ನೀವು ಎಮೋಷನಲ್ಲಾ..? ಎಮೋಷನಲಿ ವೀಕಾ..?
ಮನುಷ್ಯ ಭಾವನಾಜೀವಿ ನಿಜ. ಹಾಗಂಥ ಭಾವನೆಗಳಲ್ಲಿಯೇ ಬದುಕುತ್ತೇನೆ ಅಂದ್ರೆ ಅದು ಅವನ ವೀಕ್‌ನೆಸ್ ಆಗುತ್ತೆ. ಸಂದರ್ಭಕ್ಕೆ ಸರಿಯಾಗಿ ರಿಯಾಕ್ಟ್ ಮಾಡಿದರೆ ಮಾತ್ರ ಸ್ಟ್ರಾಂಗ್ ಆಗುತ್ತಾನೆಯೇ ಹೊರತು, ಎಮೋಷನಲಿ ವೀಕ್ ಅಂತ ಹೇಗೆಗೋ ರಿಯಾಕ್ಟ್ ಮಾಡಿದರೆ ಹುಚ್ಚ ಎನಿಸಿಕೊಳ್ಳುತ್ತಾನೆ ಅಲ್ಲವೇ?
`ನಾನು ತುಂಬಾ ಎಮೋಷನಲ್... ನಂಗೆ ಭಾವನೆಗಳು ಜಾಸ್ತಿ... ತುಂಬಾ ಇಷ್ಟ ಪಟ್ಟವರು ಹರ್ಟ್ ಮಾಡಿದ್ರೆ ನಂಗೆ ಸಹಿಸೋಕಾಗಲ್ಲ..' ಹೀಗೆ ಹೇಳೋ ಕೆಲವರನ್ನು ನಮ್ಮ ನಿಮ್ಮ ಸುತ್ತಾ ನಾವು ನೀವು ನೋಡಿರ್ತೀವಿ. ಅಥವಾ ಸ್ವತಃ ಇದನ್ನು ಓದ್ತಾ ಇರೋ ನೀವೂ ಸಹ ಭಾವನಾತ್ಮಕ ಜೀವಿ ಆಗಿರಬಹುದು. ಹಾಗಾದ್ರೆ ಭಾವನಾತ್ಮಕ ಜೀವಿಯಾಗಿರೋದು ಒಳ್ಳೇದಾ..? ಕೆಟ್ಟದ್ದಾ..? ಈಸ್ ಇಟ್ ರೈಟ್ ಟು ಬಿ ಎಮೋಷನಲ್...?
ಯಾವುದೇ ವ್ಯಕ್ತಿ ಭಾವನಾತ್ಮಕವಾಗಿರೋದು ತಪ್ಪಲ್ಲ. ಹಾಗಂತ ಅದೇ ಭಾವನೆಗಳು ತಮಗೇ ಕುತ್ತಾಗಬಾರದಷ್ಟೆ! ಉದಾಹರಣೆಗೆ ತುಂಬಾ ಇಷ್ಟಪಟ್ಟ ಹುಡುಗಿ ಇದ್ದಕ್ಕಿದ್ದ ಹಾಗೆಯೇ ಒಂದು ದಿನ ಅವಳ ಮದುವೆಯ ಆಮಂತ್ರಣ ಪತ್ರಿಕೆ ತಂದು ಕೈಗಿಟ್ಟಾಗ ಅದನ್ನು ಫೇಸ್ ಮಾಡೋ ವ್ಯಕ್ತಿಗಳ ವ್ಯಕ್ತಿತ್ವ ಬೇರೆ ಬೇರೆಯೇ ಇರುತ್ತೆ. ಕೆಲವರು `ನಂಗೆ ನೀನ್ ಹಿಂಗ್ ಮಾಡ್ತಿಯಾ ಅಂತ ಗೊತ್ತಿತ್ತು. ಹೆಂಗೋ ಚೆನ್ನಾಗಿ ಬದುಕು ಹೋಗು' ಅಂತ ಮರೆಯೋ ಪ್ರಯತ್ನ ಮಾಡಬಹುದು. ಮತ್ತೆ ಕೆಲವರು ಕೋಪದಲ್ಲಿ ಅವಳ ಮೇಲೆ ಹಲ್ಲೆ ಮಾಡಬಹುದು, ಹುಚ್ಚನಂತೆ ರಿಯಾಕ್ಟ್ ಮಾಡಬಹುದು.. ಆದ್ರೆ ಈ ಭಾವನಾತ್ಮಕ ಅಥವಾ ಎಮೋಷನಲ್ ಅಂತ ಹೇಳುವವರು ಇದನ್ನು ಹ್ಯಾಂಡಲ್ ಮಾಡೋದೇ ಬೇರೆ ತರ. ಅಂಥವರು ಕಣ್ಣೀರು ಹಾಕ್ತಾರೆ. ಕಳೆದ ದಿನಗಳ ನೆನೆದು ನೆನೆದು ದುಃಖ ಪಡ್ತಾರೆ. ಮರೆಯೋಕೆ ಸಾಧ್ಯವಾಗದೇ ಕುಗ್ಗಿ ಹೋಗ್ತಾರೆ. ಅವರ ನೆನಪಲ್ಲೇ ತಮ್ಮ ಜೀವನ ಹಾಳು ಮಾಡ್ಕೋತಾರೆ... ಇನ್ ದಿಸ್ ಕೇಸ್ ಬಿಯಿಂಗ್ ಎಮೋಷನಲ್ ಈಸ್ ನಾಟ್ ರೈಟ್!
ಮಕ್ಕಳನ್ನು ಎಮೋಷನಲಿ ಬ್ಲಾಕ್‌ಮೇಲ್ ಮಾಡೋದು ಎಷ್ಟು ಸರಿ?
ಕೆಲವರು ಹಾಗೇನೇ.. ಸಿನಿಮಾದಲ್ಲಿ ಬರೋ ಒಂದು ಎಮೋಷನಲ್ ಸೀನ್ ಅವರನ್ನು ಕಣ್ಣೀರು ಹಾಕಿಸಬಲ್ಲದು. ರಸ್ತೆಯಲ್ಲಿ ಭಿಕ್ಷೆ ಬೇಡೋ ವೃದ್ದರನ್ನು ನೋಡಿದ್ರೆ ಅವರಿಗೆ ಸಂಕಟ ಆಗುತ್ತೆ. ಗೆಳೆಯನೋ, ಗೆಳತಿಯೋ ಜಗಳ ಆಡಿದ್ರೆ ಅವರಿಗೆ ತುಂಬಾ ಬೇಸರವಾಗುತ್ತೆ.. ಮತ್ತೆ ಮಾತಾಡುವ ತನಕ ಅವರಿಗೆ ಸಮಾಧಾನ ಇರಲ್ಲ. ಸಂಬಂಧಗಳಿಗೆ, ಸ್ನೇಹಕ್ಕೆ ಅವರು ತುಂಬಾ ಬೆಲೆ ಕೊಡ್ತಾರೆ. ಆದ್ರೆ ಎಷ್ಟೋ ಸಲ ಇವರ ಈ ಗುಣವೇ ಅವರಿಗೆ ಶಾಪವಾಗುತ್ತೆ! ಎಮೋಷನಲ್ ಆಗಿರೋದು ಮತ್ತು ಎಮೋಷನಲಿ ವೀಕ್ ಆಗಿರೋದರ ನಡುವೆ ಒಂದು ಕೂದಲಿನಷ್ಟು ಅಂತರವಿದೆ. ಸ್ವಲ್ಪ ಆಚೀಚೆ ಆದ್ರೂ ಅದು ಖಂಡಿತ ಸಮಸ್ಯೇನೇ!
