ಮದುವೆ ಜೀವನದ ದೊಡ್ಡ ಬದಲಾವಣೆ. ಜೀವನ ಪರ್ಯಂತ ಒಬ್ಬ ವ್ಯಕ್ತಿ ಜೊತೆ ಬಾಳ್ವೆ ನಡೆಸುವುದು ಸುಲಭದ ಕೆಲಸವಲ್ಲ. ಇಬ್ಬರ ಮಧ್ಯೆ ಹೊಂದಾಣಿಕೆ ಅತ್ಯಗತ್ಯ. ಇವತ್ತಿನ ದಿನಗಳಲ್ಲಿ ಹೆಚ್ಚಿನ ದಾಂಪತ್ಯ ಅರ್ಧದಲ್ಲೇ ಮುರಿದುಬೀಳುತ್ತದೆ. ಹೀಗಾಗದಂತೆ ಏನ್ ಮಾಡ್ಬೋದು. ಇಲ್ಲಿದೆ ಟಿಪ್ಸ್.
ಮದುವೆಯೆಂಬುದು ಒಂದು ಸುಂದರವಾದ ಬಾಂಧವ್ಯ. ಹಾಗೆಯೇ ತುಂಬಾ ಸೂಕ್ಷ್ಯವಾಗಿ ನಿಭಾಯಿಸಬೇಕಾದ ಸಂಬಂಧ. ಮದುವೆಯೆಂಬ ಬಂಧದಲ್ಲಿ ಕೇವಲ ಪ್ರೀತಿಯಿದ್ದರೆ ಸಾಲದು, ನಂಬಿಕೆ, ವಿಶ್ವಾಸ ಎಲ್ಲವೂ ಇರಬೇಕು. ಮದುವೆಗೆ ಅಪಾರ ಶಕ್ತಿ, ಪ್ರಯತ್ನ, ತಿಳುವಳಿಕೆ ಮತ್ತು ನಂಬಿಕೆಯ ಅಗತ್ಯವಿರುತ್ತದೆ. ದಾಂಪತ್ಯ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ದಂಪತಿಗಳು ಅನೇಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಮದುವೆ ಸಂಬಂಧವನ್ನು ಉಳಿಸಿಕೊಳ್ಳಲು ದಂಪತಿಗಳು ಬಳಸಬಹುದಾದ ಕೆಲವು ದೈನಂದಿನ ಅಭ್ಯಾಸಗಳು ಇಲ್ಲಿವೆ.
ಪ್ರತಿಯೊಂದು ವಿಚಾರದ ಬಗ್ಗೆಯೂ ಚರ್ಚೆ ಮಾಡಿ: ದಾಂಪತ್ಯ (Married life)ದಲ್ಲಿ ಸಂವಹನ ಎಂಬುದು ತುಂಬಾ ಮುಖ್ಯ. ಗಂಡ-ಹೆಂಡತಿಯ ಮಧ್ಯೆ ಮಾತುಕತೆ ಸರಿಯಾಗಿಲ್ಲದಿದ್ದರೆ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ನೀವು ಏನನ್ನು ಅನುಭವಿಸುತ್ತಿದ್ದೀರಿ ಅಥವಾ ಯೋಚಿಸುತ್ತಿದ್ದೀರಿ ಎಂಬುದರ ಕುರಿತು ನಿಮ್ಮ ಸಂಗಾತಿ (Partner)ಯೊಂದಿಗೆ ಮಾತನಾಡದ ಹೊರತು, ನಿಮ್ಮ ಸಂಬಂಧವು ಭದ್ರವಾಗಿರಬೇಕು ಎಂದು ನೀವು ಅಂದುಕೊಳ್ಳುವುದು ತಪ್ಪು. ಯಾವಾಗಲೂ ಮುಕ್ತವಾಗಿ ಮಾತನಾಡಿ. ಇದರಿಂದ ಭಿನ್ನಾಭಿಪ್ರಾಯ ಕಡಿಮೆಯಾಗಿ ಉತ್ತಮ ಸಾಮರಸ್ಯ ಬೆಳೆಯುತ್ತದೆ.
ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ಗ್ಯಾಜೆಟ್ಸ್ ಬಳಕೆ ಕಡಿಮೆ ಮಾಡಿ: ನೀವು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿರುವಾಗ ನಿಮ್ಮ ಎಲ್ಲಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುವುದನ್ನು ಬಿಟ್ಟುಬಿಡಿ. ನಿಮ್ಮ ಫೋನ್‌ಗಳು (Mobile) ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಾಗ ತಪ್ಪಿಸಬೇಕಾದ ದೊಡ್ಡ ವಿಷಯವಾಗಿದೆ. ಇದರಿಂದ ನೀವಿಬ್ಬರೂ ಪರಸ್ಪರ ಖುಷಿಯಿಂದ ಸಮಯ ಕಳೆಯಲು ಸಾಧ್ಯವಾಗುತ್ತದೆ.
