ಅತ್ತೆ ಮನೆಗೆ ಹೋಗುವ ಮಗಳಿಗೆ ತಾಯಿ ಇದನ್ನೆಲ್ಲಾ ಹೇಳಿ ಕೊಟ್ರೆ ಚೆನ್ನಾಗಿರುತ್ತೆ
ಮದ್ವೆ ನಂತರ ಎಲ್ಲಾ ಹುಡುಗಿಯರೂ ಖುಷಿಯಾಗಿರುವುದಿಲ್ಲ. ಅನೇಕರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಇದಕ್ಕೆ ದೊಡ್ಡ ಕಾರಣವೆಂದರೆ ಅವರಿಗೆ ತಮ್ಮ ಗಂಡನ ಮನೆಯಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ. ಮದ್ವೆ ಮೊದಲೇ ತಾಯಿ ಮಗಳಿಗೆ ಕೆಲವೊಂದು ವಿಚಾರಗಳನ್ನು ತಿಳಿಸಿಕೊಟ್ಟರೆ ಹುಡುಗಿ, ಅತ್ತೆ ಮನೆಯಲ್ಲಿ ಖುಷಿಯಾಗಿ ಇರಬಹುದು. ಅದೇನು ?
ಭಾರತದಲ್ಲಿ ಮದುವೆಗಳು ದೊಡ್ಡ ಹಬ್ಬಕ್ಕಿಂತ ಕಡಿಮೆಯಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಸಂಬಂಧ ಖಾತ್ರಿಯಾದ ತಕ್ಷಣ ಕುಟುಂಬದವರು ತಯಾರಿಯಲ್ಲಿ ತೊಡಗಿಕೊಳ್ಳುವುದಲ್ಲದೆ, ಅತಿಥಿಗಳಿಂದ ಹಿಡಿದು ಊಟ-ತಿಂಡಿಯವರೆಗಿನ ಪಟ್ಟಿಯೂ ಸಿದ್ಧವಾಗುತ್ತದೆ. ಆದರೆ ಮದುವೆಯೆಂದರೆ ಹುಡುಗ-ಹುಡುಗಿ ಜೊತೆಯಾಗಿ ಬಾಳುವುದು ಮಾತ್ರವಲ್ಲ. ಎರಡು ಕುಟುಂಬಗಳು ಒಗ್ಗೂಡುವುದು. ಅದರಲ್ಲೂ ಮದುವೆಯ ನಂತರ ಹೆಣ್ಣುಮಕ್ಕಳ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಯಾಕೆಂದರೆ ಹೆಂಡತಿಯಾಗುವುದರ ಜೊತೆಗೆ ಆಕೆ ಸೊಸೆ, ಅತ್ತಿಗೆ, ಚಿಕ್ಕಮ್ಮ, ಅತ್ತೆ-ಮಾವ ಮುಂತಾದ ಸಂಬಂಧಗಳ ಭಾಗವಾಗಬೇಕಾಗುತ್ತದೆ.
ಅತ್ತೆಯ (Mothe-in-law) ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರವಲ್ಲದೇ ಚಿಕ್ಕ ಚಿಕ್ಕ ವಿಷಯಗಳನ್ನೂ ನೋಡಿಕೊಳ್ಳಬೇಕು. ಆದರೆ, ಕೆಲವು ಹೆಣ್ಣುಮಕ್ಕಳು ಪ್ರಾರಂಭದಲ್ಲಿಯೇ ಅತ್ತೆ-ಮಾವಂದಿರ ಮನ ಗೆಲ್ಲುವಲ್ಲಿ ಯಶಸ್ವಿಯಾದರೆ, ಅನೇಕರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಇದಕ್ಕೆ ದೊಡ್ಡ ಕಾರಣವೆಂದರೆ ಅವರಿಗೆ ತಮ್ಮ ಗಂಡನ (Husband) ಮನೆಯಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ.. ಹೌದು, ಅದು ವಿಭಿನ್ನವಾಗಿದೆ, ಪ್ರತಿಯೊಬ್ಬ ತಾಯಿಯು (Mother) ತನ್ನ ಮಗಳಿಗೆ ಮದುವೆಯಾಗುವ ಮೊದಲು ಕೆಲವು ಶಿಷ್ಟಾಚಾರಗಳನ್ನು ಕಲಿಸಿದರೆ, ಮಗಳು ಅತ್ತೆಯ ಮನೆಯಲ್ಲಿ ಖುಷಿಯಾಗಿರಬಹುದು..
ಮದ್ವೆ ಬಳಿಕ ಕೆಲವರನ್ನು ಖಿನ್ನತೆ ಕಾಡುವುದೇಕೆ?
