಾರ್ಸ್ ರೈಡಿಂಗ್ ನಲ್ಲಿ ತೊಡಗಿಸಿಕೊಳ್ಳಬೇಕೆಂಬ ಮಹದಾಸೆ ಇದೆ.