Personality Tips: ಮಕ್ಕಳು ದೊಡ್ಡೋರಾಗ್ತಾ ಇದಾರೆ ಅಂತಾದ್ರೆ ಈ ಕೆಲ್ಸಗಳನ್ನ ಕಲಿತ್ಕೊಳ್ಬೇಕು!

ವಯಸ್ಕ ಹಂತಕ್ಕೆ ಕಾಲಿಡುವ ಸಮಯದಲ್ಲಿ ಟೀನೇಜ್‌ ಹುಡುಗುತನ ಮಾಯವಾಗುತ್ತದೆ ಅಥವಾ ಬೈ ಹೇಳಬೇಕು. ಇದು ಕೆಲವು ಜೀವನ ಕೌಶಲಗಳನ್ನು ಕಲಿತುಕೊಳ್ಳುವ ಸಮಯ. ಪ್ರತಿ ವ್ಯಕ್ತಿಯೂ, ಹುಡುಗಿಯಾಗಲಿ, ಹುಡುಗನಾಗಲೀ ಇಂದಿನ ಕಾಲಕ್ಕೆ ಅಗತ್ಯವಾದ ಕೆಲವು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು.

Every adult person should know these skills

ಜೀವನದ ಪ್ರತಿಯೊಂದು ಹಂತದಲ್ಲೂ ಒಂದಿಷ್ಟು ಬದಲಾವಣೆ ಸಹಜ. ಹಾಗೆಯೇ, ಟೀನೇಜ್‌ ಮುಗಿದು ವಯಸ್ಕ ಹಂತಕ್ಕೆ ಕಾಲಿಡುತ್ತಿರುವ ಹಾಗೆ ವ್ಯಕ್ತಿ ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ. ಮೋಜು-ಮಸ್ತಿಗಳು ಮುಗಿದೇ ಹೋದಂತಿರಬೇಕು ಎಂದಲ್ಲ. ಆದರೆ, ಕೆಲವು ಜೀವನ ಕೌಶಲಗಳನ್ನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಅದುವರೆಗಿನ ಹುಡುಗಾಟದ ಮನೋಭಾವ ಮುಗಿದು ಮನೆ, ವ್ಯಕ್ತಿತ್ವ ಹಾಗೂ ಕರಿಯರ್‌ ಬಗ್ಗೆ ಯೋಚಿಸಬೇಕಾಗುತ್ತದೆ. ಏನು ಓದುತ್ತೀರಿ, ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಮುಖ್ಯವಲ್ಲ. ಎಲ್ಲೇ ಹೋದರೂ ಕೆಲವು ಜೀವನ ಕೌಶಲ ತಿಳಿದಿದ್ದರೆ ಮಾತ್ರ ಬದುಕು ಸುಂದರವಾಗುತ್ತದೆ. ಅವುಗಳನ್ನು ಕಲಿತುಕೊಳ್ಳುವತ್ತ ಆಸಕ್ತಿ ತೋರಬೇಕು, ಜೀವನವನ್ನು ವಿಶಾಲವಾಗಿಸಿಕೊಳ್ಳಬೇಕು. ಕಲಿಯುವಿಕೆಗೆ ವಯಸ್ಸಿನ ಮಿತಿ ಇಲ್ಲ. ರಿಟೈರ್‌ ಆಗುತ್ತ ಬಂದರೂ ಕಲಿತುಕೊಳ್ಳುವುದು ಇದ್ದೇ ಇರುತ್ತದೆ. ಎಲ್ಲರೂ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಸತ್ಯ. ಉದಾಹರಣೆಗೆ ಎಲ್ಲರಿಗೂ ಎಲ್ಲ ಕೆಲಸಗಳನ್ನು ಕಲಿತುಕೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ, ಕನಿಷ್ಠ ಕೌಶಲಗಳನ್ನು ಅಳವಡಿಸಿಕೊಳ್ಳದೇ ಇದ್ದರೆ ಕಷ್ಟವಾಗುತ್ತದೆ. ಇವು ಎಲ್ಲರೂ ಕಲಿತುಕೊಳ್ಳಲೇಬೇಕಾದ ಅತಿ ಮೂಲಭೂತ ಕೌಶಲಗಳು.  

