ಕೆಲ ದಿನಗಳ ಹಿಂದೆ ಅಮೆಜಾನ್‌ ಸಿ.ಇ.ಓ ಆಯೋಜಿಸಿದ್ದ ಪಾರ್ಟಿಯಲ್ಲಿ ಮೈಕ್ರೋಸಾಫ್ಟ್‌ ಬಾಲಿವುಡ್ ಕೃಷ್ಣ ಸುಂದರಿ ಮಲ್ಲಿಕಾ ಶೆರಾವತ್ ಭಾಗಿಯಾಗಿದ್ದರು. ಆಗ ಬಿಲ್‌ ಗೇಟ್ಸ್‌ರನ್ನು ಭೇಟಿಯಾಗಿದ್ದಾರೆ. ಭೇಟಿಯ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ' ಭಾರತದ ಮಹಿಳಾ ಸಬಲೀಕರಣದ ಬಗ್ಗೆ ಬಿಲ್‌ ಗೇಟ್ಸ್‌ ಜೊತೆ ಮಾತನಾಡಿದ್ದು ಖುಷಿ ಕೊಟ್ಟಿದೆ ' ಎಂದು ಬರೆದುಕೊಂಡಿದ್ದಾರೆ.

ಮಲ್ಲಿಕಾ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಿ ಎಂದ ನಿರ್ಮಾಪಕ!

2002 ರಲ್ಲಿ 'ಜೀನಾ ಸಿರ್ಫ್ ಮೇರಾ ಲಿಯಾ' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಮಲ್ಲಿಕಾ  ಸುಮಾರು 28ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, 3 ಕಿರುತೆರೆ ಶೋಗಳಲ್ಲಿ ಕಾಣಿಸಿಕೊಂಡು 3 ಬೆಸ್ಟ್‌ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

ಹಿಂದಿಯಲ್ಲಿ ಮಾತ್ರವಲ್ಲದೇ ಕನ್ನಡ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಮಲ್ಲಿಕಾ ಇದೀಗ ಬಿಲಿಯನೇರ್‌ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.