ಹೌದು.. ಒಬ್ಬ ವ್ಯಕ್ತಿ ಎಮೋಷನಲಿ ವೀಕ್ ಇದ್ದಾನೆ ಅಂದ್ರೆ ಅದು ಅವನಿಗೆ ಶಾಪವೂ ಆಗಬಹುದು. ನಿಮ್ಮ ಭಾವನೆಗಳ ಇನ್ನೊಬ್ಬರ ಪಾಲಿಗೆ ಹಾಸ್ಯಾಸ್ಪದ ವಿಷಯ ಆಗಬಾರದು. ಅಥವಾ ನಿಮ್ಮ ಎಮೋಷನ್ಸ್ ನಿಮ್ಮ ವೀಕ್‌ನೆಸ್ (Weakness) ಸಹ ಆಗಬಾರದು. ಕೆಲವರಿಗೆ ಯಾವುದನ್ನೂ ಕೇರ್ ಮಾಡದ ಹಾಗೆ, ಬಂದಿದ್ದನ್ನು ಮನಸ್ಸು ಗಟ್ಟಿ ಮಾಡಿಕೊಂಡು ಸ್ವೀಕರಿಸೋ ಶಕ್ತಿ ಇರೋದಿಲ್ಲ. ಯಾವುದಾದ್ರೂ ವಿಚಾರದಲ್ಲಿ ಅವರಿಗೆ ಎಮೋಷನಲಿ ಹರ್ಟ್ ಆದ್ರೂ ಅಂದ್ರೆ ಅವರು ಆ ಕ್ಷಣಕ್ಕೆ ಕುಗ್ಗಿ, ಮತ್ತೆ ಟ್ರ್ಯಾಕಿಗೆ ಬಂದ್ರೆ ಓಕೆ. ಆದ್ರೆ ಅದನ್ನೇ ನೆನೆದು ನೆನೆದು ಕೊರಗೋದು ಅವರ ಜೀವನದ ಟ್ರ್ಯಾಕನ್ನೇ ಬದಲಿಸಿಬಿಡುತ್ತೆ. ಸಂಬಂಧಗಳಿಗೆ ಬೆಲೆ ಕೊಡುವ ವ್ಯಕ್ತಿಗಳ ಜೊತೆ ನೀವು ಎಮೋಷನಲಿ ಕನೆಕ್ಟ್ ಆಗಿದ್ರೆ ನೋ ಪ್ರಾಬ್ಲಂ.. ಅಂಥವರಿಗೋಸ್ಕರ ಕಣ್ಣೀರು ಹಾಕಿ, ಮತ್ತೆ ಸಂಬಂಧ ಸರಿಪಡಿಸಿಕೊಳ್ಳೋಕೆ ಅವರೂ ಕಾಯ್ತಿರ್ತಾರೆ. ಮಾತಾಡಿ ಸರಿಮಾಡ್ಕೊಳಿ.. ಆದ್ರೆ ನಿಮ್ಮ ಭಾವನೆಗಳ ಜೊತೆ ಆಟ ಆಡೋರ ಜೊತೆ ನೀವು ಎಮೋಷನಲ್ ಆಗಿರೋದು ವೇ ಟು ಪ್ರಾಬ್ಲಂ... ಭಾವನೆಗಳು ನಮ್ಮನ್ನು ಗಟ್ಟಿಗೊಳಿಸಬೇಕು. ನಮ್ಮನ್ನು ಕುಗ್ಗಿಸಬಾರದು.
Viral Post: ಫುಲ್ ವೈರಲ್ ಆಗಿದೆ ಅಮ್ಮ ಮಗನ ವಾಟ್ಸ್ ಆ್ಯಪ್ ಸಂದೇಶ
ಸೋ ಬಿ ಎಮೋಷನಲ್... ಬಟ್ ಡೋಂಟ್ ಬಿ ಎಮೋಷನಲಿ ವೀಕ್..!