•    ಅಡುಗೆ (Cook)
ಅಡುಗೆ ಕಲಿತುಕೊಂಡು ಮಾಸ್ಟರ್‌ ಶೆಫ್‌ ಸ್ಪರ್ಧೆಗೆ ಹೋಗಬೇಕೆಂದಿಲ್ಲ. ಆದರೆ, ಅಡುಗೆಯ ಕನಿಷ್ಠ ಜ್ಞಾನ (Basik Knowledge) ಇರಲೇಬೇಕು. ಚಿಕ್ಕದೊಂದು ಕಾರ್ಯಕ್ಕೂ ಅಮ್ಮನ ಮೇಲೆ ಅವಲಂಬಿತರಾಗುವುದು ಬೆಳವಣಿಗೆಯ (Growing) ಲಕ್ಷಣವಲ್ಲ. ಹಾಗೆಯೇ, ಹೊರಗಿನ ತಿಂಡಿಯನ್ನು ತರಿಸಿಕೊಳ್ಳುವುದು ಸಹ ಬುದ್ಧಿವಂತಿಕೆಯಲ್ಲ. ಆರೋಗ್ಯಕರ ಆಹಾರವನ್ನು (Healthy Food) ಸ್ವತಃ ಮಾಡಿಕೊಂಡಾಗಲೇ ಅದರ ಮೌಲ್ಯದ ಅರಿವಾಗುತ್ತದೆ. 

ಭಾವನಾತ್ಮಕ ಪ್ರಬುದ್ಧತೆ ಹೆಚ್ಬೇಕಾ? ಕೊರಿಯನ್ ಪದ್ಧತಿ ನುಂಚಿ ಟಿಪ್ಸ್ ಫಾಲೋ ಮಾಡಿ

•    ಸ್ವಚ್ಛತೆ (Cleaning)
ನಿಮ್ಮ ವಸ್ತುಗಳನ್ನು, ಬಟ್ಟೆಗಳನ್ನು, ರೂಮನ್ನು ಮಾತ್ರವಲ್ಲ, ಮನೆಯ ಎಲ್ಲ ಸ್ಥಳಗಳನ್ನು ಸ್ವಚ್ಛವಾಗಿಡುವ ಜವಾಬ್ದಾರಿ (Responsibility) ತೆಗೆದುಕೊಳ್ಳಬೇಕು. ಕ್ಲಾಸ್‌, ಹೋಂವರ್ಕ್‌ ಎಲ್ಲವೂ ಇರುತ್ತವೆ. ಆದರೆ, ಮನೆಯ ಸ್ವಚ್ಛತೆಯೂ ಅದರ ಒಂದು ಭಾಗ ಎಂದುಕೊಳ್ಳಿ. ಶಾಲಾ-ಕಾಲೇಜಿನಿಂದ ಹೊರತಾದ ಕೆಲಸವೂ ದೇಹಕ್ಕೆ, ಮನಸ್ಸಿಗೆ ಬೇಕು. ವಾರಕ್ಕೊಮ್ಮೆಯಾದರೂ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರೆ ಮೈಮನಗಳು ಹಗುರಾಗುತ್ತವೆ. ಸ್ವಚ್ಛತೆಯ ಬುದ್ಧಿ ಜಾಗ್ರತವಾಗುತ್ತದೆ. ಸ್ವಚ್ಛತೆಗೆ ಬೇರೊಬ್ಬರ ಮೇಲೆ ಅವಲಂಬಿತವಾಗುವುದು (Depend) ತಪ್ಪುತ್ತದೆ.

•    ಆರೋಗ್ಯಕರ ಸಂವಹನ (Communication)
ವಯಸ್ಕ ಹಂತಕ್ಕೆ ಬರುತ್ತಿದ್ದ ಹಾಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕಾದ ಸಂಗತಿ ಎಂದರೆ, ಎಲ್ಲ ಸಂಬಂಧಗಳಿಗೂ (Relationship) ಉತ್ತಮ ಸಂವಹನ ಅಡಿಪಾಯವಾಗಿದೆ ಎನ್ನುವುದು. ಇದುವರೆಗಿನ ಸಿಟ್ಟು, ಧುಮುಗುಡುವುದು, ರೇಗುವುದು, ಹಠಮಾರಿತನ, ಎಲ್ಲದಕ್ಕೂ ಅಮ್ಮನನ್ನು ದೂರುವುದು ಇತ್ಯಾದಿ ರಗಳೆಗಳಿಗೆಲ್ಲ ಫುಲ್‌ ಸ್ಟಾಪ್‌ (Full Stop) ಇಡಬೇಕು. ಅಮ್ಮ ಅಥವಾ ಮನೆಯವರು ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದು, ಅಷ್ಟೇ ಸ್ಪಷ್ಟ (Clear) ಹಾಗೂ ಖಚಿತತೆಯಿಂದ ನಿಮ್ಮ ಭಾವನೆಗಳನ್ನು (Feelings) ವ್ಯಕ್ತಪಡಿಸುವುದು ಅಗತ್ಯ. ಸಂಬಂಧ ಉತ್ತಮವಾಗಿರಲು ತಾಳ್ಮೆಯ ಮಾತುಕತೆ ಅಗತ್ಯ. 