ಮನೆಯನ್ನು ನೋಡಿಕೊಳ್ಳುವ ಬಗ್ಗೆ ಕಲಿಸಿ: ನಿಮ್ಮ ಮಗಳು ಶೀಘ್ರದಲ್ಲೇ ಮದುವೆಯಾಗಲಿದ್ದರೆ, ಮದುವೆಯ ನಂತರ, ಅತ್ತೆಯ ಮನೆ ಅವಳ ಮನೆ ಎಂದು ಕಲಿಸಿ. ಅಲ್ಲಿ ಅವಳು ಎಲ್ಲಾ ರೀತಿಯ ಜವಾಬ್ದಾರಿಗಳನ್ನು(Responsibility) ನಿಭಾಯಿಸಬೇಕಾಗಬಹುದು. ಅಷ್ಟೇ ಅಲ್ಲ, ಅತ್ತೆಯ ಮನೆಯಲ್ಲಿ ತಾಯಿ ಮನೆಯಲ್ಲಿ ಇರುವಂತೆ ಆರಾಮವಾಗಿ ಇರಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿಮ್ಮ ಮಗಳಿಗೆ ಅಲ್ಲಿ ಸಾಕಷ್ಟು ಮನೆಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಂಯಮ ಮತ್ತು ತಾಳ್ಮೆಯಿಂದ ಕೆಲಸ ಮಾಡಬೇಕು. ಅಷ್ಟೇ ಅಲ್ಲ, ಅತ್ತೆಗೆ ಸಹಾಯ ಮಾಡುವಂತೆ ಮಗಳಿಗೆ (Daughter) ಸಲಹೆ ನೀಡಿ.
ಹಿರಿಯರನ್ನು ಗೌರವಿಸುವುದು: ಅಪರಿಚಿತರ ಕುಟುಂಬದಲ್ಲಿ ವಾಸಿಸುವುದು ತುಂಬಾ ಕಷ್ಟಕರವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ ಅಲ್ಲಿನ ಶಿಷ್ಟಾಚಾರಗಳನ್ನು ಕಲಿಯಲು ಸಮಯ ಹಿಡಿಯುವುದು ಮಾತ್ರವಲ್ಲದೆ ಯಾರಿಗೆ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಹಿರಿಯರು ನಿಮ್ಮನ್ನು ಏನಾದರೂ ಗದರಿಸಿದರೂ, ಅವರಿಗೆ ಉತ್ತರಿಸಬೇಡಿ ಎಂಬುದನ್ನು ತಿಳಿಸಬೇಕು. ಅಷ್ಟೇ ಅಲ್ಲ ಮದುವೆಗೂ ಮುನ್ನ ಮಗಳಿಗೆ ಅಲ್ಲಿಗೆ ಹೋದ ನಂತರ ಎಲ್ಲರನ್ನು ಗೌರವಿಸಬೇಕು (Respect) ಎಂದು ಹೇಳಿಕೊಡಿ. ಅತ್ತೆ ಮತ್ತು ಮಾವ ಕೂಡ ಅವಳ ಹೆತ್ತವರಂತೆ. ಹೀಗಾಗಿ ಅವರನ್ನು ಗೌರವಿಸುವುದು ಬಹಳ ಮುಖ್ಯ.
ಬೆಸ್ಟ್ ಫ್ರೆಂಡನ್ನ ಮದ್ವೆ ಆದ್ರೆ ಜೀವನ ಪೂರ್ತಿ ಖುಷಿಯೋ ಖುಷಿ
ದಿಢೀರ್ ತೀರ್ಮಾನ ತೆಗೆದುಕೊಳ್ಳಬಾರದು: ಮದುವೆಯ ನಂತರ, ಅತ್ತೆ ಮತ್ತು ಸೊಸೆ ಇಬ್ಬರನ್ನೂ ಅರ್ಥಮಾಡಿಕೊಳ್ಳಲು ಸಮಯ ಬೇಕಾಗುತ್ತದೆ. ಯಾಕೆಂದರೆ ಇಬ್ಬರಿಗೂ ಪರಸ್ಪರ ಹೆಚ್ಚು ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗಳಿಗೆ ಅವಳ ಅತ್ತೆ ಯಾವುದಾದರೂ ವಿಷಯಕ್ಕೆ ಒಪ್ಪಿಗೆ ನೀಡದಿದ್ದರೆ, ಒಮ್ಮೆಗೆ ನಿರ್ಧಾರ (Decision) ತೆಗೆದುಕೊಳ್ಳಬೇಡಿ ಎಂದು ಹೇಳಿ. ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರಿಗೂ ನಿಮ್ಮ ವಿಚಾರವನ್ನು ವಿವರಿಸಿ ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಸಮಯ ನೀಡಿ ಎಂಬುದನ್ನು ವಿವರಿಸಿ.
ಅತ್ತೆಯಿಂದ ಕಲಿಯಿರಿ: ಅತ್ತೆ-ಮಾವಂದಿರ ಜೀವನ ಪರಿಸ್ಥಿತಿಗಳು ತುಂಬಾ ವಿಭಿನ್ನವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗಳಿಗೆ ತನ್ನ ಅತ್ತೆಯ ಜೀವನ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನನ್ನು ತಾನು ರೂಪಿಸಿಕೊಳ್ಳಲು ಹೇಳಿ. ಅತ್ತೆ ಎಂದರೆ ಯಾವಾಗಲೂ ಕಿರುಕುಳ ನೀಡುವವರೂ ಇಲ್ಲ. ಅವರೂ ಒಬ್ಬ ಮಗಳಿಗೆ ತಾಯಿಯೂ ಆಗಿರುತ್ತಾರೆ. ಅವರಿಂದ ಜೀವನ ಪಾಠಗಳನ್ನು ಕಲಿತುಕೊಳ್ಳುವಂತೆ ಸೂಚಿಸಿ.