ಪ್ರತಿದಿನ ಸಂಗಾತಿಯನ್ನು ಚುಂಬಿಸಿ: ದಿನಕ್ಕೆ ಒಂದು ಮುತ್ತು ಎಲ್ಲಾ ಒತ್ತಡ (Pressure)ವನ್ನು ದೂರ ಮಾಡುತ್ತದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಚಿಗುರೊಡೆಯಲು ದಿನಕ್ಕೆ ಒಮ್ಮೆಯಾದರೂ ನಿಮ್ಮ ಸಂಗಾತಿಯನ್ನು ಚುಂಬಿಸಿ. ಚುಂಬನವು ಅತ್ಯಂತ ನಿಕಟವಾದ ಮತ್ತು ವಿಶೇಷವಾದ ಪ್ರೀತಿಯ ರೂಪವಾಗಿದ್ದು, ಅದು ಇಬ್ಬರ ನಡುವಿನ ವಿರಸವನ್ನು ದೂರ ಮಾಡುತ್ತದೆ.
ಪರಸ್ಪರ ಅಭಿಪ್ರಾಯ ಕೇಳಿ: ಸಾಧ್ಯವಾದಾಗಲೆಲ್ಲಾ ನಿಮ್ಮ ಸಂಗಾತಿಯ ಅಭಿಪ್ರಾಯ (Opinion)ವನ್ನು ಕೇಳಿ. ಇದರಿಂದ ಅವರಲ್ಲಿ ನಿಮ್ಮ ಬಗ್ಗೆ ಮೌಲ್ಯಯುತ ಭಾವನೆ ಮೂಡುತ್ತದೆ. ನೀವು ಅವರ ಅಭಿಪ್ರಾಯದ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಈ ಹಂತವು ನೀವಿಬ್ಬರೂ ಪರಸ್ಪರರ ಅಭಿಪ್ರಾಯಗಳ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದನ್ನು ಖಚಿತಪಡಿಸುತ್ತದೆ.ಇದು ಸಂಬಂಧದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ.
Relationship Tips : ಈ ಹುಡುಗಿಗೆ ಮದುವೆ ಆಗೋಕೆ ಭಯವಂತೆ..! ಯಾಕೆ ಗೊತ್ತಾ?
ಕೃತಜ್ಞತೆ ವ್ಯಕ್ತಪಡಿಸುವುದು: ನಿಮ್ಮ ಜೀವನದಲ್ಲಿ ಅವರ ಉಪಸ್ಥಿತಿಗಾಗಿ ನೀವು ಎಷ್ಟು ಕೃತಜ್ಞರಾಗಿರುತ್ತೀರಿ ಎಂಬುದನ್ನು ವ್ಯಕ್ತಪಡಿಸುವುದು ದಾಂಪತ್ಯವನ್ನು ಸುಭದ್ರವಾಗಿರುಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ನಿಮ್ಮ ಸಂಗಾತಿಗೆ ಥ್ಯಾಂಕ್ಯೂ ಹೇಳುತ್ತಿರಿ. ಮಾತ್ರವಲ್ಲ ಆಗಾಗ ಲವ್ ಯೂ ಎಂದು ಹೇಳುವ ಅಭ್ಯಾಸ ಸಹ ನಿಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ.
ಆಗಾಗ ಡೇಟ್‌ಗೆ ಹೋಗುತ್ತಿರಿ: ಮದುವೆಗಿಂತ ಮೊದಲು, ಮದುವೆಯ ಆರಂಭದಲ್ಲಿ ಮಾತ್ರ ಡೇಟ್‌ಗೆ ಹೋಗಬೇಕು ಎಂಬ ನಿಯಮವಿಲ್ಲ. ನಿಮ್ಮ ಸಂಗಾತಿಯ ಜೊತೆ ಬಾಂಡಿಂಗ್‌ನ್ನು ಚೆನ್ನಾಗಿ ಇರಿಸಿಕೊಳ್ಳಲು ಆಗಿಂದಾಗೆ ಡೇಟ್‌ಗೆ ಹೋಗುತ್ತಿರಿ. ಇದು ಇಬ್ಬರ ನಡುವೆ ಆಪ್ತತೆಯನ್ನು ಹೆಚ್ಚಿಸುತ್ತದೆ. ನಿಮ್ಮ ದಿನನಿತ್ಯದ ಜೀವನ ಹೀಗಿದ್ದಲ್ಲಿ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