•    ಬಜೆಟ್‌ ಮತ್ತು ಉಳಿತಾಯ (Budget and Savings)
20ರ ನಂತರ ಪ್ರತಿಯೊಬ್ಬರೂ ಬಜೆಟ್‌ ಹಾಗೂ ಉಳಿತಾಯದ ಬಗ್ಗೆ ಯೋಚನೆ ಮಾಡುವುದು ಅಗತ್ಯ. ಶಿಕ್ಷಣ (Education), ಮನೆಯ ಖರ್ಚು ವೆಚ್ಚದ ಬಗ್ಗೆ ಅಂದಾಜು ಮಾಡಬೇಕು. ಅಪ್ಪ-ಅಮ್ಮನೊಂದಿಗೆ ಇಂತಹ ಮಾತುಕತೆ ನಡೆಸಬೇಕು. ಎಷ್ಟೋ ಬಾರಿ ಹಣಕಾಸಿನ (Finance) ಬಗ್ಗೆ ಅವರಾಡುವ ಮಾತುಗಳು ನಿಮಗೆ ಕಷ್ಟವೆನಿಸಬಹುದು. ಆದರೆ, ಅದು ಅವರ ಪರಿಸ್ಥಿತಿ (Situation) ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅನಗತ್ಯವಾದ ವಸ್ತುಗಳನ್ನು ಕೇಳದಿರುವುದು, ಸಾಧ್ಯವಾದಷ್ಟೂ ವೆಚ್ಚ ಕಡಿಮೆಗೊಳಿಸುವುದನ್ನು ಕಲಿತುಕೊಳ್ಳಬೇಕು. ಒಂದೊಮ್ಮೆ ಮನೆಯ ಪರಿಸ್ಥಿತಿ ಉತ್ತಮವಾಗಿದ್ದರೂ ಮಿತವ್ಯಯ, ಉಳಿತಾಯ ರೂಢಿಸಿಕೊಳ್ಳುವುದು ಅಗತ್ಯ.

ಆತ್ಮವಿಶ್ವಾಸ ತುಂಬಿ ತುಳಕೋ ಮಹಿಳೆ ಬಗ್ಗೆ ಗಂಡಸ್ಯಾಕೆ ಹೀಗ್ ಯೋಚಿಸುತ್ತಾನೆ?

•    ವಾಹನ ಚಾಲನೆ (Vehicle Driving)
ಪ್ರತಿಯೊಬ್ಬರೂ ಕಾರನ್ನು ಹೊಂದುವುದು ಸಾಧ್ಯವಾಗುವುದಿಲ್ಲ. ಹಾಗೆಯೇ, ವಿದ್ಯಾರ್ಥಿ ಜೀವನದಲ್ಲೇ ಎಲ್ಲರಿಗೂ ಕಾರು, ಬೈಕ್‌ ಸಿಗುವುದಿಲ್ಲ. ಕಲಿತುಕೊಳ್ಳುವುದಕ್ಕೆ ಮನೆಯಲ್ಲೇ ವಾಹನ ಇರಬೇಕು ಎಂದೂ ಇಲ್ಲ. ಒಟ್ಟಿನಲ್ಲಿ ವಯಸ್ಕ ಹಂತಕ್ಕೆ ಬರುವ ಹೊತ್ತಿಗೆ ದ್ವಿಚಕ್ರ ಮತ್ತು ಕಾರು ಚಾಲನೆ ಕಲಿತುಕೊಳ್ಳುವುದು ಉತ್ತಮ.

Latest Videos
Follow Us:
Download App:
  • android
  • ios